For Quick Alerts
ALLOW NOTIFICATIONS  
For Daily Alerts

ಅಪ್ಸರೆಯಂತಹ ತ್ವಚೆಗಾಗಿ ಶ್ರೀಗಂಧದ ಫೇಸ್ ಪ್ಯಾಕ್!

|

ಸುಂದರ ಮುಖಾರವಿಂದವನ್ನು ಪಡೆಯುವುದು ಯಾವ ಸುಂದರಿಗೆ ತಾನೇ ಇಷ್ಟವಿಲ್ಲದ ಮಾತು ಹೇಳಿ. ಇಂತಹ ಸುಂದರ ತ್ವಚೆಗಾಗಿ ನೀವು ರಾಸಾಯನಿಕ ಸೌಂದರ್ಯ ಸಾಧನಗಳನ್ನು ಬಳಸುವುದಕ್ಕಿಂತ ಮನೆ ಮದ್ದುಗಳನ್ನು ಮಾಡಿ ನೋಡಿದರೆ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳುವುದು ಖಂಡಿತ.

ಹಿಂದಿನ ಕಾಲದಲ್ಲಿ ಹೆಚ್ಚಿನ ಸೌಂದರ್ಯ ಸಮಸ್ಯೆಗಳನ್ನು ಮನೆಮದ್ದುಗಳ ಮೂಲಕವೇ ನಿವಾರಣೆ ಮಾಡಿಕೊಳ್ಳುತ್ತಿದ್ದರು. ಅದರಿಂದಾಗಿ ಅವರುಗಳು ಯಾವುದೇ ಸೌಂದರ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಇಂದಿನ ವಾತಾವರಣ ಕಲುಷಿತಗೊಂಡಿದ್ದು ಈ ಸಮಯದಲ್ಲಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಿದ್ದರೆ ನಿಮ್ಮ ಸೌಂದರ್ಯಕ್ಕೆ ಹಾನಿಯಾಗುವುದು ಖಂಡಿತ. ಆದ್ದರಿಂದ ಆದಷ್ಟು ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.

Beauty Uses Of Sandal Wood

ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ನೈಸರ್ಗಿಕ ಉತ್ಪನ್ನ ಶ್ರೀಗಂಧದ ಕುರಿತಾಗಿದೆ. ಇದು ಅದ್ಭುತ ಸೌಂದರ್ಯ ಗುಣಗಳನ್ನು ಹೊಂದಿದ್ದು ಇದರ ಸುವಾಸನೆ ಮತ್ತು ಇದರಲ್ಲಿರುವ ಹೆಚ್ಚಿನ ಅಂಶಗಳು ನಿಮ್ಮ ತ್ವಚೆಯ ಯಾವುದೇ ಸಮಸ್ಯೆಗಳನ್ನು ನಿವಾರಿಸುವ ಮ್ಯಾಜಿಕ್ ಅಂಶವನ್ನು ಒಳಗೊಂಡಿದೆ. ಇದರಿಂದ ದೊರೆಯುವ ಎಣ್ಣೆಯು ಆಂಟಿ ಇನ್‌ಫ್ಲಾಮೇಟರಿಯಾಗಿದ್ದು ಆಂಟಿಬ್ಯಾಕ್ಟೀರಿಯಲ್, ಆಂಟಿಸೆಪ್ಟಿಕ್, ಆಂಟಿ ಏಜಿಂಗ್ ಆಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಶ್ರೀಗಂಧದ ಎಣ್ಣೆಯು ನಿಮ್ಮ ತ್ವಚೆಗೆ ಉಂಟುಮಾಡುವ ಅದ್ಭುತ ಪ್ರಯೋಜನಗಳನ್ನು ಕುರಿತು ಅರಿತುಕೊಳ್ಳೋಣ.

ಘಮ ಘಮಿಸುವ ಸುಗಂಧ ದ್ರವ್ಯವನ್ನು ಮನೆಯಲ್ಲೇ ತಯಾರಿಸಿ!

ಹೊಳೆಯುವ ತ್ವಚೆಯನ್ನು ನೀಡುತ್ತದೆ


ಇದು ತ್ವಚೆಯನ್ನು ಶುಚಿಗೊಳಿಸುತ್ತದೆ ಮತ್ತು ಆರಾಮವನ್ನು ಒದಗಿಸುತ್ತದೆ. ಜೊತೆಗೆ ತ್ವಚೆಯ ಮೇಲೆ ಇರುವ ಮೊಡವೆಗಳು, ಗೆರೆಗಳು ಮುಂತಾದ ಕಲೆಗಳನ್ನು ನಿವಾರಿಸುತ್ತದೆ. ಜೊತೆಗೆ ತ್ವಚೆಯ ಬಣ್ಣವನ್ನು ಸುಧಾರಿಸುತ್ತದೆ. ಆಲೀವ್ ಎಣ್ಣೆ ಮತ್ತು ಶ್ರೀಗಂಧದ ಎಣ್ಣೆಯ ಜೊತೆಗೆ ಗಂಧದ ಪುಡಿಯನ್ನು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದರಿಂದ ಮಲಗುವ ಮುನ್ನ ತ್ವಚೆಯನ್ನು ಮಸಾಜ್ ಮಾಡಿಕೊಳ್ಳಿ ಸಾಕು.

ಮೊಡವೆ ಮತ್ತು ಕಪ್ಪುತಲೆಗಳನ್ನು ನಿವಾರಿಸುತ್ತದೆ


ಶ್ರೀಗಂಧದ ಎಣ್ಣೆ, ಅರ್ಧ ಟೇಬಲ್ ಸ್ಪೂನ್ ಅರಿಶಿನ, ಕರ್ಪೂರದ ಜೊತೆಗೆ ಗಂಧದ ಪುಡಿಯನ್ನು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮೊಡವೆಗಳನ್ನು ಮತ್ತು ಕಪ್ಪು ತಲೆಗಳನ್ನು ನಿವಾರಿಸಿಕೊಳ್ಳಬಹುದು. ಮಲಗುವ ಮುನ್ನ ತ್ವಚೆಯ ಮೇಕಪ್‌ ಅನ್ನು ತೆಗೆಯಲು ಮರೆಯದಿರಿ!

ಮುಖವನ್ನು ಮೃದುಗೊಳಿಸುತ್ತದೆ


ಮೂರು ಟೇಬಲ್ ಚಮಚ ಶ್ರೀಗಂಧದ ಪುಡಿಗೆ ಒಂದು ಟೀ ಚಮಚ ಬಾದಾಮಿ ಎಣ್ಣೆ ಮತ್ತು ತೆಂಗಿನ ಕಾಯಿ ಎಣ್ಣೆಯನ್ನು ಬೆರೆಸಿಕೊಂಡು ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ 15 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ. ಇದು ನಿಮ್ಮ ತ್ವಚೆಯನ್ನು ಮೃದು ಮಾಡುತ್ತದೆ ಮತ್ತು ಬಿಸಿಲಿನಿಂದ್ ಟ್ಯಾನ್ ಆದ ತ್ವಚೆಯನ್ನು ನಿವಾರಿಸುತ್ತದೆ. ಸೌಂದರ್ಯದ ವಿಚಾರಕ್ಕೆ ಬಂದರೆ ಇದು ಒಂದು ಉತ್ತಮ ಪ್ರಯೋಜನವಾಗಿರುತ್ತದೆ.

ಕಲೆಗಳು ಮತ್ತು ಪಿಗ್‌ಮೆಂಟೇಶನ್


ಎರಡು ಟೀ ಚಮಚ ಶ್ರೀಗಂಧದ ಪುಡಿಗೆ ರೋಸ್ ವಾಟರನ್ನು ಬೆರೆಸಿಕೊಂಡು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ. ಯಾವಾಗ ಈ ಫೇಸ್ ಮಾಸ್ಕ್ ಒಣಗುತ್ತದೆಯೋ, ಆಗ ಸ್ವಲ್ಪ ರೋಸ್ ವಾಟರನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಂಡು ಮಸಾಜ್ ಮಾಡಿ. ಇದನ್ನು 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.

ಮೊಡವೆಗಳಿಗಾಗಿ


ಎರಡು ಟೀ ಚಮಚ ಶ್ರೀಗಂಧದ ಪುಡಿಯೊಂದಿಗೆ ಒಂದು ಟೀಚಮಚ ಕಪ್ಪು ಚಿಕ್‌ಪಿಯಾ ಪುಡಿಯನ್ನು ಸೇರಿಸಿ ಹಾಲಿನಲ್ಲಿ ಅಥವಾ ರೋಸ್ ವಾಟರ್ ಜೊತೆಗೆ ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಮುಖದ ಮೇಲೆ ಲೇಪಿಸಿಕೊಂಡು 30 ನಿಮಿಷ ಬಿಡಿ. ಇದನ್ನು ಪ್ರತಿ ವಾರ ಪುನರಾವರ್ತಿಸಿ, ಆಗ ಮೊಡವೆಗಳು ಗುಣಮುಖವಾಗುತ್ತದೆ.
English summary

Beauty Uses Of Sandal Wood

Sandalwood also called chandan in Hindi is an age old beauty treatment. It has a nice and sweet aroma. It is obtained from the woods of trees called santalum. There are many uses of sandalwood in beauty. It can be used in the form of face packs, powder etc to brighten your skin, improving skin tone and to bring a natural glow on your face.
X
Desktop Bottom Promotion