For Quick Alerts
ALLOW NOTIFICATIONS  
For Daily Alerts

ಬಿಸಿಲಿನ ತಾಪಕ್ಕೆ, ತ್ವಚೆಯನ್ನು ತಂಪಾಗಿಸುವ ಫೇಸ್ ಪ್ಯಾಕ್

By Jaya
|

ಸೆಕೆಗಾಲ ಬಂದೇಬಿಟ್ಟಿದ್ದು ದೇಹದಲ್ಲಿ ಉರಿ, ನೀರಿನಂತೆ ಹರಿಯುವ ಬೆವರು ತಮ್ಮ ಇರುವಿಕೆಯನ್ನು ದಾಖಲಿಸುತ್ತಿದೆ. ಬಿರು ಬೇಸಿಗೆಯ ಈ ಸಂದರ್ಭದಲ್ಲಿ ಬಿಸಲಿಗೆ ನಿಮ್ಮ ತ್ವಚೆ ನೇರವಾಗಿ ಹಾನಿಗೊಳಗಾಗುತ್ತದೆ. ದೇಹಕ್ಕೆ ಬಾಹ್ಯ ಮತ್ತು ಆಂತರಿಕ ತಂಪನ್ನು ಈ ಸಂದರ್ಭದಲ್ಲಿ ಮಾಡುವುದು ಅನಿವಾರ್ಯ. ಬೇಸಿಗೆಯಲ್ಲಿ ವಿಪರೀತ ಬಾಯಾರಿದಾಗ ತಣ್ಣಗಿನ ಪಾನೀಯಗಳತ್ತ ನಾವು ಮುಖ ಮಾಡುತ್ತೇವೆ. ಆದರೆ ಇವುಗಳು ಬಾಯಾರಿಕೆಗೆ ಕ್ಷಣಿಕ ಪರಿಹಾರವನ್ನು ನೀಡಿದರೂ ದೇಹಕ್ಕೆ ಇನ್ನಷ್ಟು ಧಗೆಯನ್ನು ಉಂಟುಮಾಡುತ್ತದೆ. ಜೊತೆಗೆ ತ್ವಚೆ ಕೂಡ ಒಣಗಲು ಆರಂಭವಾಗುತ್ತದೆ.

ಐಸ್ ಹಾಕಿದ ಜೂಸ್ ದೇಹಕ್ಕೆ ಕೊಂಚ ಹೊತ್ತು ತಂಪನ್ನು ನೀಡಿದರೂ ನಂತರ ಇದು ದೇಹಕ್ಕೆ ವಿಪರೀತ ಉಷ್ಣತೆಯನ್ನು ನೀಡುತ್ತದೆ. ಸೆಕೆಗಾಲದಲ್ಲಿ ತ್ವಚೆಯು ಒಣಗಿ ಹೋಗುತ್ತದೆ, ತನ್ನ ಮಾಯಿಶ್ಚರೈಸರ್ ಅಂಶವನ್ನು ಕಳೆದುಕೊಂಡು ಕಲೆಗಳನ್ನು ಉಂಟುಮಾಡುತ್ತವೆ. ಹಾಗಿದ್ದರೆ ಈ ಸಮಸ್ಯೆಗಳನ್ನು ನಿವಾರಿಸಲು ಪರಿಹಾರಗಳ ಮೊರೆ ಹೋಗಬೇಕಾದ್ದು ಅನಿವಾರ್ಯ, ಹಾಗಾಗಿ ನೈಸರ್ಗಿಕ ಫೇಸ್‌ ಪ್ಯಾಕ್‌ಗಳು ತ್ವಚೆಗೆ ತಂಪನ್ನು ಉಂಟುಮಾಡಿ ಡ್ರೈ ಸ್ಕಿನ್ ನಿವಾರಣೆಗೆ ಸಹಾಯ ಮಾಡುತ್ತವೆ.

ಕಲ್ಲಂಗಡಿ, ಲಿಂಬೆ, ಮೊಸರು ಮತ್ತು ಜೇನಿನ ಫೇಸ್ ಪ್ಯಾಕ್ ವಿಧಾನಗಳನ್ನು ನಾವಿಲ್ಲಿ ನೀಡಿದ್ದೇವೆ. ಬೇಸಿಗೆಯಲ್ಲಿ ಮುಖದ ಮೇಲೆ ಉಂಟಾಗುವ ಕಲೆಗಳು, ಮೊಡವೆ ಹಾಗೂ ಇತರ ತ್ವಚೆ ಸಮಸ್ಯೆಗಳನ್ನು ಈ ಫೇಸ್‌ಪ್ಯಾಕ್ ನಿವಾರಿಸಿ ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಹಾಗಿದ್ದರೆ ಮುಖಕ್ಕೆ ಕ್ರೀಮ್ ಹಚ್ಚುವುದನ್ನು ಬಿಡಿ ಈ ಫೇಸ್‌ಪ್ಯಾಕ್‌ಗಳನ್ನು ಒಮ್ಮೆ ಟ್ರೈ ಮಾಡಿ. ಇವುಗಳು ತ್ವಚೆಗೆ ಹೊಳಪನ್ನು ನೀಡಿ ನೈಸರ್ಗಿಕ ಮೃದುತ್ವವನ್ನು ನೀಡುತ್ತದೆ. ಇಲ್ಲಿ ನಾವು ನಿಮ್ಮ ಮುಖಕ್ಕೆ ಹೊಂದುವ 7 ಫೇಸ್‌ಪ್ಯಾಕ್‌ಗಳ ವಿವರಣೆಯನ್ನು ನೀಡುತ್ತಿದ್ದು ಇದು ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡುವುದು ಖಂಡಿತ...

ಕಲ್ಲಂಗಡಿ ಫೇಸ್‌ ಪ್ಯಾಕ್

ಕಲ್ಲಂಗಡಿ ಫೇಸ್‌ ಪ್ಯಾಕ್

ಬೇಸಿಗೆಯಲ್ಲಿ ನಿಮ್ಮ ತ್ವಚೆಯನ್ನು ತಂಪಾಗಿಸಲು ಕಲ್ಲಂಗಡಿ ಸಹಕಾರಿ. ಒಂದು ಪಾತ್ರೆಯಲ್ಲಿ ಒಂದು ಚಮಚದಷ್ಟು ಕಲ್ಲಂಗಡಿ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರನ್ನು ಬೆರೆಸಿ. ಇದನ್ನು ಎಲ್ಲವನ್ನೂ ಮಿಶ್ರ ಮಾಡಿಕೊಂಡು ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ಯಾಕ್ ಡ್ರೈ ಆದ ನಂತರ, ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಬೇಸಿಗೆಯಲ್ಲಿ ಮುಖದಲ್ಲಿ ಉಂಟಾಗುವ ಕಲೆಗಳ ನಿವಾರಣೆಗೆ ಈ ಕಲ್ಲಂಗಡಿ ಫೇಸ್‌ಪ್ಯಾಕ್ ಹಿತಕಾರಿಯಾದುದು

ಲಿಂಬೆ ಫೇಸ್‌ ಪ್ಯಾಕ್

ಲಿಂಬೆ ಫೇಸ್‌ ಪ್ಯಾಕ್

ತ್ವಚೆಗೆ ಸುರಕ್ಷಿತ ಬ್ಲೀಚಿಂಗ್ ಆಗಿ ಲಿಂಬೆ ಹೆಸರುವಾಸಿಯಾಗಿದೆ. ಬೇಸಿಗೆಯಲ್ಲಿ ಉಂಟಾಗುವ ಟ್ಯಾನ್ ನಿವಾರಣೆಗೆ ಲಿಂಬೆ ಉತ್ತಮ. ಎರಡು ಚಮಚದಷ್ಟು ಲಿಂಬೆ ರಸಕ್ಕೆ ಒಂದು ಚಮಚ ಜೇನನ್ನು ಸೇರಿಸಿ. ಇವೆರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಟ್ಯಾನ್ ನಿವಾರಣೆಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಕಿವಿ ಫೇಸ್ ಪ್ಯಾಕ್

ಕಿವಿ ಫೇಸ್ ಪ್ಯಾಕ್

ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇದ್ದು ನಿಮ್ಮ ತ್ವಚೆಯನ್ನು ಸುಧಾರಿಸಲು ಇದು ಸಹಕಾರಿಯಾಗಿದೆ. ಒಂದು ಪಾತ್ರೆಯಲ್ಲಿ ಒಂದು ಕಪ್‌ನಷ್ಟು ಕಿವಿ ಜ್ಯೂಸ್ ಹಾಕಿ ಇದಕ್ಕೆ ಎರಡು ಚಮಚ ಬಾದಾಮಿ ಹಾಲು ಸೇರಿಸಿ ನಂತರ ಒಂದು ಚಮಚ ಜೇನು ಕಲಸಿಕೊಳ್ಳಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮುಖದಲ್ಲಿ ಉಂಟಾಗಿರುವ ಆಳವಾದ ರಂಧ್ರಗಳನ್ನು ಸ್ವಚ್ಛಗೊಳಿಸಲು ಇದು ಉತ್ತಮವಾದುದು.

ಮೊಸರಿನ ಫೇಸ್ ಪ್ಯಾಕ್

ಮೊಸರಿನ ಫೇಸ್ ಪ್ಯಾಕ್

ಮೊಸರನ್ನು ತ್ವಚೆಗೆ ಬಳಸಿಕೊಂಡಲ್ಲಿ ಚರ್ಮದ ಬಣ್ಣವನ್ನು ಅದು ನೈಸರ್ಗಿವಾಗಿ ಸುಧಾರಿಸುತ್ತದೆ. ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ಮೊಸರನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ರಂಧ್ರಗಳನ್ನು ತೆರೆಯಲು ಮೊಸರು ಸಹಕಾರಿಯಾಗಿದ್ದು ನೈಸರ್ಗಿಕ ಹೊಳಪನ್ನೂ ಇದು ನೀಡುತ್ತದೆ.

ಸೌತೆಕಾಯಿ ಫೇಸ್ ಪ್ಯಾಕ್

ಸೌತೆಕಾಯಿ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ನಿಮ್ಮ ಮುಖ ಮತ್ತು ತ್ವಚೆಗೆ ಬಳಸಬಹುದಾದ ಅತ್ಯುತ್ತಮ ತರಕಾರಿಗಳ ಪಟ್ಟಿಯಲ್ಲಿ ಸೌತೆಕಾಯಿ ಕೂಡ ಒಂದು. ಸೌತೆಕಾಯಿಯ ದಪ್ಪನೆಯ ರಸವನ್ನು ಸಿದ್ಧಪಡಿಸಿ ಇದಕ್ಕೆ ಮೂರು ಚಮಚದಷ್ಟು ಸಕ್ಕರೆ ಮತ್ತು ಒಂದು ಚಮಚ ಮೊಸರು ಸೇರಿಸಿಕೊಳ್ಳಿ. ಪ್ಯಾಕ್ ತಯಾರಾದ ಒಡನೆ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ ನಂತರ ಒಣಗಲು ಬಿಡಿ. 15 ನಿಮಿಷಗಳ ನಂತರ, ಫೇಸ್ ಪ್ಯಾಕ್ ಸಿಪ್ಪೆ ಸಹಿತ ನಿಧಾನಕ್ಕೆ ತೆಗೆಯಿರಿ. ನಿಮ್ಮ ಮುಖದ ಕಾಂತಿ ಮತ್ತು ಮೃದುತ್ವ ದುಪ್ಪಟ್ಟುಗೊಂಡಿರುವುದನ್ನು ಗಮನಿಸಬಹುದಾಗಿದೆ.

ಪೈನಾಪಲ್ ಫೇಸ್ ಪ್ಯಾಕ್

ಪೈನಾಪಲ್ ಫೇಸ್ ಪ್ಯಾಕ್

ದಪ್ಪನೆಯ ರಸವನ್ನು ಪೈನಾಪಲ್ ಗ್ರೈಂಡ್ ಮಾಡಿ ಸಿದ್ಧಪಡಿಸಿ. ಮುಖಕ್ಕೆ ಈ ರಸವನ್ನು ಹಚ್ಚಿ 10 ನಿಮಿಷ ಹಾಗೆಯೇ ಬಿಡಿ. ನಂತರ ಮುಖಕ್ಕೆ ರೋಸ್ ವಾಟರ್ ಅನ್ನು ಹಚ್ಚಿರಿ. 15 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ. ಬೇಸಿಗೆಯಲ್ಲಿ ನಿಮ್ಮ ಮುಖವನ್ನು ತಾಜಾವಾಗಿರಿಸಲು ಈ ಫೇಸ್ ಪ್ಯಾಕ್ ಸಹಕಾರಿಯಾಗಿದೆ.

ಮಾವಿನ ಹಣ್ಣಿನ ಫೇಸ್ ಪ್ಯಾಕ್

ಮಾವಿನ ಹಣ್ಣಿನ ಫೇಸ್ ಪ್ಯಾಕ್

ಬೇಸಿಗೆ ತನ್ನ ಇರುವಿಕೆಯನ್ನು ಸೂಚಿಸಿದೆ ಹಾಗಿದ್ದರೆ ಈ ಕಾಲದಲ್ಲಿ ದೊರೆಯುವ ಹಣ್ಣುಗಳ ಅತ್ಯುತ್ತಮ ಬಳಕೆಯನ್ನು ಮಾಡಿ. ಒಂದು ಪಾತ್ರೆಯಲ್ಲಿ ಒಂದು ಚಮಚದಷ್ಟು ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಕೋಲ್ಡ್ ಕ್ರೀಮ್ ಸೇರಿಸಿ, ಈ ಎಲ್ಲಾ ಸಾಮಾಗ್ರಿಗಳನ್ನು ಕಲಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ನಂತರ ತ್ವಚೆಗೆ ಇದನ್ನು ಹಚ್ಚಿ. ಇದು ಒಣಗಿನ ನಂತರ ಮುಖವನ್ನು ತೊಳೆದುಕೊಳ್ಳಿ. ಬೇಸಿಗೆಯಲ್ಲಿ ಮುಖವನ್ನು ಮಾಯಿಶ್ಚರೈಸ್ ಮಾಡುವಲ್ಲಿ ಈ ಫೇಸ್‌ಪ್ಯಾಕ್ ಉತ್ತಮವಾದುದು.

English summary

Cool Homemade Face Packs To Beat The Heat In Summer

Summer is here, so get prepared to see a lot of those ugly-looking zits on your face. Stay away from heat-inducing foods, drink a lot of fluids to keep the body cool and pamper your skin sky-high to keep it clear and flawless. During the hot weather, the skin tends to become dry, it loses its moisture and you also begin to see age spots too. So, today, instead of opting for a cold cream, save yourself some time and apply these face masks on your skin.
Story first published: Monday, March 14, 2016, 20:45 [IST]
X
Desktop Bottom Promotion