ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

Posted By:
Subscribe to Boldsky
Baking Soda Beauty Recipes
ಅಡುಗೆ ಸೋಡಾಕ್ಕೆ ಅಡುಗೆಯ ರುಚಿ ಮಾತ್ರವಲ್ಲ , ಸೌಂದರ್ಯ ಹೆಚ್ಚಿಸುವ ಗುಣ ಕೂಡ ಇದೆ. ಅಡುಗೆ ಮನೆ ಅಂದ ಮೇಲೆ ಅಡುಗೆ ಸೋಡಾ ಇದ್ದೆ ಇರುತ್ತದೆ.

ಆದ್ದರಿಂದ ಇದನ್ನು ಬಳಸಿ ತ್ವಚೆ ರಕ್ಷಣೆ ಕೂಡ ಮಾಡಬಹುದಾಗಿದೆ. ಅದ್ಹೇಗೆ ಎಂದು ತಿಳಿಯ ಬೇಕೆ? ಹಾಗಾದರೆ ಈ ವಿಧಾನವನ್ನು ಅನುಸರಿಸಬಹುದಾಗಿದೆ.

1. ಅಡುಗೆ ಸೋಡಾಕ್ಕೆ ಮೊಡವೆ ವಿರುದ್ಧ ಹೋರಾಡುವ ಗುಣ ಇದೆ. ಈ ಅಡುಗೆ ಸೋಡಾ 1/4 ಚಮಚವನ್ನು ನಿಂಬೆ ಅಥವಾ ಕಿತ್ತಳೆ ರಸಕ್ಕೆ ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ತೊಳೆಯಬೇಕು. ಈ ರೀತಿ ಪ್ರತಿವಾರ ಮಾಡಿದರೆ ಮುಖದಲ್ಲಿ ಮೊಡವೆ ಏಳುವುದಿಲ್ಲ.

2.ಅಡುಗೆ ಸೋಡಾವನ್ನು ನೇರವಾಗಿ ಮುಖಕ್ಕೆ ಹಚ್ಚಬಹುದಾಗಿದೆ, ಇದರ ಪುಡಿಯನ್ನು ನೀರಿನಲ್ಲಿ ಮಿಶ್ರಮಾಡಿ ನಿಧಾನಕ್ಕೆ ಮುಖದಲ್ಲಿ 5 ನಿಮಿಷ ಉಜ್ಜಿ ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ತ್ವಚೆಯನ್ನು ಕ್ಲೆನ್ಸ್ ಮಾಡಬಹುದಾಗಿದೆ.

3. ಸ್ನಾನದ ನಂತರ ಕಂಕುಳಕ್ಕೆ ಅಡುಗೆ ಸೋಡಾವನ್ನು ಹಾಕಿದರೆ ಇದರಿಂದಾಗಿ ಬೆವರಿನದುರ್ವಾಸನೆ ಬರುವುದಿಲ್ಲ. ಇದರಲ್ಲಿ ದೇಹಕ್ಕೆ ಹಾನಿಕಾರವಾದ ಯಾವುದೆ ಕೆಮಿಕಲ್ ಇರುವುದಿಲ್ಲ, ಮತ್ತು ಆಲ್ಕೋಹಾಲ್ ಅಂಶ ಕೂಡ ಇರುವುದಿಲ್ಲ. ಹತ್ತಿಯನ್ನು ಬಳಸಿ ಸೋಡಾವನ್ನು ಮೈಗೆ ಹಾಕಿ.

4. ಸ್ನಾನ ಮಾಡುವ ಮಲೊದಲು ಎಣ್ಣೆಯನ್ನು ಅಡುಗೆ ಸೋಡಾ ಜೊತೆ ಬೆರೆಸಿ ಹಾಕುವುದು ಕೂಡ ಚಳಿಗಾಲದ ತ್ವಚೆ ರಕ್ಷಣೆಗೆ ಒಳ್ಳೆಯದು.

5. ಟಬ್ ನಲ್ಲಿ ಒಂದು ಚಮಚ ಸೋಡಾ, ಮತ್ತು ಬ್ಯೂಟಿ ಸಾಮಾಗ್ರಗಳನ್ನು ಹಾಕಿ ಅದರಲ್ಲಿ ಮೈಯನ್ನು ಮುಳುಗಿಸಿದರೆ ಮೈಕೈ ನೋವು ಕಡಿಮೆಯಾಗುತ್ತದೆ.

6. ಮೊಸರಿನಲ್ಲಿ ಸ್ವಲ್ಪ ಅಡುಗೆ ಸೋಡಾ ಹಾಕಿ ಮುಖಕ್ಕೆ ಹಚ್ಚಿದರೆ ಇದು ಮುಖವನ್ನು ಕ್ಲೆನ್ಸ್ ಮಾಡುತ್ತದೆ. ಈ ರೀತಿ ಪ್ರತಿ ನಿತ್ಯ ಮಾಡಿದರೆ ಯೌವನವನ್ನು ಕಾಪಾಡಿ ಕೊಳ್ಳಬಹುದಾಗಿದೆ.

English summary

Baking Soda Beauty Recipes | Tips For Beauty | ಅಡುಗೆ ಸೋಡಾದಿಂದ ಸೌಂದರ್ಯವರ್ಧಕ | ಸೌಂದರ್ಯಕ್ಕಾಗಿ ಕೆಲ ಸಲಹೆ

Baking soda is a wonderful beauty ingredient for skin care and body care. Today, we are to talk about the top 5 baking soda beauty recipes, do take a look.
Story first published: Thursday, November 17, 2011, 17:11 [IST]
Please Wait while comments are loading...
Subscribe Newsletter