For Quick Alerts
ALLOW NOTIFICATIONS  
For Daily Alerts

ಪುರಾತನ ಸೌಂದರ್ಯ ಪದ್ಧತಿ, ಭಾರತವೇ ಅಗ್ರಗಣ್ಯ...

By Deepu
|

ಭಾರತೀಯರಿಗೆ ಮೊದಲಿನಿಂದಲು ಸೌಂದರ್ಯದ ಕುರಿತಾಗಿ ಪ್ರಪಂಚದೆಲ್ಲೆಡೆ ಪ್ರಶಂಸೆಗಳು ಸಿಕ್ಕುತ್ತಲೆ ಇವೆ. ಅದಕ್ಕೆ ನಮ್ಮ ದೇಶಕ್ಕೆ ವಿಶ್ವ ಸುಂದರಿ ಮತ್ತು ಭುವನ ಸುಂದರಿಯರ ಪಟ್ಟ ಹೆಚ್ಚಾಗಿ ಸಿಕ್ಕಿದೆ. ಸೌಂದರ್ಯವನ್ನು ನಾವು ಆರಾಧಿಸಿದಷ್ಟು ಇತರರು ಆರಾಧಿಸಿರಲಾರರು. ದೇವಾಲಯಗಳಲ್ಲಿ ಸಹ ಸೌಂದರ್ಯವತಿಯರ ಶಿಲ್ಪಗಳನ್ನು ಕಡೆದು, ಸೌಂದರ್ಯಕ್ಕೆ ಹೆಚ್ಚಿನ ಸ್ಥಾನಮಾನವನ್ನು ನೀಡಿದವರು ನಾವು.

ಈ ಒಂದು ನಿದರ್ಶನವೇ ಹೇಳುತ್ತದೆ, ನಾವು ಇಂದಿನ ಕಾಲದಿಂದಲು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದೆವು ಎಂದು. ಹೀಗೆ ಮಹತ್ವ ನೀಡಿದ್ದೇವೆ ಎಂದರೆ, ನಮಗೆ ಸೌಂದರ್ಯದ ಕುರಿತಾಗಿ ಹಲವಾರು ವಿಚಾರಗಳು ಗೊತ್ತಿರಬೇಕು, ಅವುಗಳಲ್ಲಿ ಹಲವಾರು ರಹಸ್ಯಗಳು ಸಹ ಇರಬೇಕು ಅಲ್ಲವೆ. ಬನ್ನಿ ಆ ಸೌಂದರ್ಯದ ರಹಸ್ಯಗಳನ್ನು ನಾವು ಸಹ ತಿಳಿದುಕೊಳ್ಳೋಣ...

ಬೇವು

ಬೇವು

ಇದು ಸೌಂದರ್ಯ ಪದಾರ್ಥಗಳ ರಾಣಿ ಎಂದು ಕರೆಯಬಹುದು. ಬೇವಿನ ಪ್ರತಿ ಸಣ್ಣ ಭಾಗವು ಸಹ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಅಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ನೀವು ಇದರ ಮೇಲೆ ಅಧ್ಯಯನ ಮಾಡಿರುವ ಹಲವಾರು ವಿಜ್ಞಾನಿಗಳಿಗೆ ಧನ್ಯವಾದ ಹೇಳಬೇಕು. ಇದರ ಕುರಿತಾಗಿ ಎಷ್ಟು ಅಧ್ಯಯನ ನಡೆದಿದೆ ಎಂದರೆ ಇದರ ಬಗ್ಗೆ ಯಾವುದೇ ರಹಸ್ಯಗಳು ಉಳಿದಿಲ್ಲ. ಇದನ್ನು ಹೆಚ್ಚಾಗಿ ಔಷಧಿಯಾಗಿ ಬಳಸುತ್ತಾರೆ. ಬೇವನ್ನು ಟೀ ಜೊತೆಗೆ ಬೆರೆಸಿಕೊಂಡು ತ್ವಚೆಗೆ ಲೇಪಿಸಿದರೆ ಮೊಡವೆಗಳಿಂದ ಮುಕ್ತರಾಗಬಹುದು. ಜೊತೆಗೆ ಇದು ತ್ವಚೆಗೆ ಉತ್ತಮ ಮೊಯಿಶ್ಚರೈಸರ್ ಅನ್ನು ನೀಡುತ್ತದೆ. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ

ಅರಿಶಿನ

ಅರಿಶಿನ

ಅರಿಶಿನವು ಭಾರತೀಯ ಅಡುಗೆಯ ಒಂದು ಅವಿಭಾಜ್ಯ ಅಂಗವಷ್ಟೇ ಅಲ್ಲ. ಇದು ನಮ್ಮ ಸಂಪ್ರದಾಯವು ಸಹ ಹೌದು!. ಹಿಂದೂಗಳಲ್ಲಿ ಅರಿಶಿನ ಹಚ್ಚದೆ ಮದುವೆಯ ಕಾರ್ಯವೇ ಆರಂಭವಾಗುವುದಿಲ್ಲ. ಅರಿಶಿನ ಹಚ್ಚುವ ಶಾಸ್ತ್ರವು ಮದುವೆಯಲ್ಲಿ ವಿಜೃಂಭಣೆಯಿಂದ ಸಾಗುತ್ತದೆ. ಇದು ವಧು-ವರರ ತ್ವಚೆಗೆ ಹೊಂಬಣ್ಣದ ಹೊಳಪನ್ನು ನೀಡುತ್ತದೆ.

ಅರಿಶಿನ

ಅರಿಶಿನ

ಜೊತೆಗೆ ಇದು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವುದರಿಂದಾಗಿ, ಮೊಡವೆಗಳನ್ನು ನಿವಾರಿಸುತ್ತದೆ. ಅರಿಶಿನವನ್ನು ಸ್ವಲ್ಪ ಹಾಲಿನ ಜೊತೆಗೆ ಬೆರೆಸಿ ನಿಮ್ಮ ಕಣ್ಣುಗಳ ಕೆಳಗೆ ಲೇಪಿಸಿಕೊಳ್ಳಿ. ಇದರಿಂದ ಕಲೆಗಳು ಮತ್ತು ಸುಕ್ಕುಗಳು ನಿವಾರಣೆಯಾಗುತ್ತದೆ. ಅಥವಾ ಅರಿಶಿನಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿಕೊಂಡು ನಿಮ್ಮ ಇಮ್ಮಡಿಗಳಿಗೆ ಲೇಪಿಸಿಕೊಳ್ಳಿ, ಇದರಿಂದ ಪಾದಗಳು ಒಡೆಯುವುದು ತಪ್ಪುತ್ತದೆ.

ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

ಸೀಗೆಕಾಯಿ

ಸೀಗೆಕಾಯಿ

ಇದನ್ನು "ಕೂದಲಿನ ಕಾಯಿ" ಎಂದು ಸಹ ಕರೆಯಬಹುದು. ಬಹುಶಃ ಕೂದಲಿಗಾಗಿಯೇ ಭಗವಂತ ಇದನ್ನು ಸೃಷ್ಟಿಸಿರಬೇಕು. ತಲೆ ಹೊಟ್ಟು, ದುರ್ಬಲ ಕೂದಲು ಮುಂತಾದವುಗಳನ್ನು ಇದು ನಿವಾರಿಸುತ್ತದೆ. ಇದರಲ್ಲಿ ಮೆದುವಾದ ಆಮ್ಲಗಳ ಮಟ್ಟವು ಇರುತ್ತದೆ. ಇದು ಶಾಂಪೂವಿನಂತೆ ಕೂದಲಿನಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಎಣ್ಣೆಯನ್ನು ಹೋಗಲಾಡಿಸುವುದಿಲ್ಲ.ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ

ಕೇಸರಿ

ಕೇಸರಿ

ಸಾಂಬಾರ ಪದಾರ್ಥದಲ್ಲಿ ಅತ್ಯಂತ ಬೆಲೆಬಾಳುವ ಕೇಸರಿ ಆರೋಗ್ಯಕ್ಕೆ ಹಲವು ರೂಪದಲ್ಲಿ ಉತ್ತಮವಾಗಿದೆ. ಸೌಂದರ್ಯವರ್ಧಕ, ಗರ್ಭಿಣಿಯರಿಗೆ ಉತ್ತಮ ಪೋಷಣೆ ನೀಡುವ ಆಹಾರವಾಗಿ, ಸಿಹಿತಿಂಡಿಗಳ ನೋಟ ಮತ್ತು ರುಚಿಯನ್ನು ಹೆಚ್ಚಿಸಲು ಮೊದಲಾದ ಹಲವು ರೂಪದಲ್ಲಿ ಕೇಸರಿ ಬಳಕೆಯಾಗುತ್ತಿದೆ. ಅಡುಗೆಯಲ್ಲಿ ಅಡುಗೆಗಳ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಬಳಸಲಾಗುವ ಕೇಸರಿ ಎಲ್ಲರ ಮನಮೆಚ್ಚಿನದ್ದಾಗಿದೆ. ಎರಡು ಚಮಚ ತಣ್ಣನೆಯ ಹಾಲಿನಲ್ಲಿ ಕೆಲವು ಎಸಳು ಕೇಸರಿಯನ್ನು ಹಾಕಿ ಒಂದು ಗಂಟೆ ನೆನೆಸಿ. ಇದಕ್ಕೆ ಬಳಿಕ ಒಂದು ಚಿಕ್ಕಚಮಚ ಚಂದನದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ (ಕೆಳಗಿನಿಂದ ಮೇಲಕ್ಕೆ ಬರುವಂತೆ ಮಸಾಜ್ ಮಾಡುತ್ತಾ) ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚೈತನ್ಯ ಕಳೆದುಕೊಂಡ ಚರ್ಮಕ್ಕೆ ಪುನರ್ಚೈತನ್ಯ ನೀಡುತ್ತದೆ. ಕಾಂತಿಯೂ ಹೆಚ್ಚುತ್ತದೆ.

ತುಳಸಿ

ತುಳಸಿ

ದನ್ನು ಪ್ರತಿಯೊಬ್ಬರ ಮನೆಯಲ್ಲಿ ಬೆಳೆಯಲಾಗುತ್ತದೆ. ಇದು ಒಂದು ನೋವು ನಿವಾರಕ ಗಿಡಮೂಲಿಕೆಯಾಗಿ ಜನಪ್ರಿಯಗೊಂಡಿದೆ. ಈ ಗಿಡಮೂಲಿಕೆಯು ತ್ವಚೆಗೆ ದೇವರು ನೀಡಿದ ವರ ಎಂದು ಹೇಳಬಹುದು. ತುಳಸಿಯನ್ನು ಹಾಲಿನೊಂದಿಗೆ ಬೆರೆಸಿಕೊಂಡು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪಿಸಿದರೆ ಸಾಕು, ತಾರುಣ್ಯದಲ್ಲಿ ಬರುವ ಆ ಮೊಡವೆಗಳನ್ನು ಜಾಗ ಖಾಲಿ ಮಾಡಿಸಬಹುದು.

English summary

Traditional Indian beauty secrets

We might wonder about some things in history, but, at the same time, we must salute the people from the past, as the inventions today were backed by their research. It is just that we have moulded the things of today in a much better way into a newer version. You may be surprised to know how today's things were used differently in the olden days and how different are their uses in today's world.
Story first published: Thursday, January 21, 2016, 16:28 [IST]
X
Desktop Bottom Promotion