For Quick Alerts
ALLOW NOTIFICATIONS  
For Daily Alerts

ಈ ಆಹಾರಗಳನ್ನು ತಿಂದರೆ ಮೊಡವೆ ಬರುವುದೇ?

By Super
|

ಸುಂದರ ಮುಖದಲ್ಲಿ ಮೊಡವೆ ಆದರೆ ಅದೊಂದು ದೊಡ್ಡ ಸಮಸ್ಯೆಯೇ ಸರಿ.ಮೊಡವೆ ಹೋಗಲಾಡಿಸಲು ಸಾಕಷ್ಟು ಕಷ್ಟ ಪಡಬೇಕು, ಒಮ್ಮೆ ಮೊಡವೆ ಮುಖದಲ್ಲಿ ಕಾಣಿಸಿಕೊಂಡರೆ ಕನಿಷ್ಠ ಒಂದು ವಾರ ಹೋಗಲಾರದು ಜೊತೆಗೆ ಕೆಲವೊಮ್ಮೆ ಕಲೆ ಆಗುವ ಸಾಧ್ಯತೆ ಕೂಡ ಹೆಚ್ಚು. ಮೊಡವೆರಹಿತ ನುಣುಪಾದ ಚರ್ಮ ತಮ್ಮದಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ.

ಚಾಕಲೇಟ್, ಬರ್ಗರ್, ಕರಿದ ಪದಾರ್ಥಗಳು ಇನ್ನೂ ಕೆಲವು ಆಹಾರಗಳನ್ನು ತಿನ್ನುವುದರಿಂದ ಮೊಡವೆಗಳಾಗುತ್ತದೆ ಎಂದು ನಾವೆಲ್ಲರೂ ಕೇಳಿದ್ದೇವೆ. ಹಾಗೆಯೇ ಇವೆಲ್ಲವೂ ಒಂದು ಭ್ರಮೆ ಎಂದು ಕೂಡ ಕೇಳಲ್ಪಟ್ಟಿರುತ್ತೇವೆ. ಸಾಕಷ್ಟು ಚರ್ಮರೋಗ ತಜ್ಞರು ಹೇಳುವ ಪ್ರಕಾರ ಆಹಾರಕ್ಕೂ ಮತ್ತು ಮೊಡವೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ಈ ಕಲ್ಪನೆಯನ್ನು ತಳ್ಳಿಹಾಕುತ್ತಾರೆ ಏಕೆಂದರೆ ನಡೆಸಿದ ಸಾಕಷ್ಟು ಸಂಶೋಧನೆಗಳು ಅನಿಶ್ಚಿತವಾಗಿದೆ.

ನಾವು ತಿನ್ನುವ ಆಹಾರಕ್ಕೂ ಮತ್ತು ಮೊಡವೆಗೂ ಯಾವುದೇ ರೀತಿಯ ಸಂಪರ್ಕವಿಲ್ಲ.ಆದರೆ ಇದನ್ನು ಸಾಬೀತುಪಡಿಸುವುದು ಕಷ್ಟದ ಕೆಲಸವಾಗಿದ ಎನ್ನುವ ಕಾರಣಕ್ಕಾಗಿ ಹಲವಾರು ವರ್ಷಗಳಿಂದ ಆಹಾರ ಪದ್ಧತಿ ಮತ್ತು ಮೊಡವೆ ಎಂಬುದು ವಿವಾದಾಸ್ಪದವಾಗಿಯೇ ಇದೆ.

ಅನೇಕ ಹಳೆಯ ಅಧ್ಯಯನಗಳು ಸಾಕಷ್ಟು ವಿಷಯಗಳನ್ನು ಒದಗಿಸಲಾಗದೆ ನಿಷ್ಪ್ರಯೋಜಕ ಎನಿಸಿಕೊಂಡವು. ಇನ್ನೊಂದು ಸಮಸ್ಯೆ ಎಂದರೆ ವೈಯಕ್ತಿಕ ಅಭಿಪ್ರಾಯಗಳನ್ನು ದೂರವಿಡುವುದು ಕಷ್ಟದ ಕೆಲಸ. ಆದರೆ ಇತ್ತೀಚಿನ ಅಧ್ಯಯನಗಳು ಹೇಳುವ ಪ್ರಕಾರ ಆಹಾರ ಮತ್ತು ಮೊಡವೆ ಸಂಪರ್ಕವಿದೆ ಎಂಬುದು ಕೇವಲ ಕಲ್ಪನೆಯಲ್ಲ ಎನ್ನಲಾಗಿದೆ.

ಈ ಕೆಳಗೆ ನೀಡಿರುವ ಆಹಾರ ಪದಾರ್ಥಗಳು ಮೊಡವೆ ಹೆಚ್ಚಲು ಕಾರಣವಾಗಬಹುದು ಎನ್ನಲಾಗಿದೆ.

1. ಆಹಾರ ಮತ್ತು ಮೊಡವೆ

1. ಆಹಾರ ಮತ್ತು ಮೊಡವೆ

ಮೊಡವೆಗೆ ಆಹಾರ ಪದ್ಧತಿ ಕಾರಣ ಹೌದು ಅಥವಾ ಅಲ್ಲ ಎಂಬುದರ ಬಗ್ಗೆ ವಿವಾದ ಇಂದಿಗೂ ನಡೆಯುತ್ತಲೇ ಇದೆ.ಕೆಲವು ವಿಷಯಗಳು ನಿಮ್ಮ ಚರ್ಮ ಯಾವ ರೀತಿಯವು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ನಮಗೆ ಸ್ವಲ್ಪ ಮಟ್ಟಿಗೆ ಪಿಜ್ಜಾ, ಬರ್ಗರ್ ತಿನ್ನುವುದರಿಂದ ಯಾವುದೇ ಹಾನಿಕಾರಕ ಅಂಶ ಆಗುವುದಿಲ್ಲ ಎನ್ನುವುದಕ್ಕೆ ಕೆಲವು ಮಾದರಿಗಳು ಕೂಡ ಕಾಣಿಸಿಕೊಂಡಿವೆ.

2.ಹಾಲಿನ ಉತ್ಪನ್ನಗಳು

2.ಹಾಲಿನ ಉತ್ಪನ್ನಗಳು

ಡೈರಿ ಉತ್ಪನ್ನಗಳನ್ನು ಹೆಚ್ಚು ತಿನ್ನುವುದರಿಂದ ಮೊಡವೆಗಳು ಆಗುವ ಸಾಧ್ಯತೆ ಇದೆ ಎಂದು ಹೆಚ್ಚಿನ ಜನರು ಹೇಳುತ್ತಾರೆ. ಮೊಡವೆ ಆಗಲು ಪ್ರಮುಖ ಕಾರಣ ಹಾರ್ಮೋನ್, ಗರ್ಭ ಧರಿಸಿದ ಹಸುವಿನ ಹಾಲಿನಲ್ಲಿ ಹಾರ್ಮೋನ್ ಅಂಶ ಇರುವುದರಿಂದ ಡೈರಿ ಉತ್ಪನ್ನಗಳು ಮೊಡವೆಗೆ ಕಾರಣ ಎನ್ನಲಾಗುತ್ತದೆ.

3. ರಿಫೈನ್ದ್ ಕಾರ್ಬೋಹೈಡ್ರೇಟ್ಸ್

3. ರಿಫೈನ್ದ್ ಕಾರ್ಬೋಹೈಡ್ರೇಟ್ಸ್

ಕಾರ್ಬೋಹೈಡ್ರೇಟ್ ಅನ್ನು ಒಳಗೊಂಡಿರುವ ಕ್ಯಾಂಡಿ,ಕುಕ್ಕೀಸ್,ಬ್ರೆಡ್ ಇವುಗಳೆಲ್ಲವೂ ಈ ಲಿಸ್ಟ್ ನಲ್ಲಿ ಸೇರುತ್ತವೆ. ಅದರಲ್ಲಿರುವ ಸಕ್ಕರೆ ಅಂಶ ಮೊಡವೆ ಹೆಚ್ಚಲು ಕಾರಣವಾಗುತ್ತದೆ ಎನ್ನಲಾಗಿದೆ.

4.ಕೆಫೀನ್

4.ಕೆಫೀನ್

ಕೆಫೀನ್ ದೇಹದಲ್ಲಿ ಒತ್ತಡದ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ ಇದರಿಂದ ಚರ್ಮಕ್ಕೆ ಹಾನಿಯಾಗಿ ಮೊಡವೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತದೆ.ಕೆಫೀನ್ ನಿದ್ರೆಯನ್ನು ಕೂಡ ದೂರ ಮಾಡುತ್ತದೆ.ನಿಮಗೆ ಮೊಡವೆ ನಿವಾರಣೆ ಆಗಬೇಕೆಂದರೆ ಸರಿಯಾದ ನಿದ್ರೆಯ ಅವಶ್ಯಕತೆ ಇದೆ.ಆದ್ದರಿಂದ ಕೆಫೀನ್ ಅಂಶವಿರುವ ಪದಾರ್ಥಗಳನ್ನು ಬಳಸುವುದು ಸೂಕ್ತವಲ್ಲ.

5.ಚಾಕಲೇಟ್

5.ಚಾಕಲೇಟ್

ಚಾಕಲೇಟ್ ಮೊಡವೆ ಬರಲು ಕಾರಣ ಎಂದು ಹೇಳಲಾಗುತ್ತದೆ ಮತ್ತು ಇದನ್ನು ತಳ್ಳಿಹಾಕುವಂತಿಲ್ಲ. ಚಾಕಲೇಟ್ ಡೈರಿ ಉತ್ಪನ್ನ,ಕೆಫೀನ್ ಮತ್ತು ಸಕ್ಕರೆ ಅಂಶ ಇವುಗಳನ್ನೆಲ್ಲ ಒಳಗೊಂಡಿದೆ. ಇವುಗಳೆಲ್ಲ ಮೊಡವೆ ಬರಲು ಕಾರಣವಾಗುವ ಅಂಶಗಳು. ಆದರೆ ಪ್ರತಿದಿನ ಸ್ವಲ್ಪ ತಿನ್ನುವುದರಿಂದ ಯಾವುದೇ ರೀತಿಯ ತೊಂದರೆಯಿಲ್ಲ.

6.ಜಿಡ್ಡಿನ ಆಹಾರಗಳು

6.ಜಿಡ್ಡಿನ ಆಹಾರಗಳು

ಕೊಬ್ಬಿನ ಅಂಶವನ್ನು ಹೊಂದಿರುವ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆ ಹೆಚ್ಚುತ್ತದೆ.ಕೊಬ್ಬಿನ ಅಂಶ ಹೆಚ್ಚಿರುವ ಈ ರೀತಿಯ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ ಇದರಿಂದ ಹಾರ್ಮೋನ್ ಏರುಪೇರು ಉಂಟಾಗಿ ಮೊಡವೆಗಳು ಏಳುವ ಸಾಧ್ಯತೆಯಿದೆ.ಹೆಚ್ಚು ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳು ದೇಹದಲ್ಲಿ ರಕ್ತ ಪ್ರವಾಹ ಕಡಿಮೆ ಮಾಡಿ ಆಮ್ಲಜನಕ ಮತ್ತು ಇತರ ಪೋಷಕಾಂಶಗಳ ಸಂಚಲನವನ್ನು ನಿಧಾನಗೊಳಿಸುತ್ತದೆ.ಚರ್ಮಕ್ಕೆ ಆ ಪೋಷಕಾಂಶಗಳ ಅಗತ್ಯವಿದೆ ಆದ್ದರಿಂದ ಕೊಬ್ಬಿನಂಶ ಇರುವ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆಗಳು ಹೆಚ್ಚುತ್ತವೆ.

7. ಕರಿದ ಪದಾರ್ಥಗಳು

7. ಕರಿದ ಪದಾರ್ಥಗಳು

ಮೊದಲೇ ಹೇಳಿದಂತೆ ಜಿಡ್ಡಿನ ಅಂಶ ಹೊಂದಿರುವ ಕಾರ್ಬೋಹೈಡ್ರೇಟ್ ಅಧಿಕವಿರುವ ಫ್ರೆಂಚ್ ಫ್ರೈಸ್ ತಿನ್ನುವುದರಿಂದ ಮೊಡವೆಗಳು ಹೆಚ್ಚುವ ಸಾಧ್ಯತೆಗಳಿವೆ.

8. ಸಮುದ್ರಾಹಾರಗಳು

8. ಸಮುದ್ರಾಹಾರಗಳು

ಅಯೋಡಿನ್ ಅಂಶ ಹೆಚ್ಚಿರುವ ಪದಾರ್ಥಗಳು ಮೊಡವೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತವೆ.ಸಮುದ್ರಾಹಾರಗಳಾದ ಏಡಿ, ಸೀಗಡಿ ಇವುಗಳಲ್ಲಿ ಅಯೋಡಿನ್ ಅಂಶ ಹೆಚ್ಚಿರುವುದರಿಂದ ಮೊಡವೆಗಳು ಹೆಚ್ಚುವ ಸಾಧ್ಯತೆ ಇರುತ್ತದೆ.

9.ಪಾಲಾಕ್ ಸೊಪ್ಪು

9.ಪಾಲಾಕ್ ಸೊಪ್ಪು

ಪಾಲಾಕನ್ನು ನೀವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹುಡುಕಲು ಬಹಳ ಕಷ್ಟ,ಆದರೆ ಪಾಲಾಕ್ ನಲ್ಲಿ ಅಯೋಡಿನ್ ಅಂಶ ಹೆಚ್ಚಿದೆ.ನಿಮಗೆ ಮೊಡವೆಯ ಸಮಸ್ಯೆ ಇದ್ದರೆ ಈ ಪೌಷ್ಟಿಕಾಂಶ ಭರಿತ ಪಾಲಾಕ್ ಬಳಸುವುದನ್ನು ಸ್ವಲ್ಪ ಕಡಿಮೆ ಮಾಡಬೇಕಾಗುತ್ತದೆ.

10.ಮಸಾಲೆಯುಕ್ತ ಪದಾರ್ಥಗಳು

10.ಮಸಾಲೆಯುಕ್ತ ಪದಾರ್ಥಗಳು

ನೀವು ಈಗಾಗಲೇ ಮೊಡವೆ ಹೊಂದಿದ್ದರೆ ಅದನ್ನು ಹೆಚ್ಚಿಸಲು ಮಸಾಲೆ ಪದಾರ್ಥಗಳು ಕಾರಣವಾಗದಿರಬಹುದು,ಆದರೆ ಮೊಡವೆ ಬರಲು ಇದು ಕೂಡ ಒಂದು ಕಾರಣ.ಏಕೆಂದರೆ ಮಸಾಲೆ ಪದಾರ್ಥಗಳು ದೇಹದ ಉಷ್ಣತೆ ಹೆಚ್ಚಿಸುತ್ತದೆ ಮತ್ತು ಚರ್ಮದ ಉರಿಯೂತಕ್ಕೆ ಕಾರಣವಾಗುತ್ತದೆ ಇದರಿಂದ ಮೊಡವೆ ಹೆಚ್ಚಬಹುದು.

11.ಮಾಂಸ

11.ಮಾಂಸ

ನಾವು ತಿನ್ನುವ ಬಹಳಷ್ಟು ಪ್ರಾಣಿಗಳ ಮಾಂಸದಲ್ಲಿ ಆಂಟಿಬಯಾಟಿಕ್ಸ್ ಹಾಗು ಹಾರ್ಮೋನುಗಳು ಬಹಳಷ್ಟು ಇರುತ್ತವೆ,ಅಂದರೆ DHT ಎನ್ನಬಹುದು.ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಬಳಸಿದಾಗ ಮೊಡವೆ ಬರಲು ಕಾರಣವಾಗುತ್ತದೆ.ಮಾಂಸ ತಿನ್ನುವುದರಿಂದ ph ಮಟ್ಟ ಹೆಚ್ಚಿಸುವುದರಿಂದ ಉರಿಯೂತದ ಸಮಸ್ಯೆ ಕಾಣಿಸಿಕೊಳ್ಳಬಹುದು.

12. ಒಣಗಿಸಿದ ಹಂದಿ ಮಾಂಸ

12. ಒಣಗಿಸಿದ ಹಂದಿ ಮಾಂಸ

ಹಂದಿ ಮಾಂಸಗಳು ಅತಿ ರುಚಿ ಎಂದೆನಿಸಿದರೂ ಕೂಡ ಕೆಲವರಿಗೆ ಇದರಿಂದ ಮೊಡವೆಗಳು ಹೆಚ್ಚಬಹುದು.

13.ಸೋಡಾ ಮತ್ತು ಎನೆರ್ಜಿ ಡ್ರಿಂಕ್ಸ್

13.ಸೋಡಾ ಮತ್ತು ಎನೆರ್ಜಿ ಡ್ರಿಂಕ್ಸ್

ನಾವು ಮೊದಲೇ ತಿಳಿಸಿದಂತೆ ಕೆಫೀನ್ ಚರ್ಮಕ್ಕೆ ಒತ್ತಡವನ್ನು ನೀಡುತ್ತದೆ ಮತ್ತು ಇದು ಮೊಡವೆ ಬರಲು ಕಾರಣವಾಗುತ್ತದೆ.ಕೆಫಿನ್ ಬಳಕೆ ಹೆಚ್ಚಿರುವ ಸೋಡಾ ಮತ್ತಿತರ ಎನೆರ್ಜಿ ಡ್ರಿಂಕ್ಸ್ ನಿಮ್ಮ ನುಣುಪಾದ ಚರ್ಮದ ಮೇಲೆ ಮೊಡವೆಗಳನ್ನು ತಂದರೆ ಆಶ್ಚರ್ಯಪಡಬೇಕಾಗಿಲ್ಲ.

14.ಆಲ್ಕೋಹಾಲ್

14.ಆಲ್ಕೋಹಾಲ್

ನೀವು ಆಲ್ಕೋಹಾಲ್ ತೆಗೆದುಕೊಂಡರೆ ನಿಮ್ಮ ದೇಹ ಸ್ವಾಭಾವಿಕವಾಗಿ ನಿರ್ಜಲೀಕರಣವಾಗುತ್ತದೆ. ತ್ವಚೆಯ ತೇವಾಂಶ ಕಡಿಮೆಯಾದರೆ ಮೊಡವೆ ಕಾಣಿಸಿಕೊಳ್ಳಬಹುದು.

English summary

Do These Foods Cause Acne?

For years, the relationship between diet and acne has been controversial. But there is no doubt that there is a connection between what we eat and the condition of our skin.
X
Desktop Bottom Promotion