For Quick Alerts
ALLOW NOTIFICATIONS  
For Daily Alerts

ನೀಲಗಿರಿ ತೈಲದಿಂದ ನೂರೆಂಟು ಉಪಯೋಗ

|
Eucalyptus oil benefits
ನೀಲಗಿರಿ ತೈಲ ಎಲ್ಲರಿಗೂ ಚಿರಪರಿಚಿತ. ಔಷಧೀಯ ಗುಣಗಳಿಂದ ತುಂಬಿರುವ ನೀಲಗಿರಿಯನ್ನು ಸಮರ್ಥವಾಗಿ ಬಳಸಿಕೊಂಡರೆ ಇನ್ನಷ್ಟು ಲಾಭ ನಿಮ್ಮದಾಗುತ್ತದೆ. ಚರ್ಮಕ್ಕೆ ಬೇಗ ಸೇರಿಕೊಳ್ಳುವ ವಿಶೇಷ ಗುಣ ಹೊಂದಿರುವ ಈ ತೈಲ ದೇಹಕ್ಕೆ ಉತ್ತಮ ಮಸಾಜ್ ಎಣ್ಣೆ. ಇಷ್ಟೇ ಅಲ್ಲ, ನೀಲಗಿರಿ ತೈಲದಿಂದ ಆರೋಗ್ಯಕ್ಕೆ ಹೇರಳವಾದ ಉಪಯೋಗವಿದೆ. ಅದೇನೆಂದು ಇಲ್ಲಿ ತಿಳಿದುಕೊಳ್ಳಿ.

ನೀಲಗಿರಿ ತೈಲದ ಮಸಾಜ್ ನ ಉಪಯೋಗ:

1. ಚರ್ಮ ವ್ಯಾಧಿ: ನೀಲಗಿರಿ ತೈಲವನ್ನು ದೇಹಕ್ಕೆ ಲೇಪಿಸುವುದರಿಂದ ತುರಿಕೆ, ಕಜ್ಜಿ, ಗುಳ್ಳೆ, ಕೀವು ಮುಂತಾದ ಚರ್ಮ ಮತ್ತು ದೇಹ ಸಂಬಂಧಿ ವ್ಯಾಧಿಗಳಿಗೆ ಶೀಘ್ರ ಪರಿಣಾಮ ತೋರುತ್ತದೆ.

2. ನೋವು ನಿವಾರಣೆ: ನೈಸರ್ಗಿಕ ನೋವು ನಿವಾರಕವಾಗಿರುವ ನೀಲಗಿರಿ ತೈಲವನ್ನು ನೋವಿರುವ ಜಾಗಕ್ಕೆ ಹಚ್ಚಿಕೊಂಡರೆ ಬೇಗ ನೋವು ನಿವಾರಣೆಯಾಗುತ್ತದೆ. ಅದರಲ್ಲೂ ಕೀಲು ನೋವಿನಿಂದ ಬಳಲುತ್ತಿದ್ದವರಿಗೆ ನೋವಿನಿಂದ ಬೇಗ ಮುಕ್ತಿ ಹೊಂದಿ ದೇಹ ಮನಸ್ಸು ಹಗುರಗೊಳಿಸುತ್ತದೆ. ಬಿಸಿ ನೀರಿನೊಂದಿಗೆ ಒಂದೆರೆಡು ಹನಿ ತೈಲ ಬೆರೆಸಿ ಸ್ನಾನ ಮಾಡಿಕೊಂಡರೂ ತುಂಬಾ ಹಗುರವೆನಿಸುತ್ತದೆ.

3. ಉತ್ತಮ ಮಸಾಜ್ : ನೀಲಗಿರಿ ತೈಲದಿಂದ ದೇಹಕ್ಕೆ ಮಸಾಜ್ ಮಾಡಿದರೆ ಚರ್ಮವನ್ನು ಮೃದುಗೊಳಿಸಿ ಕಲೆಗಳನ್ನೂ ಹೋಗಲಾಡಿಸುತ್ತದೆ. ಬೆನ್ನು ಮತ್ತು ಭುಜವನ್ನು ಮಸಾಜ್ ಮಾಡುವಾಗ ನೀಲಗಿರಿ ತೈಲದೊಂದಿಗೆ ವಿಟಮಿನ್ ಇ ಎಣ್ಣೆಯನ್ನು ಸೇರಿಸಿ ಮಸಾಜ್ ಮಾಡಿಕೊಂಡರೆ ಹೆಚ್ಚು ಪರಿಣಾಮಕಾರಿ ಮತ್ತು ಸುಲಭ.

4. ಶೇವ್ ನಂತರ ಬಳಸಿ: ಶೇವ್ ಮಾಡಿದ ನಂತರ ನೀಲಗಿರಿ ತೈಲ ಹಚ್ಚಿಕೊಂಡರೆ ತ್ವಚೆ ಮೃದುಗೊಂಡು ಉರಿಯನ್ನೂ ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾ ಮತ್ತು ಫಂಗಸ್ ನಂತಹ ರೋಗಾಣುಗಳ ವಿರುದ್ಧ ಹೋರಾಡುತ್ತದೆ.

5. ನೈಸರ್ಗಿಕ ಸ್ಕ್ರಬ್: ಮುಲ್ತಾನಿ ಮಿಟ್ಟಿ ಅಥವಾ ಕಡಲೆಹಿಟ್ಟಿನೊಂದಿಗೆ ನೀಲಗಿರಿ ತೈಲ ಬೆರೆಸಿ ಸ್ಕ್ರಬ್ ನಂತೆ ತಯಾರಿಸಿ ದೇಹಕ್ಕೆ ಮಸಾಜ್ ಮಾಡಬಹುದು. ಹೆಚ್ಚು ಅಂಟಿಲ್ಲದ ಈ ಎಣ್ಣೆ ತ್ವಚೆಯ ಪೋಷಣೆಯೊಂದಿಗೆ ಹೊಳಪನ್ನೂ ನೀಡಿ ಸುಂದರ ಕಾಣುವಂತೆ ಮಾಡುತ್ತದೆ.

English summary

Eucalyptus Oil Benefits | Eucalyptus Natural Body Care | ನೀಲಗಿರಿ ತೈಲದ ಉಪಯೋಗ | ನೀಲಗಿರಿ ನೈಸರ್ಗಿಕ ತೈಲ ಮಸಾಜ್

Eucalyptus is a strong aromatic oil that has great benefits on the body. The soothing oil is absorbed quickly on skin. It is fresh, cooling and keeps away bacteria and other germs. The massaging oil has remarkable benefits even on health. Take a look to know more about the natural body oil.
Story first published: Monday, August 29, 2011, 17:00 [IST]
X
Desktop Bottom Promotion