For Quick Alerts
ALLOW NOTIFICATIONS  
For Daily Alerts

ಬ್ಲೀಚಿಂಗ್ ಗೆ ನೈಸರ್ಗಿಕ ವಿಧಾನ ಉತ್ತಮ

|
ರಾಸಾಯನಿಕವಿರುವ ಬ್ಲೀಚಿಂಗ್ (ಬ್ಲೀಚಿಂಗ್ ಬಳಸುವ ಮುನ್ನ ಈ ಅಂಶ ಗಮನಿಸಿ) ಬದಲು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಬ್ಲೀಚಿಂಗ್ ತಯಾರಿಸುವುದು ತ್ವಚೆಗೆ ಸೇಫ್. ನೈಸರ್ಗಿಕ ವಸ್ತುಗಳಿಂದ ಮನೆಯಲ್ಲಿಯೆ ಫೇಸ್ ಬ್ಲೀಚ್ ತಯಾರಿಸುವ ರೆಸಿಪಿ ನೋಡಿ ಇಲ್ಲಿದೆ:
ಇವುಗಳನ್ನು ವಾರಕ್ಕೆ ಒಂದು ಬಾರಿ ಬಳಸಬಹುದು.

ಜೇನು, ನಿಂಬೆ ಬ್ಲೀಚ್ :
1. ಒಂದು ಚಮಚ ಜೇನು
2. ಅರ್ಧ ಚಮಚ ಹಾಲಿನ ಕೆನೆ
3. ಒಂದು ಚಮಚ ನಿಂಬೆ ರಸ
ಇವುಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.

ಅರಿಶಿಣ ಬ್ಲೀಚ್ :
1. ಒಂದು ಚಮಚ ಅರಿಶಿಣ
2. ಸ್ವಲ್ಪ ನಿಂಬೆ ರಸ
3. ರೋಸ್ ವಾಟರ್
ಈ ಮಿಶ್ರಣಗಳನ್ನು ಮಿಶ್ರ ಮಾಡಿ ಹಚ್ಚುವುದು ಒಳ್ಳೆಯದು.

ಹಾಲಿನ ಬ್ಲೀಚಿಂಗ್ :
1. ಎರಡು ಚಮಚ ಹಾಲು
2. ಒಂದು ಚಮಚ ನಿಂಬೆ ರಸ
ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಬೇಕು.

ಗಂಧದ ಬ್ಲೀಚಿಂಗ್ :
1. ಗಂಧದ ಪುಡಿ 2 ಚಮಚ
2. ನಿಂಬೆರಸ 2 ಚಮಚ
3. ಒಂದು ಚಮಚ ಟೊಮೆಟೊ ರಸ
ಈ 3 ಮಿಶ್ರಣವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.

English summary

Facial Bleach Recipe | Tips For Beauty | ಫೇಶಿಯಲ್ ಬ್ಲೀಚ್ ರೆಸಿಪಿ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Bleaching helps to eliminate unwanted dark spots . But so much chemical in the bleach may harm the skin. So instead of using chemical you can use natural facial bleaching, it is healthy for skin. Here there are natural bleaching recipe.
Story first published: Tuesday, March 6, 2012, 12:35 [IST]
X
Desktop Bottom Promotion