For Quick Alerts
ALLOW NOTIFICATIONS  
For Daily Alerts

ಹಣೆಯ ಸ್ಟಿಕ್ಕರ್‌ನಿಂದಾಗುವ ಬಿಳಿ ಕಲೆಗಳಿಗೆ ಸೂಕ್ತ ಪರಿಹಾರ

By Su.Ra
|

ಹಿಂದೂ ಸಂಪ್ರದಾಯದ ಪ್ರಕಾರ ಹಣೆಗ ಬೊಟ್ಟು ಇಟ್ಟುಕೊಳ್ಳೋದು ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿ ಹೆಣ್ಣಿಗೂ ಹಣೆಯಲ್ಲಿ ಬಿಂದಿ ಭೂಷಣ ಅನ್ನೋದು ನಮ್ಮ ನಂಬಿಕೆ. ಬೋಳು ಹಣೆಯ ಹುಡುಗಿಯನ್ನು ನೋಡೋಕೆ ಯಾರಿಗೂ ಇಷ್ಟವಾಗೋದಿಲ್ಲ. ಈಗಂತೂ ವೆರೈಟಿ ವೆರೈಟಿ ಡಿಸೈನಿನ ಬಿಂದಿಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ಆದ್ರೆ ಹಿಂದಿನ ಕಾಲದಲ್ಲಿ ಕೆಂಪು ಕುಂಕುಮವನ್ನೇ ಹಣೆಯ ಬೊಟ್ಟಾಗಿ ಬಳಕೆ ಮಾಡ್ತಾ ಇದ್ರು. ಹಾಗಾಗಿ ಅವರಿಗೆ ಅಲರ್ಜಿ ಮುಂದಾದ ಸಮಸ್ಯೆಗಳು ಆಗ್ತನೇ ಇರಲಿಲ್ಲ. ಬದಲಾಗಿ ಹಣೆಯ ಸಿಂಧೂರ ಅವ್ರ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತಾ ಇತ್ತು. ಆದ್ರೆ ಈಗ ಕಾಲ ಬದಲಾಗಿದೆ. ಕುಂಕುಮದ ಬೊಟ್ಟು ಇಡುವ ಮಹಿಳೆಯರು ಫ್ಯಾಷನ್ ಪ್ರಿಯರಾಗಿದ್ದಾರೆ. ಹಾಗಾಗಿ ಅವರ ಆಯ್ಕೆ ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಸ್ಟಿಕ್ಕರ್ ಗಳಾಗಿವೆ. ಈ ಸ್ಟಿಕ್ಕರ್ ಗಳು ಅವ್ರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟುಮಾಡುವ ಬದಲು ಕೆಟ್ಟ ಪರಿಣಾಮಗಳಿಗೆ ಕಾರಣವಾಗ್ತಾ ಇದೆ.

ಪ್ರಮುಖವಾಗಿ ಒಂದೇ ರೀತಿಯ ಸ್ಟಿಕ್ಕರ್ ನ್ನು ಪ್ರತಿದಿನ ಎರಡು ಹುಬ್ಬುಗಳ ನಡುವೆ ಒಂದೇ ಜಾಗದಲ್ಲಿ ಇಟ್ಟುಕೊಳ್ಳೋದ್ರಿಂದ ಬಿಳಿಯ ಮಾರ್ಕ್ ಆಗೋದು ಸರ್ವೇಸಾಮಾನ್ಯ, ಇಷ್ಟಕ್ಕೂ ಮೀರಿ ಕೆಲವರಿಗೆ ಅಲರ್ಜಿಯಾಗಿರೋದು ಇದೆ. ಆದ್ರೆ ಹೀಗೆ ಬಿಳಿಯ ಕಲೆಗಳು ಹುಬ್ಬುಗಳ ನಡುವೆ ಸ್ಟಿಕ್ಕರ್ ಇಡುವ ಜಾಗದಲ್ಲಿ ಆಗಿದ್ರೆ ಏನು ಮಾಡ್ಬೇಕು ಅನ್ನೋದಕ್ಕೆ ಕೆಲವು ಸಿಂಪಲ್ ಐಡಿಯಾಗಳು ಇಲ್ಲಿವೆ. ಮುಂದೆ ಓದಿ. ಮತ್ತೆ ಮರುಕಳಿಸಿದೆ ಬಿಂದಿ ಫ್ಯಾಷನ್

Tips to Get Rid Of bindi White Patches On Forehead

ಒಂದೇ ಆಕಾರದ ಸ್ಟಿಕ್ಕರ್ ನ್ನು ಬದಲಾಯಿಸಿ
ಅದೆಷ್ಟೋ ವರ್ಷಗಳಿಂದ ಒಂದೇ ಆಕಾರದ ಸ್ಟಿಕ್ಕರ್ ಇಡುವವರಲ್ಲಿ ಸರ್ವೇಸಾಮಾನ್ಯವಾಗಿ ಹುಬ್ಬುಗಳ ಮಧ್ಯಭಾಗ ಬಿಳಿಯಾಗಿರುತ್ತೆ. ಸ್ಟಿಕ್ಕರ್ ಇಡುವ ಜಾಗವಷ್ಟೇ ತನ್ನ ಬಣ್ಣ ಬದಲಾಯಿಸಿಕೊಂಡು ಬಿಳಿಯಾಗಿ ಮಾರ್ಪಾಡಾಗಿರುತ್ತೆ. ಹಾಗಾಗಿ ಮೊದಲು ನೀವು ಒಂದೇ ಆಕಾರದ ಸ್ಟಿಕ್ಕರ್ ಇಡುವ ಅಭ್ಯಾಸ ಬೆಳೆಸಿಕೊಳ್ಳದೇ ಇರೋದು ಸೂಕ್ತ. ನಿಮಗೆ ಹೊಂದಾಣಿಕೆಯಾಗುವ ಮೂರುನಾಲ್ಕು ಆಕಾರದ ಸ್ಟಿಕ್ಕರ್ ಆಯ್ಕೆ ಮಾಡ್ಕೊಂಡು ಒಂದೊಂದು ದಿನ ಒಂದೊಂದನ್ನು ಬಿಂದಿಯಾಗಿ ಇಟ್ಟುಕೊಳ್ಳುವ ರೂಢಿ ಬೆಳೆಸಿಕೊಳ್ಳಿ. ಹೀಗೆ ಮಾಡೋದ್ರಿಂದ ಬಿಳಿಯ ಕಲೆಗಳಾಗೋದನ್ನು ಅವಾಯ್ಡ್ ಮಾಡಬಹುದು.

ಒಂದೇ ಜಾಗದಲ್ಲಿ ಪ್ರತಿ ದಿನ ಸ್ಟಿಕ್ಕರ್ ಇಡಬೇಡಿ
ಹುಬ್ಬುಗಳ ನಡುವೆಯೇ ಸ್ಟಿಕ್ಕರ್ ಇಡೋದು ಅಭ್ಯಾಸ ನಿಜ. ಆದ್ರೂ ಪ್ರತಿ ದಿನ ಅರ್ಧಸೆಂಟೀಮೀಟರ್ ನಷ್ಟಾದ್ರೂ ನೀವು ಸ್ಟಿಕ್ಕರ್ ಇಡುವ ಜಾಗದ ಬದಲಾವಣೆ ಇರಲಿ. ಆಗ ಬಿಳಿಯ ಕಲೆಯಾಗುವ ಸಾಧ್ಯತೆ ಕಡಿಮೆ ಇರುತ್ತೆ.

ರಾತ್ರಿಯ ವೇಳೆ ಸ್ಟಿಕ್ಕರ್ ತೆಗೆದು ಮಲಗಿ
ರಾತ್ರಿ ಮಲಗುವಾಗ ಸ್ಟಿಕ್ಕರ್ ಇಟ್ಟುಕೊಳ್ಳದೇ ಕುಂಕುಮ ಹಚ್ಚಿಕೊಂಡು ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಒಮ್ಮೆ ಫೇಸ್ ವಾಶ್ ಮಾಡಿ. ಆಗ ಹುಬ್ಬುಗಳ ನಡುವೆ ಸ್ಟಿಕ್ಕರ್ ಇಟ್ಟ ಜಾಗವನ್ನು ಹೆಚ್ಚಿನ ಕಾಳಜಿ ತೆಗೆದುಕೊಂಡು ವಾಷ್ ಮಾಡೋದನ್ನು ಮರೀಬೇಡಿ. ಪ್ರತಿ ದಿನ ಹೀಗೆ ನೀವು ತೆಗೆದುಕೊಳ್ಳುವ ಮುತುವರ್ಜಿ ಹಣೆಯ ಮಧ್ಯೆ ಬಿಳಿಯ ಕಲೆಗಳಾಗುವುದನ್ನು ನಿಯಂತ್ರಿಸುತ್ತೆ. ಅದ್ರಲ್ಲೂ ಪ್ರಮುಖವಾಗಿ ಬಿಂದಿಯ ಅಂಟು ಹಣೆಯಲ್ಲಿ ಉಳಿದುಕೊಳ್ಳದಂತೆ ನೋಡಿಕೊಳ್ಳಿ.

ಆಗಾಗ ಎಣ್ಣೆ ಮಸಾಜ್ ಮಾಡಿಕೊಳ್ತಾ ಇರಿ
ಹಣೆಯ ಮಧ್ಯಭಾಗದಲ್ಲಿ ಸ್ಟಿಕ್ಕರ್ ನಿಂದಾಗುವ ಬಿಳಿಯ ಕಲೆಗಳ ನಿಯಂತ್ರಣಕ್ಕೆ ಆಗಾಗ ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್, ಇಲ್ಲವೇ ಹರಳೆಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳೋದು ಉತ್ತಮ. ಪ್ರತಿದಿನ ಒಂದೇ ಜಾಗದಲ್ಲಿ ಸ್ಟಿಕ್ಕರ್ ಇಡುವ ಅಭ್ಯಾಸ ನಿಮ್ಮದಾಗಿದ್ರೆ ಪ್ರತಿದಿನ ಸ್ನಾನಕ್ಕೂ ಮುನ್ನ ಮುಖಕ್ಕೆ ಆಯಿಲ್ ಮಸಾಜ್ ಮಾಡಿಕೊಳ್ಲಿ ಮತ್ತು ಸ್ಟಿಕ್ಕರ್ ಇಡುವ ಜಾಗವನ್ನು ಒಂದೆರಡು ಬಾರಿ ಹೆಚ್ಚೇ ಉಜ್ಜಿಕೊಳ್ಳಿ. ಇದ್ರಿಂದ ಬಿಳಿಯ ಕಲೆಗಳಾಗುವುದನ್ನು ತಪ್ಪಿಸಿಕೊಳ್ಳಬಹುದು. ನಿಮ್ಮ ಮುಖಕ್ಕೆ ಸೂಕ್ತವಾದ ಬಿಂದಿ ಯಾವುದು?

ಆಗಾಗ ಫೇಸ್ ಸ್ಕ್ರಬ್ ಮಾಡಿಕೊಳ್ಳಿ
ಯಾವುದೇ ನೈಸರ್ಗಿಕ ಸ್ಕ್ರಬ್ ಗಳು ಕೂಡ ನಿಮ್ಮ ಹಣೆಯಲ್ಲಿ ಸ್ಟಿಕ್ಕರ್ ನಿಂದಾಗುವ ಬಿಳಿಯ ಕಲೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿರುತ್ತೆ. ಅಟ್ ಲೀಸ್ಟ್ ವಾರಕ್ಕೊಮ್ಮೆಯಾದ್ರೂ ಕೂಡ ಫೇಸ್ ಸ್ಕ್ರಬ್ ಮಾಡ್ಕೊಳ್ಳಿ. ಕಾಫಿಪುಡಿ, ಟೀಪುಡಿ, ಚಕ್ಕೆಯ ಪುಡಿ, ಅಕ್ಕಿಹಿಟ್ಟು, ಮೊಸರು, ಕಡಲೆಹಿಟ್ಟು ಇತ್ಯಾದಿ ವಸ್ತುಗಳಿಂದ ತಯಾರಿಸಿದ ನೈಸರ್ಗಿಕ ಫೇಸ್ ಸ್ಕ್ರಬ್ ಗಳು ಈ ನಿಟ್ಟಿನಲ್ಲಿ ನಿಮಗೆ ನೆರವಾಗಲಿದೆ.

ಸ್ಟಿಕ್ಕರ್ ಬದಲು ಕುಂಕುಮ ಇಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ

ಸ್ಟೈಲ್ ಪ್ರಿಯರಿಗೆ ಇದು ಸ್ವಲ್ಪ ಕಷ್ಟದ ಅಭ್ಯಾಸವೇ. ಆದ್ರೂ ಇತ್ತೀಚೆಗೆ ಹಲವು ಕಂಪೆನಿಯ ನೈಸರ್ಗಿಕವಾಗಿ ತಯಾರಿಸಿರುವ ಕುಂಕುಮವೂ ಕೂಡ ಮಾರ್ಕೆಟ್ ನಲ್ಲಿ ಲಭ್ಯವಿದೆ. ಅವುಗಳನ್ನು ಕೂಡ ನೀವು ಟ್ರೈ ಮಾಡ್ಬಹುದು. ಕುಂಕುಮ ಹೆಚ್ಚು ಹೊತ್ತು ಹಣೆಯಲ್ಲಿ ಇರಬೇಕು ಅಂದ್ರೆ ಅದಕ್ಕಾಗಿ ಸಿಗುವ ಉತ್ತಮ ಅಂಟುಗಳನ್ನು ಬಳಕೆ ಮಾಡ್ಬಹುದು. ಆದ್ರೆ ಇದೂ ಕೂಡ ನಿಮ್ಮ ಚರ್ಮಕ್ಕೆ ಯಾವುದೇ ಹಾನಿ ಮಾಡೋದಿಲ್ಲ ಅನ್ನೋದನ್ನು ಖಾತ್ರಿ ಪಡಿಸಿಕೊಳ್ಳಿ.

ಒಂದೇ ಸ್ಟಿಕ್ಕರ್ ಅನ್ನು ಮೂರು ನಾಲ್ಕು ದಿನ ಇಡಬೇಡಿ
ಹೆಚ್ಚಿನ ಮಹಿಳೆಯರದ್ದೊಂದು ಖಯಾಲಿ ಇದು. ಒಂದು ಪ್ಯಾಕೆಟ್ ಸ್ಟಿಕ್ಕರ್ ಕೊಂಡುಕೊಂಡ್ರೆ ಅದನ್ನು ಹೆಚ್ಚುಕಡಿಮೆ ಒಂದು ತಿಂಗಳವರೆಗೂ ಅಥವಾ ಅದಕ್ಕಿಂತಲೂ ಹೆಚ್ಚು ದಿನ ಇಟ್ಟುಕೊಳ್ತಾರೆ. ಒಂದೇ ಸೈಜಿನ ಸ್ಟಿಕ್ಕರ್ ಇಟ್ಟುಕೊಳ್ಳೋದು ಅಲ್ಲದೇ ಒಂದೇ ಸ್ಟಿಕ್ಕರ್ ಅವರ ಹಣೆಯಲ್ಲಿ ಮೂರರಿಂದ ನಾಲ್ಕು ದಿನಗಳವರೆಗೂ ಇರುತ್ತೆ. ಅದೂ ಸ್ನಾನಕ್ಕೆ ಹೋದಾಗಲೂ ಕೂಡ ತೆಗೆಯುವುದಿಲ್ಲ. ಕೆಲವು ಕಂಪೆನಿಯ ಸ್ಟಿಕ್ಕರ್ ಗಳ ಅಂಟು ಕೂಡ ಅಷ್ಟು ದಿನ ಹಣೆಯಲ್ಲಿ ಇರುವಂತೆಯೇ ತಯಾರು ಮಾಡಿರ್ತಾರೆ.


ಇಂತಹ ಸಂದರ್ಭದಲ್ಲಿ ಬಿಳಿಯ ಕಲೆಗಳಾಗೋದು ಸಾಮಾನ್ಯ, ಅಷ್ಟೇ ಅಲ್ಲ ಇನ್ನು ಕೆಲವು ಮಹಿಳೆಯರು ಮಾಡುವ ಮಹಾಪರಾಧವೇನೆಂದರೆ ಸ್ಟಿಕ್ಕರ್ ನ ಗಮ್ ಹಾಳಾಗಿ ಇನ್ನೇನು ಸ್ಟಿಕ್ಕರ್ ಉದುರಿ ಬೀಳುತ್ತೆ ಅನ್ನುವ ಸಂದರ್ಭದಲ್ಲಿ ಅದಕ್ಕೆಂದೇ ಇರುವ ಸ್ಟಿಕ್ಕರ್ ಅಂಟುಗಳನ್ನು ಪದೇ ಪದೇ ಒಂದೇ ಸ್ಟಿಕ್ಕರ್ ಗೆ ಹಾಕಿ ಮರುಬಳಕೆ ಮಾಡ್ತಾರೆ. ಇಂತವರಲ್ಲೂ ಕೂಡ ಹಣೆಯಲ್ಲಿ ಬಿಂದಿಯಿಂದ ಕಲೆಯಾಗೋದು ಮಾಮೂಲು. ಹಾಗಾಗಿ ಆದಷ್ಟು ಒಂದೇ ಸ್ಟಿಕ್ಕರ್ ನ್ನು ಪದೇ ಪದೇ ಉಪಯೋಗಿಸಬೇಡಿ. ಬದಲಾಗಿ ಒಂದು ದಿನ ಉಪಯೋಗಿಸಿ ಮರುದಿನ ಬೇರೆ ಸ್ಟೈಲಿನ ಇಲ್ಲವೇ ಬೇರೆ ಆಕಾರದ ಸ್ಟಿಕ್ಕರ್ ಬಳಕೆ ಮಾಡಿ..ಹಣದ ಉಳಿತಾಯ ಮಾಡೋಕೆ ಹೋಗಿ ಸೌಂದರ್ಯವನ್ನು ಹಾಳು ಮಾಡಿಕೊಳ್ಳಬೇಡಿ.
English summary

Tips to Get Rid Of bindi White Patches On Forehead

Bindi- the red dot on an Indian woman's forehead is a symbol of ... Delay can cause skin infection and ugly patches on the forehead.Wash your forehead clean every time to remove all traces of the white adhesive, here are the few tips to remove Get Rid Of sticker White dot On Forehead
X
Desktop Bottom Promotion