For Quick Alerts
ALLOW NOTIFICATIONS  
For Daily Alerts

ತ್ವಚೆಗೆ ಕಳೆ ತರಲು ಕುಂಬಳಕಾಯಿ ಫೇಶಿಯಲ್

|
Pumpkin Face Pack Recipe
ಅಡುಗೆಗೆಂದು ತಂದ ಕುಂಬಳಕಾಯಿ ಉಳಿದರೆ ಅದನ್ನು ನಿಮ್ಮ ತ್ವಚೆಗೂ ಬಳಸಬಹುದು. ಕುಂಬಳಕಾಯಿ ಫೇಸ್ ಪ್ಯಾಕ್ ನಿಂದ ತ್ವಚೆಗೆ ತುಂಬಾ ಉಪಯೋಗವನ್ನು ಹೊಂದಬಹುದು.

ಕುಂಬಳಕಾಯಿಯಲ್ಲಿ ವಿಟಮಿನ್ ಎ ಹೆಚ್ಚಿರುವುದರಿಂದ ತ್ವಚೆಗೆ ಹೊಳಪು ನೀಡಿ ನಿರ್ಜೀವ ಕೋಶಗಳನ್ನು ಸರಿಪಡಿಸುತ್ತದೆ. ವಿಟಮಿನ್ ಎ ನಲ್ಲಿರುವ ಆಂಟಿಯಾಕ್ಸಿಡೆಂಟ್ ಅಂಶ ತ್ವಚೆಯ ಮೇಲೆ ಗೆರೆ ಮತ್ತು ಸುಕ್ಕನ್ನೂ ಕಡಿಮೆಮಾಡುವಲ್ಲಿ ಸಹಕಾರಿಯಾಗಿದೆ. ಕುಂಬಳಕಾಯಿ ಫೇಶಿಯಲ್ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಿ.

ಕುಂಬಳಕಾಯಿ ಫೇಸ್ ಪ್ಯಾಕ್ ಗೆ ಏನು ಬೇಕು?
: 2 ಚಮಚ ಶೇಖರಿಸಿ ತೆಳ್ಳಗೆ ಮಾಡಿದ ಕುಂಬಳಕಾಯಿ, 1/2 ಚಮಚ ಜೇನು, 1/4 ಚಮಚ ಗಟ್ಟಿ ಹಾಲಿನ ಕೆನೆ.

ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು.

English summary

Pumpkin Face Pack Recipe | Pumpkin for Skin Care | ಕುಂಬಳಕಾಯಿ ಫೇಸ್ ಪ್ಯಾಕ್ ಮಾಡುವ ವಿಧಾನ | ತ್ವಚೆ ರಕ್ಷಣೆಗೆ ಕುಂಬಳಕಾಯಿ ಬಳಕೆ

Pumpkin is not only fit for food, it can also act best for skin protection. Here is a recipe to show how you can prepare pumpkin for your face, Pumpkin Facial Recipe.
Story first published: Monday, November 14, 2011, 15:42 [IST]
X
Desktop Bottom Promotion