For Quick Alerts
ALLOW NOTIFICATIONS  
For Daily Alerts

ಬಾಯಿಗೆ ರುಚಿಯಾದದ್ದು, ಚರ್ಮಕ್ಕೆ ಕಹಿ, ಎಚ್ಚರ!

By CM prasad
|

ಈಗಿನ ರುಚಿರುಚಿಯಾದ ಆಹಾರ ಪದಾರ್ಥಗಳ ಸೇವಿಸುವ ಯುಗದಲ್ಲಿ ಜಿಡ್ಡಿನ ಬಗ್ಗೆ ಯಾರು ಚಿಂತಿಸುತ್ತಾರೆ. ಬಾಯಿಗೆ ರುಚಿಯಾಗಿದ್ದರೆ ಸಾಕು ಹಿಂದುಮುಂದು ನೋಡದೆ ಸೇವಿಸುವ ಕಾಲವಿದು. ಅದರಲ್ಲೂ ಎಣ್ಣೆಯುಕ್ತ ಖಾರಯುಕ್ತ ಆಹಾರಗಳು ಕ್ಷಣಮಾತ್ರದಲ್ಲಿ ಖಾಲಿಯಾಗುತ್ತವೆ. ಈ ನಿಟ್ಟಿನಲ್ಲಿ ಜಿಡ್ಡಿನ ಚರ್ಮದ ಅಪಾಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಈ ಲೇಖನದಲ್ಲಿ ಚರ್ಮದ ಜಿಡ್ಡಿಗೆ ಸೇವಿಸಬಾರದ ಕೆಲವು ಆಹಾರ ವಿಧಗಳನ್ನು ನೀಡಲಾಗಿದೆ.

ನಿಮಗೆ ಜಿಡ್ಡಿನ ಚರ್ಮವಿದ್ದರೆ, ಈಗಾಗಲೇ ನೀವು ಖಂಡಿತಾ ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಸೌಂದರ್ಯವರ್ಧಕಗಳು ಮತ್ತು ಕ್ರೀಂಗಳನ್ನು ಬಳಸಿರುತ್ತೀರ. ಆದರೆ ನಿಮ್ಮ ದೈನಂದಿನ ಆಹಾರ ಶೈಲಿಯೂ ಸಹ ನಿಮ್ಮ ಚರ್ಮದ ಅಂದವನ್ನು ಹೆಚ್ಚಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ನಾವು ಹೇಳುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸದೇ ಇರುವುದು ಒಳಿತು. ಎಣ್ಣೆ ತ್ವಚೆಗೆ ಅತ್ಯುತ್ತಮವಾದ ಮಾಯಿಶ್ಚರೈಸರ್

Foods people with oily skin should NEVER eat

ಎಣ್ಣೆಯುಕ್ತ ಆಹಾರ
ನಿಮಗೆ ಎಣ್ಣೆಯುಕ್ತ ಉಪಹಾರಗಳು ಹೆಚ್ಚು ಪ್ರಿಯವಿದ್ದಲ್ಲಿ ನಿಮ್ಮ ಚರ್ಮವೂ ಸಹ ಜಿಡ್ಡು ಕೂಡುತ್ತದೆ ನೀವು ಸೇವಿಸುವಂತಹ ಈ ರೀತಿಯ ಹೆಚ್ಚು ಎಣ್ಣೆಯುಕ್ತ ಆಹಾರಗಳು ನಿಮ್ಮ ಚರ್ಮದಲ್ಲಿ ಜಿಡ್ಡು ಸೇರಲು ಕಾರಣವಾಗಿ, ನಿಮ್ಮ ಚರ್ಮವನ್ನು ಹೆಚ್ಚು ಜಿಡ್ಡುಯುಕ್ತಗೊಳಿಸುತ್ತದೆ. ಆದ್ದರಿಂದ ಈ ಆಹಾರಗಳನ್ನು ಸೇವಿಸದೇ ಇದ್ದರೆ ಒಳ್ಳೆಯದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳೂ ಸಹ ಹೆಚ್ಚು ಜಿಡ್ಡನ್ನು ಹೊಂದಿದ್ದು, ಬೇಗ ಮೊಡವೆ ಹೊಂದಲು ಕಾರಣವಾಗುತ್ತದೆ. ಡರ್ಮೆಟೋ ಎಂಡೋಕ್ರೈನೊಲ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಹಾಲಿನ ಉತ್ಪನ್ನಗಳಲ್ಲಿ ಚರ್ಮವು ಜಿಡ್ಡನ್ನು ಮತ್ತು ಮೊಡವೆಗಳನ್ನು ಹೊಂದಲು ಕಾರಣವಾಗುವ ಹಾರ್ಮೊನ್‌ಗಳಿರುವುದು ಕಂಡುಬಂದಿದೆ.

ಸಕ್ಕರೆಯುಕ್ತ ಆಹಾರ ಮತ್ತು ಪಾನೀಯಗಳು

ಇವುಗಳಲ್ಲಿ ಪಾನೀಯಗಳು, ಪರಿಮಳಯುಕ್ತ ಹಾಲಿನ ಉತ್ಪನ್ನಗಳು, ಸೋಡಾ ಮತ್ತು ಸಂಸ್ಕರಿಸಿದ ಹಣ್ಣಿನ ಪಾನೀಯಗಳು ಪ್ರಮುಖವಾದವು. ಈ ರೀತಿಯ ಸಿಹಿಯುಕ್ತ ಆಹಾರಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸಿ ಹೆಚ್ಚು ಜಿಡ್ಡು ಉತ್ಪಾದನೆಯಾಗುವಂತೆ ಮಾಡುತ್ತದೆ. ಇದರಿಂದ ನಿಮ್ಮ ಚರ್ಮವೂ ಸಹ ಜಿಡ್ಡು ಹೊಂದಲು ನೇರವಾಗಿ ಕಾರಣವಾಗಲಿದೆ.

ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರಗಳು

ಬ್ರೆಡ್, ಪಾಸ್ಟಾ ಮತ್ತು ಇತರೆ ಸಂಸ್ಕರಿಸಿದ ಹಿಟ್ಟಿನ ಆಹಾರಗಳು ನಿಮ್ಮ ಚರ್ಮಕ್ಕೆ ಜಿಡ್ಡನ್ನು ತಂದೊಡ್ಡುತ್ತವೆ. ಈ ಎಲ್ಲಾ ಆಹಾರ ಪದಾರ್ಥಗಳಲ್ಲಿ ಹೆಚ್ಚು ಗ್ಲೈಸಮಿಕ್ ಸತ್ವವು ಇರುವುದರಿಂದ ಜಿಡ್ಡು ಬೇಗನೆ ಉತ್ಪತ್ತಿಯಾಗಲಿದೆ. ಈ ಆಹಾರಗಳನ್ನು ಸಂಪೂರ್ಣವಾಗಿ ಸೇವಿಸದಿರಲು ಹೆಚ್ಚಿನವರಿಗೆ ಸಾಧ್ಯವಾಗದೇ ಇರಬಹುದು ಆದರೆ ಅದರ ಪ್ರಮಾಣವನ್ನು ಮಿತಿಯಲ್ಲಿರುವಂತೆ ನೋಡಿಕೊಳ್ಳುವುದು.
English summary

Foods people with oily skin should NEVER eat

If you have oily skin, I am sure you have tried most of the creams and lotions available in the market 'designed' to tackle it for you. But did you know your diet plays an important role towards the texture of your skin? Here are foods you should avoid if you have oily skin!
X
Desktop Bottom Promotion