For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ಕಂದು ಅಥವಾ ಕಪ್ಪು ಚುಕ್ಕಿ ಬಿದ್ದಿದೆಯೇ?

By Super
|

ಹುಡುಗಿಯರ ಪ್ರಾಣಸ್ನೇಹಿತೆ ವಜ್ರಗಳೆನ್ದು ನೀವು ಅಂದುಕೊಂಡಿದ್ದರೆ, ಇನ್ನೊಮ್ಮೆ ಯೋಚನೆ ಮಾಡಿ !! ಸುಂದರವಾದ ತ್ವಚೆ ಮತ್ತು ಚರ್ಮದ ಸಹಜ ಬಣ್ಣವನ್ನು ಕಾಪಾಡಲು ನಿಗಾ ವಹಿಸುವಷ್ಟು ಅವರು ವಜ್ರದ ಬಗ್ಗೆ ತಲೆ ಕೆಡಿಸುವುದಿಲ್ಲ. ಆದರೆ ಕೆಲವೊಮ್ಮೆ ವರ್ಣಕತೆಯ(pigmentation) ಅವ್ಯವಸ್ಥೆಯಿಂದ ನಿಮ್ಮ ಚರ್ಮವು ಅಸಮ ವರ್ಣ ಹಾಗೂ ಕಲೆಗಳಿಂದ ಹಾಳಾಗಬಹುದು. ಈ ಸಮಸ್ಯೆಯನ್ನು ನಿಭಾಯಿಸಲು ಹಲವಾರು ಚಿಕಿತ್ಸೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ನಿಮ್ಮ ಚರ್ಮವನ್ನು ರಾಸಾಯನಿಕ ಚಿಕಿತ್ಸೆಗೆ ಒಳಪದಿಸುವುದಕ್ಕೂ ಮುನ್ನ, ಮನೆಯಲ್ಲೇ ಸಿಗುವ ಪರಿಹಾರಗಳ ಬಗ್ಗೆ ನಾವು ಕೆಲವು ಮಾಹಿತಿ ನೀಡುತ್ತೇವೆ.

ಕಪ್ಪು ಅಥವಾ ಕಪ್ಪು ಚುಕ್ಕಿ ಬೀಳಲು ಕಾರಣಗಳು

ಚರ್ಮದ ವರ್ಣಕತೆ ಎಂಬುದು ಚರ್ಮದ ಬಣ್ಣಗೆಡಿಸುವಿಕೆಯಾಗಿದ್ದು, ಇದು ನಿಮ್ಮ ಚರ್ಮವನ್ನು ಅಸಮ ವರ್ಣದ್ದಾಗಿಸುತ್ತದೆ. ಚರ್ಮದ ವರ್ಣಕತೆಗೆ ಹಲವಾರು ಕಾರಣಗಳಿವೆ. ಚರ್ಮದ ವರ್ಣಕತೆ ಆನುವಂಶಿಕ ಗುಣವಾಗಿರಬಹುದು. ಇತರ ಕಾರಣಗಳೆಂದರೆ ಸೂರ್ಯ ಪ್ರಕಾಶಕ್ಕೆ ಮೈಯ್ಯೊಡ್ಡುವುದು, ಮಾನಸಿಕ ಒತ್ತಡ, ಮೊಡವೆಗಳಿನ್ದ ಉಂಟಾಗುವ ಕಲೆ (acne scar), ಹಾರ್ಮೋನ್ ಏರುಪೇರು ಅಥವಾ ವಾತಾವರಣದಲ್ಲಿನ ಮಾಲಿನ್ಯ.

Tackle Skin Pigmentation with Home Remedies

ನೀವು ಏನು ಮಾಡಬೇಕು?

ಅತಿಯಾಗಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ

SPF 30 ಕ್ಕಿಂತ ಹೆಚ್ಚಿರುವ ಸನ್ ಸ್ಕ್ರೀನ್ ನ್ನು ಯಾವಾಗಲೂ ಬಳಸಿ

ನೀವು ಬಿಸಿಲಿನಲ್ಲಿದ್ದರೆ ಪ್ರತೀ ಮೂರು ಗಂಟೆಗೊಮ್ಮೆ ಸನ್ ಸ್ಕ್ರೀನ್ ಹಚ್ಚುತ್ತಲಿರಿ

ರಾತ್ರಿ ಹೊತ್ತಿನಲ್ಲಿ ಕಟ್ಟುನಿಟ್ಟಾದ ಸ್ಕಿನ್ ಕೇರ್ ಪದ್ಧತಿಯನ್ನು ಅನುಸರಿಸಿ, tretonoin ಅಥವಾ kojic ಮುಂತಾದ ಆಸಿಡ್ ಯುಕ್ತ ಕ್ರೀಂ ಅನ್ನು ಉಪಯೋಗಿಸಿ

1. ಸ್ವಲ್ಪ ಕ್ಯಾರಟ್ ತಿರುಳನ್ನು (pulp) ಮುಲ್ತಾನಿ ಮಿಟ್ಟಿ ಜೊತೆ ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಒಂದು ವಿಟಮಿನ್ ಸಿ ಮಾತ್ರೆಯನ್ನು ಪುಡಿ ಮಾಡಿ ಇದಕ್ಕೆ ಸೇರಿಸಿ. ಇದನ್ನು ನಿಮ್ಮ ಮುಖಕ್ಕೆ ಸಮವಾಗಿ ಹಚ್ಚಿ, ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ. ಇದನ್ನು ಪ್ರತೀ ವಾರ ಆವರ್ತಿಸಿರಿ.

2 4 ಟೀಸ್ಪೂನ್ ಹಾಲಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಗ್ಲಿಸೆರಿನ್ ಹಾಕಿ, ಈ ಮಿಶ್ರಣವನ್ನು ಪಿಗ್ಮೆಂಟ್ ಆಗಿರುವ ಕಡೆ ಹಚ್ಚಿ. ಇದನ್ನು 15-20 ನಿಮಿಷಗಳ ವರೆಗೆ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಗ್ಲಿಸೆರಿನ್ ಔಷದ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ.

3. ಒಂದು ಅಲೂಗಡ್ಡೆಯ ಸಿಪ್ಪೆ ಸುಲಿದು ಅದರ ಮೇಲೆ ಕೆಲ ಬಿಂದು ನೀರು ಹಾಕಿರಿ. ನಂತರ ಇದನ್ನು ನಿಮ್ಮ ಚರ್ಮದ ಮೇಲೆ ಉಜ್ಜುವುದರಿಂದ ವರ್ಣಕತೆಯಿಂದ ಉಂಟಾದ ಕಲೆಗಳು ಕಡಿಮೆಯಾಗುವುವು. ಆಲೂಗಡ್ಡೆಯ ಜ್ಯೂಸು ವರ್ಣಕತೆಯ ಕಲೆಗಳ ಬಣ್ಣ ತಿಳಿಯಾಗುವಂತೆ ಮಾಡುತ್ತದೆ.

4. ಪುಡಿಮಾಡಿದ ಓಟ್ ಮೀಲ್, ಮೊಸರು, ನಿಂಬೆ ರಸ ಹಾಗೂ ಟೊಮೇಟೊ ಜ್ಯೂಸು ಅನ್ನು ಮಿಶ್ರಣ ಮಾಡಿ. ಇದನ್ನು ವಾರಕ್ಕೊಮ್ಮೆ ಬಾಧಿತ ಸ್ಥಳಕ್ಕೆ ಹಚ್ಚುವುದರಿಂದ ಪರಿಣಾಮ ಕಾಣಬಹುದು.

5. ಬೇಸಿಲ್ ಎಲೆಗಳು ಮತ್ತು ಲಿಂಬೆ ರಸದ ಮಿಶ್ರಣ ಮಾಡಿ ಬಾಧಿತ ಜಾಗಕ್ಕೆ ಹಚ್ಚುವುದರಿಂದ ವರ್ಣಕತೆಯ ಕಲೆಗಳು ಕಡಿಮೆಯಾಗುವುವು.

6. ಆಲಿವ್ ಎಣ್ಣೆಗೆ ಸಕ್ಕರೆ ಬೆರೆಸಿ ನಿಮ್ಮ ಚರ್ಮಕ್ಕೆ ಉಜ್ಜಿರಿ. ಸಕ್ಕರೆಯು ಸಂಪೂರ್ಣ ಕರಗುವ ವರೆಗೆ ಉಜ್ಜುತ್ತಲೇ ಇರಿ. ಇದನ್ನು ನಿಮ್ಮ ಕೈಗಳು, ಕಾಲ್ಗಳು, ಕುತ್ತಿಗೆ ಹಾಗೂ ಇತರ ಬಾಧಿತ ಸ್ಥಳಗಳಿಗೆ ಹಚ್ಚಬಹುದು.

7. ನಿಂಬೆ ರಸ, ಜೇನು ಹಾಗೂ ಬಾದಾಮಿ ಎಣ್ಣೆಯನ್ನು ತಲಾ 1 ಟೀಸ್ಪೂನ್ ನಂತೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಹದಿನೈದು ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಮಸಾಜ್ ಮಾಡಿ, ಹೊಳೆಯುವ ತ್ವಚೆ ನಿಮ್ಮದಾಗಿಸಿ.

8. ಸಾಕಷ್ಟು ನೀರು ಕುಡಿಯುವುದರಿಂದ ಶರೀರದಲ್ಲಿನ ಟಾಕ್ಸಿಕ್ ಅಂಶ ಕಡಿಮೆಯಾಗಿ, ಎಲ್ಲ ಚರ್ಮ ರೋಗಗಳಿಂದ ಮುಕ್ತಿ ಪಡೆಯಬಹುದು.

9. ಹಸಿ ಪಪಾಯ ಹಾಗೂ ಹಸಿ ಹಾಲನ್ನು ಮಿಶ್ರಣ ಮಾಡಿ, ಇದನ್ನು ನಿಮ್ಮ ಮುಖದ ಮೇಲೆ ಹತ್ತು ನಿಮಿಷ ಮಸಾಜ್ ಮಾಡಿ. ಇದು ನಿಮ್ಮ ಮುಖದಲ್ಲಿನ ಕಲ್ಮಶದ ನಿವಾರಣೆಗೆ ಸಹಕಾರಿ.

10. ನಿಮ್ಮ ಮುಖವನ್ನು ಮಜ್ಜಿಗೆಯಿಂದ ತೊಳೆಯುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.

ಚರ್ಮದ ವರ್ಣಕತೆಯ ಅವ್ಯವಸ್ಥೆಯ ನಿವಾರಣೆಗೆ ಮೇಲಿನ ಸರಳ ವಿಧಾನಗಳನ್ನು ಅನುಸರಿಸಿರಿ. ನಿಯಮಿತ ತ್ವಚೆಯ ಪಾಲನೆ, ಆರೋಗ್ಯಕರ ಹಾಗೂ ಸಮತೋಲನ ಆಹಾರಕ್ರಮ ಮತ್ತು ತ್ವಚೆಯ ಬಗ್ಗೆ ಕೆಲವು ಮುನ್ನೆಚ್ಚರಿಕಾಕ್ರಮ ಇವುಗಳನ್ನು ಪಾಲಿಸುವುದರಿಂದ ಸುಂದರ, ಸುಕೋಮಲ ತ್ವಚೆ ಹಾಗೂ ತ್ವಚೆಯ ಹೊಳಪನ್ನು ಕಾಪಾಡಲು ಸಹಾಯಕ.

English summary

Tackle Skin Pigmentation with Home Remedies

There are many treatments available in the market to tackle this problem. But, before you opt for any chemical treatments, let us tell you about simple remedies to get a salon-like fairness at home.
X
Desktop Bottom Promotion