For Quick Alerts
ALLOW NOTIFICATIONS  
For Daily Alerts

ಅಕ್ಕಿ ತೊಳೆದ ನೀರಿನ ಆಶ್ಚರ್ಯಕರ ಸಂಗತಿ

By Su.Ra
|

ಚೀನಾದಲ್ಲಿ ಒಂದು ಹಳ್ಳಿಯಿದೆ. ಹೆಸರು ಹಾಂಗ್ ಗ್ಲೂ (Huang luo) ಅಂತ. ಈ ಹಳ್ಳಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದೆ. ಯಾಕೆ ಅಂತ ಕೇಳ್ತಾ ಇದ್ದೀರಾ? ಹೇಳ್ತೀವಿ ಕೇಳಿ. ಈ ಹಳ್ಳಿಯಲ್ಲಿರುವ ಎಲ್ಲಾ ಮಹಿಳೆಯರ ಕೂದಲು 6 ಫೀಟ್ ನಷ್ಟು ಉದ್ದವಿದ್ಯಂತೆ. ಅಷ್ಟೇ ಅಲ್ಲ ಇದಕ್ಕಿಂತ ಆಶ್ಚರ್ಯ ಅನ್ನಿಸುವ ವಿಚಾರ ಏನು ಅಂದ್ರೆ ಅವ್ರಿಗೆ 80 ವರ್ಷ ವಯಸ್ಸಾಗುವವರೆಗೂ ಅವ್ರ ಕೂದಲು ಬಿಳಿಯಾಗುವುದೇ ಇಲ್ಲವಂತೆ. ನಂತ್ರ ಅಲ್ಲಿ ಇಲ್ಲಿ ಸ್ವಲ್ಪ ಹಣ್ಣು ಕೂದಲು ಕಾಣಿಸುವುದಿದ್ಯಂತೆ. ಅಷ್ಟಕ್ಕೂ ಅವರ ಕೂದಲು ಇಷ್ಟು ಆರೋಗ್ಯಪೂರ್ಣವಾಗಿ ಇರಲು ಕಾರಣ ಏನು ಅನ್ನೋದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರ ಅಕ್ಕಿ ತೊಳೆದ ನೀರು..!

ಅಕ್ಕಿ ತೊಳೆದ ನೀರಿನಿಂದ ನಿಮ್ಮ ಕೂದಲು ಮತ್ತು ಚರ್ಮಕ್ಕೆ ಆಶ್ಚರ್ಯಕರವಾದ ಲಾಭಗಳಾಗಲಿವೆ. ಇತ್ತೀಚೆಗೆ ನಡೆದ ಹಲವು ಸಂಶೋಧನೆಗಳಿಂದ ತಿಳಿದುಬಂದಿರುವುದೇನೆಂದರೆ ಕೂದಲಿನ ಸ್ಥಿತಿಸ್ಥಾಪಕತ್ವ ಗುಣವನ್ನು ಕಾಪಾಡಲು ಅಕ್ಕಿ ತೊಳೆದ ನೀರು ಸಹಾಯ ಮಾಡಲಿದೆ. ಡ್ಯಾಮೇಜ್ ಆಗಿರುವ ಕೂದಲನ್ನು ಅಕ್ಕಿ ತೊಳೆದ ನೀರಿನಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಇನೋಸಿಟಾಲ್ ಅಂಶಗಳು ಸರಿಪಡಿಸುವಲ್ಲಿ ನೆರವಾಗುತ್ತೆ.ಅಷ್ಟೇ ಅಲ್ಲ ಕೂದಲು ತೊಳೆದ ನಂತರವೂ ಕೂಡ ಈ ಅಂಶಗಳು ಕೂದಲಿನ ರಕ್ಷಣೆಯಲ್ಲಿ ನಿರತವಾಗಿರುತ್ತವಂತೆ.

beauty tips in kannada

ಹಾಗಾಗಿ, ಅಕ್ಕಿ ತೊಳೆದ ನೀರಿನಲ್ಲಿ ಕೂದಲು ತೊಳೆಯುವುದರಿಂದಾಗಿ ಭವಿಷ್ಯದಲ್ಲಾಗುವ ಕೂದಲುದುರುವಿಕೆಯನ್ನು ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಅಕ್ಕಿ ತೊಳೆದ ನೀರಿನಲ್ಲಿರುವ ಅಮೈನೋ ಆಸಿಡ್ ಅಂಶಗಳುನ ಕೂದಲಿನ ಬೇರನ್ನು ಗಟ್ಟಿಗೊಳಿಸುತ್ತೆ ಮತ್ತು ಕೂದಲು ದಪ್ಪವಾಗಿ, ಸಿಲ್ಕಿಯಾಗಿ ಬೆಳೆಯಲು ನೆರವಾಗುತ್ತೆ.ಕೇವಲ ಕೂದಲಿಗೆ ಮಾತ್ರವಲ್ಲ, ಚರ್ಮಕ್ಕೂ ಕೂಡ ಅಕ್ಕಿ ತೊಳೆದ ನೀರಿನಿಂದ ಹಲವು ಲಾಭಗಳಿವೆ. ಚರ್ಮವನ್ನು ತಂಪುಗೊಳಿಸುವ ಮತ್ತು ಮೃದುಗೊಳಿಸುವ ಸಾಮರ್ಥ್ಯ ಅಕ್ಕಿ ತೊಳೆದ ನೀರಿಗಿದೆ. ಸುಟ್ಟ ಗಾಯಗಳ ಆಯುರ್ವೇದಿಕ್ ಆಯಿಂಟ್ ಮೆಂಟ್ ಗಳ ತಯಾರಿಕೆಯಲ್ಲಿ ಅಕ್ಕಿ ತೊಳೆದ ನೀರನ್ನು ಬಳಸಲಾಗುತ್ತೆ. ಅಕ್ಕಿ ತೊಳೆದ ನೀರಿಗೆ ಮಾಯ್ಚರೈಸರ್, ಆಂಟಿ ಆಕ್ಸಿಡೆಂಟ್ ಮತ್ತು ಗಾಯ ಗುಣಗೊಳಿಸುವ ಶಕ್ತಿ ಇದೆ. ರಕ್ತಸಂಚಾರ ಅಧಿಕಗೊಳಿಸಿ, ವಯಸ್ಸಾದಂತೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ನಿವಾರಿಸಿ ಯಂಗ್ ಆಗಿ ಇರುವಂತೆ ನೋಡಿಕೊಳ್ಳುತ್ತೆ.

ಹುಳಿ ಬಂದ ಅಕ್ಕಿ ತೊಳೆದ ನೀರು-ಅಕ್ಕಿ ತೊಳೆದ ನೀರನ್ನು ಒಂದು ದಿನ ಹಾಗೆಯೇ ಇಟ್ರೆ ಸ್ವಲ್ಪ ಹುಳಿ ಬಂದಂತಾಗುತ್ತೆ. ಇದೂ ಕೂಡ ನಿಮ್ಮ ಸೌಂದರ್ಯವರ್ಧಕ.ಇದ್ರಲ್ಲಿ ಆಂಟಿ ಆಕ್ಸಿಡೆಂಟ್, ಮಿನರಲ್ಸ್ ಮತ್ತು ವಿಟಮಿನ್ ಬಿ ಮತ್ತು ಇ ಅಂಶಗಳು ಇರುತ್ತೆ. ಫೇಸ್ ಕ್ಲೆನ್ಸರ್ ಆಗಿ ನೀವಿದನ್ನು ಬಳಕೆ ಮಾಡ್ಬಹುದು. ಕೂದಲು ತೊಳೆಯಲು ಮತ್ತು ಸ್ಕಿನ್ ಟೋನರ್ ಆಗಿ ಕೂಡ ಇದನ್ನು ಬಳಸ್ಬಹುದು.. ಕೂದಲಿನ ಆರೈಕೆಯಲ್ಲಿ ಅಕ್ಕಿ ತೊಳೆದ ನೀರಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತೆ ಹುಳಿ ಬಂದ ಅಕ್ಕಿ ತೊಳೆದ ನೀರು.ಕೂದಲಿನ ಪಿಹೆಚ್ ಲೆವೆಲ್ ಬ್ಯಾಲೆನ್ಸ್ ಆಗಿಡಲು ಇದು ನೆರವಾಗುತ್ತೆ.

*ಅಕ್ಕಿ ತೊಳೆದ ನೀರು ಅಂದ್ರೆ ಈಗಾಗಲೇ ಎಲ್ಲರಿಗೂ ಗೊತ್ತಾಗಿರುತ್ತೆ. ಅದನ್ನು ಹೇಗೆ ತಯಾರಿಸೋದು ಅಂತ ಪ್ರತ್ಯೇಕವಾಗಿ ಯಾರಿಗೂ ಹೇಳಬೇಕಾಗಿಲ್ಲ. ಪ್ರತಿ ದಿನ ಅನ್ನ ಮಾಡುವಾಗ ಅಕ್ಕಿ ತೊಳೆದೇ ತೊಳಿತೀವಿ, ಆದ್ರೆ ಆ ನೀರನ್ನು ಸುಮ್ಮನೆ ಎಸೆದು ಬಿಡ್ತೀವಿ. ಬಟ್ ಇನ್ಮುಂದೆ ಹಾಗೆ ಮಾಡದೇ ಶೇಖರಿಸಿ ಇಟ್ಟುಕೊಂಡು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಿ.

*ನೀವು ಕೂದಲು ವಾಷ್ ಮಾಡುವ ಎಲ್ಲಾ ದಿನವೂ ಈ ರೀತಿ ಅಕ್ಕಿ ತೊಳೆದ ನೀರನ್ನು ಬಳಕೆ ಮಾಡಿಕೊಳ್ಳೋದು ಉತ್ತಮ. ವಾರದಲ್ಲಿ ಅಟ್ ಲೀಸ್ಟ್ ಎರಡರಿಂದ ಮೂರು ಬಾರಿ ಹೇಗಿದ್ರೂ ಕೂದಲು ವಾಷ್ ಮಾಡೇ ಮಾಡ್ತೀರ. ಆ ಸಂದರ್ಭದಲ್ಲಿ ಅಕ್ಕಿ ತೊಳೆದ ನೀರನ್ನು ಶೇಖರಿಸಿ ಇಟ್ಟುಕೊಳ್ಳೋದನ್ನು ಮರೀಬೇಡಿ.

*ಇನ್ನು ಅಕ್ಕಿ ತೊಳೆದ ನೀರನ್ನು ಈಗಾಗಲೇ ಹೇಳಿದಂತೆ ಬಾಡಿ ಕ್ಲೆನ್ಸರ್ ಆಗಿ ಕೂಡ ಬಳಕೆ ಮಾಡ್ಬಹುದು. ಅದಕ್ಕಾಗಿ ಸ್ವಲ್ಪ ಲಿಂಬೆಯ ರಸ, ಲ್ಯಾವೆಂಡರ್ ಮಿಕ್ಸ್ ಮಾಡಿರುವ ಎಸೆನ್ಶಿಯಲ್ ಆಯಿಲ್ ಮಿಕ್ಸ ಮಾಡಿ ಮುಖ ಮತ್ತು ದೇಹವನ್ನು ವಾಷ್ ಮಾಡಿಕೊಳ್ಳಬಹುದು. ಚರ್ಮದಲ್ಲಿರುವ ರಂಧ್ರಗಳಿಗೆ ಅಕ್ಕಿ ತೊಳೆದ ನೀರು ಒಂದು ಅಧ್ಬುತ ಮೆಡಿಸಿನ್ ಅಂತಲೇ ಹೇಳ್ಬಹುದು. ನೈಸರ್ಗಿಕವಾಗಿ ತಯಾರಿಸುವ ಯಾವುದೇ ಫೇಸ್ ಸ್ಕ್ರಬ್, ಫೇಸ್ ಮಾಸ್ಕ್ ತಯಾರಿಸುವಾಗ ಕೇವಲ ನೀರು ಬಳಸುವ ಬದಲು ಅಕ್ಕಿ ತೊಳೆದ ನೀರನ್ನು ಬಳಸಿ ಪೇಸ್ಟ್ ತಯಾರಿಸಿಕೊಳ್ಳಬಹುದು.

*ಇದು ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾದ ಸುಲಭ ವಿಧಾನ ಇದು. ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿ ದಳಗಳು, ಬೇವಿನ ಎಲೆ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ. ಟ್ರೈ ಮಾಡಿ ನೋಡಿ.

English summary

Rice Water For Gorgeous Hair And Flawless Skin

In some parts of the world ‘to eat’ literally means ‘to eat rice’. One of the most important food grain, rice is a staple food for almost half of the world’s population, supplying as much as half of the daily calories. But, rice is also an important beautifying ingredient. For centuries, Asian women have used rice water to beautify their face, body and hair.
X
Desktop Bottom Promotion