For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿ ಹೆಚ್ಚಬೇಕೇ? ಅಕ್ಕಿನೆನೆಸಿದ ನೀರನ್ನು ಬಳಸಿ

By Arshad
|

ನಮ್ಮ ದೇಹದ ಚರ್ಮದಲ್ಲಿ ಅತಿ ಸೂಕ್ಷ್ಮವಾದ ಭಾಗವೆಂದರೆ ಮುಖದ ಚರ್ಮ. ಅದರಲ್ಲೂ ಕಣ್ಣುಗಳ ಕೆಳಗಿನ ಚರ್ಮ ತೆಳುವಾಗಿದ್ದು ಪೋಷಕಾಂಶಗಳ ಕೊರತೆ ಅಥವಾ ಬೇರಾವುದೋ ಕಾರಣಕ್ಕೆ ಅತಿ ಬೇಗನೇ ಕಪ್ಪಗಾಗುತ್ತದೆ.

ಸೂಕ್ತ ಆರೈಕೆಯಿಲ್ಲದಿದ್ದರೆ ಮುಖದ ಚರ್ಮ ದೇಹದ ಇತರ ಭಾಗಗಳಿಗಿಂತ ಬೇಗನೇ ಕಳೆಗುಂದುತ್ತವೆ ಮತ್ತು ನೆರಿಗೆಗಳಿಂದ ಮುಪ್ಪು ಬೇಗನೇ ಆವರಿಸುತ್ತದೆ. ಹಲವು ತಾರೆಯರು ವಯಸ್ಸಾಗಿದ್ದರೂ ನವತಾರುಣ್ಯ ಹೊಂದಿರುವ ಗುಟ್ಟನ್ನು ಬಲ್ಲಿರಾ? ಅವರು ಕೃತಕ ರಾಸಾಯನಿಕಗಳಿಗೆ ವಿದಾಯ ಹೇಳಿ ಅಪ್ಪಟ ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುತ್ತಾರೆ.

ಅದರಲ್ಲಿ ಫಲಪ್ರದವಾದ ವಿಧಾನವೆಂದರೆ ಅಕ್ಕಿನೆನೆಸಿದ ನೀರಿನಿಂದ ಮುಖ ತೊಳೆದುಕೊಳ್ಳುವುದು. ವಾರಕ್ಕೊಮ್ಮೆ ಉಪಯೋಗಿಸಿದಾಗ ಇದರಿಂದ ಲಭ್ಯವಾಗುವ ಆರೈಕೆಗಳ ಬಗ್ಗೆ ನಿಮಗೆ ಅರಿವಿದೆಯೇ?

How To Wash Your Face With Rice Water

ಹೌದು, ಅಕ್ಕಿನೆನೆಸಿದ ತಣ್ಣೀರಿನಿಂದ ಕನಿಷ್ಟ ವಾರಕ್ಕೊಮ್ಮೆ ತೊಳೆದುಕೊಂಡಾಗ ಚರ್ಮ ಸಹಜ ಕಳೆ, ಕಾಂತಿ ಮತ್ತು ಸೆಳೆತವನ್ನು ಪಡೆಯುತ್ತದೆ. ನಿಮ್ಮ ಚರ್ಮ ಯಾವ ಬಗೆಯದ್ದಾದರೂ ಸರಿ, ಅಕ್ಕಿನೀರು ಎಲ್ಲಾ ವಿಧದ ಚರ್ಮಗಳಿಗೆ ಉತ್ತಮವಾಗಿದೆ. ಅಷ್ಟಕ್ಕೂ ಇದನ್ನು ಅನುಸರಿಸಲು ಯಾರ ಹಂಗೂ ಬೇಕಾಗಿಲ್ಲ, ಇದಕ್ಕಾಗಿ ನಿಮ್ಮ ಸಮಯವನ್ನು ಹಾಳುಮಾಡಬೇಕಾಗಿಲ್ಲ. ಅಕ್ಕಿ ತೊಳೆದು ಅರ್ಧಗಂಟೆ ನೆನೆಸಿ ಬಳಿಕ ತೊಳೆದುಕೊಂಡರಾಯಿತು ಅಷ್ಟೇ.

ಅಕ್ಕಿಯಲ್ಲಿ ಹೇರಳವಾಗಿರುವ ವಿವಿಧ ಖನಿಜಗಳು, ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ಲಭಿಸುವುದರಿಂದ ಚರ್ಮ ತನ್ನ ಸಹಜ ಕಾಂತಿಯನ್ನು ಪಡೆಯುವುದರ ಜೊತೆಗೇ ಕೊಂಚಮಟ್ಟಿನ ಗೌರವರ್ಣವನ್ನೂ ಪಡೆಯುತ್ತದೆ. ಬನ್ನಿ ಇದನ್ನು ಉಪಯೋಗಿಸುವ ಬಗೆ ಹೇಗೆ ಎಂಬುದನ್ನು ಓದಿ ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದಾಗುವ ಪ್ರಯೋಜನಗಳೇನು?

ಪ್ರಥಮ ಹಂತ

ಒಂದು ಕಪ್ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಅಕ್ಕಿಯ ಮೇಲಿದ್ದ ಧೂಳು ಮತ್ತು ಇತರ ಕೊಳೆಗಳನ್ನು ನಿವಾರಿಸಿ. ಈ ನೀರನ್ನು ಬಸಿದು ಅಕ್ಕಿಯನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ. ಒಂದು ವೇಳೆ ಅಕ್ಕಿಯಿಂದ ಪೂರ್ಣವಾಗಿ ಧೂಳು ಹೋಗಿಲ್ಲವೆಂದು ಅನುಮಾನವಾದರೆ ಇನ್ನೊಮ್ಮೆ ತೊಳೆಯಿರಿ, ಆದರೆ ಹೆಚ್ಚು ತೊಳೆಯುವುದರಿಂದ ಅಕ್ಕಿಯ ಪೋಷಕಾಂಶಗಳೂ ನಷ್ಟವಾಗುತ್ತವೆ.

ಎರಡನೆಯ ಹಂತ

ಈ ಪಾತ್ರೆಯಲ್ಲಿ ಅಕ್ಕಿ ಪೂರ್ಣವಾಗಿ ಮುಳುಗಿ ಕೊಂಚ ಮೇಲೆ ಬರುವಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಹಾಕಿ. ಬಳಿಕ ನಯವಾಗಿ ಅಕ್ಕಿಯನ್ನು ಮಿಶ್ರಣ ಮಾಡಿ. ಪಾತ್ರೆಯನ್ನು ಮುಚ್ಚಿ ಸುಮಾರು ಅರ್ಧ ಗಂಟೆ ಕಾಲ ಹಾಗೇ ಇಡಿ. ಬಳಿಕ ನಿಮ್ಮ ಬೇರೆ ಕೆಲಸಗಳನ್ನು ನಿರ್ವಹಿಸಿ. ಈ ಅರ್ಧಘಂಟೆಯಲ್ಲಿ ಅಕ್ಕಿಯ ಕರಗುವ ಪೋಷಕಾಂಶಗಳು ನೀರಿಗೆ ಬಂದಿರುತ್ತವೆ.

ಮೂರನೆಯ ಹಂತ

ಈಗ ಅಕ್ಕಿಯನ್ನು ಸೋಸಿ ಬೇರೆ ಪಾತ್ರೆಯಲ್ಲಿ ನೀರು ಸಂಗ್ರಹಿಸಿ. ಮೊದಲು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಂಡು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಬಳಿಕ ಅಕ್ಕಿನೆನೆಸಿದ ನೀರನ್ನು ಮುಖದ ಮೇಲೆ ಚಿಮುಕಿಸಿಕೊಳ್ಳಿ. ನೀರು ಮುಖದ ಮೇಲೆ ಇರುವಂತೆಯೇ ಬೆರಳುಗಳಿಂದ ನಯವಾಗಿ ಮಸಾಜ್ ಮಾಡಿಕೊಳ್ಳಿ. ಸುಮಾರು ಆರು ನಿಮಿಷಗಳ ವರೆಗೆ ಅಕ್ಕಿನೀರನ್ನು ಚಿಮುಕಿಸಿಕೊಳ್ಳುತ್ತಾ ಮಸಾಜ್ ಮುಂದುವರೆಸಿ. ಗಿಡಗಳಿಗೆ ನೀರು ಸ್ಪ್ರೇ ಮಾಡುವ ಸ್ಪ್ರೇಯರ್ ಬಳಸಿದರೆ ಚಿಮುಕಿಸುವುದು ಸುಲಭ ಹಾಗೂ ನಷ್ಟವಾಗುವುದನ್ನೂ ತಡೆಯಬಹುದು. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ನಾಲ್ಕನೆಯ ಹಂತ
ಬಳಿಕ ತಣ್ಣನೆಯ ನೀರಿನಿಂದ ಮುಖಕ್ಕೆ ಚಿಮುಕಿಸಿಕೊಂಡು ಅಕ್ಕಿನೀರನ್ನು ನಿವಾರಿಸಿ. ಒಣ ಟವೆಲ್ಲಿನಿಂದ ಮುಖವನ್ನು ಒತ್ತಿ ಒರೆಸಿಕೊಳ್ಳಿ, ಉಜ್ಜಲು ಹೋಗಬೇಡಿ. ಕೊಂಚ ಕಾಲ ಚರ್ಮ ಒಣಗಲು ಬಿಡಿ. ಸರ್ವಥಾ ಸೋಪು ಉಪಯೋಗಿಸಬೇಡಿ.

ಐದನೆಯ ಹಂತ
ಕೆಲವರು ಈ ನೀರಿನಿಂದ ಕೂದಲನ್ನೂ ತೊಳೆದುಕೊಳ್ಳುತ್ತಾರೆ. ಇದಕ್ಕಾಗಿ ಅಕ್ಕಿನೀರನ್ನು ತಲೆಗೂದಲ ಬುಡಕ್ಕೆ ತಾಗುವಂತೆ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ಉತ್ತಮ ಪೋಷಣೆ ಪಡೆದು ದಟ್ಟ ಹಾಗೂ ಹೊಳಪುಳ್ಳದ್ದಾಗುತ್ತದೆ. ಒಂದು ವೇಳೆ ನಿಮ್ಮ ತಲೆಗೂದಲ ಬುಡದ ಚರ್ಮ ಸೂಕ್ಷ್ಮಸಂವೇದಿಯಾಗಿದ್ದರೆ ನಿಮ್ಮ ವೈದ್ಯರನ್ನು ಅಥವಾ ಚರ್ಮತಜ್ಞರನ್ನು ಭೇಟಿಯಾಗಿ ಅಕ್ಕಿನೀರನ್ನು ಬಳಸುವ ಬಗ್ಗೆ ಸಲಹೆ ಪಡೆಯಿರಿ. ತ್ವರಿತವಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕೇ?

ಅಕ್ಕಿಯ ಆಯ್ಕೆ ಹೇಗೆ?
ಎಲ್ಲಾ ರೀತಿಯ ಅಕ್ಕಿಗಳು ನೆನೆಸಿಟ್ಟಲ್ಲಿ ತಮ್ಮ ಪೋಷಕಾಂಶಗಳನ್ನು ಬಿಟ್ಟುಕೊಡುವುದಿಲ್ಲ. ಆದ್ದರಿಂದ ಅಕ್ಕಿ ನೆನೆಸಿದ ಬಳಿಕ ಅರ್ಧಗಂಟೆಯಲ್ಲಿ ನೀರು ಸಾಕಷ್ಟು ಬೆಳ್ಳಗಾಗುವ ಅಕ್ಕಿಯನ್ನೇ ಬಳಸಿ. ಸ್ಟೀಮ್ ಮಾಡಿದ ಅಕ್ಕಿ ತರವಲ್ಲ. ಏಕೆಂದರೆ ಉಗಿನೀಡುವ ಭರದಲ್ಲಿ ಅಕ್ಕಿಯ ಹೊರಭಾಗ ಗಟ್ಟಿಯಾಗಿದ್ದು ಒಳಗಿನ ಪೋಷಕಾಂಶಗಳನ್ನು ನೆನೆಸುವ ಮೂಲಕ ಪೂರ್ಣವಾಗಿ ಪಡೆಯಲು ಸಾಧ್ಯವಿಲ್ಲ. ಕುಚ್ಚಿಗೆ ಅಕ್ಕಿಯೂ ತರವಲ್ಲ.
ಆದ್ದರಿಂದ ಮಲೆನಾಡಿನಲ್ಲಿ ಸಾಮಾನ್ಯವಾಗಿ ಬೆಳೆಸುವ ಅಕ್ಕಿಗಳಾದ ಸೋನಾ ಮಸೂರಿ, ವಾಳ್ಯ, ಸಣ್ಣವಾಳ್ಯ ಜೀರಿಗೆಸಾಲೆ ಅಕ್ಕಿ, ಗಂಧಸಾಲೆ, ದೊಡ್ಡ ವಾಳ್ಯ, ರಾಜಭೋಗ, ಅರ್ಧ ಪಾಲಿಶ್ ಮಾಡಿದ ಕೆಂಪಕ್ಕಿ ಮೊದಲಾದ ಅಕ್ಕಿಗಳು ಇದಕ್ಕೆ ಸೂಕ್ತವಾಗಿವೆ. ಈ ಅಕ್ಕಿಗಳ ನುಚ್ಚನ್ನೂ ಬಳಸಬಹುದು.

English summary

How To Wash Your Face With Rice Water

Rice can also be used for skin care. Do you know the beauty secret of some of the super models who believe in natural remedies? Well, they wash their facial skin with rice water for at least once a week. Are you aware of the benefits of washing face with rice water? This process, lightens your skin and also prevents certain skin issues. Irrespective of your skin type, you can try it out.
X
Desktop Bottom Promotion