For Quick Alerts
ALLOW NOTIFICATIONS  
For Daily Alerts

ಲಿಂಬೆಯ ಸೌಂದರ್ಯವರ್ಧಕ ಗುಣಗಳಿಗೆ ಬೆರಗಾಗಲೇಬೇಕು

By Super
|

ನೈಸರ್ಗಿಕವಾಗಿ ದೊರೆಯುವ ತರಕಾರಿ, ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಸೌಂದರ್ಯವನ್ನು ವೃದ್ಧಿಸುವಲ್ಲಿಯೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಗುಣಗಳಿಂದ ಸೌಂದರ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ.

Ways Lemon Can Make Your Skin Glow

ನಿಮ್ಮ ಮುಖದ ಮೇಲೆ ಕಪ್ಪು ಚುಕ್ಕೆಗಳ ಚಿಂತೆಯಿದ್ದರೆ ಅವುಗಳು ಮಾಯವಾಗಲು ತಾಜಾ ಲಿಂಬೆಹಣ್ಣನ್ನು ಬಳಸಬಹುದು. ಕಟುವಾಸನೆಯುಳ್ಳ ಲಿಂಬೆಹಣ್ಣಿನಲ್ಲಿ ನಿಮ್ಮ ಚರ್ಮ ಮತ್ತು ತಲೆಗೂದಲಿಗೆ ಬಹಳಷ್ಟು ಪ್ರಯೋಜನವಾಗುವ ಶಕ್ತಿಯಿಂದ ತುಂಬಿದೆ. ನಿಮ್ಮ ಎಲ್ಲಾ ಸೌಂದರ್ಯ ಅಗತ್ಯಗಳನ್ನು ಕೊಡುವ ಮಿಶ್ರಣಾಂಶವನ್ನು ಹುಡುಕುತ್ತಿದ್ದರೆ, ಲಿಂಬೆಹಣ್ಣಿಗಿಂತಾ ಬೇರೆ ಯಾವುದೂ ಇಲ್ಲ. ಆದ್ದರಿಂದ ನಿಮ್ಮ ಚರ್ಮವನ್ನು ಲಿಂಬೆಹಣ್ಣು ಹೇಗೆ ಉತ್ತಮಗೊಳಿಸಬಹುದು?

ಲಿಂಬೆಹಣ್ಣಿನ ರಸದಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಮತ್ತು ಗಂಭೀರ ಪ್ರತಿಕ್ರಿಯೆಯ ಗುಣಗಳನ್ನು ಹೊಂದಿರುವುದರಿಂದ ಚರ್ಮವನ್ನು ಬೆಳ್ಳಗೆ ಮಾಡಲು ಮತ್ತು ಅನಗತ್ಯ ಮಚ್ಚೆಗಳನ್ನು ಕಡಿಮೆಮಾಡುತ್ತದೆ. ಅದು ಚರ್ಮದ ಬಣ್ಣವನ್ನು ಸಮಗೊಳಿಸುತ್ತದೆ. ನಿಮ್ಮ ಚರ್ಮವನ್ನು ಸುಧಾರಿಸಲು ಕೆಲವು ಸುಲಭ ಮಾರ್ಗಗಳು ಲಿಂಬೆಹಣ್ಣಿನಲ್ಲಿವೆ. ನಿಮ್ಮ ಚರ್ಮದ ಸಮಸ್ಯೆಗಳನ್ನು ಮನೆಯಲ್ಲಿಯೇ ಪರಿಹರಿಸಲು ನಾವು ಇಲ್ಲಿ ಕೊಡುವ ಕೆಲವು ವಿಧಾನಗಳನ್ನು ಬಳಸಿಕೊಳ್ಳಿ: ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!

ಮೊಡವೆ ಗುರುತುಗಳನ್ನು ಹೋಗಿಸುವುದು


ಲಿಂಬೆಹಣ್ಣಿನ ರಸದಲ್ಲಿ ಸೌಂದರ್ಯವೃದ್ಧಿಮಾಡಿಕೊಳ್ಳಲು ಅದ್ಭುತ ಶ್ರೇಣಿಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವರಿಗೆ ಬಳಸಿದಾಗ ಚರ್ಮ ಕೆರಳಬಹುದು ಮತ್ತು ಅಂತಹವರು ತೆರೆದ ರಂಧ್ರಗಳ ಮೇಲೆ ಬಳಸಬಾರದು. ಲಿಂಬೆ ಹಣ್ಣಿನ ಸಿಪ್ಪೆಯಿಂದ ನಿಮ್ಮ ಮುಖದ ಮೇಲೆ ಮೆಲ್ಲಗೆ ಉಜ್ಜಿ, 20 ನಿಮಿಷಗಳ ನಂತರ ಬೆಚ್ಚಗಿರುವ ನೀರಿನಿಂದ ತೊಳೆದುಕೊಳ್ಳಿ. ನಿಮ್ಮ ಕಣ್ಣಿನ ಬಳಿ ಮತ್ತು ಸುತ್ತ ಬಳಸುವುದು ಅಪಾಯಕರ. ಲಿಂಬೆಹಣ್ಣಿನ ಸಿಪ್ಪೆಯಲ್ಲಿರುವ ಆಂಟಿಆಕ್ಸಿಡೆಂಟ್ ನಿಮ್ಮ ಚರ್ಮದ ಮೇಲಿರುವ ಕಲ್ಮಶಗಳನ್ನು ಬಹಳ ಮಟ್ಟಿಗೆ ನಿರ್ಮೂಲಮಾಡುತ್ತದೆ. ಲಿಂಬೆಹಣ್ಣಿನ ಸಿಪ್ಪೆ ಅನೇಕ ವಿಧಗಳ ಚರ್ಮದ ಸಮಸ್ಯೆಗಳನ್ನು, ಉದಾಹರಣೆಗೆ ಸುಕ್ಕುಗಳು ಮತ್ತು ಮೊಡವೆಗಳು, ಇವುಗಳನ್ನು ತೆಗೆಯಲು ನೆರವಾಗುತ್ತದೆ.

ಚರ್ಮವನ್ನು ಪದರ ಪದರವಾಗಿ ಶುಚಿಗೊಳಿಸುವುದು


ಲಿಂಬೆಹಣ್ಣಿನ ರಸ ಮತ್ತು ಜೇನು ತುಪ್ಪದ ಮಿಶ್ರಣದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮಶುಚಿಗೊಳಿಸುವ ಕಾರ್ಯದಲ್ಲಿ ಸಹಕಾರಿಯಾಗಿದೆ. ಒಂದು ಟೇಬಲ್ ಚಮಚ ಲಿಂಬೆಹಣ್ಣಿನ ರಸಕ್ಕೆ, ಕಾಲು ಟೇಬಲ್ ಚಮಚ ಮೊಸರು ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಒಂದು ಟೇಬಲ್ ಚಮಚ ಜೇನುತುಪ್ಪ ಸೇರಿಸಿ ಕಲಸಿ. ಹೀಗೆ ಮಾಡಿದ ಏಕರೂಪದ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಲೇಪಿಸಿ. 15 ನಿಮಿಷಗಳು ಹಾಗೆಯೇ ಬಿಟ್ಟ ನಂತರ ಬೆಚ್ಚಗಿರುವ ನೀರಿನಿಂದ ನೆನೆಸಿ ತೊಳೆದುಕೊಳ್ಳಿ. ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

ಫೇಸ್ ಮಾಸ್ಕ್


ನೀವು ಮತ್ತೊಂದು ಚರ್ಮ ಶುಚಿಗೊಳಿಸುವ ಮಿಶ್ರಣವನ್ನು ಪ್ರಯೋಗಿಸಬಹುದು. ಇದರಿಂದ ನಿಮ್ಮ ಚರ್ಮವು ಸ್ವಲ್ಪಕಾಲ ಬಳಸಿದ ನಂತರ ಬೆಳ್ಳಗಾಗಬಹುದು. ಒಂದು ಬೌಲಿನಲ್ಲಿ 2 ಟೇಬಲ್ ಚಮಚ ಕಂದು (ಬ್ರೌನ್) ಸಕ್ಕರೆ ಹಾಕಿ. ಇದಕ್ಕೆ ಒಂದು ಮೊಟ್ಟೆಯ ಬಿಳಿಭಾಗ ಮತ್ತು ಒಂದು ಟೀ ಚಮಚ ಲಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಲೇಪಿಸಿ ಹತ್ತು ನಿಮಿಷಗಳ ಸಮಯ ಹಾಗೇ ಬಿಡಿ. ಬೆಚ್ಚಗಿರುವ ನೀರಿನಿಂದ ನೆನೆಸಿ ತೊಳೆದುಕೊಂಡು, ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಹೀಗೆ ನಿಮ್ಮ ಚರ್ಮವನ್ನು ಸುಲಭವಾಗಿ ಕಾಪಾಡಿಕೊಳ್ಳಲು ಲಿಂಬೆಹಣ್ಣು ಸಹಾಯಮಾಡುವ ಕೆಲವು ವಿಧಾನಗಳು.

ಪರಿಪೂರ್ಣ ಮಾಯಿಶ್ಚರೈಸರ್ (ತಣಿಸುವ ಸಾಧನ)


ನಿಮ್ಮ ಚರ್ಮದ ಮೇಲಿನ ಹೆಚ್ಚುವರಿ ತೈಲತ್ವವನ್ನು ಕಡಿಮೆಮಾಡಲು ವಿಧಾನಗಳನ್ನು ಹುಡುಕುತ್ತಿದ್ದರೆ, ಲಿಂಬೆಹಣ್ಣಿನ ರಸವನ್ನು ನೇರವಾಗಿ ಚರ್ಮದ ಮೇಲೆ ಬಳಿಯಿರಿ. ಆದರೆ ನಿಮಗೆ ಸೂಕ್ಷ್ಮ ಚರ್ಮವಿದ್ದಲ್ಲಿ ಲಿಂಬೆಹಣ್ಣಿನ ರಸವನ್ನು ಲೇಪಿಸ ಬೇಡಿ ಇಲ್ಲದಿದ್ದರೆ ಕೆಟ್ಟ ಪರಿಣಾಮ ಬೀರಬಹುದು. ಆದಾಗ್ಯೂ ನಿಮಗೆ ಒಣ ಚರ್ಮವಿದ್ದು ಅದನ್ನು ಮೃದುವಾಗಿಸಬೇಕಿದ್ದಲ್ಲಿ, ಸ್ವಲ್ಪ ಎಳನೀರು ಮತ್ತು ಸ್ವಲ್ಪ ಲಿಂಬೆಹಣ್ಣಿನ ರಸ ಬೆರಸಿ ಲೇಪಿಸಿ ಪ್ರಯತ್ನಿಸಿ. ಎಳನೀರು ನಿಮ್ಮ ಚರ್ಮವನ್ನು ತಣಿಸುವ ಗುಣಹೊಂದಿದೆ ಮತ್ತು ಲಿಂಬೆಹಣ್ಣಿನ ರಸ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
English summary

Ways Lemon Can Make Your Skin Glow

Your kitchen must have lemons on hand, which we might use for lemonade or for a crispy fried chicken recipe. We’re used to adding this smallest citrus fruit to add zest to our meals. Regardless of all this, the fruit has immense power on your skin. Packed with vitamin C and antioxidants, lemon offers exciting benefits for your skin as well as your quality of life.
X
Desktop Bottom Promotion