For Quick Alerts
ALLOW NOTIFICATIONS  
For Daily Alerts

ತರಕಾರಿ ಸಿಪ್ಪೆಯನ್ನು ತಿಪ್ಪೆಗೆ ಎಸೆಯೋ ಮುನ್ನ ಈ ಸ್ಟೋರಿ ಓದಿ..

By Su.Ra
|

ಕಾಸ್ಮೆಟಿಕ್ಸ್ ಪ್ರಪಂಚ ಇಲ್ಲದ ಕಾಲದಲ್ಲಿ ಮನುಷ್ಯರು ತಮ್ಮ ಸೌಂದರ್ಯ ವರ್ಧನೆಗೆ ನೈಸರ್ಗಿಕವಾಗಿ ಸಿಗುವ ಉತ್ಪನ್ನಗಳನ್ನೇ ಬಳಸ್ತಾ ಇದ್ದರು. ಅನಾದಿ ಕಾಲದಿಂದಲೂ ತರಕಾರಿ, ಸೊಪ್ಪು, ಹಣ್ಣು, ಹೀಗೆ ಪ್ರಕೃತಿ ಕೊಡುಗೆಯಾಗಿ ನೀಡುವ ಮತ್ತು ನೀಡಿರುವ ವಸ್ತುಗಳೇ ಮನುಷ್ಯನ ಸೌಂದರ್ಯ ಸಾಧನಗಳಾಗ್ತಾ ಇದ್ದವು. ಆದ್ರೆ ಕಾಲ ಉರುಳಿದಂತೆ, ಮನುಷ್ಯ ಕೆಮಿಕಲ್ ಮಯವಾಗಿದ್ದಾನೆ. ಆತನ ದಿನನಿತ್ಯದ ಚಟುವಟಿಕೆಯ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕೆಮಿಕಲ್ ಗಳ ದಾಸನಾಗಿದ್ದಾನೆ. ಆದ್ರೆ ಸ್ವಲ್ಪ ತಮ್ಮ ಸೌಂದರ್ಯ ವರ್ಧನೆಗೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡ್ರೆ ಹೆಚ್ಚು ಕಾಲ ಆರೋಗ್ಯವಾಗಿರಲು ಸಾಧ್ಯವಾಗುತ್ತೆ.

ತರಕಾರಿ ಹೆಚ್ಚಿದ ನಂತ್ರ ಸಿಪ್ಪೆಯನ್ನು ವೇಸ್ಟ್ ಅಂತ ಎಸೆದುಬಿಡೋದು ಸರ್ವೇಸಾಮಾನ್ಯ. ತ್ಯಾಜ್ಯ ವಸ್ತು ಅಂತ ಪರಿಗಣಿಸುವ ಅದೆಷ್ಟೋ ತರಕಾರಿಯ ಸಿಪ್ಪೆ, ತಿರುಳು ಇತ್ಯಾದಿ ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಸಾಧನಗಳು. ಅದನ್ನು ಅರಿಯದವರು ಪ್ರತಿದಿನ ಅಡುಗೆಗೆಂದು ಬಳಸುವ ತರಕಾರಿಯ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆದು ಬಿಡ್ತಾರೆ. ಆದ್ರೆ ಈ ಲೇಖನ ಓದಿದ ನಂತ್ರ ಖಂಡಿತ ನಿಮ್ಗೊಂದು ಐಡಿಯಾ ಬಂದಿರುತ್ತೆ. ಯಾವ ತರಕಾರಿಯ ಸಿಪ್ಪೆಯಿಂದ ಹೇಗೆ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಅನ್ನೋ ಸಿಂಪಲ್ ಸೂತ್ರಗಳು ಇಲ್ಲಿವೆ. ಮುಂದೆ ಓದಿ..

ಹೀರೆಕಾಯಿ ಸಿಪ್ಪೆ

ಹೀರೆಕಾಯಿ ಸಿಪ್ಪೆ

ಹೀರೆಕಾಯಿಯನ್ನು ಅಡುಗಗೆ ಬಳಸುವಾಗ ಅದರ ಚೂಪಾದ ಸಿಪ್ಪೆಯ ಭಾಗವನ್ನು ತೆಗೀತೀರ ಅಲ್ವಾ? ತೀರಾ ಅಡುಗೆಯಲ್ಲಿ ತಿಳುವಳಿಕೆ ಇರುವವರಲ್ಲಿ ಕೆಲವರು ಮಾತ್ರ ಅದನ್ನು ಬಳಸಿ ರುಚಿರುಚಿಯಾದ ಚಟ್ನಿ ತಯಾರಿಸಿಕೊಳ್ತಾರೇನೋ.. ಆದ್ರೆ ಉಳಿದವ್ರು ಖಂಡಿತ ಅದನ್ನು ಕಸದ ಬುಟ್ಟಿಗೆ ಎಸೆದು ಬಿಡ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡ್ಬೇಡಿ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೀರೆಕಾಯಿ ಸಿಪ್ಪೆ

ಹೀರೆಕಾಯಿ ಸಿಪ್ಪೆ

ಬದಲಾಗಿ ಆ ಹೀರೆಕಾಯಿಯ ಸಿಪ್ಪೆಯನ್ನು ಮಿಕ್ಸಿ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಎರಡು ಟೀ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ, ಆ ಪೇಸ್ಟ್ ನಿಂದ ಬಾಡಿ ಸ್ಕ್ರಬ್ ಮಾಡ್ಕೊಳ್ಳಿ. ನಿಮ್ಮ ದೇಹದ ಟ್ಯಾನ್ ರಿಮೂವ್ ಮಾಡಲು ಈ ಮಿಶ್ರಣ ನಿಮ್ಗೆ ಸಹಾಯ ಮಾಡಲಿದೆ.

ಸೌತೆಕಾಯಿ ಸಿಪ್ಪೆ

ಸೌತೆಕಾಯಿ ಸಿಪ್ಪೆ

ಎಲ್ಲರಿಗೂ ತಿಳಿದಿರುವ ಹಾಗೆ ಸೌತೆಕಾಯಿ ಒಂದು ಬೆಸ್ಟ್ ಸೌಂದರ್ಯವರ್ಧಕ. ಹಾಗಾಗಿ ಸೌತೆಯನ್ನು ಅಡುಗೆಗೆ ಬಳಸುವಾಗ ಅದರ ಸಿಪ್ಪೆ ತೆಗೆದ್ರೆ, ಖಂಡಿತ ಆ ಸಿಪ್ಪೆಯನ್ನು ಎಸೀಬೇಡಿ. ಬದಲಾಗಿ ಸಿಪ್ಪೆಯ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಇಲ್ಲವೇ ಬಾದಾಮಿ ಎಣ್ಣೆಯ ಎರಡು ಹನಿ ಸೇರಿಸಿ ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಮುಖದ ಕಪ್ಪು ಕಲೆಗಳನ್ನು ನಿವಾರಿಸಿ, ಡಾರ್ಕ್ ಸರ್ಕಲ್ ಹೊಡೆದೋಡಿಸಲು ಇದು ನಿಮ್ಗೆ ನೆರವಾಗುತ್ತೆ.

ಆಲೂಗಡ್ಡೆಯ ಸಿಪ್ಪೆ

ಆಲೂಗಡ್ಡೆಯ ಸಿಪ್ಪೆ

ಆಲೂಗಡ್ಡೆಯನ್ನು ಸಿಪ್ಪೆ ಸಹಿತ ತೊಳೆದುಕೊಳ್ಳಿ. ನಂತ್ರ ಹೇಗಿದ್ರೂ ಅಡುಗೆಗೆ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದೇ ಬಳಸ್ತೀರ. ನಂತ್ರ ಆ ಸಿಪ್ಪೆಯನ್ನು ಎಸೀಬೇಡಿ. ಬದಲಾಗಿ ಅದನ್ನು ಸಪರೇಟ್ ಆಗಿ ಕೆಲವು ನಿಮಿಷ ನೀರಿನಲ್ಲಿ ಕುದಿಸಿ ಬೇಯಿಸಿ. ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಲೂಗಡ್ಡೆಯ ಸಿಪ್ಪೆ

ಆಲೂಗಡ್ಡೆಯ ಸಿಪ್ಪೆ

ಅದಕ್ಕೆ ಸ್ವಲ್ಪ ಮೊಸರು ಮತ್ತು ಒಂದೆರಡು ಹನಿ ಬಾದಾಮಿ ಎಣ್ಣೆ ಮತ್ತು ಒಂದೆರಡು ಹನಿ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಅದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಮುಖದ ಕಾಂತಿ ಹೆಚ್ಚಿಸಿ, ಹೊಳಪು ನೀಡಲು ಈ ಪೇಸ್ಟ್ ನಿಮಗೆ ನೆರವಾಗಲಿದೆ.

ಬೀಟ್ ರೂಟ್ ಸಿಪ್ಪೆ

ಬೀಟ್ ರೂಟ್ ಸಿಪ್ಪೆ

ಕೆಂಪು ಕೆಂಪು ಬೀಟ್ ರೂಟ್ ಹೆಚ್ಚುವಾಗ ಅದ್ರ ಸಿಪ್ಪೆ ವೇಸ್ಟ್ ಅಂತಲೇ ಎಲ್ಲರೂ ಅಂದುಕೊಳ್ಳೋದು, ಆದ್ರೆ ಅದನ್ನು ದಯವಿಟ್ಟು ಎಸೀಬೇಡಿ,. ಬದಲಾಗಿ ಬೀಟ್ ರೂಟ್ ಸಿಪ್ಪೆಯಿಂದ ನಿಮ್ಮ ತುಟಿಗಳಿಗೆ ಮಸಾಜ್ ಮಾಡ್ಕೊಳ್ಳಿ. ಕಪ್ಪಾಗಿರುವ ತುಟಿ ಕೆಂಪುಕೆಂಪಾಗಲು ಮತ್ತು ಡ್ರೈ ಆಗಿ ತೇವಾಂಶ ಕಳೆದುಕೊಂಡಂತಿರುವ ತುಟಿಗಳಿಗೆ ಇದು ರಿಲ್ಯಾಕ್ಸ್ ಮಾಡಲಿದೆ. ಅಷ್ಟೇ ಅಲ್ಲ ಮುಖಕ್ಕೂ ಕೂಡ ನೀವು ಮಸಾಜ್ ಮಾಡಿಕೊಳ್ಳಬಹುದು. ಬೀಟ್ ರೂಟ್ ಸಿಪ್ಪೆ ಮುಖದಲ್ಲಿ ರಕ್ತಸಂಚಾರ ಹೆಚ್ಚಾಗುವಂತೆ ಮಾಡಿ, ಧೂಳಿನಿಂದ ಮುಖದಲ್ಲಿ ಆಗಿರುವ ಕೊಳೆಯನ್ನು ತೊಡೆದು ಹಾಕಲು ನೆರವಾಗುತ್ತೆ.

ಕುಂಬಳಕಾಯಿ ಸಿಪ್ಪೆ

ಕುಂಬಳಕಾಯಿ ಸಿಪ್ಪೆ

ಕುಂಬಳಕಾಯಿ ಸಿಪ್ಪೆ ತೆಗೆದ ನಂತ್ರ ಅದನ್ನು ಸ್ವಲ್ಪ ಬೇಯಿಸಿ, ಮಿಕ್ಸಿ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಚಿಟಿಕೆ ಅರಿಶಿನ, ಹಾಲಿನ ಕೆನೆ ಸೇರಿಸಿ. ಈ ಪೇಸ್ಟ್ ನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಅಪ್ಲೈ ಮಾಡಿದ್ರೆ ಮೊಡವೆ ಕಲೆಗಳು ನಿವಾರಣೆಯಾಗುತ್ತೆ.

ಮೂಲಂಗಿ ಸಿಪ್ಪೆ

ಮೂಲಂಗಿ ಸಿಪ್ಪೆ

ಅಡುಗೆಗಾಗಿ ಮೂಲಂಗಿ ಹೆಚ್ಚುವಾಗ ಸಿಪ್ಪೆಯನ್ನು ತೆಗೆಯುವುದು ಸಾಮಾನ್ಯ. ಮೂಲಂಗಿಯ ಮೇಲ್ಪದರವನ್ನು ಯಾವುದೇ ಕಾರಣಕ್ಕೂ ಎಸೀಬೇಡಿ, ಬದಲಾಗಿ ಅದ್ರ ಪೇಸ್ಟ್ ತಯಾರಿಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂಲಂಗಿ ಸಿಪ್ಪೆ

ಮೂಲಂಗಿ ಸಿಪ್ಪೆ

ಇನ್ನು ಮೊಟ್ಟೆಯ ಬಿಳಿಯ ಭಾಗವನ್ನು ಸೇರಿಸಿ ಮತ್ತು ಸ್ವಲ್ಪ ಆಲಿವ್ ಆಯಿಲ್, ಬಾದಾಮಿ ಎಣ್ಣೆ ಮಿಕ್ಸ್ ಮಾಡಿ.. ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳೋದ್ರಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ ಮತ್ತು ಕೂದಲು ಶೈನಿಯಾಗಿ ಬೆಳೆಯಲು ನೆರವಾಗುತ್ತೆ.

English summary

Top Vegetable peels for glowing skin and beauty care

This is for all those amazing ladies who cannot spend their entire day at beauty spas. We do understand how busy you could be throughout the day., So we suggest you effective vegetable peel facials. They are absolutely effective for the skin. If you get this done at home twice a month, your skin will definitely get a major transformation.
X
Desktop Bottom Promotion