For Quick Alerts
ALLOW NOTIFICATIONS  
For Daily Alerts

  ಚಳಿಗಾಲ ಶುರುವಾಗಿ ಬಿಟ್ಟಿದೆ! ಬ್ಯೂಟಿ ಟಿಪ್ಸ್ ನೆನಪಿದೆಯಲ್ಲಾ?

  By Arshad
  |

  ಚಳಿಗಾಲ ಬಂದಾಯ್ತು. ಇದರೊಂದಿಗೆ ತಂಪಾದ ಒಣಹವೆಯೂ ಬೀಸುತ್ತಿದೆ. ಈ ಒಣಹವೆ ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ಹೊಂದಿಲ್ಲದ ಕಾರಣ ಚರ್ಮ ಬಹಳವಾಗಿ ಒಣಗುತ್ತದೆ. ಸೂಕ್ತ ಆರೈಕೆಯಿಲ್ಲದೇ ಇದ್ದರೆ ಹೊರಪದರ ಒಣಗಿ ಸೀಳುಬಿಟ್ಟು ಹುರುಪೆಯಂತೆ ಏಳಲು ಪ್ರಾರಂಭವಾಗುತ್ತದೆ.   ಚಳಿಗಾಲದಲ್ಲಿ ಒಣ ಚರ್ಮಕ್ಕೆ ಫೇಸ್ ಪ್ಯಾಕ್

  ಈ ಸ್ಥಿತಿಗೆ ಹೆಚ್ಚಿನವರ ಸುಲಭ ಆಯ್ಕೆಯೆಂದರೆ ವ್ಯಾಸಲಿನ್ ಹಚ್ಚುವುದು. ಇದರಿಂದ ಕೊಂಚ ಮಟ್ಟಿಗೆ ಚರ್ಮ ಆರೈಕೆ ಪಡೆಯಲು ಸಾಧ್ಯವಾದರೂ ಪೂರ್ಣ ಆರೈಕೆಯ ಬಗ್ಗೆ ತಜ್ಞರು ನೀಡುವ ಸಲಹೆಯೇ ಉತ್ತಮ. ಬನ್ನಿ ಚಳಿಗಾಲದಲ್ಲಿ ಚರ್ಮವನ್ನು ಹೇಗೆ ಸುರಕ್ಷಿತ ಮತ್ತು ಆರೋಗ್ಯಕರವಾಗಿಡಬಹುದು ಎಂಬ ಬಗ್ಗೆ ತಜ್ಞರು ನೀಡಿರುವ ನೈಸರ್ಗಿಕ ಸಲಹೆಗಳನ್ನು ಕೆಳಗೆ ವಿವರಿಸಲಾಗಿದೆ ಮುಂದೆ ಓದಿ....     

  ಬೇವು

  ಬೇವು

  ವಿಶೇಷವಾಗಿ ಸೂಕ್ಷ್ಮತ್ವಚೆಯವರಲ್ಲಿ ಚಳಿಗಾಲದಲ್ಲಿ ಸುಲಭವಾಗಿ ಮೊಡವೆಗಳು ಮೂಡುವಂತಿದ್ದರೆ ಈ ಚರ್ಮಕ್ಕೆ ಬೇವು ಉತ್ತಮ ಪರಿಹಾರವಾಗಿದೆ. ಬೇವಿನಲ್ಲಿರುವ ಪೋಷಕಾಂಶಗಳು ಚರ್ಮದ ಉರಿ, ನವೆಗಳನ್ನು ಕಡಿಮೆ ಮಾಡುವುದರ ಜೊತೆಗೇ ಚರ್ಮದ ಕೆಳಪದರದಲ್ಲಿ ಮನೆಮಾಡಿಕೊಂಡಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಮೊಡವೆಗಳನ್ನಾಗುವುದನ್ನೂ ತಡೆಯುತ್ತದೆ.

  ಬೇವು

  ಬೇವು

  ಇದಕ್ಕಾಗಿ ಕೊಂಚ ಕಹಿಬೇವಿನ ಎಲೆಗಳನ್ನು ನುಣ್ಣಗೆ ಅರೆದು ಅಥವಾ ಸಿದ್ಧರೂಪದಲ್ಲಿ ಸಿಗುವ ಬೇವಿನ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಲೇಪನದ ರೂಪದಲ್ಲಿ ಮೊಡವೆಗಳು ಮೂಡುವ ಸ್ಥಳದಲ್ಲಿ ದಪ್ಪನಾಗಿ ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.... ಬೇವಿನ ಸೌಂದರ್ಯವರ್ಧಕ ಗುಣಗಳು ಒಂದೇ, ಎರಡೇ?

  ಲಿಂಬೆರಸ

  ಲಿಂಬೆರಸ

  ಒಂದು ವೇಳೆ ನಿಮ್ಮ ತ್ವಚೆ ಕಾಂತಿರಹಿತವಾಗಿದ್ದು ಎಣ್ಣೆಪಸೆಯಿಂದ ಕೂಡಿದ್ದರೆ ನಿಮ್ಮ ಪ್ರಸಾದನಗಳಲ್ಲಿ ಲಿಂಬೆಯ ಅಂಶವಿದೆಯೋ ಎಂದು ಪರಿಶೀಲಿಸಿ. ಲಿಂಬೆರಸ ಚರ್ಮದ ಅಡಿಯ ಗ್ರಂಥಿಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ತೊಡೆಯುವ ಮೂಲಕ ಹೆಚ್ಚಿನ ಎಣ್ಣೆಪಸೆಯನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಚರ್ಮ ನೈಸರ್ಗಿಕವಾದ ಆರೋಗ್ಯ ಮತ್ತು ಕಾಂತಿಯನ್ನು ಪಡೆಯಲೂ ಸಾಧ್ಯವಾಗುತ್ತದೆ.

  ಗುಲಾಬಿ ನೀರು

  ಗುಲಾಬಿ ನೀರು

  ಸಾಮಾನ್ಯ ತ್ವಚೆಯವರಿಗೆ ಈ ನೀರು ಉಪಯುಕ್ತವಾಗಿದ್ದು ಒಂದು ಉತ್ತಮ ಟೋನರ್ ಸಹಾ ಆಗಿದೆ. ಈ ನೀರಿನಿಂದ ಮುಖವನ್ನು ತೊಳೆದುಕೊಳ್ಳುವ ಮೂಲಕ ಚರ್ಮದಲ್ಲಿ ಸೋಂಕು ಉಂಟುಮಾಡುವ ಕ್ರಿಮಿಗಳನ್ನು ಮತ್ತು ಸೂಕ್ಷ್ಮರಂಧ್ರಗಳಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಮೂಲಕ ಈ ರಂಧ್ರಗಳನ್ನು ತೆರೆದು ಚರ್ಮ ಉಸಿರಾಡುವಂತೆ ಮಾಡುತ್ತದೆ. ತನ್ಮೂಲಕ ಚರ್ಮದ ಬುಡದಲ್ಲಿರುವ ತೈಲ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡಲು ಸಾಧ್ಯವಾಗುತ್ತದೆ.

  ಕೊಬ್ಬರಿ ಎಣ್ಣೆ

  ಕೊಬ್ಬರಿ ಎಣ್ಣೆ

  ಒಣ ಚರ್ಮದವರಿಗೆ ಚಳಿಗಾಲ ಶತ್ರುವಾಗಿದೆ. ಏಕೆಂದರೆ ಮೊದಲೇ ಒಣಚರ್ಮವಾಗಿದ್ದು ಈಗ ಚಳಿಗಾಲದ ಕಾರಣದಿಂದ ಇನ್ನಷ್ಟು ಒಣಗುತ್ತದೆ. ಇವರಿಗೆ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆಯಾಗಿದ್ದು ಚರ್ಮ ಸೌಮ್ಯ ಮತ್ತು ನಯವಾಗಿರಲು ನೆರವಾಗುತ್ತದೆ. ನಿತ್ಯವೂ ರಾತ್ರಿ ಮಲಗುವ ಮುನ್ನ ಕೊಂಚ ಕೊಬ್ಬರಿ ಎಣ್ಣೆ ಸವರಿ ಮಲಗುವ ಮೂಲಕ ಒಣಚರ್ಮ ಆರೋಗ್ಯಕರವಾಗಿರುತ್ತದೆ. ಕೊಬ್ಬರಿ ಎಣ್ಣೆ ಚರ್ಮದ ಆಳಕ್ಕೆ ಇಳಿದು ಒಣಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಹಾಗೂ ಚರ್ಮ ಆರ್ದ್ರತೆಯನ್ನು ಉಳಿಸಿಕೊಳ್ಳಲು ನೆರವಾಗುವ ಮೂಲಕ ಇನ್ನಷ್ಟು ಒಣಗುವುದರಿಂದ ತಡೆಯುತ್ತದೆ. ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

  ಶಿಯಾ ಬೆಣ್ಣೆ

  ಶಿಯಾ ಬೆಣ್ಣೆ

  ಎಲ್ಲಾ ಬಗೆಯ ಚರ್ಮದವರಿಗೂ ಶಿಯಾ ಬೆಣ್ಣೆ ಉತ್ತಮವಾಗಿದ್ದು ನಿಮ್ಮ ಪ್ರಸಾದನಗಳಲ್ಲಿ ಈ ಅಂಶವಿದೆಯೋ ಎಂದು ಪರಿಶೀಲಿಸಿಕೊಳ್ಳಿ. ಈ ಪೋಷಕಾಂಶ ಇತರ ಎಲ್ಲಾ ಪೋಷಕಾಂಶಗಳಿಗಿಂತಲೂ ಅತಿ ಹೆಚ್ಚು ಕಾಲ ಪೋಷಣೆ ನೀಡುತ್ತಾ ಇರುವ ಮೂಲಕ ಹೆಚ್ಚು ಹೊತ್ತು ಚರ್ಮದ ರಕ್ಷಣೆ ಮಾಡುತ್ತದೆ.

  ಶಿಯಾ ಬೆಣ್ಣೆ

  ಶಿಯಾ ಬೆಣ್ಣೆ

  ಶಿಯಾ ಬೆಣ್ಣೆ ಚರ್ಮಕ್ಕೆ ಅಗತ್ಯವಾದ ಆದ್ರತೆ ನೀಡುವ ಮೂಲಕ ಒಣಗುವುದನ್ನು ತಡೆಯುತ್ತದೆ. ಅಲ್ಲದೇ ಚರ್ಮದ ಹೊಸ ಜೀವಕೋಶಗಳು ಹುಟ್ಟಲು ಮತ್ತು ಚಳಿಗಾಲವನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತದೆ.

  ಸೌತೆಕಾಯಿ

  ಸೌತೆಕಾಯಿ

  ಎಲ್ಲಾ ಬಗೆಯ ಚರ್ಮಕ್ಕೂ ಉತ್ತಮವಾಗಿರುವ ಸೌತೆಕಾಯಿ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡುವ ಮೂಲಕ ಚಳಿಗಾಲದಲ್ಲಿ ಒಡೆಯುವುದನ್ನು ತಡೆಯುತ್ತದೆ. ಅಲ್ಲದೇ ಚರ್ಮದ ಕಲೆ ಮತ್ತು ಗಾಢವಾಗಿರುವ ಕಡೆಯಲ್ಲಿ ಕೊಂಚ ದಪ್ಪನಾಗಿ ಹಚ್ಚುವ ಮೂಲಕ ಚರ್ಮ ಸಹಜವರ್ಣ ಪಡೆಯಲೂ ನೆರವಾಗುತ್ತದೆ.

  ಸೌತೆಕಾಯಿ

  ಸೌತೆಕಾಯಿ

  ವಿಶೇಷವಾಗಿ ಕಳೆಗುಂದಿದ ಚರ್ಮದವರಿಗೆ ಸೌತೆಕಾಯಿ ಉತ್ತಮ ಆಯ್ಕೆಯಾಗಿದ್ದು ಈ ಅಂಶವನ್ನು ಹೊಂದಿರುವ ಪ್ರಸಾಧನಗಳನ್ನು ಖರೀಸಿಸುವುದೇ ಜಾಣತನವಾಗಿದೆ. ಮುಖದ ಸೌಂದರ್ಯಕ್ಕೆ ಸೌತೆಕಾಯಿಯ ಫೇಸ್ ಪ್ಯಾಕ್

   

  English summary

  Tips for Winter Dry Skin Problems and Solutions

  This winter, pamper your skin with the richness of natural ingredients to fight winter woes. Garima Singh, Research and Development Manager, Organic Harvest, reveals common natural ingredients that can help you deal with dull, dry and oily skin.
  Story first published: Monday, November 21, 2016, 23:41 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more