For Quick Alerts
ALLOW NOTIFICATIONS  
For Daily Alerts

ಎಲೆಮರೆ ಕಾಯಿ ಎಲೆಕೋಸು-ಸೌಂದರ್ಯದ ಕೀಲಿ ಕೈ

By Super
|

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಕೋಸಿನ ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಹಸಿಯಾಗಿಯೂ ತಿನ್ನಬಹುದಾದ ಎಲೆಕೋಸಿನಲ್ಲಿ ಹಲವು ಪೋಷಕಾಂಶಗಳಿದ್ದು ಜೀರ್ಣಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ವಿಟಮಿನ್ 'ಸಿ' ಭರಿತ ಎಲೆಕೋಸು ಪಲ್ಯ

ಆದರೆ ಎಲೆಕೋಸು ಆರೋಗ್ಯದ ಜೊತೆಗೇ ಸೌಂದರ್ಯವನ್ನೂ ಕಾಪಾಡಲು ಶಕ್ತವಾಗಿದೆ ಎಂದರೆ ಸುಲಭವಾಗಿ ನಂಬಲು ಸಾಧ್ಯವಿಲ್ಲ. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ, ಖನಿಜಗಳಾದ ಮೆಗ್ನೀಶಿಯಂ, ಕಬ್ಬಿಣ, ಗಂಧಕ ಮತ್ತು ಕ್ಯಾಲ್ಸಿಯಂ ತ್ವಚೆಗೆ ಪೂರಕವಾಗಿದ್ದು ಹಲವು ವಿಧದಲ್ಲಿ ತ್ವಚೆಯ ರಕ್ಷಣೆ ಮತ್ತು ಪೋಷಣೆಯನ್ನು ನೀಡುತ್ತವೆ. ಅಲ್ಲದೇ ಇದು ಕೂದಲಿಗೂ ಉತ್ತಮ ಆರೈಕೆ ನೀಡುತ್ತದೆ. ಕೋಸಿನಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳೂ ಹೇರಳವಾಗಿದ್ದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಎಲೆಕೋಸಿನ ಅತ್ಯುತ್ತಮ 10 ಪ್ರಯೋಜನಗಳು

ಇದಕ್ಕಾಗಿ ಎಲೆಕೋಸಿನ ಸೇವನೆಗಿಂತ ಎಲೆಕೋಸನ್ನು ಕಡೆದು ಹಿಂಡಿ ತೆಗೆದ ರಸದ ಸೇವನೆ ಅಥವಾ ಸೂಪ್‌ನ ಸೇವನೆ ಉತ್ತಮ. ಬನ್ನಿ ಎಲೆಕೋಸು ಇನ್ನು ಯಾವ ಯಾವ ರೀತಿಯಲ್ಲಿ ಚರ್ಮಕ್ಕೆ ಉತ್ತಮವಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

ತ್ವಚೆಯ ಚರ್ಮದ ಗಾಯಗಳನ್ನು ಶೀಘ್ರವಾಗಿ ಮಾಗಿಸುತ್ತದೆ

ತ್ವಚೆಯ ಚರ್ಮದ ಗಾಯಗಳನ್ನು ಶೀಘ್ರವಾಗಿ ಮಾಗಿಸುತ್ತದೆ

ತ್ವಚೆಯ ತೊಂದರೆಗಳಾದ ಮೊಡವೆ, ಕೀಟಗಳ ಕಡಿತ, ಚಿಕ್ಕಪುಟ್ಟ ಗಾಯಗಳು, ತುರಿಕೆ, ಬೆವರುಗುಳ್ಳೆ (ಅಥವಾ ಬೆವರುಸಾಲೆ) ಮೊದಲಾದವುಗಳಿಗೆ ಎಲೆಕೋಸನ್ನು ಅರೆದು ಹಿಂಡಿ ತೆಗೆದ ರಸವನ್ನು ಹಚ್ಚುವುದರಿಂದ ಉತ್ತಮವಾದ ಪರಿಣಾಮ ದೊರಕುತ್ತದೆ. ಅದರಲ್ಲೂ ತುರಿಕೆ ಮತ್ತು ಉರಿಯಿರುವ ಭಾಗದಲ್ಲಿ ಕೋಸಿನ ರಸ ಹಚ್ಚುತ್ತಿದ್ದಂತೆಯೇ ತಣ್ಣನೆಯ ಅನುಭವದ ಮೂಲಕ ತುರಿಕೆಯನ್ನು ನಿವಾರಿಸುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಕೋಸಿನ ಸೇವನೆ ಮತ್ತು ರಸವನ್ನು ಚರ್ಮದ ಮೇಲೆ ಹಚ್ಚುವ ಮೂಲಕ ಚರ್ಮದ ಕಾಂತಿ ಹೆಚ್ಚಲು ಸಾಧ್ಯವಾಗುತ್ತದೆ. ಅಲ್ಲದೇ ಚರ್ಮದಲ್ಲಿ ಸಂಗ್ರಹಗೊಂಡಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗಿ ನವಚೈತನ್ಯ ನೀಡುತ್ತದೆ.

ನೆರಿಗೆಗಳನ್ನು ತಡೆಯುತ್ತದೆ

ನೆರಿಗೆಗಳನ್ನು ತಡೆಯುತ್ತದೆ

ಚರ್ಮತಜ್ಞರ ಅನುಭವದ ಪ್ರಕಾರ ನೆರಿಗೆಗಳನ್ನು ತಡೆಯುವಲ್ಲಿ ಎಲೆಕೋಸು ಕ್ಷಮತೆ ಹೊಂದಿದ್ದು ನಿಯಮಿತ ಸೇವನೆಯಿಂದ ನೆರಿಗೆಗಳನ್ನು ಬರದಂತೆ ತಡೆಗಟ್ಟಬಹುದಾಗಿದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಚರ್ಮಕ್ಕೆ ಉತ್ತಮ ಸೆಳೆತ ನೀಡುವ ಕಾರಣ ನೆರಿಗೆಗಳು ಮತ್ತು ವೃದ್ಧಾಪ್ಯ ದೂರವುಳಿಯುತ್ತದೆ. ಇದರ ಉತ್ತಮ ಪರಿಣಾಮವನ್ನು ಎಲೆಕೋಸನ್ನು ಹಸಿಯಾಗಿ ತಿನ್ನುವ ಮೂಲಕ ಪಡೆಯಬಹುದು.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೋಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕೂದಲ ಬೆಳವಣಿಗೆಯನ್ನು ಪ್ರಚೋದಿಸಿ ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯಲು ನೆರವಾಗುತ್ತವೆ. ಇದಕ್ಕಾಗಿ ಕೋಸನ್ನು ಚಿಕ್ಕದಾಗಿ ಹೆಚ್ಚಿ ಮುಳುಗುವಷ್ಟು ನೀರಿನಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಸೋಸಿ, ತಣಿದ ಬಳಿಕ ಅರೆಯಿರಿ. ಅರೆದ ಕೋಸಿನ ಲೇಪನಕ್ಕೆ ಕೊಂಚ ಲಿಂಬೆರಸವನ್ನು ಸೇರಿಸಿ ಕೂದಲ ಬುಡದಿಂದ ತುದಿಯವರೆಗೆ ತಾಕುವಂತೆ ಹಚ್ಚಿ.

 ಚರ್ಮದ ಕಲೆಗಳನ್ನು ನಿವಾರಿಸುತ್ತದೆ

ಚರ್ಮದ ಕಲೆಗಳನ್ನು ನಿವಾರಿಸುತ್ತದೆ

ಕೋಸಿನ ನಿಯಮಿತ ಸೇವನೆಯಿಂದ ಚರ್ಮದಲ್ಲಿ ಕಲೆಗಳಿದ್ದರೆ ತೊಲಗಲು ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಹಸಿಕೋಸನ್ನು ಅರೆದು ಹಿಂಡಿದ ರಸವನ್ನು ಕಲೆಯಿರುವ ಜಾಗಕ್ಕೆ ನೇರವಾಗಿ ಹಚ್ಚುವುದರಿಂದಲೂ ಕಲೆ ನಿಧಾನವಾಗಿ ಅಡಗಲು ಪ್ರಾರಂಭಿಸುತ್ತದೆ. ಕಲವೇ ದಿನಗಳಲ್ಲಿ ಚರ್ಮ ಕಲೆಯಿಲ್ಲದೇ ಸುಂದರವಾಗುತ್ತದೆ.

ಚರ್ಮದ ಕಲ್ಮಶಗಳನ್ನು ನಿವಾರಿಸುತ್ತದೆ

ಚರ್ಮದ ಕಲ್ಮಶಗಳನ್ನು ನಿವಾರಿಸುತ್ತದೆ

ಕೋಸಿನ ರಸವನ್ನು ಸೇವಿಸುವುದರಿಂದ ಚರ್ಮದ ಅಡಿಭಾಗದಿಂದ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ಹೊರಹೋಗಲು ಸಾಧ್ಯವಾಗುತ್ತದೆ.

ನುಣುಪಾದ ಕೂದಲಿಗಾಗಿ

ನುಣುಪಾದ ಕೂದಲಿಗಾಗಿ

ಎಲೆಕೋಸನ್ನು ಹಸಿಯಾಗಿ ಅರೆದು ರಸವನ್ನು ಹಿಂಡಿ ಈ ರಸವನ್ನು ನೇರವಾಗಿ ತಲೆಗೆ ಹಚ್ಚಿ ಕೂದಲ ಉದ್ದಕ್ಕೂ ಸವರಿ ಸುಮಾರು ನಲವತ್ತೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ಕಾಂತಿಯುಕ್ತ ಮತ್ತು ನುಣುಪಾಗುತ್ತದೆ. ಇಂತ ಇನ್ನೂ ಉಪಯುಕ್ತವಾದ ಸಲಹೆಗಳು ನಿಮ್ಮಲ್ಲಿದ್ದರೆ ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯಪುಟದ ಕೆಳಗೆ ಇರುವ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

English summary

Beauty Benefits Of Cabbage

Cabbage can be used both internally and externally on your skin. So, you can consume it or you can use it topically on your skin to enjoy the beauty benefits of cabbage. Like most of the other green leafy vegetables, cabbage is also rich in many nutrients out of which Vitamin A and C benefit your skin.Now, let us discuss about the beauty benefits of cabbage.
Story first published: Tuesday, October 27, 2015, 12:45 [IST]
X
Desktop Bottom Promotion