For Quick Alerts
ALLOW NOTIFICATIONS  
For Daily Alerts

  ಮುಖದ ಸೌಂದರ್ಯಕ್ಕೆ ದಿನನಿತ್ಯದ ದಿನಚರಿ ಹೀಗಿರಲಿ....

  By Jaya Subramanya
  |

  ಬದಲಾಗುತ್ತಿರುವ ಹವಾಮಾನ ನಿಮ್ಮ ತ್ವಚೆಗೆ ಶಾಪವಾಗಿ ಪರಿಣಮಿಸುತ್ತದೆ. ಇದಂತೂ ಚಳಿಗಾಲದ ಸಮಯವಾಗಿದೆ. ಹೆಚ್ಚಿನ ಧೂಳು ಬೇಗನೇ ವಾತವಾರಣದಲ್ಲಿ ಸೇರಿಕೊಂಡು ನಿಮ್ಮ ತ್ವಚೆಗೆ ಹಾನಿಯುಂಟುಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ತ್ವಚೆ ಹೆಚ್ಚು ಶುಷ್ಕವಾಗಿರುವುದರಿಂದ ಹವಾಮಾನದ ವೈಪರೀತ್ಯಗಳಿಗೆ ಬೇಗನೇ ಒಳಗಾಗುತ್ತದೆ.

  ಮುಖದಲ್ಲಿ ಮೊಡವೆ, ಉರಿತ, ಕಲೆಗಳು, ತ್ವಚೆಯಲ್ಲಿ ಗಾಯದ ಗುರುತುಗಳು ಉಂಟಾಗುವುದು ಸಾಮಾನ್ಯವಾಗಿದೆ. ಸೂರ್ಯನ ಯುವಿ ಕಿರಣಗಳೂ ಕೂಡ ತ್ವಚೆಯ ಮೇಲೆ ಕೆಟ್ಟ ಪ್ರಭಾವವನ್ನುಂಟು ಮಾಡುತ್ತದೆ. ಹಾಗಿದ್ದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದು ನಿಮ್ಮ ಯೋಚನೆಯಾಗಿದ್ದರೆ ಇಲ್ಲಿದೆ ತ್ವಚೆಯ ಆರೈಕೆಗೆ ಕೆಲವೊಂದು ಸಲಹೆಗಳು.

  Flawless Skin
   

  ಆರೋಗ್ಯಕರ ಆಹಾರ ಪದ್ಧತಿ

  ಕಾರ್ಬೋನೇಟೆಡ್ ಆಹಾರವನ್ನು ಸೇವಿಸದಿರಿ ಇದರಲ್ಲಿ ಹೆಚ್ಚು ಸಕ್ಕರೆ ಇದ್ದು, ಹೆಚ್ಚು ಪ್ರಮಾಣದ ಸೋಡಿಯಮ್ಇರುತ್ತದೆ. ನಿಮ್ಮ ತ್ವಚೆಯ ಹೊಳೆಯುವಿಕೆಗೆ ಇದು ಹಾನಿಕರವಾಗಿರುತ್ತದೆ. ಆದಷ್ಟು ಹಣ್ಣುಗಳು, ತರಕಾರಿಗಳು, ಮೀನು, ಡೈರಿ ಉತ್ಪನ್ನಗಳು, ಸಂಪೂರ್ಣ ಧಾನ್ಯಗಳು ಮೊದಲಾದವನ್ನು ಸೇವಿಸಿ. ಒಮೇಗಾ - 3 ಫ್ಯಾಟಿ ಆಸಿಡ್ ಉಳ್ಳ ಆಹಾರ ಸೇವಿಸಿ ವಿಟಮಿನ್ ಮತ್ತು ಮಿನರಲ್‌ಗಳು ಇದರಲ್ಲಿ ಹೆಚ್ಚು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ. 

  fruits
   

  ಆರಾಮದಾಯಕ ನಿದ್ದೆ

  ನಿಮ್ಮ ಸೌಂದರ್ಯಕ್ಕೆ ನಿಮ್ಮ ನಿದ್ದೆ ಕೂಡ ಉತ್ತಮವಾಗಿದೆ. ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ನೀವು 6-7 ಗಂಟೆಗಳ ಕಾಲ ನಿದ್ದೆ ಮಾಡಿ. ಇದರಿಂದ ಕಪ್ಪು ವರ್ತುಲಗಳು ಮತ್ತು ನೆರಿಗೆಗಳನ್ನು ನಿವಾರಿಸುತ್ತದೆ. ಹೀಗೆ ಮಾಡಿಲ್ಲ ಎಂದಾದಲ್ಲಿ ನಿಮ್ಮ ಕೆಲಸದ ನಡುವೆ 20 ನಿಮಿಷಗಳ ಪವರ್ ನ್ಯಾಪ್ ಅನ್ನು ಮಧ್ಯಾಹ್ನದಲ್ಲಿ ಮಾಡಿ.

  sleep
   

  ಹೆಚ್ಚು ಹೆಚ್ಚು ನೀರು ಕುಡಿಯಿರಿ

  ಹೊಳೆಯುವ ತ್ವಚೆಯನ್ನು ಹೊಂದಿರುವವರು ಹೆಚ್ಚು ಹೆಚ್ಚು ನೀರು ಸೇವಿಸುವ ಸಲಹೆಯನ್ನು ನೀಡುತ್ತಾರೆ. ನೀರು ನಿಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ದೇಹ ವ್ಯವಸ್ಥೆಯನ್ನು ಸುಲಲಿತವಾಗಿರಿಸುತ್ತದೆ. ನಿಯಮಿತವಾಗಿ 6-7 ಲೋಟ ನೀರು ಕುಡಿಯಬೇಕು. ಇದರ ನಡುವೆ ಗ್ರೀನ್ ಟಿ, ಹಣ್ಣಿನ ಸ್ಮೂತಿ ಮೊದಲಾದವುಗಳನ್ನು ಸೇವಿಸಿ. 

  drinking water
   

  ಸನ್ ಸ್ಕ್ರೀನ್ ಲೋಶನ್ ಬಳಸಿ

  ನಿಮ್ಮ ತ್ವಚೆಯನ್ನು ಹೊರಗಿನ ಕಲುಷಿತ ವಾತಾವರಣದಿಂದ ಕಾಪಾಡಿಕೊಳ್ಳಲು ಸನ್ ಸ್ಕ್ರೀನ್ ಲೋಶನ್ ಬಳಸಿ. ಹೆಚ್ಚಿನ ಸೆಲೆಬ್ರಿಟಿಗಳು ಹೊರಗಡೆ ಓಡಾಡುವಾಗ ಸನ್ ಸ್ಕ್ರೀನ್ ಲೋಶನ್ ಬಳಸಲು ಸಲಹೆ ನೀಡುತ್ತಾರೆ. ಎಸ್‌ಪಿಎಫ್ 20 ಅಥವಾ ಇನ್ನಷ್ಟು ಅಂಶಗಳೊಂದಿಗಿರುವ ಸನ್ ಸ್ಕ್ರೀನ್ ಅನ್ನು ಬಳಸಿ ಇದು ಯುವಿ ಕಿರಣಗಳಿಂದ ನಿಮ್ಮನ್ನು ಸುರಕ್ಷಿಸುತ್ತದೆ. 

  sun screen
   

  ತಣ್ಣೀರಿನಿಂದ ಮುಖ ತೊಳೆಯಿರಿ

  ನಿಮ್ಮ ಹೊಳೆಯುವ ತ್ವಚೆಗಾಗಿ ಹೈಜೀನ್ ನಿರ್ವಹಣೆ ಅತ್ಯಗತ್ಯವಾಗಿದೆ. ದಿನದಲ್ಲಿ ಎರಡು ಬಾರಿ ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಯಿಶ್ಚರೈಸ್ ಮಾಡಿ. ಆದರೆ ಹೆಚ್ಚುವರಿಯಾಗಿ ಮುಖವನ್ನು ತೊಳೆಯುವುದೂ ಕೂಡ ಮುಖಕ್ಕೆ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ನೈಸರ್ಗಿಕ ಎಣ್ಣೆ ಮುಖದಿಂದ ಹೊರಹೋಗುವ ಸಾಧ್ಯತೆ ಇರುತ್ತದೆ. ಕ್ಲೆನ್ಸಿಂಗ್‌ನ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಪೋರ್ಸ್‌ಗಳನ್ನು ಮುಚ್ಚಿ ಒಳನುಸುಳುವಿಕೆಯಿಂದ ರಕ್ಷಿಸುತ್ತದೆ. 

  face cream
   

  ಎಕ್ಸ್‌ಫೋಲಿಯೇಶನ್ ಅಗತ್ಯ

  ನಿಮ್ಮ ತ್ವಚೆಗೆ ಹಾನಿಯನ್ನುಂಟುಮಾಡುವುದು ಒಣ ತ್ವಚೆಯ ಕೋಶವಾಗಿರುತ್ತದೆ ಇದು ಮುಖವನ್ನು ಕಳೆಗುಂದುವಂತೆ ಮಾಡುತ್ತದೆ. ವಾರದಲ್ಲಿ ಮೂರು ಬಾರಿಯಾದರೂ ಮುಖವನ್ನು ಎಕ್ಸ್‌ಫೋಲಿಯೇಟ್ ಮಾಡಿ. ನೀವು ಮನೆಯಲ್ಲಿ ದೊರೆಯುವ ವಸ್ತುಗಳಿಂದ ಎಕ್ಸ್‌ಫೋಲಿಯೇಟ್ ಮಾಡಬೇಕು ಎಂದಾದಲ್ಲಿ, ಲಿಂಬೆರಸ ಮತ್ತು ಸಕ್ಕರೆಯನ್ನು ಬಳಸಿ. ಇದು ಮೃತ ತ್ವಚೆಯನ್ನು ನಿವಾರಿಸುವುದು ಮಾತ್ರವಲ್ಲದೆ ನಿಮ್ಮ ತ್ವಚೆಗೆ ರೇಡಿಯೇಶನ್ ಅನ್ನು ಒದಗಿಸುತ್ತದೆ. ತ್ವಚೆಯ ಕಲೆಯನ್ನು ಹೋಗಲಾಡಿಸುತ್ತದೆ. 

  Stress
   

  ಒತ್ತಡವನ್ನು ದೂರಮಾಡಿ

  ನೀವು ಹೆಚ್ಚು ಒತ್ತಡಕ್ಕೆ ಒಳಗಾದಂತೆ ಇದು ತ್ವಚೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಒತ್ತಡದ ಹಾರ್ಮೋನ್ ಆದ ಕೋರ್ಟಿಸಲ್, ಹೆಚ್ಚು ಉಲ್ಬಣವಾಗುತ್ತದೆ. ಇದು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಒಡೆಯುತ್ತದೆ ಹಾಗೂ ಇದರಿಂದ ತ್ವಚೆಯಲ್ಲಿ ಕಲೆ, ವರ್ತುಲಗಳು ಮತ್ತು ನೀರಸತನ ಎದ್ದುಕಾಣುತ್ತದೆ. ಆದ್ದರಿಂದ ನಿರಾಳವಾಗಿ, ಯೋಗವನ್ನು ಅಭ್ಯಸಿಸಿ ಮತ್ತು ಒತ್ತಡವನ್ನು ದೂರಮಾಡಿ.

  English summary

  7 Skin Care Habits To Pick From People With Flawless Skin

  Having a problem-free skin is surely god's gift, as maintaining healthy skin in your busy life is really tricky and next to impossible. But, it doesn't mean you avoid all skin care regimes or spend huge money on lavish spas and saloons. With simple regular methods, you can take a good care of your skin. If one of your friends has healthy skin, ask for advice. It may help you learn a better skin care habit which may work for you as well.
  Story first published: Monday, November 28, 2016, 23:55 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more