ಇನ್ನು ಮುಖ ತೊಳೆಯಲು, ಸೋಪು ಮಾತ್ರ ಬಳಸಬೇಡಿ!

By: Arshad
Subscribe to Boldsky

ನಮ್ಮ ದೇಹದ ಚರ್ಮದಲ್ಲಿ ಅತಿ ಸೂಕ್ಷ್ಮವಾದ ಭಾಗಗಳಲ್ಲಿ ಮುಖದ ಚರ್ಮ ಪ್ರಮುಖವಾಗಿದೆ. ಅಲ್ಲದೇ ಮುಖದ ಚರ್ಮದಲ್ಲಿ ಅತಿ ಹೆಚ್ಚಿನ ತೈಲಗ್ರಂಥಿಗಳಿರುವ ಕಾರಣ ಈ ಚರ್ಮದ ಆರೈಕೆಯೂ ಕೊಂಚ ಕಷ್ಟಕರ. ಏಕೆಂದರೆ ಸ್ವಚ್ಛಗೊಳಿಸಲು ಸೋಪು ಅಥವಾ ಕೊಂಚ ಪ್ರಬಲ ದ್ರಾವಣವನ್ನು ಬಳಸಿದರೆ ಇದು ಕೊಳೆಯ ಜೊತೆಗೇ ತೈಲವನ್ನೂ ಸೆಳೆದುಬಿಡುತ್ತದೆ. ಗೌರವರ್ಣ ತ್ವಚೆ - ಅದೂ ಹೆಚ್ಚಿನ ಖರ್ಚು, ಶ್ರಮವಿಲ್ಲದೇ!

ಅತಿ ಕಡಿಮೆ ಪ್ರಬಲತೆ ಇರುವ ದ್ರಾವಣದಿಂದ ಚರ್ಮದ ಸೂಕ್ಷ್ಮ ರಂಧ್ರಗಳಲ್ಲಿ ಸಿಲುಕಿದ್ದ ಕೊಳೆ ಹೋಗುವುದಿಲ್ಲ. ಆದ್ದರಿಂದ ಮುಖ ತೊಳೆಯಲೆಂದೇ ಇಂದು ಮಾರುಕಟ್ಟೆಯಲ್ಲಿ ಫೇಸ್ ವಾಶ್ ದ್ರಾವಣಗಳು ಲಭ್ಯವಿವೆ. ಯಾವ ಫೇಸ್ ವಾಶ್ ತ್ವಚೆಗೆ ಒಳ್ಳೆಯದು?

ಆದರೆ ಇವು ಕೊಂಚ ದುಬಾರಿಯಾಗಿದ್ದು ಎಲ್ಲರ ಕೈಗೆಟುಕುವುದಿಲ್ಲ. ಇದೇ ಕೆಲಸವನ್ನು ಕೆಲವು ನೈಸರ್ಗಿಕ ಸಾಮಾಗ್ರಿಗಳು ಸಮರ್ಥವಾಗಿ ನಿಭಾಯಿಸುತ್ತವೆ.

ಬನ್ನಿ, ಸೋಪು ಇಲ್ಲದೆಯೇ ಮುಖವನ್ನು ಸ್ವಚ್ಛಗೊಳಿಸುವ ಈ ಸಾಮಾಗ್ರಿಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ. ಈ ಸಾಮಾಗ್ರಿಗಳು ಸುರಕ್ಷಿತವಾಗಿದ್ದು ಸೂಕ್ಷ್ಮಸಂವೇದಿ ಚರ್ಮದವರೂ ಬಳಸಬಹುದು....

ಜೇನು

ಜೇನು

ಚರ್ಮದ ತೇವವನ್ನು ಹಿಡಿದಿಟ್ಟುಕೊಳ್ಳಲು ಜೇನು ಅತ್ಯುತ್ತಮವಾಗಿದ್ದು ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇನನ್ನು ಬಳಸಿ ಮುಖ ತೊಳೆಯುವ ಮೂಲಕ ಸೂಕ್ಷ್ಮರಂಧ್ರಗಳು ಕೊಳೆ ನಿವಾರಿಸುವಷ್ಟು ಮಾತ್ರ ತೆರೆದು ಕೊಳೆ ನಿವಾರಿಸಿ ಆರ್ದ್ರತೆಯನ್ನು ಹಿಡಿದಿಟ್ಟುಕೊಳ್ಳಲು ಮತ್ತು ಚರ್ಮ ಮೃದುವಾಗಿರಲು ನೆರವಾಗುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಮೇಕಪ್ ಅನ್ನು ನಿವಾರಿಸಲು ಕೊಬ್ಬರಿ ಎಣ್ಣೆಗಿಂತ ಉತ್ತಮವಾದ ಸ್ವಚ್ಛಕಾರಕ ಇನ್ನೊಂದಿಲ್ಲ. ಇದೇ ಗುಣ ಚರ್ಮದ ಸ್ವಚ್ಛತೆಗಾಗಿಯೂ ಬಳಸಬಹುದು. ಆದ್ದರಿಂದ ಮೇಕಪ್ ರಿಮೂವರ್ ಎಂಬ ಪ್ರಬಲ ರಾಸಾಯನಿಕಗಳಿಗೆ ವ್ಯರ್ಥವಾಗಿ ಹಣವನ್ನು ಸುರಿದು ಚರ್ಮವನ್ನು ಹಾಳುಗೆಡುವುದು ಈಗ ಅಗತ್ಯವಿಲ್ಲ. ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಲಿಂಬೆ

ಲಿಂಬೆ

ಎಣ್ಣೆ ಚರ್ಮದವರಿಗೆ ಲಿಂಬೆ ಅತ್ಯುತ್ತಮವಾಗಿದೆ. ಇದು ತೆರೆದ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಕೊಳೆಯನ್ನೂ ನಿವಾರಿಸುತ್ತದೆ. ಉತ್ತಮ ಪರಿಣಾಮ ಪಡೆಯಲು ಲಿಂಬೆರಸವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಕೂದಲಿನ ಆರೋಗ್ಯಕ್ಕೆ ಬೇಕು-ಲಿಂಬೆ ಹಣ್ಣಿನ ಜ್ಯೂಸ್!

ಮೊಸರು

ಮೊಸರು

ಮೊಸರು ನೈಸರ್ಗಿಕ ತೇವಕಾರಕವಾಗಿದ್ದು ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆಯನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಬಿಸಿಲಿಗೆ ಬಳಲಿದ ಚರ್ಮಕ್ಕೆ ಮೊಸರಿನ ಆರೈಕೆ ಅತ್ಯುತ್ತಮವಾಗಿದೆ. ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಸಾಮಾನ್ಯ ಚರ್ಮದವರಿಗೆ ಆಲಿವ್ ಎಣ್ಣೆ ಉತ್ತಮವಾಗಿದೆ. ಮೇಕಪ್ ಅನ್ನು ನಿವಾರಿಸಲೂ ಈ ಎಣ್ಣೆ ಸಮರ್ಥವಾಗಿದ್ದು ಸೂಕ್ಷ್ಮರಂದ್ರಗಳಿಂದ ಕೊಳೆ ತೆಗೆಯಲು ನೆರವಾಗುತ್ತದೆ. ಉತ್ತಮ ಪರಿಣಾಮ ಪಡೆಯಲು ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹಚ್ಚಿ ತೊಳೆದುಕೊಂಡು ಮಲಗಬೇಕು. ಆಲಿವ್ ಎಣ್ಣೆ-ತಲೆಹೊಟ್ಟಿನ ಸಮಸ್ಯೆಗೆ ರಾಮಬಾಣ

 

 

English summary

Natural Ways To Clean Your Face Without Soap

Face washes are usually really gentle, but these natural remedies to clean your face are completely devoid of chemicals, so you could definitely use these instead of face washes. So, the next time you're running out of a face wash or cleanser, just try one of these out and your skin will be left smooth and clean. Trust us, your skin will thank you for this!
Please Wait while comments are loading...
Subscribe Newsletter