For Quick Alerts
ALLOW NOTIFICATIONS  
For Daily Alerts

ಚರ್ಮದ ಸಮಸ್ಯೆಗೆ ಇಂತಹ ಅಭ್ಯಾಸಗಳೇ ಕಾರಣವಾಗಬಹುದು....

By Manjula Balaraj
|

ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವೊಂದು ಸಂಗತಿಗಳಿಂದ ನಮ್ಮ ಚರ್ಮಕ್ಕೆ ಹಾನಿಯಯುಂಟಾಗುತ್ತದೆ. ಇದರಿಂದ ಹೊರಬರುವ ಕೆಲವೊಂದು ಪರಿಹಾರಗಳನ್ನು ಈ ಲೇಖನದಲ್ಲಿ ಹೇಳಲಾಗಿದೆ. ಹೌದು, ನಮಗೇ ತಿಳಿಯದ ಹಾಗೇ ಮತ್ತು ಆಶ್ಚರ್ಯವೆನಿಸುವಂತೆ ನಾವೇ ನಮ್ಮ ಚರ್ಮಕ್ಕೆ ಹಾನಿ ಉಂಟುಮಾಡುವ ಕೆಲವೊಂದು ವಿಷಯಗಳನ್ನು ಮಾಡಿರುತ್ತೇವೆ. ಸಾಮಾನ್ಯವಾಗಿ ನಮ್ಮ ಚರ್ಮವು ಕೆಲವು ಆರೋಗ್ಯದಾಯಿಕ ಹಾಗು ಪ್ರಕೃತಿದತ್ತವಾದ ಎಣ್ಣೆ ಅಂಶ ಮತ್ತು ಪೋಷಕಾಂಶವನ್ನು ಹೊಂದಿದೆ.

ಈ ಎಣ್ಣೆಯ ಅಂಶವು ನಮ್ಮ ತ್ವಚೆಯ ಸುಕ್ಕುಗಳನ್ನು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ಅಲ್ಲದೆ ಚರ್ಮದಲ್ಲಿರುವ ಕೆಲವು ಉತ್ತಮ ಬ್ಯಾಕ್ಟೀರಿಯಾಗಳು ಕೂಡ ಚರ್ಮಕ್ಕೆ ರಕ್ಷಣೆ ನೀಡುತ್ತವೆ. ಹಾಗಾಗಿ ಇವೆಲ್ಲದರ ಸುರಕ್ಷತೆಗಾಗಿ ಬಿಸಿ ಸ್ನಾನ ಮಾಡುವುದು, ಈಜುಕೊಳಗಳಲ್ಲಿ ಹೆಚ್ಚಿನ ಸಮಯ ವ್ಯಯಿಸುವುದು, ಫೋನ್, ಮೊಬೈಲ್ ಸಂಪರ್ಕದಲ್ಲಿ ಹೆಚ್ಚಾಗಿ ಇರದಂತೆ ನೋಡಿಕೊಳ್ಳಬೇಕು, ಏಕೆಂದರೆ ಫೋನ್ ನಲ್ಲಿರುವ ಬ್ಯಾಕ್ಟೀರಿಯಾವು ಒಂದು ಶೌಚಾಲಯದ ಸೀಟ್ ನಲ್ಲಿರುವ ಬ್ಯಾಕ್ಟೀರಿಯಾಕ್ಕಿಂತಲೂ ಹೆಚ್ಚು ಹಾನಿಕಾರಕ ಎನ್ನುವುದು ಗಮನಿಸಬೇಕಾದ ಅಂಶ. ನಿಮ್ಮ ಚರ್ಮಕ್ಕೆ ಅನಿರೀಕ್ಷಿತವಾಗಿ ಹಾನಿ ಉಂಟು ಮಾಡುವ ವಿಷಯಗಳನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಆದುದರಿಂದ ಈ ಲೇಖನವನ್ನು ಓದಿ ಹಾಗು ನಿಮ್ಮ ದಿನಚರಿಯಲ್ಲಿ ಅನಿರೀಕ್ಷಿತವಾಗಿ ಆಗುವ ಹಾನಿಗಳನ್ನು ತಡೆಗಟ್ಟಿ...

ಅತಿಯಾದ ಸಕ್ಕರೆಯ ಬಳಕೆ

ಅತಿಯಾದ ಸಕ್ಕರೆಯ ಬಳಕೆ

ನೀವು ಅತಿಯಾದ ಸಿಹಿ ಪ್ರಿಯರಾಗಿದ್ದರೆ ಅದಕ್ಕೆ ಸ್ವಲ್ಪ ತಡೆಹಾಕಿ, ಇದು ಹಾರ್ಮೋನುಗಳ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇದರ ಅತಿಯಾದ ಸೇವನೆಯಿಂದ ಮುಖದಲ್ಲಿ ಮೊಡವೆ ಮತ್ತು ಗುಳ್ಳೆಗಳು ಉಂಟಾಗುತ್ತದೆ. ಇದು ಚರ್ಮದಲ್ಲಿರುವ ಗುಣಪಡಿಸುವ ಶಕ್ತಿಯನ್ನು ಕಡಿಮೆ ಮಾಡಬಹುದು ಹಾಗೂ ಚರ್ಮದ ಉರಿಯೂತಕ್ಕೆ ಕಾರಣವಾಗಬಹುದು. ಹಾಗಾಗಿ ಚರ್ಮದಲ್ಲಿರುವ ಸುಕ್ಕುಗಳಿಗೆ ಸಕ್ಕರೆಯ ಅತೀ ಸೇವನೆಯೂ ಒಂದು ಕಾರಣವಾಗಬಹುದು.

ಈಜುವಿಕೆ

ಈಜುವಿಕೆ

ಈಜುಕೊಳದಲ್ಲಿ ಜಾಸ್ತಿಹೊತ್ತು ಕಳೆಯುವುದನ್ನು ಆದಷ್ಟು ತಪ್ಪಿಸಿ, ಯಾಕೆಂದರೆ ಈಜುಕೊಳದಲ್ಲಿರುವ ನೀರಿನಲ್ಲಿ ಕ್ಲೋರಿನ್ ಜಾಸ್ತಿ ಇರುತ್ತದೆ. ಇದು ನಿಮ್ಮ ಚರ್ಮದಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸಾಯುವಂತೆ ಮಾಡುತ್ತದೆ. ಇದರಿಂದ ಕಜ್ಜಿ, ಒಣಚರ್ಮ, ಸುಕ್ಕು ಮತ್ತು ಚರ್ಮದ ಕ್ಯಾನ್ಸರ್ ಕೂಡ ಬರಬಹುದು.

ಕೊಳಕಾಗಿರುವ ನಿಮ್ಮ ದಿಂಬಿನ ಕವರ್‌ಗಳು

ಕೊಳಕಾಗಿರುವ ನಿಮ್ಮ ದಿಂಬಿನ ಕವರ್‌ಗಳು

ನಿಮ್ಮ ದಿಂಬಿನ ಕವರ್ ಗಳನ್ನು ಯಾವಾಗಲೂ ಬದಲಾಯಿಸುತ್ತಾ ಇರಬೇಕು, ಇದು ಕೆಳಗೆ ಬೀಳುವುದರಿಂದ ನಿಮ್ಮ ಚರ್ಮವು ತುಂಬಾ ಮೃದುವಾಗಿದ್ದಲ್ಲಿ ಕಜ್ಜಿ ಮತ್ತು ಮೊಡವೆಗಳಾಗಬಹುದು. ಹಾಗಾಗಿ ನಿಮ್ಮ ದಿಂಬಿನ ಕವರ್ ಗಳನ್ನು ದಿನಾ ಬದಲಾಯಿಸುತ್ತಿರುವುದು ಉತ್ತಮ.

ಟವೆಲ್

ಟವೆಲ್

ನೀವು ಉಪಯೋಗಿಸುವ ಟವೆಲ್ ಕೂಡ ಚರ್ಮದ ತೊಂದರೆಗಳಿಗೆ ಕಾರಣವಾಗಬಹುದು ಎನ್ನುವುದು ಗಮನಿಸಬೇಕಾದ ಅಂಶ. ಹೆಚ್ಚಾಗಿ ಟವೆಲ್ ಗಳು ತೇವವಾಗಿದ್ದರೆ ನಾವು ಅದನ್ನು ಮನೆಯ ಒಳಗೆ ಒಣಗಲು ಹಾಕುತ್ತೇವೆ ಆದ್ದರಿಂದ ಇದರಲ್ಲಿ ಅನೇಕ ಬ್ಯಾಕ್ಟೀರಿಯಾ ಬೆಳೆಯುತ್ತವೆ ಮತ್ತು ಇದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಆದುದರಿಂದ ನಿಮ್ಮ ಟವೆಲ್ ಗಳನ್ನು ಹೊರಗೆ ಸೂರ್ಯನ ಬೆಳಕಿನಲ್ಲಿ ಒಣಗುವಂತೆ ಮಾಡಿ ಇದರಿಂದ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.

ಶವರಿನ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದು

ಶವರಿನ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದು

ಬಿಸಿಯಾದ ನೀರು ನಿಮ್ಮ ಚರ್ಮದಲ್ಲಿರುವ ಎಣ್ಣ್ರೆಯ ಅಂಶಗಳನ್ನು ಕಡಿಮೆ ಮಾಡುತ್ತದೆ.ಇದರಿಂದ ನಿಮ್ಮ ಚರ್ಮವು ಒಣಗುತ್ತದೆ. ಷವರಿನ ಬಿಸಿಯಾದ ನೀರಿನಲ್ಲಿ ಹತ್ತು ನಿಮಿಷಕ್ಕಿಂತ ಜಾಸ್ತಿ ಸ್ನಾನ ಮಾಡಬಾರದು. ಯಾವಾಗಲೂ ಚರ್ಮದ ತೇವಾಂಶ ಪುನಃಸ್ಥಾಪಿಸಲು ಸ್ನಾನವಾದ ನಂತರ ಮಾಶ್ಚುರೈಸರ್ ಕ್ರೀಂ ಹಚ್ಚಿಕೊಳ್ಳಿ.

ಊಟದಲ್ಲಿ ಏರುಪೇರು

ಊಟದಲ್ಲಿ ಏರುಪೇರು

ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಡಯೆಟ್ ಅಥವಾ ಉಪವಾಸ ಮಾಡುತ್ತಿದ್ದರೆ ಇದು ನಿಮ್ಮ ಚರ್ಮಕ್ಕೆ ತುಂಬಾ ಕೆಟ್ಟ ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಊಟವನ್ನು ತಪ್ಪಿಸುವುದರಿಂದ ನಿಮ್ಮ ಚರ್ಮಕ್ಕೆ ಬೇಕಾದ ವಿಟಮಿನ್ ಮತ್ತು ಖನಿಜಾಂಶಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಹೀಗಾಗಿ, ನಿಮ್ಮ ಚರ್ಮವು ಒಣಗಿದಂತೆ ಮತ್ತು ನಿರ್ಜೀವವಾಗಿ ಕಾಣುತ್ತದೆ.

ಫೋನಿನಲ್ಲಿ ಮಾತಾಡುವುದು

ಫೋನಿನಲ್ಲಿ ಮಾತಾಡುವುದು

ನಿಮ್ಮ ಫೋನ್ ನಲ್ಲಿ ಕೂಡ ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ ಹಾಗೂ ಅದು ನಿಮ್ಮ ಟಾಯ್ಲೆಟ್ ಸೀಟಿಗಿಂತಲೂ ಹೆಚ್ಚು ಹಾನಿಕಾರಕ ಹಾಗೂ ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡುವುದೆಂದು ನಿಮಗೆ ತಿಳಿದಿದೆಯೆ? ಹೌದು ನೀವು ಫೊನಿನಲ್ಲಿ ಮಾತಾಡುವಾಗ ಹಾನಿಕಾರಕ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮಕ್ಕೆ ಸೇರುತ್ತದೆ ಇದರಿಂದ ನಿಮ್ಮ ಕೆನ್ನೆ ಮತ್ತು ದವಡೆಗಳಲ್ಲಿ ಕಜ್ಜಿ ಉಂಟಾಗಬಹುದು. ಆದ್ದರಿಂದ ನಿಮ್ಮ ಫೊನ್ ಬಳಸುವ ಮೊದಲು ಚೆನ್ನಾಗಿ ಒರೆಸಿಕೊಂಡು ನಂತರ ಉಪಯೋಗಿಸಿ.

English summary

Surprising Things That Damage Your Skin

We unknowingly do some things that can damage our skin, and we wonder for the causes of skin damage. There are many surprising things that can damage your skin, and hence you must avoid the same. Our skin contains some natural oils that keep it in good health and well nourished. In this article, we have mentioned some of the surprising things that can damage your skin. Therefore, read on the article and try to avoid these things from your daily routine.
X
Desktop Bottom Promotion