For Quick Alerts
ALLOW NOTIFICATIONS  
For Daily Alerts

  ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕೆ ಪ್ರಾಕೃತಿಕ ಪರಿಹಾರ

  By Manu
  |

  ಕಾಂತಿಯುಕ್ತ ತ್ವಚೆ ಯಾರಿಗೆ ಬೇಡ ಹೇಳಿ?, ಆದರೆ ಈ ಬಯಕೆ ದುಬಾರಿಯಾಗಿ ಪರಿಣಮಿಸಬಹುದು. ಗೌರವರ್ಣ ನೀಡುವ ಭರವಸೆ ನೀಡುವ ಜಾಹೀರಾತುಗಳಿಗೆ ಮರುಳಾಗಿ ಅಥವಾ ಈ ಸೇವೆಯನ್ನು ನೀಡುವ ಪಾರ್ಲರುಗಳಿಗೆ ಎಡತಾಕಿದರೆ ದುಬಾರಿ ಶುಲ್ಕ ನೀಡಿ ಗೌರವರ್ಣ ಪಡೆದರೂ ಇದು ತಾತ್ಕಾಲಿಕವಾಗಿದ್ದು ಶಾಶ್ವತವಾದ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಲ್ಲದೆ ಪ್ರತಿಯೊಬ್ಬರ ಚರ್ಮದ ವಿಧವೂ ಬೇರೆಬೇರೆಯಾಗಿದ್ದು ಒಂದೇ ಪ್ರಸಾಧನದ ಪರಿಣಾಮ ಮತ್ತು ಅಡ್ಡಪರಿಣಾಮಗಳೂ ಬೇರೆಬೇರೆಯಾಗಿರಬಹುದು.

  ಹೀಗಿರುವಾಗ ಚರ್ಮದ ಆರೈಕೆ ಮತ್ತು ಕಾಂತಿ ಹೆಚ್ಚಿಸಲು ನಿಸರ್ಗದ ಮೊರೆ ಹೋಗುವುದೇ ಜಾಣತನ ಮತ್ತು ಉತ್ತಮ ಕ್ರಮ. ಇದರ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಕಾರಣ ಬಿಟ್ಟರೆ ಇವು ಫಲಪ್ರಧವೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುದು ಮಾತ್ರವಲ್ಲ, ನಮ್ಮ ಅಡುಗೆ ಮನೆಯಲ್ಲಿ ಸಿಗುವ ಸುಲಭ ಸಾಮಾಗ್ರಿಗಳೇ ಸಾಕಾಗುವುದರಿಂದ ಅಗ್ಗವೂ, ಸುಲಭವೂ ಆಗಿವೆ.

  Easy DIY Face Packs For A Glowing Skin!
   

  ಮುಖದ ಕಾಂತಿ ಕುಂದಲು ಪ್ರಮುಖ ಕಾರಣವೆಂದರೆ ಚರ್ಮದ ಹೊರಪದರದ ಜೀವಕೋಶಗಳು ಸತ್ತ ಬಳಿಕವೂ ಪದರದ ರೂಪದಲ್ಲಿ ಅಂಟಿಕೊಂಡೇ ಇರುವುದು. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಮೊದಲು ಇದನ್ನು ಸಡಿಲಗೊಳಿಸಿ ಬಳಿಕ ನಿಧಾನವಾಗಿ ಉಜ್ಜಿ ತೆಗೆಯಬೇಕು. ಹಾಗಾಗಿ ಇದಕ್ಕೆ ಪಪ್ಪಾಯಿಯಲ್ಲಿರುವ ರಸ ಸರಿಯಾದ ಉತ್ತರ.

  ಇದರೊಂದಿಗೆ ಹಾಲು ಮತ್ತು ಕೊಂಚ ಜೇನು ಸೇರಿಸಿದರೆ ಇದೊಂದು ಅದ್ಭುತ ಸೌಂದರ್ಯ ಪ್ರಸಾಧನವಾಗುತ್ತದೆ. ಬನ್ನಿ, ಪಪ್ಪಾಯಿಯನ್ನು ಈ ಕೆಲಸಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ:        ಸೌಂದರ್ಯದ ಮಾಂತ್ರಿಕ ಶಕ್ತಿ ಪರಂಗಿಯಲ್ಲಿದೆ

  Easy DIY Face Packs For A Glowing Skin!
    

  ಒಣಚರ್ಮದವರಿಗಾಗಿ ಪಪ್ಪಾಯಿ-ಜೇನಿನ ಮುಖಲೇಪನ:

  *ಒಂದು ತುಂಡು ಪಪ್ಪಾಯಿ (ಚೆನ್ನಾಗಿ ಹಣ್ಣಾಗಿ ಕಳಿತ ತಿರುಳು)

  *ಜೇನು

  *ಹಸಿ ಹಾಲು

  ತಯಾರಿಕಾ ವಿಧಾನ:

  ಸಮಪ್ರಮಾಣದಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಚೆನ್ನಾಗಿ ಅರೆದು ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿಕೊಳ್ಳಿ. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಬಳಸದಿರಿ.

  Easy DIY Face Packs For A Glowing Skin!
   

  ಎಣ್ಣೆಚರ್ಮದವರಿಗಾಗಿ ಪಪ್ಪಾಯಿ-ಮುಲ್ತಾನಿ ಮಿಟ್ಟಿಯ ಮುಖಲೇಪನ

  *ಒಂದು ತುಂಡು ಪಪ್ಪಾಯಿ (ಚೆನ್ನಾಗಿ ಹಣ್ಣಾಗಿ ಕಳಿತ ತಿರುಳು)

  *ಮುಲ್ತಾನಿ ಮಿಟ್ಟಿ

  *ಕೊಂಚ ನೀರು

  ತಯಾರಿಕಾ ವಿಧಾನ:

  *ಮೊದಲು ಎಲ್ಲಾ ಸಾಮಾಗ್ರಿಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಅರೆಯಿರಿ. ಚರ್ಮದ ಎಣ್ಣೆಯಂಶವನ್ನು ತೊಲಗಿಸಲು ಮುಲ್ತಾನಿಮಿಟ್ಟಿ ಅತ್ಯಂತ ಸೂಕ್ತವಾಗಿದ್ದು ಚರ್ಮದ ಹೆಚ್ಚುವರಿ ಎಣ್ಣೆಯನ್ನು ಮಾತ್ರ ನಿವಾರಿಸುತ್ತದೆ. ಅಲ್ಲದೇ ಬಹಳ ಕಾಲದವರೆಗೆ ಮತ್ತೆ ಎಣ್ಣೆ ಪಸೆ ಮೂಡದಿರಲು ಸಾಧ್ಯವಾಗುತ್ತದೆ.

  *ಈಗತಾನೇ ತಣ್ಣೀರಿನಲ್ಲಿ ತೊಳೆದ ಚರ್ಮಕ್ಕೆ ಈ ಲೇಪನವನ್ನು ಹಚ್ಚಿ ಸುಮಾರು ಇಪ್ಪತ್ತೈದು ನಿಮಿಷ ಒಣಗಲು ಬಿಡಿ. ಕೆಲವರ ಚರ್ಮ ಈ ಲೇಪವನ್ನು ಅತಿ ಬೇಗನೇ ಹೀರಿಕೊಂಡು ಲೇಪವನ್ನು ತೀರಾ ಒಣಗಿಸಿಬಿಡುತ್ತವೆ. ಇಂತಹವರು ನೀರನ್ನು ಕೊಂಚ ಹೆಚ್ಚು ಹಾಕಬೇಕು.

  Easy DIY Face Packs For A Glowing Skin!
   

  ಅಂದರೆ ಇಪ್ಪತ್ತೈದು ನಿಮಿಷಗಳ ಬಳಿಕ ಈ ಲೇಪನ ಹಪ್ಪಳದಂತೆ ಆಗಿರಬಾರದು, ಕೊಂಚ ಮೃದುವಾಗಿರಬೇಕು. ಒಂದು ವೇಳೆ ಹೀಗಾದರೆ ಈ ಹಪ್ಪಳವನ್ನು ನಿವಾರಿಸುವಾಗ ಚರ್ಮದಲ್ಲಿ ತಾತ್ಕಾಲಿಕವಾಗಿ ನೆರಿಗೆಗಳು ಮೂಡಬಹುದು. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖವನ್ನು ಟವೆಲ್ ಒತ್ತಿಕೊಂಡು ಒರೆಸಿಕೊಳ್ಳಿ.

  ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಉಪಯೋಗಿಸಿ.  ಸಾಮಾನ್ಯ ಚರ್ಮದವರು ಮೊದಲ ವಿಧಾನದಲ್ಲಿ ಪಪ್ಪಾಯಿಯ ಪ್ರಮಾಣವನ್ನು ಅರ್ಧವಾಗಿಸಿ ಬಳಸಬಹುದು.

  English summary

  Easy DIY Face Packs For A Glowing Skin!

  We all want a glowing skin, don't we? Yet, sometimes, the cost of those parlour treatments can be extremely shocking. Not to mention, the sensitive skin types that could react badly to the chemicals present in those treatments. At times like these, natural DIY solutions come to the rescue. Since these are all homemade solutions, the possibility of a bad skin reaction gets reduced exponentially.
  Story first published: Friday, July 8, 2016, 10:32 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more