For Quick Alerts
ALLOW NOTIFICATIONS  
For Daily Alerts

ಫೇಶಿಯಲ್‌ ಮಾಡಿಕೊಳ್ಳುವ ಮುನ್ನ, ಒಮ್ಮೆ ಈ ಲೇಖನ ಓದಿ

By Manu
|

ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟವಾಗಿ ಕಾಣಿಸಿಕೊಳ್ಳುವುದು ಎಲ್ಲರ ಇಚ್ಛೆಯಾಗಿದೆ. ಅದರಲ್ಲೂ ಮದುವೆಯಲ್ಲಿ ವಧೂವರರ ಸಹಿತ ವಧುವಿನ ಮತ್ತು ವರನ ಹತ್ತಿರದ ಸಂಬಂಧಿಗಳೂ, ಸ್ನೇಹಿತರೂ ಸಾಕಷ್ಟು ಸುಂದರರಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಇದಕ್ಕೆ ಫೇಶಿಯಲ್ ಗಿಂತ ಉತ್ತಮ ಪರಿಹಾರ ಇನೊಂದಿಲ್ಲ. ಈ ಬೇಡಿಕೆಯನ್ನು ಮನಗಂಡ ಸೌಂದರ್ಯ ಮಳಿಗೆಗಳಲ್ಲಿ ಇಂದು ಇತರ ಫೇಶಿಯಲ್ ಗಳ ಜೊತೆಗೇ 'ಇಂದಿನ ವಿಶೇಷ' ವಾಗಿ 'ಮದುವೆ ಫೇಶಿಯಲ್' ಸಹಾ ಒದಗಿಸಲಾಗುತ್ತದೆ.

ನಮ್ಮಲ್ಲಿ ಹೆಚ್ಚಿನವರು ಒಂದು ಸಲವಾದರೂ, ವಿಶೇಷ ಸಂದರ್ಭಗಳಿಗಾಗಿ ಫೇಶಿಯಲ್‌ನ ಸೇವೆಯನ್ನು ಪಡೆದೇ ಇದ್ದೇವೆ. ಇದರಿಂದ ಚರ್ಮಕ್ಕೆ ಲಭಿಸುವ ಕಾಂತಿ, ಪ್ರಖರಗೊಳ್ಳುವ ಚರ್ಮದ ಬಣ್ಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೆಚ್ಚುವ ಆತ್ಮವಿಶ್ವಾಸ ಈ ಸೇವೆಯನ್ನು ಹೆಚ್ಚು ಹೆಚ್ಚಾಗಿ ಪಡೆಯಲು ಪ್ರೇರೇಪಿಸುತ್ತದೆ. ಫೇಶಿಯಲ್ ನಿಂದ ಮುಖದ ಬ್ಲಾಕ್ ಹೆಡ್, ವೈಟ್ ಹೆಡ್ ಮತ್ತು ಇತರ ಕಲೆಗಳು ನಿವಾರಣೆಯಾಗುವ ಮೂಲಕ ಈ ಕಾಂತಿ ದೊರಕುತ್ತದೆ ಎಂದು ಈ ಸೇವೆಯನ್ನು ನೀಡುವವರು ತಿಳಿಸುತ್ತಾರೆ. ಫೇಶಿಯಲ್ ಎಂದರೇನು? ತ್ವಚೆಯ ಆರೈಕೆಗೆ ಇದು ಸೂಕ್ತವೇ?

ಸಾಮಾನ್ಯವಾಗಿ ಫೇಶಿಯಲ್ ವಿಧಾನದಲ್ಲಿ ಮೊದಲು ಸೂಕ್ಷ್ಮರಂಧ್ರಗಳಲ್ಲಿನ ಕೊಳೆಯನ್ನು ತೆಗೆಯುವ ಕ್ಲೀನ್ಸಿಂಗ್, ಸತ್ತ್ತ ಜೀವಕೋಶಗಳನ್ನು ನಿವಾರಿಸುವ (exfoliating), ಬಣ್ಣವನ್ನು ಏಕಪ್ರಕಾರವಾಗಿಸುವ (toning) ಮತ್ತು ಬಿಳಿಚಿಸುವ (bleaching) ಮತ್ತು ಬ್ಲಾಕ್ ಮತ್ತು ವೈಟ್ ಹೆಡ್ ಎಂಬ ಕಲೆಗಳನ್ನು ನಿವಾರಿಸುವ ವಿಧಾನಗಳನ್ನು ಅನುಸರಿಸಲಾಗುತ್ತದೆ. ಇದಕ್ಕಾಗಿ ರಾಸಾಯನಿಕ ಅಥವಾ ನೈಸರ್ಗಿಕ ಆಧಾರಿತ ಪ್ರಸಾಧನಗಳನ್ನು ಬಳಸುವ ಆಯ್ಕೆಯಿದೆ. ಹೆಚ್ಚಿನವರು ನೈಸರ್ಗಿಕ ವಿಧಾನವನ್ನೇ ಬಳಸುವ ಕಾರಣ ಹೆಚ್ಚಿನ ಸೆಲೂನ್‌ಗಳಲ್ಲಿ ಹಣ್ಣುಗಳ ಫೇಶಿಯಲ್ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಹಣ್ಣು, ಗಿಡಮೂಲಿಕೆ, ಹೂವುಗಳು ಅಥವಾ ನಿಮಗೆ ಇಷ್ಟವಾದ ಬೇರೆ ಸುವಾಸನೆಗಳ ಫೇಶಿಯಲ್‪ಗಳನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವಿದೆ. ಫೇಶಿಯಲ್ ನಂತರ ಗಮನಿಸಬೇಕಾದ 6 ಅಂಶಗಳು

ಆದರೆ ಇವುಗಳ ಪ್ರಯೋಜನ ಆ ಸಂದರ್ಭದಲ್ಲಿ ಉತ್ತಮವೆಂದು ಕಂಡುಬಂದರೂ ಇದರಿಂದ ಕೆಲವು ಅಡ್ಡಪರಿಣಾಮಗಳೂ ಇವೆ. ಇವುಗಳ ಪರಿಣಾಮ ಥಟ್ಟನೇ ಗೊತ್ತಾಗದಿದ್ದರೂ ಕ್ರಮೇಣವಾಗಿ ಗೋಚರಿಸಲು ಆರಂಭವಾಗುತ್ತದೆ. ಇವುಗಳಲ್ಲಿ ಪ್ರಮುಖವದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ....

ಚರ್ಮದ ಉರಿ

ಚರ್ಮದ ಉರಿ

ಕೆಲವೊಮ್ಮೆ ಫೇಶಿಯಲ್‌ಗಾಗಿ ಬಳಸುವ ದ್ರಾವಣ, ಕ್ರೀಮ್ ಮೊದಲಾದವುಗಳಲ್ಲಿ ಚರ್ಮಕ್ಕೆ ಅಲರ್ಜಿಕಾರಕವಾದ ಕಟುವಾದ ರಾಸಾಯನಿಕಗಳಿದ್ದು ಮುಖದ ಸೂಕ್ಷ್ಮ ಚರ್ಮಕ್ಕೆ ಘಾಸಿಯುಂಟು ಮಾಡಬಹುದು. ಪರಿಣಾಮವಾಗಿ ಚರ್ಮದ ಜೀವಕೋಶಗಳು ಒಡೆದು ಚರ್ಮದಲ್ಲಿ ಉರಿ, ತುರಿಕೆ, ಕೆಂಪಗಾಗುವುದು ಮೊದಲಾದ ತೊಂದರೆಗಳು ಎದುರಾಗಬಹುದು.

ಚರ್ಮದ ಬಣ್ಣವನ್ನು ಏರುಪೇರಾಗಿಸಬಹುದು

ಚರ್ಮದ ಬಣ್ಣವನ್ನು ಏರುಪೇರಾಗಿಸಬಹುದು

ನಮ್ಮ ಮುಖದ ಚರ್ಮ ಏಕಪ್ರಕಾರವಾಗಿರುವಂತೆ ಕಂಡರೂ ಇದರ ದಪ್ಪ ಏಕಪ್ರಕಾರವಾಗಿಲ್ಲ. ಕಣ್ಣುಗಳ ಕೆಳಗೆ ಅತಿ ತೆಳುಗಾಗಿದ್ದರೆ ಕೆನ್ನೆಗಳ ಮೂಳೆಗಳ ಮೇಲೆ, ಹುಬ್ಬುಗಳ ಮೇಲೆ ದಪ್ಪನಾಗಿರುತ್ತದೆ. ಅಲ್ಲದೇ ಈ ಭಾಗದಲ್ಲಿ ನರಾಗ್ರಗಳ ಸಾಂದ್ರತೆಯೂ ಹೆಚ್ಚಿರುವುದರಿಂದಲೇ ನಾಚಿಕೆಯಿಂದ ಕೆನ್ನೆ ಕೆಂಪಗಾಗುವುದಕ್ಕೆ ಕಾರಣವಾಗುತ್ತದೆ. ಕಣ್ಣುಗಳ ಕೆಳಗಿನ ಭಾಗ ಸುಲಭವಾಗಿ ಕಪ್ಪಗಾಗುತ್ತದೆ. ಇಂತಿರುವಾಗ ಬಿಳಿಚಿಸುವ ಪ್ರಮಾಣವೂ ಈ ಭಾಗಗಳಿಗೆ ಭಿನ್ನವಾಗಿ ಪರಿಣಾಮ ಬೀರುತ್ತದೆ. ಫೇಶಿಯಲ್‌ನ ಪ್ರಭಾವ ಮುಗಿದ ಬಳಿಕ ಕೆನ್ನೆಯ ಭಾಗದಲ್ಲಿ ಬಿಳಿಚಾಗಿ ಇತರ ಭಾಗದಲ್ಲಿ ಗಾಢವರ್ಣ ಪಡೆಯುವ ಮೂಲಕ ತೇಪೆಹಚ್ಚಿದಂತಹ ರೂಪ ಬರಬಹುದು (Blotchy Skin)

ಚರ್ಮ ಕೆಂಪಗಾಗುವುದು

ಚರ್ಮ ಕೆಂಪಗಾಗುವುದು

ಫೇಶಿಯಲ್‌ಗಾಗಿ ಬಳಸುವ ಕೆಲವು ಪ್ರಸಾದನಗಳು ನಮ್ಮ ಮುಖದ ಚರ್ಮಕ್ಕೆ ತೀರಾ ಪ್ರಬಲವಾಗಿರಬಹುದು ಅಥವಾ ನಮ್ಮ ಚರ್ಮದ ವಿಧಕ್ಕೆ ಸೂಕ್ತವಲ್ಲದ್ದಾಗಿರಬಹುದು. ಅನುಭವಿ ಮತ್ತು ವೃತ್ತಿಪರರು ಚರ್ಮದ ವಿಧಕ್ಕೆ ಸೂಕ್ತವಾದ ಫೇಶಿಯಲ್ ಗಳನ್ನೇ ಸೂಚಿಸುತ್ತಾರಾದರೂ ಕೆಲವೊಮ್ಮೆ ಅವರ ಅನುಭವಕ್ಕೂ ಮೀರಿ ಈ ಪ್ರಸಾದನಗಳಲ್ಲಿರುವ ಯಾವುದೋ ಒಂದು ಘಟಕ ಚರ್ಮಕ್ಕೆ ಅಲರ್ಜಿಕಾರಕವಾಗಿರಬಹುದು. ಇದು ಚರ್ಮಕ್ಕೆ ಉರಿಯೂತವುಂಟುಮಾಡಿ ಕೆಂಪಗಾಗಿಸಲು ಕಾರಣವಾಗಬಹುದು.

ಮೊಡವೆ

ಮೊಡವೆ

ಕೆಲವರಲ್ಲಿ ಫೇಶಿಯಲ್ ಮಾಡಿಸಿಕೊಂಡ ನಂತರದ ದಿನಗಳಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಫೇಶಿಯಲ್ ನಲ್ಲಿ ನಮ್ಮ ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆದು ಸ್ವಚ್ಛಗೊಳಿಸುವ ಬಗೆ. ಆದರೆ ತೆಗೆದ ರಂಧ್ರಗಳು ಫೇಶಿಯಲ್ ನ ಪ್ರಸಾದನಗಳ ಕಾರಣ ಮುಚ್ಚದೇ ಪ್ರಸಾದನದ ಅಂಶ ಈ ರಂಧ್ರಗಳಲ್ಲಿ ತುಂಬಿಕೊಳ್ಳುತ್ತವೆ. ಅಲ್ಲದೇ ಸತ್ತ ಜೀವಕೋಶಗಳನ್ನೂ ಕೆರೆದು ತೆಗೆಯುವ ಮೂಲಕ ಚರ್ಮದಡಿಯಲ್ಲಿ ಕೀವು ಉಂಟುಮಾಡಲು ಕಾರಣವಾಗುತ್ತದೆ. ಇದು ಆಗದಂತೆ ಟೋನಿಂಗ್ ವಿಧಾನ ಅನುಸರಿಸುತ್ತಾರಾದರೂ ಇದರಲ್ಲಿ ಕೊಂಚವೂ ಹೆಚ್ಚು ಕಡಿಮೆಯಾದರೆ ಕೀವು ಹೆಚ್ಚಾಗಿ ಮೊಡವೆಗಳಿಂದ ಮುಖವೆಲ್ಲಾ ತುಂಬಿಕೊಳ್ಳುತ್ತದೆ.

ಅಲರ್ಜಿಕಾರಕ ಪರಿಣಾಮಗಳು

ಅಲರ್ಜಿಕಾರಕ ಪರಿಣಾಮಗಳು

ಯಾವುದೇ ಸಲೂನ್ ನಲ್ಲಿ ವಿವಿಧ ಫೇಶಿಯಲ್ ಗಳು ಲಭ್ಯವಿವೆ. ಆದರೆ ಇವೆಲ್ಲರೂ ಎಲ್ಲರಿಗೂ ಸೂಕ್ತ ಎಂದು ಹೇಳಲು ಸಾಧ್ಯವಿಲ್ಲ. ಯಾವುದೋ ಒಂದು ಪ್ರಸಾದನ ಕೆಲವರಿಗೆ ಅಲರ್ಜಿಕಾರಕವಾಗಿರಬಹುದು. ಇದರಿಂದ ತುರಿಕೆ, ಸೂಕ್ಷ್ಮಗೀರುಗಳು ಎದುರಾಗಬಹುದು. ಪರಿಣಾಮ ವಿಪರೀತವಾದರೆ ಚರ್ಮದಲ್ಲಿ ಗುಳಿಗಳು ಬೀಳುವ ಸಾಧ್ಯತೆ ಇದೆ. (ಚಿತ್ರನಟ ಓಂಪುರಿಯವರ ಮುಖವನ್ನು ಗಮನಿಸಿ)

ಕಲೆಗಳಾಗುವ ಸಾಧ್ಯತೆ

ಕಲೆಗಳಾಗುವ ಸಾಧ್ಯತೆ

ಬ್ಲಾಕ್ ಹೆಡ್ ನಿವಾರಿಸುವ ನಿಟ್ಟಿನಲ್ಲಿ ವೃತ್ತಿಪರರು ತಮ್ಮ ಬೆರಳುಗಳನ್ನು ಅಥವಾ ಇದಕ್ಕಾಗಿಯೇ ಇರುವ ಉಪಕರಣಗಳನ್ನು ಬಳಸಬಹುದು. ಒಂದು ವೇಳೆ ಯಾವುದೋ ಚಿಕ್ಕ ಅಚಾತುರ್ಯ ಅಥವಾ ಮೈ ಮರೆತ ಕ್ಷಣದಲ್ಲಿ ತಪ್ಪಾದ ಒತ್ತಡ ನೀಡಿದರೆ ಇಲ್ಲಿ ಗಾಯಗಳಾಗುವ ಸಾಧ್ಯತೆ ಇದೆ. ಗಾಯ ಮಾಗಿದರೂ ಗಾಯದ ಗುರುತು ಕಲೆಯಾಗಿ ಶಾಶ್ವತವಾಗಿ ಉಳಿದುಕೊಳ್ಳಬಹುದು.

ಒಣಚರ್ಮ

ಒಣಚರ್ಮ

ಯಾವುದೇ ಫೇಶಿಯಲ್‌ನಲ್ಲಿ ಚರ್ಮ ತನ್ನ ಆರ್ದ್ರತೆಯನ್ನು ಕಳೆದುಕೊಳ್ಳುತ್ತದೆ. ಇದು ಚರ್ಮದ ಪಿಎಚ್ ಮಟ್ಟವನ್ನು ಏರುಪೇರು ಗೊಳಿಸುತ್ತದೆ. ಆದ್ದರಿಂದ ಒಮ್ಮೆ ಫೇಶಿಯಲ್ ಮಾಡಿಸಿದ ಬಳಿಕ ಸಾಕಷ್ಟು ಸಮಯ ಮತ್ತೊಮ್ಮೆ ಮಾಡಿಸಬಾರದು. ಕೆಲವರಲ್ಲಿ ಕಳೆದುಕೊಂಡ ಆರ್ದ್ರತೆ ಕೆಲವೇ ದಿನಗಳಲ್ಲಿ ಮರುತುಂಬಿಕೊಂಡರೆ ಕೆಲವರಿಗೆ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದರೆ ಅಷ್ಟೂ ದಿನ ನಿಮ್ಮ ಚರ್ಮ ಒಣದಾಗಿಯೇ ಇದ್ದು ಇದರ ಪರಿಣಾಮಗಳನ್ನೂ ಎದುರಿಸಬೇಕಾಗಿ ಬರಬಹುದು.

English summary

Unknown Side Effects Of Getting Facials

Your friend's wedding is round the corner and you are all set to make yourself look your best for the event. Getting the outfits ready, buying new shoes and makeup, getting your hair done and not to mention, the 'wedding special' facials! Well, most of us head to the saloons and get facials done, before we attend certain special events
X
Desktop Bottom Promotion