ಫೇಶಿಯಲ್‌ಗೆ ಅನಾವಶ್ಯಕ ಹಣ ಖರ್ಚು ಮಾಡುವುದನ್ನು ಇಂದೇ ನಿಲ್ಲಿಸಿ!

By: Arshad
Subscribe to Boldsky

ಮುಖದ ಗೌರವರ್ಣ ಮತ್ತು ಕಾಂತಿಯನ್ನು ಸಮರ್ಥವಾಗಿ ಹೆಚ್ಚಿಸಬೇಕೆಂದರೆ ಫೇಶಿಯಲ್ ಮಾಡಿಸುವುದು ಉತ್ತಮ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಾರೆ. ಆದರೆ ವೃತ್ತಿಪರರಲ್ಲಿ ಫೇಶಿಯಲ್ ಮಾಡಿಸುವುದು ದುಬಾರಿಯಾದ ಕಾರಣ ಇದನ್ನು ಮನೆಯಲ್ಲಿಯೇ ಮಾಡಿಕೊಳ್ಳುವುದು ಅಗ್ಗ ಹಾಗೂ ಸುರಕ್ಷಿತವಾಗಿದೆ.

ಸರಿಯಾದ ವಿಧಾನವನ್ನು ಅನುಸರಿಸಿದರೆ ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಕೊಂಡರೂ ವೃತ್ತಿಪರ ಸೇವೆಯಿಂದ ಪಡೆದಂತಹ ಪರಿಣಾಮವನ್ನು ಪಡೆಯಬಹುದು. ಸಾಮಾನ್ಯವಾಗಿ ಇಪ್ಪತ್ತೈದು ದಾಟಿದ ಬಳಿಕ ತಿಂಗಳಿಗೊಮ್ಮೆ ವೃತ್ತಿಪರ ಸೌಂದರ್ಯ ಮಳಿಗೆಗೆ ತೆರಳಿ ಫೇಶಿಯಲ್ ಮಾಡಿಸಿಕೊಂಡರೇನೇ ಸೌಂದರ್ಯವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೆಚ್ಚಿನವರು ನಂಬಿದ್ದಾರೆ.  ತ್ವಚೆಯ ಕಾಂತಿಗೆ ದುಬಾರಿ ಬೆಲೆಯ ಉತ್ಪನ್ನ ಏತಕ್ಕೆ ಬೇಕು?

ಆದರೆ ಇದಕ್ಕೂ ಉತ್ತಮ ಹಾಗೂ ಅಗ್ಗವಾಗಿ ಮತ್ತು ಸುರಕ್ಷಿತವಾಗಿ ಈ ಸೇವೆಯನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ವಿಧಾನವೊಂದಿದೆ. ಬನ್ನಿ, ಈ ಸುರಕ್ಷಿತ ವಿಧಾನವನ್ನು ಹಂತ ಹಂತವಾಗಿ ಹೇಗೆ ಅನುಸರಿವುದು ಎಂಬುದನ್ನು ನೋಡೋಣ. ಇದಕ್ಕಾಗಿ ಮನೆಯಲ್ಲಿ ಲಭ್ಯವಿರುವ ಸಾಮಾನ್ಯ ಅಡುಗೆ ಸಾಮಾಗ್ರಿಗಳೇ ಸಾಕು.   ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಫೇಶಿಯಲ್‪ನಲ್ಲಿ ಹಲವು ವಿಧಾನಗಳಿವೆ. ಸುಲಭವಾದ ಸರಳ ಫೇಶಿಯಲ್, ಹಣ್ಣುಗಳ ಫೇಶಿಯಲ್ ಅಥವಾ ಕೊಂಚ ದುಬಾರಿಯಾದ ಚಿನ್ನದ ಫೇಶಿಯಲ್ ಸಹಾ ಲಭ್ಯವಿದೆ. ಚರ್ಮದ ಅಂದ ಹೆಚ್ಚಿಸಲು ಫೇಶಿಯಲ್ ಅನಿವಾರ್ಯ ಎಂಬ ವಾದ ಸುಮಾರು ಮಟ್ಟಿಗೆ ನಿಜವಾದುದು. ಆದರೆ ಇದನ್ನು ಪಡೆಯಬೇಕೆಂದರೆ ವೃತ್ತಿಪರರ ಬಳಿಗೇ ಹೋಗಿ, ದುಬಾರಿ ವೆಚ್ಚಕ್ಕಾಗಿ ಕಷ್ಟಪಟ್ಟು ಉಳಿಸಿದ್ದ ಹಣವನ್ನು ಪೋಲು ಮಾಡುವುದೆಂದರೆ ಹೊಟ್ಟೆ ಕಿವುಚಿದಂತಾಗುತ್ತದೆ.   ಬಾದಾಮಿ-ಹಾಲಿನ ಫೇಸ್ ಪ್ಯಾಕ್, ಕಡಿಮೆ ಖರ್ಚು ಅಧಿಕ ಲಾಭ!

ಈ ವಿಧಾನವನ್ನು ಅನುಸರಿಸುವ ಮೂಲಕ ಗೌರವರ್ಣ ಪಡೆದೂ, ನಿಮ್ಮ ಹಣ ವ್ಯರ್ಥವಾಗದೇ ನಿಮ್ಮಲ್ಲೇ ಉಳಿದು ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಚರ್ಮವನ್ನು ಮೂರು ವಿಧಾನಗಳಾಗಿ ವಿಂಗಡಿಸಬಹುದು. ಒಣಚರ್ಮ, ಸಾಮಾನ್ಯ ಚರ್ಮ ಮತ್ತು ಎಣ್ಣೆಚರ್ಮ. ಬನ್ನಿ, ಒಂದೊಂದಾಗಿ ವಿವಿಧ ಬಗೆಯ ಚರ್ಮಗಳಿಗೆ ಯಾವ ವಿಧಾನಗಳನ್ನು ಹೇಗೆ ಅನುಸರಿಸಬಹುದು ಎಂಬುದನ್ನು ನೋಡೋಣ.....  

ಉಗುರುಬೆಚ್ಚಗಿರುವ ಹಾಲು....

ಉಗುರುಬೆಚ್ಚಗಿರುವ ಹಾಲು....

ಈ ಚರ್ಮದವರು ಮೊದಲು ಚರ್ಮವನ್ನು ತಣ್ಣೀರಿನಿಂದ ತೊಳೆದುಕೊಂಡು ಬಳಿಕ ಹತ್ತಿಯುಂಡೆಯನ್ನು ಉಗುರುಬೆಚ್ಚಗಿರುವ ಹಸಿ ಹಾಲಿನಲ್ಲಿ ಮುಳುಗಿಸಿ ಹೆಚ್ಚಿನ ಒತ್ತಡವಿಲ್ಲದೇ ಮುಖವನ್ನು ಒರೆಸಿಕೊಳ್ಳಬೇಕು. ಕೆಳಗಿನಿಂದ ಮೇಲಕ್ಕೆ ಬರುವಂತೆ ಒರೆಸಿಕೊಳ್ಳುವ ಮೂಲಕ ಸೂಕ್ಷ್ಮರಂಧ್ರಗಳು ತೆರೆದು ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಒಣಚರ್ಮಕ್ಕಾಗಿ-ಕುಟ್ಟಿ ಪುಡಿಮಾಡಿದ ಓಟ್ಸ್

ಒಣಚರ್ಮಕ್ಕಾಗಿ-ಕುಟ್ಟಿ ಪುಡಿಮಾಡಿದ ಓಟ್ಸ್

ಇದಕ್ಕಾಗಿ ಚೆನ್ನಾಗಿ ಕುಟ್ಟಿ ಪುಡಿಮಾಡಿದ ಓಟ್ಸ್ ರವೆಯನ್ನು ಸಮಪ್ರಮಾಣದಲ್ಲಿ ಜೇನಿನೊಂದಿಗೆ ಬೆರೆಸಿ ತೆಳುವಾಗಿ ಹಚ್ಚಿಕೊಳ್ಳಿ, ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಮುಖದ ಚರ್ಮದ ಮೇಲೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳು ಸಡಿಲವಾಗಿ ಕಳಚಿಕೊಳ್ಳುತ್ತವೆ. ಪರಿಣಾಮವಾಗಿ ಚರ್ಮ ನೈಜ ಕಳೆಯಿಂದ ಹೊಳೆಯುತ್ತದೆ.

ಒಣಚರ್ಮಕ್ಕಾಗಿ - ಮುಖಲೇಪ

ಒಣಚರ್ಮಕ್ಕಾಗಿ - ಮುಖಲೇಪ

ಬಳಿಕ ಗಟ್ಟಿ ಮೊಸರನ್ನು ದಪ್ಪನಾಗಿ ಇಡಿಯ ಮುಖದ ಮೇಲೆ (ಕಣ್ಣುಗಳನ್ನು ಮುಚ್ಚಿ ಇವುಗಳ ಮೇಲೆಯೂ ಬರುವಂತೆ) ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಚರ್ಮ ಮೃದುವಾಗುತ್ತದೆ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಒಣಚರ್ಮಕ್ಕಾಗಿ - ತೇವಕಾರಕ

ಒಣಚರ್ಮಕ್ಕಾಗಿ - ತೇವಕಾರಕ

ಮೊಸರಿನ ಲೇಪನದ ಬಳಿಕ ದಪ್ಪ ಟವೆಲ್ಲಿನಿಂದ ಮುಖವನ್ನು ಒತ್ತಿಕೊಂಡು ಒಣಗಿಸಿದ ಬಳಿಕ ನಿಮ್ಮ ನಿತ್ಯದ ಬಳಕೆಯ ತೇವಕಾರಕ ಅಥವಾ ಮಾಯಿಶ್ಚರೈಸರ್ ದ್ರವವನ್ನು ತೆಳುವಾಗಿ ಹಚ್ಚಿ.

ಎಣ್ಣೆ ಚರ್ಮಕ್ಕಾಗಿ- ಸ್ವಚ್ಛಕಾರಕ

ಎಣ್ಣೆ ಚರ್ಮಕ್ಕಾಗಿ- ಸ್ವಚ್ಛಕಾರಕ

ಮೊದಲು ಕೊಂಚ ಅಡುಗೆ ಸೋಡಾಪುಡಿಯನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ಕೆಲವು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತ್ವಚೆಯ ಮೇಲಿದ್ದ ಎಣ್ಣೆ ಪಸೆ ನಿವರಣೆಯಾಗಿ ಮೃದುವಾದ ಒಣಗಿದ ಚರ್ಮ ಲಭ್ಯವಾಗುತ್ತದೆ.

ಎಣ್ಣೆ ಚರ್ಮಕ್ಕಾಗಿ- ಸತ್ತ ಜೀವಕೋಶಗಳನ್ನು ಕೆರೆದು ತೆಗೆಯಲು

ಎಣ್ಣೆ ಚರ್ಮಕ್ಕಾಗಿ- ಸತ್ತ ಜೀವಕೋಶಗಳನ್ನು ಕೆರೆದು ತೆಗೆಯಲು

ಇದಕ್ಕಾಗಿ ಕೊಂಚ ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಮುಖದ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ. ಕಣ್ಣುಗಳನ್ನು ಮುಚ್ಚಿ ರೆಪ್ಪೆಗಳಿಗೂ ಹಚ್ಚಿ, ಆದರೆ ತುಂಬಾ ನಾಜೂಕಿನಿಂದ ಬಳಸಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳು ಸಡಿಲವಾಗಿ ನಿವಾರಣೆಯಾಗುತ್ತದೆ ಹಾಗೂ ಕೊಂಚ ಆರ್ದ್ರತೆಯನ್ನೂ ಪಡೆಯುತ್ತದೆ.

ಎಣ್ಣೆ ಚರ್ಮಕ್ಕಾಗಿ- ಮುಖಲೇಪ

ಎಣ್ಣೆ ಚರ್ಮಕ್ಕಾಗಿ- ಮುಖಲೇಪ

ಇದಕ್ಕಾಗಿ ಜೇಡಿಮಣ್ಣಿನ ಮುಖಲೇಪವನ್ನು ಬಳಸಿ. ಮುಲ್ತಾನಿ ಮಿಟ್ಟಿ ಅಥವಾ Fuller's earth ಎಂದು ಸಿಗುವ ಜೇಡಿಮಣ್ಣನ್ನು ಕೊಂಚ ನೀರಿನೊಂದಿಗೆ ಬೆರೆಸಿ ದಪ್ಪನಾಗಿ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರ ಮೂಲಕ ಅಳಿದುಳಿದ ಎಣ್ಣೆ ಪಸೆ ನಿವಾರಣೆಯಾಗುತ್ತದೆ ಹಾಗೂ ಚರ್ಮ ಉತ್ತಮ ಕಾಂತಿಯನ್ನು ಪಡೆಯುತ್ತದೆ.

ಎಣ್ಣೆ ಚರ್ಮಕ್ಕಾಗಿ-ತೇವಕಾರಕ

ಎಣ್ಣೆ ಚರ್ಮಕ್ಕಾಗಿ-ತೇವಕಾರಕ

ಎಣ್ಣೆಚರ್ಮ ಎಂದಾಕ್ಷಣ ನಿಮಗೆ ತೇವಕಾರಕ ಅಗತ್ಯವಿಲ್ಲ ಎಂದರ್ಥವಲ್ಲ. ಬದಲಿಗೆ ನಿಮಗೆ ಕೊಂಚ ಭಿನ್ನವಾದ ತೇವಕಾರಕದ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಜೆಲ್ ಆಧಾರಿತ ತೇವಕಾರಕ (gel-based moisturiser) ವೊಂದನ್ನು ಖರೀದಿಸಿ ಬಳಸಿ.

ಸಾಮಾನ್ಯ ಚರ್ಮಕ್ಕಾಗಿ - ಸ್ವಚ್ಛಕಾರಕ

ಸಾಮಾನ್ಯ ಚರ್ಮಕ್ಕಾಗಿ - ಸ್ವಚ್ಛಕಾರಕ

ಸಾಮಾನ್ಯ ಚರ್ಮದವರು ಕೊಬ್ಬರಿ ಎಣ್ಣೆಯನ್ನು ಈ ಕಾರ್ಯಕ್ಕಾಗಿ ಬಳಸಬಹುದು. ಹತ್ತಿಯುಂಡೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮುಳುಗಿಸಿ ಹಿಂಡಿ ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹೆಚ್ಚಿನ ಒತ್ತಡವಿಲ್ಲದೇ ಒರೆಸಿಕೊಳ್ಳುವ ಮೂಲಕ ಧೂಳು ಮತ್ತು ಸೂಕ್ಷ್ಮ ಕಣಗಳನ್ನು ಚರ್ಮದ ಸೂಕ್ಷ್ಮರಂಧ್ರಗಳಿಂದ ಹೀರಿ ತೆಗೆಯಲು ಸಾಧ್ಯ. ಇದು ಮೊದಲ ಹಂತವಾಗಿದೆ.

ಸಾಮಾನ್ಯ ಚರ್ಮಕ್ಕಾಗಿ - ಸತ್ತ ಜೀವಕೋಶಗಳನ್ನು ಕೆರೆದು ತೆಗೆಯಲು

ಸಾಮಾನ್ಯ ಚರ್ಮಕ್ಕಾಗಿ - ಸತ್ತ ಜೀವಕೋಶಗಳನ್ನು ಕೆರೆದು ತೆಗೆಯಲು

ಇದಕ್ಕಾಗಿ ಸಮಪ್ರಮಾಣದಲ್ಲಿ ಚೆನ್ನಾಗಿ ಕಳಿತ ಸ್ಟ್ರಾಬೆರಿ ಹಣ್ಣು ಮತ್ತು ಮೊಸರನ್ನು ಬೆರೆಸಿದ ಲೇಪನ ಬಳಸಿ. ಸ್ಟ್ರಾಬೆರಿಯಲ್ಲಿರುವ ಪೋಷಕಾಂಶಗಳು ಚರ್ಮದ ಜೀವಕೋಶಗಳಿಗೆ ಕಳೆ ನೀಡುವ ಜೊತೆಗೆ ಕಾಂತಿಯನ್ನೂ ಹೆಚ್ಚಿಸುತ್ತದೆ.

ಸಾಮಾನ್ಯ ಚರ್ಮಕ್ಕಾಗಿ - ಮುಖಲೇಪ

ಸಾಮಾನ್ಯ ಚರ್ಮಕ್ಕಾಗಿ - ಮುಖಲೇಪ

ಅರಿಶಿನವನ್ನು ಅರೆದು ತಯಾರಿಸಿದ ಮುಖಲೇಪ ಈ ಚರ್ಮದವರಿಗೆ ಅತ್ಯುತ್ತಮವಾಗಿದೆ. ಅರಿಶಿನದ ಕೊಂಬನ್ನು ಹಾಲಿನೊಂದಿಗೆ ತೇದಿ ಮುಖಲೇಪ ತಯಾರಿಸಿ. ಈಗ ತಾನೇ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ತೆಳುವಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಚರ್ಮದಲ್ಲಿದ್ದ ಹೆಚ್ಚುವರಿ ಎಣ್ಣೆಯಂಶ ನಿವಾರಣೆಯಾಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ.

ಸಾಮಾನ್ಯ ಚರ್ಮಕ್ಕಾಗಿ -ತೇವಕಾರಕ

ಸಾಮಾನ್ಯ ಚರ್ಮಕ್ಕಾಗಿ -ತೇವಕಾರಕ

ಸಾಮಾನ್ಯ ಚರ್ಮದವರಿಗೆ ನೀರು ಆಧಾರಿತ ತೇವಕಾರಕವೇ ಅತ್ಯುತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನಿಮ್ಮ ಆಯ್ಕೆಯ ನೀರು ಆಧಾರಿತ ತೇವಕಾರಕವನ್ನು ತೆಳುವಾಗಿ ಹಚ್ಚಿ. ಈ ವಿಧಾನವನ್ನು ಅನುಸರಿಸಿದರೆ ಯಾವುದೇ ವೃತ್ತಿಪರ ಮಳಿಗೆಯಲ್ಲಿ ದೊರಕುವ ಫೇಶಿಯಲ್ ಗಿಂತಲೂ ಉತ್ತಮವಾದ ಪರಿಣಾಮವನ್ನು ಮನೆಯಲ್ಲಿಯೇ ಪಡೆಯಬಹುದು.

 
English summary

Facials Guaranteed To Give You Glowing Skin At Home

These come in various forms, be it fruit facials, gold facials or a basic clean up. Facials are really important for glowing skin. But it does not mean that you have to go to the salon and shell out everybit of the money you have, on these facials. Here are some facials for glowing skin with the step by step procedure, for 3 different skin types.
Please Wait while comments are loading...
Subscribe Newsletter