For Quick Alerts
ALLOW NOTIFICATIONS  
For Daily Alerts

ಹೆಚ್ಚು ಚಾಕೋಲೆಟ್ ತಿನ್ತೀರಾ? ಮೊಡವೆ ಬರುತ್ತೆ!

|
Chocolate Consumption
ಹದಿಹರೆಯದವರು ಅಧಿಕ ಚಾಕಲೇಟ್ ಸೇವಿಸಿದರೆ ಮೊಡವೆ ಸಮಸ್ಯೆಯೂ ಹೆಚ್ಚಾಗುತ್ತದೆ ಎಂದಿದೆ ನೂತನ ಅಧ್ಯಯನ.

ಚಾಕಲೇಟ್, ಚಿಪ್ಸ್ ಗಳ ಅತಿಯಾದ ಸೇವನೆ, ಕಡಿಮೆ ತರಕಾರಿ, ಇಂತಹ ಆಹಾರಾಭ್ಯಾಸಗಳು ಮೊಡವೆಯನ್ನು ಉಲ್ಬಣಗೊಳಿಸುತ್ತದೆ ಎಂದಿದೆ. ಮೊಡವೆ ಮತ್ತು ಆಹಾರ ಕ್ರಮದ ನಡುವಿನ ಸಂಬಂಧವನ್ನು ಈ ಅಧ್ಯಯನ ತಿಳಿಸಿಕೊಟ್ಟಿದೆ.

ಓಸ್ಲೊ ವಿಶ್ವವಿದ್ಯಾಲಯದ ಈ ಅಧ್ಯಯನದಲ್ಲಿ, ಸಂಶೋಧಕರಾದ ಜಾನ್ ಆಂಡರ್ಸ್ ಹಾಲ್ವರ್ಸನ್, ಲಾಸಾ ಮತ್ತು ಬೋಸ್ಟನ್ ಎಂಬುವರು 3, 775 ಹದಿಹರೆಯದವರನ್ನು ಅಧ್ಯಯನಕ್ಕೆ ಒಳಪಡಿಸಿ ಮೊಡವೆಗೆ ಮೂಲ ಕಾರಣವೇನು ಎಂಬ ಕುರಿತು ಸಂಶೋಧನೆ ನಡೆಸಿದ್ದರು.

18-19 ವಯೋಮಿತಿಯವರಿಗೆ ಪ್ರಶ್ನಾವಳಿ ನೀಡಿ ಅವರ ಆಹಾರ ಕ್ರಮ, ಜೀವನ ಶೈಲಿ ಮತ್ತು ಮಾನಸಿಕ ಸ್ಥಿತಿಗತಿಯ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನಾವಳಿಯಿಂದ, ಹದಿಹರೆಯದವರ ತ್ವಚೆ ಸಮಸ್ಯೆಗೆ ಅವರ ಆಹಾರ ಶೈಲಿಯೇ ಪ್ರಮುಖ ಕಾರಣ ಎಂಬ ಅಂಶ ಸಾಬೀತಾಗಿದೆ.

ಅದರಲ್ಲೂ ಹುಡುಗಿಯರಲ್ಲಿ, ಮೊಡವೆ ಮತ್ತು ಅವರ ಆಹಾರ ಕ್ರಮದ ನಡುವಣ ಸಂಬಂಧ ತುಂಬಾ ಗಟ್ಟಿಯಿದೆ, ಹುಡುಗಿಯರು ಹೆಚ್ಚು ಚಾಕಲೇಟ್ ಮತ್ತು ಚಿಪ್ಸ್ ಸೇವನೆ ಮಾಡುವುದರಿಂದ ಅವರದಲ್ಲಿಯೇ ಮೊಡವೆ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಕೆಲವೊಮ್ಮೆ ಪರಿಸರ ಮತ್ತು ಮಾನಸಿಕ ಸ್ಥಿತಿಗತಿ ಮತ್ತು ಹಾರ್ಮೋನುಗಳ ಏರಿಳಿತವೂ ಮೊಡವೆಯನ್ನು ತಂದೊಡ್ಡುತ್ತದೆ. ಆದರೆ ಮೊಡವೆ ಬರುವ ಸಾಧ್ಯತೆ ಅಸಮರ್ಪಕ ಆಹಾರ ಕ್ರಮದಿಂದಲೇ ಹೆಚ್ಚು ಎನ್ನಲಾಗಿದೆ.

English summary

Chocolate Consumption | Chocolate cause Pimples | ಚಾಕಲೇಟ್ ಸೇವನೆ | ಹೆಚ್ಚು ಚಾಕಲೇಟ್ ಸೇವನೆಯಿಂದ ಮೊಡವೆ ಸಮಸ್ಯೆ

Consuming more chocolates can be a cause for pimple problem in teenagers, a study suggested.
Story first published: Saturday, December 17, 2011, 14:05 [IST]
X
Desktop Bottom Promotion