For Quick Alerts
ALLOW NOTIFICATIONS  
For Daily Alerts

ಯಾವ ಫೇಸ್ ವಾಶ್ ತ್ವಚೆಗೆ ಒಳ್ಳೆಯದು?

|

ಹೆಚ್ಚಿನವರು ಸೋಪಿನ ಬದಲು ಫೇಸ್ ವಾಶ್ ಬಳಸಲು ಇಷ್ಟಪಡುತ್ತಾರೆ. ಸೋಪ್ ಬಳಸುವ ಬದಲು ಫೇಸ್ ವಾಶ್ ಬಳಸುವುದು ಒಳ್ಳೆಯದು ಅನ್ನುವುದು ಸೌಂದರ್ಯ ತಜ್ಞರ ಅಭಿಪ್ರಾಯ. ಏಕೆಂದರೆ ದೇಹದ ಇತರ ಭಾಗಗಳೊಗೆ ಹೋಲಿಸಿದರೆ ಮುಖದ ತ್ವಚೆ ತುಂಬಾ ಮೃದುವಾಗಿರುತ್ತದೆ. ಆದ್ದರಿಂದ ಸೋಪು ಬಳಸುವ ಬದಲು ಫೇಸ್ ವಾಶ್ ಬೆಸ್ಟ್.

ಈ ಫೇಸ್ ವಾಶ್ ಬಳಸುವಾಗ ನಮ್ಮ ಮುಖಕ್ಕೆ ಯಾವುದೋ ಸೂಕ್ತವೋ ಆ ಫೇಸ್ ವಾಶ್ ಬಳಸುವುದು ಒಳ್ಳೆಯದು. ಇಲ್ಲಿ ನಾವು ತ್ವಚೆಗೆ ಅನುಗುಣವಾಗಿ ಯಾವ ಬಗೆಯ ಫೇಸ್ ವಾಶ್ ಸೂಕ್ತ ಎಂಬ ಮಾಹಿತಿ ನೀಡಿದ್ದೇವೆ. ಈ ಮಾಹಿತಿಗಳು ನಿಮಗೆ ಸೂಕ್ತವಾದ ಫೇಸ್ ವಾಶ್ ಅನ್ನು ಆಯ್ಕೆ ಮಾಡುವಲ್ಲಿ ಸಹಾಯ ಮಾಡುತ್ತವೆ.

Which Is The Best Face Wash For You?

ಮೊಡವೆ ಇರುವವರಿಗೆ: ಮೊಡವೆ ಕಡಿಮೆಯಾಗಲು ನೀವು ಬಳಸುವ ಫೇಸ್ ವಾಶ್ ನಲ್ಲಿ ರಾಸಾಯನಿಗಳಾದ ರಂಜಕ ಮತ್ತು ಸತುವಿನಂಶ ಇರಬೇಕು. ಇವು ಮೊಡವೆ ಬರದಂತೆ ತಡೆಯುತ್ತವೆ. ಇದರಲ್ಲಿರುವ anti-septic ಅಂಶ ಮುಖದಲ್ಲಿರುವಂತಹ ಮೊಡವೆ ಗಳನ್ನು ಒಣಗಿಸಿ ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮೊಡವೆ ಸಮಸ್ಯೆ ಇರುವವರು ತಮ್ಮ ಫೇಸ್ ವಾಶ್ ನಲ್ಲಿ ಈ ಎರಡು ವಸ್ತುಗಳು ಇವೆಯೇ ಎಂಬುದನ್ನು ಗಮನಿಸುವುದು ಒಳ್ಳೆಯದು.

ಎಣ್ಣೆ ತ್ವಚೆ: ಎಣ್ಣೆ ತ್ವಚೆಯಿರುವವರು ಆಯಿಲ್ ಫ್ರೀ ಫೇಸ್ ವಾಸ್ ಬಳಸಬೇಕು. ಸೋಪು ಬಳಸಿದರೆ ಮುಖ ತುಂಬಾ ಡ್ರೈಯಾಗಿರುತ್ತದೆ. ಆದರೆ ಈ ಫೇಸ್ ವಾಶ್ ಬಳಸಿದರೆ ಮುಖದಲ್ಲಿ ಎಣ್ಣೆಯಂಶವಿರುವುದಿಲ್ಲ ಆದರೆ ತ್ವಚೆ ತನ್ನ ಮಾಯಿಶ್ಚರೈಸರ್ ಅನ್ನು ಕಳೆದುಕೊಳ್ಳುವುದಿಲ್ಲ.

ಒಣ ತ್ವಚೆ: ತುಂಬಾ ಒಣ ತ್ವಚೆ ಇರುವವರಿಗೆ ಮಾಯಿಶ್ಚರೈಸರ್ ಫೇಶಿಯಲ್ ಕ್ಲೆನ್ಸರ್ ಬಳಸುವುದು ಸೂಕ್ತ. ಸೋಪು ಬಳಸಿದರೆ ಮುಖ ಮತ್ತಷ್ಟು ಡ್ರೈಯಾಗುತ್ತದೆ. ಹಾಲು, ಪೀಚ್, ನೈಸರ್ಗಿಕವಾದ ಎಣ್ಣೆ ಇವುಗಳನ್ನು ಬಳಸಿ ಮಾಡಿದಂತೆ ಫೇಸ್ ವಾಸ್ ಬಳಸುವುದು ಒಳ್ಳೆಯದು.

ಬ್ಲ್ಯಾಕ್ ಹೆಡ್ಸ್: ಬ್ಲ್ಯಾಕ್ ಹೆಡ್ಸ್ ಇರುವವರಿಗೆ ಫೇಸ್ ವಾಶ್ ಬದಲು ಸ್ಕ್ರಬ್ಬರ್ ಅವಶ್ಯಕ. ಸ್ಕ್ರಬ್ ಮತ್ತು ಕ್ಲೆನ್ಸರ್ ಎರಡೂ ಅಂಶವಿರುವ ಸ್ಕ್ರಬ್ಬರ್ ಕೊಂಡು ಪ್ರತಿದಿನ ಬಳಸಿದರೆ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಬಹುದು.

ಬಿಸಿಲಿನಿಂದ ತ್ವಚೆ ಕಪ್ಪಾಗಿದ್ದರೆ: ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ (sun tan) ವೈಟ್ನಿಂಗ್ ಫೇಸ್ ವಾಶ್ ಬಳಸುವುದು ಒಳ್ಳೆಯದು.

ಸೂಕ್ಷ್ಮ ತ್ವಚೆಯವರಿಗೆ: ಸೂಕ್ಷ್ಮ ತ್ವಚೆಯವರಿಗೆ ಬೇಗ ತ್ವಚೆ ಅಲರ್ಜಿ ಉಂಟಾಗುತ್ತದೆ. ಅಂತಹವರು ಹಾಲಿನಂಶವಿರುವ ಕ್ಲೆನ್ಸರ್ (milk facial cleanser) ಬಳಸುವುದು ಒಳ್ಳೆಯದು.

English summary

Which Is The Best Face Wash For You? | Tips For Skin Care | ಯಾವ ಬಗೆಯ ಫೇಸ್ ವಾಶ್ ಒಳ್ಳೆಯದು | ತ್ವಚೆ ಆರೈಕೆಗೆ ಕೆಲ ಸಲಹೆಗಳು

The only way to decide which face wash is best for you is to know your skin type. You must use facial cleanser that suits your skin type or else, it will be no good for you. Here are some of the common skin types and the face washes that are best suited for them.
X
Desktop Bottom Promotion