For Quick Alerts
ALLOW NOTIFICATIONS  
For Daily Alerts

ಚ್ಯೂಯಿಂಗ್ ಗಮ್ ಜಗಿದರೆ ಸುಕ್ಕು ಬೇಗ ಬರುತ್ತೆ

|
Chewing Gum Cause Early Wrinkle
ನಿಮಗೆ ಯಾವಾಗಲೂ ಚ್ಯೂಯಿಂಗ್ ಗಮ್ ಜಗಿಯುವ ಅಭ್ಯಾಸ ಇದೆಯಾ? ಹಾಗಿದ್ದರೆ ನಿಮಗೆ ಬೇಗ ವಯಸ್ಸಾಗುತ್ತೆ.

ಹೌದು. ಯಾವಾಗಲೂ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರೆ ನಿಮ್ಮ ಕೆನ್ನೆ, ಬಾಯಿಯ ಸುತ್ತ, ಕಣ್ಣ ಬಳಿ ಮತ್ತು ಗದ್ದದ ಬಳಿ ಸುಕ್ಕು ಬೇಗನೆ ಮೂಡಿ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಾಸ್ಮೆಟಿಕ್ ಸರ್ಜರಿಗೆಂದು ಬರುವ ಸುಮಾರು ಜನರಲ್ಲಿ ಚ್ಯೂಯಿಂಗ್ ಗಮ್ ಜಗಿಯುವ ಅಭ್ಯಾಸವಿದ್ದು, ಸುಕ್ಕು ಮೂಡಲು ಚ್ಯೂಯಿಂಗ್ ಗಮ್ ಸಹ ಒಂದು ಮಟ್ಟಕ್ಕೆ ಕಾರಣವಾಗಿದೆ ಎಂದು ತ್ವಚೆ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ. ಜೋಲ್ ಸ್ಕೆಲೆಸಿಂಗರ್ ತಿಳಿಸಿದ್ದಾರೆ.

ಚ್ಯೂಯಿಂಗ್ ಗಮ್ ಮತ್ತು ತ್ವಚೆಯ ಸುಕ್ಕಿನ ನಡುವಿನ ಸಂಬಂಧದ ಕುರಿತು ಅಧ್ಯಯನ ನಡೆಸಿದಾಗ, ಚ್ಯೂಯಿಂಗ್ ಗಮ್ ಜಗಿಯುವುದಕ್ಕೆ ದವಡೆಯ ಸ್ನಾಯುಗಳನ್ನು ಅತಿಯಾಗಿ ಉಪಯೋಗಿಸುವುದೇ ಕಾರಣ ಎಂದು ಅಧ್ಯಯನ ತಿಳಿಸಿದೆ.

ಚ್ಯೂಯಿಂಗ್ ಗಮ್ ಜಗಿಯಲು ಬಾಯಿಯ ದವಡೆಯ ಸ್ನಾಯುಗಳನ್ನು ಮಿತಿ ಮೀರಿ ಉಪಯೋಗಿಸುವುದರಿಂದ ಚರ್ಮಕ್ಕೆ ಬೆಂಬಲ ನೀಡುವ ಜೀವಕೋಶದ ಶಕ್ತಿಗುಂದಿ ತ್ವಚೆ ಸಡಿಲಗೊಂಡು ಸುಕ್ಕು ಕಾಣಿಸಿಕೊಳ್ಳಲು ಅನುವುಮಾಡಿಕೊಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಅದರಲ್ಲೂ ನಿರಂತರವಾಗಿ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರೆ ವಯಸ್ಸಾಗುವ ಮುನ್ನವೇ ಸುಕ್ಕು ಮೂಡಿ ವಯಸ್ಸಾದಂತೆ ಗೋಚರಿಸುವಂತೆ ಮಾಡುತ್ತದೆ ಎಂದಿದೆ.

English summary

Chewing Gum Cause Early Wrinkle | Wrinkle and Beauty Care | ಚ್ಯೂಯಿಂಗ್ ಗಮ್ ನಿರಂತರ ಜಗಿಯುತ್ತಿದ್ದರೆ ಬೇಗ ಸುಕ್ಕು ಮೂಡುತ್ತೆ | ಸುಕ್ಕು ಮತ್ತು ಸೌಂದರ್ಯ ರಕ್ಷಣೆ

If you have an habit of constantly chewing gum, its time to quit. Because Health Experts warned that, people who regularly consume chewing gum are likely to develop wrinkles very early.
Story first published: Friday, September 23, 2011, 17:59 [IST]
X
Desktop Bottom Promotion