For Quick Alerts
ALLOW NOTIFICATIONS  
For Daily Alerts

ಮೊಡವೆಗೆ ಗುಡ್ ಬೈ ಹೇಳಲು ಬೇವಿನ ಎಲೆ ಸಾಕು

|

ನಮ್ಮ ಸಮಸ್ಯೆಗಳಿಗೆ ಪರಿಹಾರ ಪ್ರಕೃತಿಯಲ್ಲಿಯೇ ಇರುತ್ತದೆ. ಅದರತ್ತ ನಾವು ಕಣ್ಣಾಡಿಸಬೇಕಷ್ಟೆ. ಬೇವಿನ ಎಲೆ ನಮ್ಮ ಭಾರತದ ಎಲ್ಲಾ ಕಡೆ ದೊರೆಯುತ್ತದೆ. ಈ ಗಿಡವನ್ನು ಪೂಜನೀಯವಾಗಿ ಕಾಣಲಾಗುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಔಷಧೀಯ ಗುಣ ಇರಬಹುದು. ಅದರ ಎಲೆ, ಹೂ, ಕಾಯಿ, ತೊಗಟೆ, ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

ಮೊಡವೆ ಸಮಸ್ಯೆ ಹದಿ ಹರೆಯದ ಕಂಡು ಬರುವ ಸಮಸ್ಯೆಯಾದರೂ ಅದರ ಕೆಟ್ಟ ಪರಿಣಾಮ( ರಂಧ್ರ ಬೀಳುವುದು) ಜೀವನ ಪರ್ಯಾಂತ ನಮ್ಮ ತ್ವಚೆಯಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು. ಮೊಡವೆ ಸಮಸ್ಯೆಯನ್ನು ಬಗೆ ಹರಿಸುವ ತಾಕತ್ತು ಕಹಿ ಬೇವಿನ ಎಲೆಗಿದೆ.

ಈ ಎಲೆಯನ್ನು ಈ ಕೆಳಗಿನಂತೆ ಬಳಸಿದರಂತೂ ಮೊಡವೆ ಸಮಸ್ಯೆಗೆ ಬೇಗನೆ ಗುಡ್ ಬೈ ಹೇಳಬಹುದು

Neem Face Packs For Acne Free Skin

ಕಹಿ ಬೇವಿನ ಎಲೆ ಮತ್ತು ಕಸ್ತೂರಿ ಅರಿಶಿಣ
ಕಹಿ ಬೇವಿನ ಎಲೆಯನ್ನು ಅರಿಶಿಣದ ಜೊತೆ ಹಾಕಿ ರುಬ್ಬಿ ಮುಖಕ್ಕೆ ಹಚ್ಚಿದರೆ ಅರಿಶಿಣ ಮುಖದಲ್ಲಿರುವ ನಂಜನ್ನು ಜೀರಿಕೊಳ್ಳುವುದರಿಂದ ಮೊಡವೆ ದೊಡ್ಡದಾಗುವುದಿಲ್ಲ, ಕಹಿ ಬೇವಿನ ಎಲೆ ಮೊಡವೆ ಏಳುವುದನ್ನು ತಡೆಯುತ್ತದೆ.

ಕಹಿ ಬೇವಿನ ಎಲೆ ಮತ್ತು ನಿಂಬೆ ರಸ
ಮೊಡವೆ ಕಡಿಮೆಯಾಗುತ್ತಾ ಬರುವಾಗ ಕಹಿ ಬೇವಿನ ಎಲೆಯ ಪೇಸ್ಟ್ ಗೆ ನಿಂಬೆ ರಸ ಹಿಂಡಿ ಮುಖಕ್ಕೆ ಹಚ್ಚಿದರೆ ಕಲೆಯೂ ಕಡಿಮೆಯಾಗುವುದು.

ಕಹಿ ಬೇವಿನ ಎಲೆ, ಗಂಧ, ರೋಸ್ ವಾಟರ್
ಈ ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖದಲ್ಲಿ ಮೊಡವೆ, ಅಲರ್ಜಿ ಯಾವುದೂ ಕಾಣಿಸಿಕೊಳ್ಳುವುದಿಲ್ಲ.

ಕಹಿ ಬೇವಿನ ಸ್ಪ್ರೇ
ಕಹಿ ಬೇವನ್ನು ರೊಸ್ ವಾಟರ್ ಹಾಕಿಟ್ಟ ನೀರಿಗೆ ಹಾಕಿ ಒಂದು ರಾತ್ರಿ ಇಟ್ಟು ಈ ನೀರನ್ನು ಮುಖಕ್ಕೆ ಚಿಮುಕಿಸಿ, ನಂತರ ಮೇಕಪ್ ಮಾಡುವುದರಿಂದ ಮೇಕಪ್ ನಿಂದ ತ್ವಚೆ ರಕ್ಷಣೆಯನ್ನು ಮಾಡಬಹುದು.

ಕಡಲೆ ಹಿಟ್ಟು, ಮೊಸರು, ಕಹಿ ಬೇವಿನ ಎಲೆ
ಈ ಮೂರನ್ನು ಮಿಶ್ರ ಮಾಡಿ ಇಡೀ ಮೈಗೆ ಹಚ್ಚುವುದರಿಂದ ಮೈ ಹೊಳಪು ಹೆಚ್ಚುವುದು.

ಸಲಹೆ: ಇಷ್ಟೆಲ್ಲಾ ಮಾಡಲು ಪುರುಸೊತ್ತು ಇಲ್ಲದಾಗ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿ, ಆ ನೀರನ್ನು ಬಳಸುವುದು ಕೂಡ ಒಳ್ಳೆಯದು.

English summary

Neem Face Packs For Acne Free Skin | Tips For Skin Care | ತ್ವಚೆ ಆರೈಕೆಯಲ್ಲಿ ಬೇವಿನ ಎಲೆಯ ಪಾತ್ರ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Neem has an almost magical effect on chronic skin problems like acne, psoriasis, eczema, itching, dry skin, skin ulcers and wrinkles etc. All are skin problems can be cured if you use neem on your skin constantly but the key is that you use it correctly.
X
Desktop Bottom Promotion