Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸೌಂದರ್ಯದ ಮಾಂತ್ರಿಕ ಶಕ್ತಿ ಪರಂಗಿಯಲ್ಲಿದೆ
ಪರಂಗಿಯಲ್ಲಿ ವಿಟಮಿನ್ ಎ, ಇ ಮತ್ತು ಸಿ ಹಾಗೂ ಆಂಟಿಯಾಕ್ಸಿಡಂಟ್ ಇರುವುದರಿಂದ ತ್ವಚೆಯನ್ನು ಒಳಗಿನಿಂದಲೇ ಶುದ್ಧಗೊಳಿಸಿ ಪರಿಣಾಮಕಾರಿ ಹೊಳಪನ್ನು ನೀಡುತ್ತದೆ. ಪರಂಗಿಯಲ್ಲಿನ ಪಪೇನ್ ಎಂಬ ಅಂಶ ತ್ವಚೆಗೆ ಮೆರುಗು ನೀಡುತ್ತೆ. ತ್ವಚೆಯಲ್ಲಿನ ಕೊಳೆಯನ್ನು ನಿರ್ಮೂಲನೆ ಮಾಡಿ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತೆ. ಮೊಡವೆ, ಕಪ್ಪು ಕಲೆಗಳನ್ನು ಕರಗಿಸುತ್ತೆ ಮತ್ತು ಮುಖ ಸುಕ್ಕುಗಟ್ಟುವುದನ್ನೂ ತಡೆಯುತ್ತದೆ.
ತ್ವಚೆಗೆ ಪರಂಗಿ ಬಳಕೆ ಹೇಗೆ?
1. ಚೆನ್ನಾಗಿ ಕಳಿತ ಪರಂಗಿ ಹಣ್ಣನ್ನು ಚೆನ್ನಾಗಿ ಹಿಸುಕಿ ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷದ ನಂತರ ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ತ್ವಚೆಯನ್ನು ಮೃದುಗೊಳಿಸುತ್ತದೆ.
2. ಮುಖ ವಯಸ್ಸಾದಂತೆ ಕಾಣುತ್ತಿದ್ದರೆ ಪರಂಗಿ ಹಣ್ಣಿನಿಂದಫೇಸ್ ಮಾಸ್ಕ್ ಮಾಡಿಕೊಳ್ಳಬೇಕು. ಪರಂಗಿಯನ್ನು ಚೆನ್ನಾಗಿ ಹಿಸುಕಿ ಜೇನು ಮತ್ತು ಅಕ್ಕಿ ಹಿಟ್ಟನ್ನು ಕಲೆಸಿ ಹಚ್ಚಿಕೊಂಡು 15-20 ನಿಮಿಷ ಬಿಡಬೇಕು. ಈ ರೀತಿ ವಾರಕ್ಕೆ ಮೂರು ಬಾರಿ ಮಾಡಿದರೆ ತ್ವಚೆ ಬಿಗಿಯಾಗುತ್ತದೆ.
3. ಪರಂಗಿಯೊಂದಿಗೆ ಜೇನು ಮತ್ತು ಆಲಿವ್ ಎಣ್ಣೆ ಬೆರೆಸಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಚರ್ಮದ ರಂಧ್ರಗಳು ತೆರೆದುಕೊಂಡು ಚರ್ಮ ಹೊಳೆಯುವಂತಾಗುತ್ತದೆ.
4. ಪರಂಗಿ ಹಣ್ಣನ್ನು ಮುಲ್ತಾನಿಮಿಟ್ಟಿ ಮತ್ತು 1 ಚಮಚ ಲೋಳೆಸರ ಬೆರೆಸಿ ಹಚ್ಚಿಕೊಂಡರೆ ತ್ವಚೆ ಶುದ್ಧಗೊಳ್ಳುತ್ತದೆ. ಇದನ್ನು 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.
5. ಪರಂಗಿ ಹಣ್ಣನ್ನು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಕೆಲವೇ ವಾರಗಳಲ್ಲಿ ಮುಖದ ಕಾಂತಿ ಹೆಚ್ಚುತ್ತದೆ. ಇದು ಬೇಗನೆ ಫಲಿತಾಂಶ ಕೊಡುವುದಿಲ್ಲ. ಆದರೆ ಫಲಿತಾಂಶ ಗ್ಯಾರಂಟಿ.