Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸ್ಟ್ರೆಚ್ ಮಾರ್ಕ್ಸ್ ಕಲೆಯನ್ನು ಕಡಿಮೆ ಮಾಡುವ ಎಣ್ಣೆಗಳು
ಸ್ಟ್ರೆಚ್ ಮಾರ್ಕ್ಸ್ ಬಿದ್ದರೆ ತುಂಬಾ ಮುಜುಗರ ಉಂಟಾಗುವುದು. ಸೀರೆ ಉಟ್ಟಾಗ ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣುವಂತಿದ್ದರೆ ನಿಮ್ಮ ಸೌಂದರ್ಯವನ್ನೇ ಹಾಳು ಮಾಡುವುದು. ಇನ್ನು ಕೆಲವರಿಗೆ ಕೈ ಮತ್ತು ಕಾಲಿನ ತೊಡೆಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು.
ತೂಕದಲ್ಲಿ ಇದ್ದಕ್ಕಿದ್ದಂತೆ ಏರಳಿತ ಉಂಟಾದರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಅದರಲ್ಲೂ ಮಹಿಳೆಯರಿಗೆ ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುವುತ್ತದೆ..
ಸ್ಟ್ರೆಚ್ ಮಾರ್ಕ್ಸ್ ಬಿದ್ದಾಗ ಅದನ್ನು ಗಮನಿಸದೆ ಹೋದರೆ ಮತ್ತಷ್ಟು ಸ್ಟ್ರೆಚ್ ಮಾರ್ಕ್ಸ್ ಬಿದ್ದು ಕಲೆ ಎದ್ದು ಕಾಣುವಂತಾಗುವುದು. ಆದ್ದರಿಂದ ಅದರ ಬಗ್ಗೆ ಗಮನ ಕೊಡುವುದು ಒಳ್ಳೆಯದು. ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕ್ರೀಮ್ ಗಳು ತುಂಬಾ ದುಬಾರಿಯಾಗಿರುತ್ತದೆ ಹಾಗೂ ಇದನ್ನು ಹಚ್ಚಿದರೆ ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ, ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣದಂತೆ ತಡೆಯುತ್ತದೆ ಅಷ್ಟೇ. ಈ ಕ್ರೀಮ್ ಗಳಷ್ಟೇ ಪರಿಣಾಮಕಾರಿಯಾದ ಕೆಲವೊಂದು ಬಗೆಯ ಎಣ್ಣೆಗಳಿವೆ, ಅವುಗಳು ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಆದ್ದರಿಂದ ದುಬಾರಿ ಬೆಲೆಯ ಕ್ರೀಮ್ ಗಳ ಬದಲು ಈ ಎಣ್ಣೆಗಳನ್ನು ಬಳಸಬಹುದು, ಏನಂತೀರಿ?

ರೋಸ್ ಮೆರಿ ಮತ್ತು ಬಾದಾಮಿ ಎಣ್ಣೆ
ಈ ಎರಡು ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸ್ಟ್ರೆಚ್ ಮಾರ್ಕ್ಸ್ ನ ಮೇಲೆ ಮಸಾಜ್ ಮಾಡಿ 20 ನಿಮಿಷ ಬಿಡಿ. ಈ ವಿಧಾನವನ್ನು ಪ್ರತೀದಿನ ಅನುಸರಿಸಿದರೆ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣುವುದಿಲ್ಲ.

ಆಲೀವ್ ಎಣ್ಣೆ
ಗರ್ಭಿಣಿಯರು ಈ ಎಣ್ಣೆ ಹಚ್ಚುವುದು ತುಂಬಾ ಒಳ್ಳೆಯದು. ಇದು ತ್ವಚೆ ಡ್ರೈಯಾಗುವುದನ್ನು ತಪ್ಪಿಸಿ, ಸ್ಟ್ರೆಚ್ ಮಾರ್ಕ್ಸ್ ಬೀಳದಂತೆ ತಡೆಯುತ್ತದೆ ಹಾಗೂ ಬಿದ್ದ ಸ್ಟ್ರೆಚ್ ಮಾರ್ಕ್ಸ್ ನ ಕಲೆಯನ್ನು ಕಡಿಮೆ ಮಾಡುತ್ತದೆ.

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ಅನೇಕ ಸೌಂದರ್ಯವರ್ಧಕ ಗುಣಗಳಿವೆ. ಈ ಎಣ್ಣೆಯನ್ನು ರಾತ್ರಿ ಹಚ್ಚಿ, ಬೆಳಗ್ಗೆ ತೊಳೆಯಿರಿ. ಈ ರೀತಿ ಮಾಡುವುದರಿಂದಲೂ ಸ್ಟ್ರೆಚ್ ಮಾರ್ಕ್ಸ್ ನ ಕಲೆಯನ್ನು ಕಡಿಮೆ ಮಾಡಬಹುದು.

ಗೋಧಿ ಎಣ್ಣೆ
ಗೋಧಿ ಎಣ್ಣೆಯನ್ನು ರೋಸ್ ಆಯಿಲ್ ಜೊತೆ ಮಿಕ್ಸ್ ಮಾಡಿ ಅದನ್ನು ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚಿ ಮಸಾಜ್. ಈ ರೀತಿ ವಾರದಲ್ಲಿ 3 ಬಾರಿ ಮಾಡಿ. ಸ್ಟ್ರೆಚ್ ಮಾರ್ಕ್ಸ್ ಬೀಳುತ್ತಿರುವಾಗಲೇ ಈ ಎಣ್ಣೆ ಬಳಸಿದರೆ ಮಾತ್ರ ನಿಮಗೆ ಉತ್ತಮ ಫಲಿತಾಂಶ ದೊರೆಯುವುದು.

ಲ್ಯಾವೆಂಡರ್ ಎಣ್ಣೆ
5 ಹನಿ ಲ್ಯಾವೆಂಡರ್ ಎಣ್ಣೆಯನ್ನು 2 ಹನಿ ಆಲೀವ್ ಎಣ್ಣೆ ಜೊತೆ ಮಿಕ್ಸ್ ಮಾಡಿ ಸ್ಟ್ರೆಚ್ ಮಾರ್ಕ್ಸ್ ಬಿದ್ದ ಕಡೆ ಹಚ್ಚುವುದರಿಂದ ಸ್ಟ್ರೆಚ್ ಮಾರ್ಕ್ಸ್ ನ ಕಲೆಯನ್ನು ಕಡಿಮೆ ಮಾಡಬಹುದು.

ಜೊಜೊಬೊ ಎಣ್ಣೆ
3 ಹನಿ ಜೊಜೊಬಾ ಎಣ್ಣೆ, 10 ಹನಿ patchouli oil, 5 ಹನಿ ಲ್ಯಾವೆಂಡರ್ ಎಣ್ಣೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚುವುದರಿಂದಲು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಬಹುದು.

ಆಪ್ರಿಕಾಟ್ ಆಯಿಲ್
ತೂಕ ತುಂಬಾ ಕಳೆದುಕೊಂಡು ಸ್ಟ್ರೆಚ್ ಮಾರ್ಕ್ಸ್ ಬೀಳುತ್ತಿದ್ದರೆ ಆಪ್ರಿಕಾಟ್ ಆಯಿಲ್ ಹಚ್ಚುವುದು ಒಳ್ಳೆಯದು, ಇದು ತ್ವಚೆಯನ್ನು ಬಿಗಿಯಾಗಿಸಿ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತದೆ.

ಎಳ್ಳೆಣ್ಣೆ
ಎಳ್ಳೆಣ್ಣೆ ಕೂಡ ಸ್ಟ್ರೆಚ್ ಮಾರ್ಕ್ಸ್ ನ ಕಲೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.



Click it and Unblock the Notifications