For Quick Alerts
ALLOW NOTIFICATIONS  
For Daily Alerts

ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

By Super Admin
|

ಪ್ರತಿಯೊಂದು ಹಣ್ಣುಗಳಲ್ಲಿಯೂ ಒಂದೊಂದು ರೀತಿಯ ಪೋಷಕಾಂಶಗಳು ಇದೆ. ಅದನ್ನು ನಾವು ಬಳಸಿಕೊಂಡರೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಯಾವುದೇ ಹಣ್ಣನ್ನು ಕೂಡ ಕಡೆಗಣಿಸುವಂತಿಲ್ಲ. ಪ್ರತಿಯೊಂದು ಅದರ ಸ್ವಭಾವಕ್ಕೆ ಅನುಗುಣವಾಗಿ ಹುಳಿ, ಸಿಹಿ ಹಾಗೂ ಸಪ್ಪೆಯಾಗಿರುತ್ತದೆ. ಆದರೆ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು.

ಅದರಲ್ಲೂ ಪಪ್ಪಾಯಿಯಿಂದ ನಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳ ಬಗ್ಗೆ ಬೋಲ್ಡ್ ಸ್ಕೈನಲ್ಲಿ ಈ ಹಿಂದೆ ನಾವು ಹಲವಾರು ಬಾರಿ ತಿಳಿದುಕೊಂಡಿದ್ದೇವೆ. ಪಪ್ಪಾಯಿಯಿಂದ ಚರ್ಮಕ್ಕೆ ಆಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ. ಬೆಳಿಗ್ಗೆ ಎದ್ದಾಕ್ಷಣ ಪಪ್ಪಾಯಿ+ಲಿಂಬೆಯ ಜ್ಯೂಸ್ ಕುಡಿಯಿರಿ!

ಈ ಹಣ್ಣಿನಲ್ಲಿ ಅಧಿಕವಾಗಿ ವಿಟಮಿನ್ ಎ, ಸಿ, ಇ ಮತ್ತು ಕೆ ಇವೆ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಇವೆ. ಹಾಗೂ ಇದರಲ್ಲಿ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವವಿರುತ್ತವೆ, ಅಲ್ಲದೆ ಅದರ ಬೀಜದಲ್ಲಿಯೂ ಕೂಡ ಹಲವು ಆರೋಗ್ಯ ಲಾಭಗಳಿವೆ ಎಂದು ಆರೋಗ್ಯ ತಜ್ಞರು ಈಗಾಗಲೇ ಖಚಿತಪಡಿಸಿದ್ದಾರೆ. ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!

ಅಷ್ಟೇ ಅಲ್ಲದೆ, ಪಪ್ಪಾಯಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುವುದರ ಜೊತೆಗೆ ಕೆರೋಟಿನ್‌ಗಳು, ವಿಟಮಿನ್ ಸಿ ಮತ್ತು ಫ್ಲಾವೊನಾಯ್ಡ್‌ಗಳಂತಹ ಪೋಷಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿರುವುದರಿಂದ, ಇದು ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಿಸುತ್ತದೆ. ಬನ್ನಿ ಪಪ್ಪಾಯಿ ಹಣ್ಣು ಬಳಸಿ ಮಾಡುವಂತಹ ಕೆಲವೊಂದು ಫೇಸ್‌ ಪ್ಯಾಕ್‌ಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ನೀವು ಪ್ರಯತ್ನಿಸಿ ನೋಡಬಹುದು....

ತ್ವಚೆಯ ಕಲೆಗಳ ನಿವಾರಣೆಗೆ

ತ್ವಚೆಯ ಕಲೆಗಳ ನಿವಾರಣೆಗೆ

ಪಪ್ಪಾಯಿ ಹಣ್ಣಿನ ನುಣ್ಣನೆಯ ಪೇಸ್ಟನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಬಿಟ್ಟು, ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಒಂದು ವಾರದ ತನಕ ಪುನರಾವರ್ತಿಸಿ. ಆಗ ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗಿರುವುದನ್ನು ನೀವೇ ನೋಡುವಿರಿ.

ಒಣ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

ಒಣ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

ಎರಡು ಸಣ್ಣ ತುಂಡು ಮಾಗಿದ ಪಪ್ಪಾಯಿಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಾಲು ಮತ್ತು ಒಂದು ಚಮಚ ಜೇನನ್ನು ಸೇರಿಸಿಕೊಂಡು ಮಿಶ್ರಣ ಮಾಡಿ. ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಹಾಗೆ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ. ಇದು ತೇವಾಂಶವನ್ನು ನೀಡುವುದು.

ವಯಸ್ಸಾಗುವ ಲಕ್ಷಣ ತಡೆಗಟ್ಟುವ ಫೇಸ್ ಪ್ಯಾಕ್

ವಯಸ್ಸಾಗುವ ಲಕ್ಷಣ ತಡೆಗಟ್ಟುವ ಫೇಸ್ ಪ್ಯಾಕ್

ಎರಡು ಚಮಚ ಪಕ್ವವಾಗಿರುವ ಪಪ್ಪಾಯಿಯನ್ನು ಒಂದು ಚಮಚ ಜೇನುತುಪ್ಪ ಮತ್ತು ½ ಚಮಚ ಶ್ರೀಂಗಂಧವನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

ಮೊಡವೆ ಹಾಗೂ ಎಣ್ಣೆಯಂಶವಿರುವ ಮುಖಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

ಮೊಡವೆ ಹಾಗೂ ಎಣ್ಣೆಯಂಶವಿರುವ ಮುಖಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

ಎರಡು ಚಮಚ ಮಾಗಿದ ಪಪ್ಪಾಯಿ ಹಾಗೂ ಮುಲ್ತಾನಿ ಮಿಟ್ಟಿಯನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಅದನ್ನು ಒಣಗಲು ಬಿಡಿ. ಇದನ್ನು ತಂಪಾದ ನೀರಿನಿಂದ ತೊಳೆಯಿರಿ. ಮುಖವನ್ನು ತೊಳೆದ ಬಳಿಕ ನೀವು ಫಲಿತಾಂಶವನ್ನು ಗಮನಿಸಬಹುದು. ಕೆಲವು ದಿನಗಳ ಕಾಲ ಇದನ್ನು ಮಾಡುತ್ತಾ ಇರಿ. ಮುಲ್ತಾನಿ ಮಿಟ್ಟಿ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ ಮತ್ತು ಪಪ್ಪಾಯಿ ತ್ವಚೆಯನ್ನು ಮೃದುವಾಗಿಸುವುದು. ಮೊಡವೆಗಳಿಗೆ ಇದು ಒಳ್ಳೆಯ ಫೇಸ್ ಪ್ಯಾಕ್.

ಎಲ್ಲಾ ವಿಧದ ಚರ್ಮಕ್ಕಾಗಿ ಇರುವ ಪಪ್ಪಾಯಿ ಫೇಸ್ ಪ್ಯಾಕ್

ಎಲ್ಲಾ ವಿಧದ ಚರ್ಮಕ್ಕಾಗಿ ಇರುವ ಪಪ್ಪಾಯಿ ಫೇಸ್ ಪ್ಯಾಕ್

ಎರಡು ಚಮಚ ಮಾಗಿದ ಪಪ್ಪಾಯಿಯನ್ನು ಅಲೋವೆರಾ ಜೆಲ್ ನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಬಿಡಿ. ತಂಪಾದ ನೀರಿನಿಂದ ಇದನ್ನು ತೊಳೆಯಿರಿ. ಇದು ಚರ್ಮದಲ್ಲಿನ ಎಣ್ಣೆಯಂಶ ಮತ್ತು ಮುಖ ಒಣಗುವುದನ್ನು ನಿಯಂತ್ರಿಸುತ್ತದೆ.

ಚರ್ಮದ ಬಣ್ಣಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

ಚರ್ಮದ ಬಣ್ಣಕ್ಕೆ ಪಪ್ಪಾಯಿ ಫೇಸ್ ಪ್ಯಾಕ್

2 ಚಮಚ ಮಾಗಿದ ಪಪ್ಪಾಯಿಗೆ 10ರಿಂದ 12 ಹನಿ ನಿಂಬೆ ರಸವನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆಯಿರಿ. ಕೆಲವು ದಿನಗಳ ಬಳಿಕ ಕಪ್ಪು ಕಲೆ ಹಾಗೂ ಇತರ ಕಲೆಗಳು ದೂರವಾಗುತ್ತದೆ. ಕಾಂತಿಯುತ ಚರ್ಮವನ್ನು ನೀವು ಪಡೆಯಬಹುದು.

English summary

Natural Papaya Face Pack for Different Skin Types

Papaya benefits skin as it is rich in vitamin A, E and C and anti-oxidants which moisturize the skin and clears it from dirt and dark spots. Papaya can be used as facial scrub or face mask to cure acne, tan on the face, aging skin etc. Check out papaya usage and benefits on skin.
Story first published: Thursday, September 22, 2016, 20:40 [IST]
X
Desktop Bottom Promotion