For Quick Alerts
ALLOW NOTIFICATIONS  
For Daily Alerts

ರಾತ್ರಿ ಬೆಳಗಾಗುವುದರೊಳಗೆ, ಮೊಡವೆಗಳು ಮಂಗಮಾಯ!

By Arshad
|

ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ಇರುವಷ್ಟು ಪ್ರಸಾಧನಗಳು ಬೇರೆ ತೊಂದರೆಗಳಿಗೆ ಇರಲಾರದು!, ಅಷ್ಟೊಂದು ಬಗೆಯ ಪ್ರಸಾಧನಗಳು ಲಭ್ಯವಿದೆ. ಸಾಮಾನ್ಯವಾಗಿ ಇವು ಹೆಚ್ಚಿನ ಸಮಯ ತೆಗೆದುಕೊಂಡು ಮೊಡವೆ ನಿವಾರಿಸಿದರೂ ಬಳಿಕ ಕಲೆಯನ್ನು ಉಳಿಸಿ ಸೌಂದರ್ಯವನ್ನು ಕುಂದಿಸುತ್ತವೆ.

ಅಲ್ಲದೇ ಮೊಡವೆ ಮಾಗಿದ ಬಳಿಕ ಚಿಕ್ಕ ಗುಳಿಯಂತೆ ಚರ್ಮದಲ್ಲಿ ಕಲೆ ಶಾಶ್ವತವಾಗಿ ಉಳಿಯುವ ಸಾಧ್ಯತೆ ಇರುತ್ತದೆ. ಚಿಕ್ಕ ಪುಟ್ಟ ಮೊಡವೆಗಳನ್ನು ಒಂದೇ ರಾತ್ರಿಯಲ್ಲಿ ಮತ್ತು ಉಳಿದವುಗಳನ್ನು ಎರಡು ಮೂರು ದಿನಗಳಲ್ಲಿ ಇಲ್ಲವಾಗಿಸಲು ಕೆಳಗಿನ ವಿಧಾನ ಸೂಕ್ತವಾಗಿದೆ. ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಗಂಧದ ಲೇಪನ

ಗಂಧದ ಲೇಪನ

ಇಂದು ಗಂಧದ ಪುಡಿ ಸಿದ್ದರೂಪದಲ್ಲಿ ಸಿಗುತ್ತಿದ್ದು ಮೊಡವೆಗಳನ್ನು ನಿವಾರಿಸುವ ಜೊತೆಗೇ ಉರಿಯನ್ನು ಶಮನ ಮಾಡುವ ಶಕ್ತಿಯನ್ನೂ ಹೊಂದಿದೆ. ಅಲ್ಲದೇ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ತೈಲಗಳನ್ನು ನಿವಾರಿಸಿ ಇನ್ನಷ್ಟು ಮೊಡವೆಯಾಗುವುದರಿಂದ ರಕ್ಷಿಸುತ್ತದೆ. ಇದಕ್ಕಾಗಿ ಗಂಧದ ಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ಮೊಡವೆಗಳಿರುವಲ್ಲಿ ಹಚ್ಚಿ ಸುಮಾರು ಎರಡರಿಂದ ಮೂರು ಗಂಟೆ ಬಿಡಿ.

ಗಂಧದ ಲೇಪನ

ಗಂಧದ ಲೇಪನ

ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ಟವೆಲ್ ಒತ್ತಿ ಒಣಗಿಸಿ ಬಳಿಕ ಈ ಚರ್ಮ ಒಣಗಿಯೇ ಇರುವಂತೆ ನೋಡಿಕೊಳ್ಳಿ. ಮುಂದಿನ ಮೂರು ದಿನಗಳವರೆಗೆ ಮೊಡವೆ ಇರುವಲ್ಲಿ ಸೋಪು ಹಚ್ಚಬೇಡಿ. ಅಪ್ಸರೆಯಂತಹ ತ್ವಚೆಗಾಗಿ ಶ್ರೀಗಂಧದ ಫೇಸ್ ಪ್ಯಾಕ್!

ಗುಲಾಬಿ ನೀರು

ಗುಲಾಬಿ ನೀರು

ಗುಲಾಬಿ ನೀರಿನಿಂದ ಮುಖವನ್ನು ತೊಳೆದುಕೊಂಡಾಗ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಒಳಗಿನ ಕಲ್ಮಶಗಳು ಹೊರಬರಲು ಸಾಧ್ಯವಾಗುತ್ತದೆ. ಹಾಗೂ ಮೊಡವೆಗಳು ಶೀಘ್ರವಾಗಿ ಇಲ್ಲವಾಗುತ್ತವೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಗುಲಾಬಿ ನೀರನ್ನು ಗಂಧದ ಪುಡಿಯೊಂದಿಗೆ ಬೆರೆಸಿ ಮೊಡವೆಗಳ ಮೇಲೆ ಹಚ್ಚಿದರೆ ಇನ್ನೂ ಹೆಚ್ಚಿನ ಪರಿಣಾಮವನ್ನು ಪಡೆಯಬಹುದು. ಮೊಡವೆಯ ಸಮಸ್ಯೆಗೆ ಗುಲಾಬಿ ನೀರಿನ ನಲ್ಮೆಯ ಆರೈಕೆ

ಟೂಥ್ ಪೇಸ್ಟ್

ಟೂಥ್ ಪೇಸ್ಟ್

ಕೀವು ತುಂಬಿದ ಮೊಡವೆಗಳಿಗೆ ನಿಮ್ಮ ಹಲ್ಲುಜ್ಜುವ ಪೇಸ್ಟ್ ಸಹಾ ಉತ್ತಮ ಪರಿಹಾರ ಒದಗಿಸಬಲ್ಲುದು. ರಾತ್ರಿ ಮಲಗುವ ಮುನ್ನ ತಣ್ಣೀರಿನಿಂದ ಮುಖ ತೊಳೆದುಕೊಂಡು ತೆಳುವಾಗಿ ಬಿಳಿಯ ಪೇಸ್ಟ್ ಹಚ್ಚಿ ಒಣಗಲು ಬಿಡಿ. ರಾತ್ರಿ ಇಡೀ ಹಾಗೇ ಬಿಟ್ಟು ಮರುದಿನ ಕೇವಲ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ನಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಹಲ್ಲುಜ್ಜುವ ಪೇಸ್ಟ್!

ಲಿಂಬೆ ರಸ

ಲಿಂಬೆ ರಸ

ಮೊಡವೆಗಳನ್ನು ಬುಡಸಹಿತ ನಿವಾರಿಸಿ ಕಲೆಯಿಲ್ಲದ ಚರ್ಮ ಬೆಳೆಸಲು ಲಿಂಬೆ ರಸ ಅತ್ಯುತ್ತಮವಾಗಿದೆ. ಈಗತಾನೇ ತೊಳೆದ ಮುಖದ ಮೇಲೆ ತೆಳುವಾಗಿ ಲಿಂಬೆರಸ ಹಚ್ಚಿ. (ಕಣ್ಣಿಗೆ ಕೊಂಚವೂ ಹಾರದಂತೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು, ಉತ್ತಮ ಎಂದರೆ ಕಣ್ಣು ಮುಚ್ಚಿಕೊಂಡು ಇನ್ನೊಬ್ಬರಿಂದ ಹಚ್ಚಿಸಿಕೊಳ್ಳಬೇಕು) ಬಳಿಕ ಸುಮಾರು ಹತ್ತರಿಂದ ಹದಿನೈದು ನಿಮಿಷ ಈ ರಸ ಒಣಗಲು ಬಿಡಬೇಕು.

ಲಿಂಬೆ ರಸ

ಲಿಂಬೆ ರಸ

ಒಂದು ವೇಳೆ ಮೊಡವೆಯ ತುದಿ ತೆರೆದಿದ್ದರೆ ಲಿಂಬೆ ರಸ ಹಚ್ಚಿದ ತಕ್ಷಣ ವಿಪರೀತ ಉರಿಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಲಿಂಬೆರಸವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಬಳಸಿ. ಇನ್ನೂ ಉತ್ತಮ ಎಂದರೆ ಲಿಂಬೆರಸ ಮತ್ತು ಗಂಧದ ಪುಡಿ ಬೆರೆಸಿ ಮೊಡವೆಗಳಿಗೆ ಹಚ್ಚಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Get Rid Of Pimples Overnight!

There are several creams and cosmetic products to get rid of pimples, but these measures take time and also leaves dark spots known as pimple scars. Therefore, if you want to get rid of pimples overnight take a look at these remedies.
X
Desktop Bottom Promotion