For Quick Alerts
ALLOW NOTIFICATIONS  
For Daily Alerts

ತ್ವಚೆಯ ಸೌಂದರ್ಯವನ್ನು ಇಮ್ಮಡಿಸುವ ಮನೆಮದ್ದು

By Arshad
|

ಆರೋಗ್ಯ ಮತ್ತು ಸೌಂದರ್ಯದ ಕಾಳಜಿವುಳ್ಳವರಿಗೆ ಮುಖಲೇಪನದ (ಫೇಸ್ ಪ್ಯಾಕ್) ಮಹತ್ವ ತಿಳಿದಿರುತ್ತದೆ. ಅಂತೆಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪಾರ ವಿಧಗಳಲ್ಲಿ ಉತ್ತಮವಾದವು ಯಾವುದೆಂದೂ ಗೊತ್ತಿದೆ. ಆದರೆ ಹೆಚ್ಚಿನವು ಬಲು ದುಬಾರಿಯಾಗಿರುತ್ತವೆ. ಇವುಗಳ ಬೆಲೆ ಕಂಡರೆ ಮಧ್ಯಮವರ್ಗದವರು ಕೊಳ್ಳಲು ಹಿಂದೇಟು ಹಾಕುತ್ತಾರೆ.

ವಾಸ್ತವವಾಗಿ ಇದರಲ್ಲಿ ಅಡಕವಾಗಿರುವ ಸಾಮಾಗ್ರಿಗಳ ಪಟ್ಟಿಯನ್ನು ಗಮನಿಸಿದರೆ ಇವೆಲ್ಲವೂ ನಮ್ಮ ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳಿಂದಲೇ ತುಂಬಿವೆ. ಆದರೆ ಯಾವ ಅಂಶ ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಮಿಶ್ರಣ ಮಾಡಲಾಗಿದೆ ಎಂಬುದೇ ಇದರ ರಹಸ್ಯ ಮತ್ತು ದುಬಾರಿ ಬೆಲೆಯ ಜೀವಾಳ. ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ

ಇಂದು ಈ ಕೊರತೆಯನ್ನು ಬೋಲ್ಡ್ ಸ್ಕೈ ತಂಡ ನಿವಾರಿಸಲಿದೆ. ಏಕೆಂದರೆ ಕೆಳಗಿನ ಸ್ಲೈಡ್ ಶೋ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಮುಖಲೇಪಗಳಿಗಿಂತಲೂ ಉತ್ತಮವಾದ, ಅದಕ್ಕಿಂತಲೂ ಎಷ್ಟೂ ಪಾಲು ಅಗ್ಗವಾಗಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಮುಖಲೇಪವನ್ನು ಸುಲಭವಾಗಿ ತಯಾರಿಸಲು ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಇದನ್ನು ಬಳಸಿದ ಬಳಿಕವೇ ಇದರ ಪರಿಣಾಮವನ್ನು ಮನಗಾಣಿರಿ ಮತ್ತು ನಮಗೆ ಖಂಡಿತಾ ತಿಳಿಸಿ.

ಅರಿಶಿನದ ಮುಖಲೇಪ

ಅರಿಶಿನದ ಮುಖಲೇಪ

ಅರಿಶಿನದ ಮುಖಲೇಪಕ್ಕಾಗಿ ಒಂದು ಚಿಕ್ಕ ಬಟ್ಟಲಿನಲ್ಲಿ ಕೊಂಚ ಮೊಸರು ತೆಗೆದುಕೊಂಡು ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಈಗತಾನೇ ತೊಳೆದ ಮುಖವನ್ನು ತುಟಿಗಳನ್ನು ಬಿಟ್ಟು ಪೂರ್ಣವಾಗಿ ಆವರಿಸುವಂತೆ ಕೆಳಗಿನಿಂದ ಮೇಲಕ್ಕೆ ನೇವರಿಸುತ್ತಾ ಹಚ್ಚಿ. ಕಣ್ಣು ಮುಚ್ಚಿ ಕಣ್ಣುರೆಪ್ಪೆಗಳ ಹಿಂಭಾಗಕ್ಕೂ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಈ ಅವಧಿಯನ್ನು ತಲೆದಿಂಬು ಇಲ್ಲದೇ ಮಲಗಿದ್ದ ಸ್ಥಿತಿಯಲ್ಲಿ ಕಳೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನದ ಮುಖಲೇಪ

ಅರಿಶಿನದ ಮುಖಲೇಪ

ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇನ್ನಾವುದೇ ಮಾರ್ಜಕವನ್ನು ಉಪಯೋಗಿಸದಿರಿ. ಇದು ನಿಮ್ಮ ಚರ್ಮಕ್ಕೆ ಕಾಂತಿಯ ಜೊತೆಗೇ ಸಹಜವರ್ಣವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ವಿಧಾನ ಒಣಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ.

ಅರಿಶಿನ-ಚಂದನದ ಮುಖಲೇಪ

ಅರಿಶಿನ-ಚಂದನದ ಮುಖಲೇಪ

ಒಂದು ವೇಳೆ ನಿಮ್ಮ ಚರ್ಮದಲ್ಲಿ ಎಣ್ಣೆಯಂಶ ಕೊಂಚ ಹೆಚ್ಚಾಗಿದ್ದರೆ ಅರಿಶಿನದೊಂದಿಗೆ ಚಂದನದ ಪುಡಿ ಅಥವಾ ತೇದಿದ ದ್ರವವನ್ನು ಸೇರಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದಕ್ಕಾಗಿ ಅರಿಶಿನದ ಒಣ ಕೊಂಬು, ಚಂದನದ ಕೊರಡನ್ನು ಕಲ್ಲಿನ ಮೇಲೆ ತೇದಿ ಸಮಪ್ರಮಾಣದಲ್ಲಿ ಲೇಪನವನ್ನು ತಯಾರಿಸಿ. ಇದಕ್ಕೆ ದ್ರವವಾಗಿ ಹಸಿಹಾಲನ್ನು ಬಳಸಿ.

ಅರಿಶಿನ-ಚಂದನದ ಮುಖಲೇಪ

ಅರಿಶಿನ-ಚಂದನದ ಮುಖಲೇಪ

ಈ ಲೇಪನ ಸಾಕಷ್ಟು ದಟ್ಟನೆ ಇರಬೇಕು, ಅಂದರೆ ಮುಖದ ಮೇಲೆ ಹಚ್ಚಿಕೊಂಡಾಗ ದ್ರವವಾಗಿ ನೀರಿನಂತೆ ಇಳಿಯಬಾರದು, ಅಷ್ಟು ಘನವಾಗಿರಲಿ. ರಾತ್ರಿ ಮಲಗುವ ಮುನ್ನ ಈಗ ತಾನೇ ತೊಳೆದುಕೊಂಡ ಮುಖಕ್ಕೆ, ತುಟಿಗಳನ್ನು ಬಿಟ್ಟು ಇಡಿಯ ಮುಖ ಆವರಿಸುವಂತೆ ತೆಳುವಾಗಿ ಕೆಳಗಿನಿಂದ ಮೇಲಕ್ಕೆ ಸುಮಾರು ಮೂರು ನಿಮಿಷಗಳ ಕಾಲ ಮಸಾಜ್ ಮಾಡುತ್ತಾ ಹಚ್ಚಿ. ಸ್ವತಃ ಹಚ್ಚುವುದಕ್ಕಿಂತ ಇನ್ನೊಬ್ಬರ ಸಹಾಯ ಪಡೆಯುವುದು ಲೇಸು. ಇದು ಕೊಂಚ ಉರಿ ತರಿಸಬಹುದು. ಬರೆಯ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಎಣ್ಣೆಚರ್ಮದವರಿಗೂ ಸೂಕ್ತವಾದ ವಿಧಾನವಾಗಿದ್ದು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸಬಹುದಾಗಿದೆ. ಈ ಲೇಪದಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ಎಣ್ಣೆಯಂಶವೂ ಕಡಿಮೆಯಾಗುವುದು.

ಜೇನು ಮತ್ತು ಅರಿಶಿನದ ಮುಖಲೇಪ

ಜೇನು ಮತ್ತು ಅರಿಶಿನದ ಮುಖಲೇಪ

ಸೂಕ್ಷ್ಮಚರ್ಮದವರಿಗೆ ಈ ಮುಖಲೇಪ ಉತ್ತಮವಾಗಿದೆ. ಇದಕ್ಕಾಗಿ ಎರಡು ಚಮಚ ಗುಲಾಬಿ ನೀರಿನಲ್ಲಿ ಒಂದು ಚಮಚ ಅರಿಶಿನ ಮತ್ತು ಒಂದು ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಮುಖಲೇಪವನ್ನು ಹುಬ್ಬುಗಳು ಮತ್ತು ತುಟಿಯ ಹೊರತಾಗಿ ಇಡಿಯ ಮುಖಕ್ಕೆ ಆವರಿಸುವಂತೆ ನಿಧಾನವಾಗಿ ಮಸಾಜ್ ಮಾಡುತ್ತಾ ಹಚ್ಚಿ.

ಜೇನು ಮತ್ತು ಅರಿಶಿನದ ಮುಖಲೇಪ

ಜೇನು ಮತ್ತು ಅರಿಶಿನದ ಮುಖಲೇಪ

ಬಳಿಕ ತಲೆದಿಂಬು ಇಲ್ಲದೇ ಹದಿನೈದು ನಿಮಿಷ ವಿರಮಿಸಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮದ ವರ್ಣವನ್ನು ಸಹಜವರ್ಣದತ್ತ ಹೊರಳಿಸುವುದರ ಜೊತೆಗೇ ಕಾಂತಿಯನ್ನೂ ಹೆಚ್ಚಿಸುತ್ತದೆ.

ಆಲುಗಡ್ಡೆ ಮತ್ತು ಮೊಸರಿನ ಮುಖಲೇಪ

ಆಲುಗಡ್ಡೆ ಮತ್ತು ಮೊಸರಿನ ಮುಖಲೇಪ

ಒಂದು ಕಪ್ ಮೊಸರಿನಲ್ಲಿ ಸುಮಾರು ಮಧ್ಯಮಗಾತ್ರದ ಆಲುಗಡ್ಡೆಯ ಅರ್ಧಭಾಗವನ್ನು ಸಿಪ್ಪಿ ಸುಲಿದು ಚಿಕ್ಕದಾಗಿ ತುರಿದು ಮಿಶ್ರಣ ಮಾಡಿ. ಇದನ್ನು ದಪ್ಪನಾಗಿ ಇಡಿಯ ಮುಖ ಆವರಿಸುವಂತೆ, ತುಟಿಗಳನ್ನೂ ಸೇರಿಸಿ ಹಚ್ಚಿಕೊಳ್ಳಿ. ಬಳಿಕ ತಲೆದಿಂಬು ಇಲ್ಲದೇ ಹದಿನೈದು ನಿಮಿಷ ವಿರಮಿಸಿ.

ಆಲುಗಡ್ಡೆ ಮತ್ತು ಮೊಸರಿನ ಮುಖಲೇಪ

ಆಲುಗಡ್ಡೆ ಮತ್ತು ಮೊಸರಿನ ಮುಖಲೇಪ

ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಎಲ್ಲಾ ಬಗೆಯ ಚರ್ಮದವರಿಗೆ ಸೂಕ್ತವಾದ ಒಂದು ವಿಧಾನವಾಗಿದೆ. ಗೌರವರ್ಣ ಪಡೆಯಲು ಈ ಮುಖಲೇಪ ಅತ್ಯಂತ ಸೂಕ್ತವಾಗಿದೆ.

 ಜೇನಿನ ಮುಖಲೇಪ

ಜೇನಿನ ಮುಖಲೇಪ

ಎರಡು ಚಮಚ ಜೇನಿಗೆ ಒಂದು ಚಮಚ ನೀರು ಸೇರಿಸಿ ಕಲಕಿ. ಇದನ್ನು ನಿಮ್ಮ ಮುಖಕ್ಕೆ ನೇರವಾಗಿ ಹಚ್ಚಿಕೊಳ್ಳಿ. ಹುಬ್ಬುಗಳಿಗೆ ತಾಗದಂತೆ ಎಚ್ಚರವಹಿಸಿ. (ತಾಕಿದರೆ ಈ ಕೂದಲು ಕೆಂಚಗಾಗುತ್ತದೆ). ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಸಹಾ ಮುಖದ ಕಾಂತಿಯನ್ನು ಹೆಚ್ಚಿಸುವುದು ಹಾಗೂ ಎಣ್ಣೆಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ. ಮೇಕಪ್ ನಿವಾರಿಸಿದ ಬಳಿಕ ಉಪಯೋಗಿಸಲು ಸಹಾ ಉತ್ತಮವಾಗಿದೆ. ಈ ಸಮಯದಲ್ಲಿ ಐದು ನಿಮಿಷ ಮಾತ್ರ ಇರುವಂತೆ ಮಾಡಿ ತೊಳೆದುಕೊಳ್ಳಿ.

ಕ್ಯಾರೆಟ್ ಮುಖಲೇಪ

ಕ್ಯಾರೆಟ್ ಮುಖಲೇಪ

ಎಣ್ಣೆಚರ್ಮದವರಿಗೆ ಅತ್ಯುತ್ತಮವಾದ ಈ ಮುಖಲೇಪ ತಯಾರಿಸಲು ಎರಡು ಕ್ಯಾರೆಟ್ ಗಳನ್ನು ಮಿಕ್ಸಿಯಲ್ಲಿ ನುಣ್ಣಗಾಗುವಂತೆ ಕೊಂಚ ಹಾಲಿನೊಂದಿಗೆ ಕಡೆಯಿರಿ. ಇದಕ್ಕೆ ಅರ್ಧ ಚಮಚ ಜೇನು ಸೇರಿಸಿ. ಇದನ್ನು ದಪ್ಪನಾಗಿ ಇಡಿಯ ಮುಖ ಆವರಿಸುವಂತೆ, ತುಟಿಗಳನ್ನೂ ಸೇರಿಸಿ ಹಚ್ಚಿಕೊಳ್ಳಿ

ಕ್ಯಾರೆಟ್ ಮುಖಲೇಪ

ಕ್ಯಾರೆಟ್ ಮುಖಲೇಪ

ಬಳಿಕ ತಲೆದಿಂಬು ಇಲ್ಲದೇ ಹದಿನೈದು ನಿಮಿಷ ವಿರಮಿಸಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುವ ಜೊತೆಗೇ ಹೆಚ್ಚು ಸಮಯದವರೆಗೆ ಚರ್ಮ ಎಣ್ಣೆರಹಿತವಾಗಿರಲು ಸಾಧ್ಯವಾಗುತ್ತದೆ.

English summary

Easy to make face packs all of you must try at home!

Although there are plenty of face packs available in the market, homemade packs are easier to make and are cost effective too. You can easily make a great face pack with ingredients that are easily available in any house. We will take you through some of the effective face packs you can make and use at home. The results of course are better than any pack sold in the market.
X
Desktop Bottom Promotion