Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು
ಕಿತ್ತಳೆಯ ಸಿಪ್ಪೆ ತ್ವಚೆಗೆ ಒಳ್ಳೆಯದು ಅನ್ನುವ ಅಂಶ ಈಗಾಗಲೇ ನಿಮಗೆ ತಿಳಿದಿರಬಹುದು. ತ್ವಚೆಯ ಅನೇಕ ಸಮಸ್ಯೆಗಳಿಗೆ ಕಿತ್ತಳೆಯ ಸಿಪ್ಪೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ಇದನ್ನು ಬಳಸಿ ಫೇಶಿಯಲ್ ಮಾಡಿದರೆ ಮುಖದ ಬಿಳುಪು ಹೆಚ್ಚುವುದು.
ಮೊಡವೆ, ಎಣ್ಣೆ ತ್ವಚೆ, ಕಲೆ , ಮಂಕಾದ ತ್ವಚೆ ಇವೆಲ್ಲದಕ್ಕೂ ಪರಿಹಾರ ಕಿತ್ತಳೆಯ ಸಿಪ್ಪೆಯಲ್ಲಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿಡಿ, ಇದರಿಂದ ಫೇಸ್ಟ್ ಪ್ಯಾಕ್ ಮಾಡುವಾಗ ಅದನ್ನು ಅರೆದು ಈ ಕೆಳಗಿನ ವಸ್ತುಗಳ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು:

ಕಿತ್ತಳೆ ಸಿಪ್ಪೆ ಮತ್ತು ಮೊಸರು
ಕಿತ್ತಳೆಯ ಸಿಪ್ಪೆ ಮತ್ತು ಮೊಸರನ್ನು ಮಿಕ್ಸ್ ಮಾಡಿ ಹಚ್ಚಿದರೆ ಕಿತ್ತಳೆಯ ಸಿಪ್ಪೆ ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸುತ್ತದೆ, ಮೊಸರು ಮುಖ ಮಾಯಿಶ್ಚರೈಸರ್ ಆಗಿರುವಂತೆ ನೋಡಿಕೊಳ್ಳುತ್ತದೆ, ಇದರಿಂದ ಮುಖ ನುಣಾಪಾಗಿ ಕಾಣುವುದು.
ಕಿತ್ತಳೆ ಸಿಪ್ಪೆ ಮತ್ತು ನಿಂಬೆ ಸರ
ಕಿತ್ತಳೆ ಸಿಪ್ಪೆಯ ಪೇಸ್ಟ್ ಗೆ ಸ್ವಲ್ಪ ನಿಂಬೆ ರಸ ಹಾಕಿ ಹಚ್ಚಿದರೆ ಮೊಡವೆ ಕಡಿಮೆಯಾಗುವುದು, ಅಲ್ಲದೆ ಮೊಡವೆಯಿಂದ ಉಂಟಾದ ಕಲೆಯನ್ನೂ ಹೋಗಲಾಡಿಸಬಹುದು.
ಕಿತ್ತಳೆ ಸಿಪ್ಪೆ ಮತ್ತು ಅರಿಶಿಣ
ಕಿತ್ತಳೆ ಸಿಪ್ಪೆಯ ಪೇಸ್ಟ್ ಗೆ ಅರಿಶಿಣ ಹಾಕಿ ಹಚ್ಚಿದರೆ ಮುಖದಲ್ಲಿರುವ ಕಲೆ ಹೋಗುವುದರ ಜೊತೆಗೆ ಮುಖದ ಬಿಳುಪು ಹೆಚ್ಚುವುದು. ಇವೆರಡನ್ನೂ ಮಿಕ್ಸ್ ಮಾಡಿ 20-25 ನಿಮಿಷದವರೆಗೆ ಮುಖದಲ್ಲಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ.
ಇವುಗಳಲ್ಲಿ ಯಾವುದಾದರೂ 1 ವಿಧಾನವನ್ನು ಬಳಸಿ ವಾರದಲ್ಲಿ ಎರಡು ಬಾರಿ ಫೇಸ್ ಮಾಸ್ಕ್ ಮಾಡಿ ನೋಡಿ, ಒಂದೇ ತಿಂಗಳಿನಲ್ಲಿ ಇದರ ಗುಣ ನಿಮಗೆ ತಿಳಿಯುವುದು.



Click it and Unblock the Notifications
