Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಮುಖದ ಸೌಂದರ್ಯಕ್ಕೆ ಸೌತೆಕಾಯಿಯ ಫೇಸ್ ಪ್ಯಾಕ್
ಮುಖದ ಸೌಂದರ್ಯವೆಂಬುದು ಹೆಣ್ಣು ಮಕ್ಕಳು ಹೆಚ್ಚು ಪ್ರಾಶಸ್ತ್ಯ ಕೊಡುವ ಅಂಶವಾಗಿದೆ. ಮುಖದಲ್ಲಿ ಕಲೆಗಳು, ಮೊಡವೆ, ತುರಿಕೆ ಈ ರೀತಿಯ ಸಮಸ್ಯೆಗಳುಂಟಾದಾಗ ನಾವು ಹಲವಾರು ವಿಧಾನಗಳನ್ನು ತ್ವಚೆಗೆ ಪ್ರಯೋಗಿಸಿ ಇನ್ನಷ್ಟು ವಿಕೋಪಕ್ಕೆ ಹೋಗುವಂತೆ ಮಾಡಿಬಿಡುತ್ತೇವೆ. ಆದರೆ ನೈಸರ್ಗಿಕ ಅಂಶಗಳ ಪ್ರಯೋಜನಗಳನ್ನು ತ್ವಚೆಯ ಎಲ್ಲಾ ಸಮಸ್ಯೆಗಳಿಗೂ ಬಳಸಬಹುದು ಎಂಬ ಅಂಶವನ್ನು ಮರೆತೇ ಬಿಡುತ್ತೇವೆ. ಪ್ರಕೃತಿಯಲ್ಲಿ ದೊರೆಯುವ ಹಲವಾರು ಉತ್ಪನ್ನಗಳಿಂದ ನಿಮ್ಮ ಸೌಂದರ್ಯವನ್ನು ಇನ್ನಷ್ಟು ತಾಜಾಗೊಳಿಸಬಹುದಾಗಿದೆ. ಅಂತಹದ್ದರಲ್ಲಿ ತರಕಾರಿಗಳಿಂದ ಕೂಡ ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದಾಗಿದೆ.
ಅಂತಹ ತರಕಾರಿಗಳಲ್ಲಿ ಸೌತೆಕಾಯಿ ಕೂಡ ಒಂದು. ಸೌತೆಕಾಯಿ ಅಂದರೆ ರುಚಿಯಾದ ಕೋಸಂಬರಿ ನೆನಪಾಗುತ್ತದೆ. ಹೌದು ನಮ್ಮ ಎಲ್ಲಾ ಹಬ್ಬದ ಸಂಭ್ರಮಗಳಿಗೆ ಹಾಗೂ ಸಮಾರಂಭಗಳಲ್ಲಿ ಊಟಕ್ಕೆ ಸೌತೆಕಾಯಿಯನ್ನು ಖಂಡಿತವಾಗಿಯೂ ಬಳಸುತ್ತಾರೆ. ಕೋಸಂಬರಿಗೆ ಸೌತೆಕಾಯಿ ಇದ್ದರೇನೆ ಹೆಚ್ಚು ರುಚಿಕರ. ಹೀಗೆ ಅನೇಕ ಊಟದ ವಿಧಾನಗಳಲ್ಲಿ ಸೌತೆಕಾಯಿಯನ್ನು ದಿನನಿತ್ಯ ಬಳಸಲಾಗುತ್ತಿದೆ. ನಿಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಬಳಸುವ ತರಕಾರಿಗಳಲ್ಲಿ ಸೌತೆಕಾಯಿ ಮುಂಚೂಣಿಯಲ್ಲಿದೆ. ಇದಕ್ಕೆ ಪರ್ಯಾಯವೆಂಬಂತೆ, ಸೇವಿಸುವುದರ ಜೊತೆಗೆ ಮುಖದ ಕಾಂತಿಯನ್ನೂ ಹೆಚ್ಚಿಸಬಹುದೆಂದು ನೀವು ನಂಬುತ್ತೀರಾ?
ಸೌತೆಕಾಯಿಯ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಂಡು, ವಾರಕ್ಕೆ ಎರಡು ಬಾರಿ ತ್ವಚೆಯ ಮೇಲೆ ಹಚ್ಚಿಕೊಂಡರೆ, ಚರ್ಮದ ಚಿಕ್ಕ ಚಿಕ್ಕ ರಂಧ್ರಗಳನ್ನು ಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ. ಅದರ ರಸವು ತ್ವಚೆಯನ್ನು ಕಾಂತಿಯುತಗೊಳಿಸಿ ಕೋಮಲತೆಯನ್ನು ನೀಡುತ್ತದೆ. ನೀವು ಸೌತೆಕಾಯಿಯ ಫೇಸ್ ಪ್ಯಾಕ್ ಪದ್ಧತಿಯನ್ನು ಅನುಸರಿಸುತ್ತಿದ್ದರೆ, ವಾರಕ್ಕೆ 2 ರಿಂದ 3 ಬಾರಿ ಹಚ್ಚಿಕೊಂಡರೆ ಉತ್ತಮ ಹಾಗೂ ಶೀಘ್ರವಾದ ಫಲಿತಾಂಶ ದೊರೆಯುತ್ತದೆ. ಸೌತೆಕಾಯಿ: ಆರೋಗ್ಯಕ್ಕೂ ಸೈ, ಸೌಂದರ್ಯದ ವಿಷಯದಲ್ಲೂ ಜೈ!
ಸೌತೆಕಾಯಿಯನ್ನು ಉಪಯೋಗಿಸಿದ ಮೇಲೆ ತ್ವಚೆಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ನಿಮ್ಮ ಮುಖವು ಇನ್ನೂ ಕಾಂತಿಯುತಗೊಳಿಸಲು ಹಾಗೂ ಕೋಮಲಗೊಳಿಸಲು, ಇದನ್ನು ಹಚ್ಚಿದ ನಂತರ ತಣ್ಣನೆಯ ಪನ್ನೀರಿನಿಂದ ಮತ್ತು ಜಜ್ಜಿದ ಮಂಜುಗಡ್ಡೆಯಿಂದ ಮುಖವನ್ನು ನಯವಾಗಿ ತೊಳೆಯಬೇಕು. ಪನ್ನೀರಿನಲ್ಲಿರುವ ಗುಣವು ಮುಖದ ಕಾಂತಿಯನ್ನು ಹೆಚ್ಚಿಸಿ ಪ್ರಾಕೃತಿಕವಾಗಿ ಅಂದಗೊಳಿಸುತ್ತದೆ. ನಿಮ್ಮ ಚರ್ಮದ ವಿನ್ಯಾಸ ಹೇಗೇ ಇರಲಿ, ಈ ಪದ್ಧತಿಯನ್ನು ಸುಲಭವಾಗಿ ಬಳಸಬಹುದಾಗಿರುತ್ತದೆ. ಸೌತೆಕಾಯಿಯ ಫೇಸ್ ಪ್ಯಾಕ್ ನಿಂದ ಮುಖವನ್ನು ಕಾಂತಿಯುತಗೊಳಿಸಲು ಅನುಸರಿಸಬಹುದಾದ ಕೆಲವು ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಬೋಲ್ಡ್ ಸ್ಕೈ ತಾಣವು ನಿಮಗಾಗಿ ಈ ಸಂಗತಿಗಳನ್ನು ಹಂತ ಹಂತವಾಗಿ ನೀಡುತ್ತಿದ್ದು, ಮನೆಯಲ್ಲಿಯೇ ಇದನ್ನು ಸುಲಭವಾಗಿ ತಯಾರಿಸಭುದಾಗಿದೆ. ವಿವರಗಳಿಗೆ ಮುಂದೆ ಓದಿ..

ಬೇಕಾಗುವ ಸಾಮಗ್ರಿಗಳು
ಕತ್ತರಿಸಿದ ಸೌತೆಕಾಯಿ - 1
ಮೊಸರು - 4 ಚಮಚ

ತಯಾರಿಸುವ ವಿಧಾನ
ಸೌತೆಕಾಯಿಯನ್ನು ಜಜ್ಜಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡು, ಇದಕ್ಕೆ ಮೊಸರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಉಪಯೋಗಿಸುವ ವಿಧಾನ
ಮೊದಲಿಗೆ ಮುಖದ ತ್ವಚೆಯನ್ನು ಹರಿಯುವ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ತ್ವಚೆಯು ಆರಿದ ನಂತರ, ತಯಾರಿಸಿದ ಸೌತೆಕಾಯಿಯ ಫೇಸ್ ಪ್ಯಾಕ್ ಅನ್ನು ತ್ವಚೆಗೆ ನಯವಾಗಿ ಹಾಗೂ ಎಲ್ಲಾ ಜಾಗಗಳಿಗೆ ಸಮವಾಗಿ ಹಚ್ಚಿ. ನಂತರ ಸ್ವಲ್ಪ ಸಮಯ ಒಣಗಲು ಬಿಡಿ. ಪೂರ್ಣವಾಗಿ ಒಣಗಿದ ನಂತರ ಬೆರಳ ತುದಿಗಳಿಂದ ನಿಧಾನವಾಗಿ ಹಚ್ಚಿರುವ ಪದರವನ್ನು ತೆಗೆಯಿರಿ. ಈಗ ತ್ವಚೆಯನ್ನು ಪನ್ನೀರು ಮತ್ತು ಜಜ್ಜಿದ ಮಂಜುಗಡ್ಡೆಯ ಮಿಶ್ರಣದಿಂದ ನಯವಾಗಿ ತೊಳೆಯಿರಿ. ಇದರಿಂದ ಮುಖದ ಕಾಂತಿಯು ಇಮ್ಮಡಿಯಾಗುತ್ತದೆ.

ಒಣ ಚರ್ಮ
ಸೌತೆಕಾಯಿಯಲ್ಲಿ ಹೇರಳವಾಗಿರುವ ಮುಖ್ಯ ಅಂಶವೆಂದರೆ ನೀರು. ಈ ಪ್ಯಾಕ್ ಅನ್ನು ತ್ವಚೆಗೆ ಹಚ್ಚಿದರೆ ಒಣ ತ್ವಚೆ ಮತ್ತು ನವೆಯ ತ್ವಚೆಗೆ ಒಳಗಿನಿಂದಲೇ ತೇವಾಂಶ ನೀಡಿ ಆರೈಕೆ ನೀಡುತ್ತದೆ. ಇದರಿಂದ ಮುಖವು ಕೋಮಲತೆಯಿಂದ ಕೂಡಿರುತ್ತದೆ.

ಸೋಂಕುಗಳನ್ನು ನಿವಾರಿಸುತ್ತದೆ
ಸೌತೆಕಾಯಿಯಲ್ಲಿ ವಿಟಮಿನ್ ಎ ಸತ್ವವು ಯಥೇಚ್ಛವಾಗಿದೆ. ಇದರಿಂದ ಚರ್ಮದ ಸೋಂಕು ಮತ್ತು ಉರಿಯುವಿಕೆಯನ್ನು ತಡೆಯುತ್ತದೆ. ಇದನ್ನು ಕ್ರಮವಾಗಿ ಬಳಸುತ್ತಾ ಹೋದರೆ ನಿಮ್ಮ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸಿ ತ್ವಚೆಯ ಜೀವಕೋಶಗಳಿಗೆ ಉತ್ತಮ ಆರೈಕೆ ನೀಡುತ್ತದೆ.

ಚರ್ಮದ ವಯಸ್ಸನ್ನು ಕಾಪಾಡುತ್ತದೆ
ಸೌತೆಕಾಯಿಯ ಫೇಸ್ ಪ್ಯಾಕ್ ಅನ್ನು ಕ್ರಮವಾಗಿ ಬಳುಸುವುದರಿಂದ ತ್ವಚೆಯ ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಸಿ ವಿಟಮಿನ್ ಸತ್ವದಿಂದ ಉತ್ಪತ್ತಿಯಾಗುವ ಕೊಲಾಜೆನ್ ಅಂಶವು ಚರ್ಮದ ವಯಸ್ಸಾಗುವಿಕೆಯಿಂದ ಕಾಪಾಡುತ್ತದೆ.



Click it and Unblock the Notifications











