For Quick Alerts
ALLOW NOTIFICATIONS  
For Daily Alerts

ಹದಿಹರೆಯದಲ್ಲಿ ಮೊಡವೆ ರಾದ್ಧಾಂತ ಮಾಮೂಲು, ಚಿಂತೆ ಬಿಡಿ!

|

ಹದಿಹರೆಯದಲ್ಲಿ ಮೊಡವೆಗಳ ಕಾಟ ಎಲ್ಲರನ್ನೂ ಕಾಡುತ್ತದೆ. ಸುಮಾರು ಇಪ್ಪತ್ತೆರಡು ಇಪ್ಪತ್ತಮೂರಾಗುವಷ್ಟರಲ್ಲಿ ಇದರ ಪಿಡುಗು ಕಡಿಮೆಯಾಗುತ್ತಾ ತನ್ನಿಂತಾನೇ ಕಡಿಮೆಯಾಗುತ್ತದೆ. ಆದರೆ ಇದು ಎಲ್ಲರ ಪಾಲಿನ ಸತ್ಯವಲ್ಲ. ಕೆಲವರಿಗಂತೂ ನಡುವಯಸ್ಸಿನವರೆಗೂ ಬಹುವಾಗಿಯೇ ಕಾಡುತ್ತವೆ. ಒಂದು ವೇಳೆ ನಿಮ್ಮ ವಯಸ್ಸು ಹದಿಹರೆಯ ದಾಟಿದ್ದು ಮೊಡವೆಗಳು ಪೂರ್ಣವಾಗಿ ಮಾಯವಾಗಿಲ್ಲದೇ ಇದ್ದರೆ ಅಚ್ಚರಿ ಪಡಬೇಡಿ, ಏಕೆಂದರೆ ಒಂದು ಸಮೀಕ್ಷೆಯ ಪ್ರಕಾರ ಈ ಜಗತ್ತಿನಲ್ಲಿ ಸುಮಾರು ಮುಕ್ಕಾಲು ಪಾಲು ಜನರು ಹದಿಹರೆಯ ದಾಟಿದ ಬಳಿಕವೂ ಮೊಡವೆಗಳ ಕಾಟಕ್ಕೆ ತುತ್ತಾಗಿದ್ದಾರೆ. ಮೊಡವೆ ಸಮಸ್ಯೆಗೆ ಮನೆಮದ್ದು

ಇದಕ್ಕೆ ಸ್ಪಷ್ಟವಾದ ಕಾರಣಗಳನ್ನು ನೀಡಲು ಸಾಧ್ಯವಿಲ್ಲದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗಿರುವುದನ್ನು ಕಂಡರೆ ವಾತಾವರಣದ ಗಾಳಿಯಲ್ಲಿ ಪ್ರದೂಷಣೆ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮುಖದ ಮೇಲೆ ಮೊಡವೆಗಳು ಮೂಡದೇ ಇರಲು ಬಿಸಿಲಿನ ನೇರ ಕಿರಣಗಳಿಗೆ ಒಡ್ಡದೇ ಇರುವುದು ಪ್ರಮುಖ ಮುನ್ನೆಚ್ಚರಿಕೆಯಾಗಿದೆ. ಇನ್ನು ಮುಂದೆ, ಮೊಡವೆಗೆ ಸೋಲುವ ಪ್ರಶ್ನೆಯೇ ಇಲ್ಲ..!

ಆಗಾಗ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರುವುದು, ನಿತ್ಯವೂ ಸ್ನಾನ ಮಾಡುವುದು, ಎಣ್ಣೆ ಪದಾರ್ಥಗಳನ್ನು ಸೇವಿಸದೇ ಇರುವುದು ಮೊದಲಾದವು ಇತರ ಕ್ರಮಗಳಾಗಿವೆ. ಆದರೆ ಮೊಡವೆಗಳು ಮೂಡಲಿಕ್ಕೆ ಕಾರಣಗಲು ಏನೆಂದು ತಿಳಿದುಕೊಂಡರೆ ಇದಕ್ಕೆ ಸೂಕ್ತ ಪರಿಹಾರವನ್ನೂ ಪಡೆದುಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು

ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು

ಮೊಡವೆಗಳಿಗೆ ಮುಖ್ಯ ಕಾರಣ ಚರ್ಮದ ಕೆಳಪದರದಲ್ಲಿ ಸ್ರವಿಸುವ ಎಣ್ಣೆಯಂಶ ಸೂಕ್ಷ್ಮರಂಧ್ರಗಳಿಂದ ಹೊರಬರದೇ ಇರುವುದು. ಹೆಚ್ಚಿನವರು ಬೆಳಿಗ್ಗೆ ಮುಖ ತೊಳೆದು ಹೊರಹೋದವರು ತಡರಾತ್ರಿ ಮನೆಗೆ ಬರುವವರೆಗೂ ಮಖವನ್ನು ತೊಳೆಯುವುದೇ ಇಲ್ಲ. ಇದು ಮೊಡವೆಗಳಿಗೆ ಮುಖ್ಯ ಕಾರಣ. ಇದು ಮೊಡವೆ ಸಹಿತ ಇತರ ತೊಂದರೆಗಳಿಗೂ ಕಾರಣವಾಗಬಹುದು. ಇದನ್ನು ತಡೆಯಲು ದಿನದಲ್ಲಿ ಆಗಾಗ ಸ್ವಚ್ಛವಾದ ನೀರಿನಿಂದ ಮುಖ ತೊಳೆದುಕೊಳ್ಳುತ್ತಿರುವುದೇ ಪರಿಹಾರ. ಇದರಿಂದ ಚರ್ಮದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ತೊಡೆದು ಚರ್ಮ ನಯವಾಗುವಂತೆ ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು

ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು

ಇನ್ನೂ ಉತ್ತಮವೆಂದರೆ ದಿನಕ್ಕೆ ಎರಡು ಬಾರಿ ಮನೆಯಲ್ಲಿಯೇ ಸಿದ್ಧಪಡಿಸಬಹುದಾದ ಮಾರ್ಜಕಗಳನ್ನು ಬಳಸುವುದು. ಕಿತ್ತಳೆ ಸಿಪ್ಪೆ, ಲಿಂಬೆರಸ, ಲೋಳೆಸರದ ರಸಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ನೀರಿನಲ್ಲಿ ಮಿಶ್ರಣಮಾಡಿ. ಈ ದ್ರವವನ್ನು ಉಪಯೋಗಿಸಿ ದಿನಕ್ಕೆರಡು ಬಾರಿ ತೊಳೆದುಕೊಳ್ಳುವ ಮೂಲಕ ಚರ್ಮದ ಆರೈಕೆ ಸಾಧ್ಯವಾಗುತ್ತದೆ ಮತ್ತು ಮೊಡವೆಗಳು ದೂರವಾಗುತ್ತವೆ.

ಮೊಡವೆಗಳನ್ನು ಒಡೆಯುವುದು

ಮೊಡವೆಗಳನ್ನು ಒಡೆಯುವುದು

ಮೊಡವೆಗಳು ಹೆಚ್ಚಲು ಮುಖ್ಯ ಕಾರಣ ಮೊಡವೆಗಳನ್ನು ಚಿವುಟಿ ಒಡೆಯುವುದು. ಇದರಿಂದ ಮೊಡವೆಯ ಮೇಲ್ಭಾಗದ ಕೀವು ಮಾತ್ರ ನಿವಾರಣೆಯಾಗಬಲ್ಲುದೇ ಹೊರತು ಬುಡದಲ್ಲಿರುವ ಗಂಟಲ್ಲ. ಇದು ಮೊಡವೆಗಳು ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ. ಒತ್ತಡದ ಕಾರಣ ಕೀವು ಒಳಗಿನ ಇತರ ಭಾಗಕ್ಕೂ ಹರಡುವ ಮೂಲಕ ಸೋಂಕು ಉಂಟಾಗುತ್ತದೆ. ಅಲ್ಲದೇ ಚರ್ಮದಿಂದ ಹೊರಬಂದ ಕೀವು ಸಹಾ ಸೋಂಕು ಹರಡಲು ಕಾರಣವಾಗಿದ್ದು ಸಿಡಿದು ಇತರ ಭಾಗಕ್ಕೆ ಬಿದ್ದರೆ ಅಲ್ಲಿಯೂ ಹೊಸಮೊಡವೆಯಾಗುವ ಸಾಧ್ಯತೆ ಇದೆ.

ಒತ್ತಡ ನಿಮ್ಮ ನಿತ್ಯದ ಅಭ್ಯಾಸವಾಗಿರುವುದು

ಒತ್ತಡ ನಿಮ್ಮ ನಿತ್ಯದ ಅಭ್ಯಾಸವಾಗಿರುವುದು

ಒತ್ತಡಕ್ಕೂ ಮೊಡವೆಗಳಿಗೂ ನೇರ ಸಂಬಂಧವಿದೆ. ಒತ್ತಡ ಹೆಚ್ಚಿದ್ದಷ್ಟೂ ಮೊಡವೆಗಳು ಹೆಚ್ಚಿವುದನ್ನು ಸಂಶೋಧನೆಗಳಿಂದ ದೃಢೀಕರಿಸಲಾಗಿದೆ. ಮೊಡವೆಗಳಿಗೆ ಮಾತ್ರವಲ್ಲ, ದೇಹದ ಇನ್ನೂ ಹಲವಾರು ತೊಂದರೆಗಳಿಗೆ ಮಾನಸಿಕ ಒತ್ತಡ ಮೂಲವಾಗಿದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಒತ್ತಡದಿಂದಿರದೇ ಇರಲು ಸೂಕ್ತ ಕ್ರಮ ಕೈಗೊಳ್ಳಿ.

ಎಣ್ಣೆಯಂಶ ಹೆಚ್ಚಿರುವ ಆಹಾರ ಸೇವಿಸುವುದನ್ನು ನಿಲ್ಲಿಸಿ

ಎಣ್ಣೆಯಂಶ ಹೆಚ್ಚಿರುವ ಆಹಾರ ಸೇವಿಸುವುದನ್ನು ನಿಲ್ಲಿಸಿ

ರುಚಿಯ ಹಿಂದೆ ಬಿದ್ದು ಅನಾರೋಗ್ಯಕರ ಆಹಾರವನ್ನು ಸೇವಿಸುತ್ತಾ ಬಂದಿರುವ ಪರಿಣಾಮವೇ ಮೊಡವೆಗಳಾಗಿರಬಹುದು. ಅದರಲ್ಲೂ ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿ ಮತ್ತು ವಿಶೇಷವಾಗಿ ಮಾಂಸಾಹಾರ ಸೇವಿಸಿದಾಗ ಮೊಡವೆಗಳಾಗುವ ಸಾಧ್ಯತೆ ಹೆಚ್ಚುತ್ತದೆ. ಹಾಲಿನ ಉತ್ಪನ್ನಗಳನ್ನು ಅತಿ ಹೆಚ್ಚಾಗಿ ಸೇವಿಸುವುದನ್ನು ಕಡಿಮೆ ಮಾಡಿ. ಅತಿ ಕೊಬ್ಬಿನ ಹೆಚ್ಚಿನ ಸೇವನೆ ಮೊಡವೆ ಮತ್ತು ಸ್ಥೂಲಕಾಯಕ್ಕೆ ಆಹ್ವಾನವಾಗಿದೆ.

 ಕೆಲವು ಔಷಧಿಗಳ ಅಡ್ಡಪರಿಣಾಮಗಳಾಗಿರಬಹುದು

ಕೆಲವು ಔಷಧಿಗಳ ಅಡ್ಡಪರಿಣಾಮಗಳಾಗಿರಬಹುದು

ನಿಮಗೆ ಬೇರೆ ಯಾವುದಾದರೂ ಅನಾರೋಗ್ಯ ಕಾಡುತ್ತಿದ್ದು ಚಿಕಿತ್ಸೆಗಾಗಿ ಕೆಲವು ಔಷಧಿಗಳನ್ನು ಸೇವಿಸುತ್ತಿದ್ದರೆ ಅವುಗಳ ಅಡ್ಡಪರಿಣಾಮದಿಂದ ಮೊಡವೆಗಳು ಉಂಟಾಗಿರಬಹುದು. ಇದಕ್ಕೆ ವೈದ್ಯರ ತಪಾಸಣೆ ಮತ್ತು ಸಲಹೆ ಅಗತ್ಯ. ವೈದ್ಯರ ಸಲಹೆಯಿಲ್ಲದೇ ಯಾವುದೇ ಕ್ರಮ ಕೈಗೊಳ್ಳಬೇಡಿ. ನೆನಪಿಡಿ, ಈ ಅಡ್ಡಪರಿಣಾಮಗಳು ಔಷದಿ ಸೇವಿಸುತ್ತಿರುವಷ್ಟೂ ಕಾಲ ಕಾಡುವ ತಾತ್ಕಾಲಿಕ ತೊಂದರೆಯಾಗಿರಬಹುದು.

English summary

Adult Acne: Why You Get It, How to Fight It

If you thought only teens and young adults could be prone to acne your thinking is wrong my friend! There are a lot of reasons why even adults are prone to this skin problem, and if you take a look at this article you will shocked to your wits.
Story first published: Saturday, October 10, 2015, 10:40 [IST]
X
Desktop Bottom Promotion