For Quick Alerts
ALLOW NOTIFICATIONS  
For Daily Alerts

ಪುರುಷರೇ ಆ ಭಾಗದ ಕೂದಲಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದಂತೆ! ಯಾಕೆ ಗೊತ್ತೇ?

|

ಮನುಷ್ಯನ ದೇಹದಲ್ಲಿ ಕೂದಲು ಎನ್ನುವುದು ಹಲವಾರು ಭಾಗದಲ್ಲಿ ಇರುವುದು. ಹುಟ್ಟುವಾಗಲೇ ತಲೆಯಲ್ಲಿ ಕೂದಲು ಇರುವುದು. ಬೆಳೆಯುತ್ತಾ ಹೋದಂತೆ ಮುಖದಲ್ಲಿ ಗಡ್ಡ, ಮೀಸೆ, ಕಂಕುಳಿನ ಭಾಗ ಮತ್ತು ಜನನೇಂದ್ರಿಯದ ಭಾಗದಲ್ಲಿ ಕೂದಲು ಬೆಳೆಯುವುದು. ಪುರುಷರು ಜನನೇಂದ್ರಿಯ ಭಾಗದಲ್ಲಿನ ಕೂದಲನ್ನು ತೆಗೆಯಲು ತುಂಬಾ ಹಿಂಜರಿಯುವರು. ಇದರ ಬಗ್ಗೆ ಅವರು ಗಮನಹರಿಸುವುದೇ ಇಲ್ಲ. ಸೊಂಟದ ಕೆಳಭಾಗದ ಕೂದಲು ತೆಗೆಯುವುದು ಎಂದರೆ ಅದು ದೊಡ್ಡ ಮಟ್ಟದ ಕಿರಿಕಿರಿ ಎಂದು ಭಾವಿಸುವರು. ಆದರೆ ಕೂದಲು ತೆಗೆಯುವುದು ಸ್ವಚ್ಛತೆ ದೃಷ್ಟಿಯಿಂದ ಅತೀ ಅಗತ್ಯ ಆಗಿರುವುದು. ಇದು ತುಂಬಾ ಲಾಭಕಾರಿ ಕೂಡ. ಜನನೇಂದ್ರಿಯ ಭಾಗದ ಕೂದಲನ್ನು ತೆಗೆಯುವುದು ಎಷ್ಟು ಅಗತ್ಯ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಸ್ವಚ್ಛತೆ
ಕೂದಲು ತೆಗೆಯುವುದರಿಂದ ಅಲ್ಲಿ ನಿರ್ಮಾಣ ಆಗಿರುವಂತಹ ಪೊದೆಯು ಕಳಚುವುದು ಮಾತ್ರವಲ್ಲದೆ, ಇನ್ನು ಹಲವಾರು ಒಳ್ಳೆಯ ಕೆಲಸಗಳು ಇದೆ. ಈ ಭಾಗದಲ್ಲಿ ಹೆಚ್ಚಿನ ಉಷ್ಣತೆ, ಬೆವರು ಮತ್ತು ಬ್ಯಾಕ್ಟೀರಿಯಾ ಸಂಗ್ರಹಣೆ ಆಗುವುದು. ಕೂದಲನ್ನು ಟ್ರಿಮ್ ಅಥವಾ ಶೇವ್ ಮಾಡುವುದರಿಂದ ಆ ಭಾಗವು ತುಂಬಾ ಶುದ್ಧವಾಗಿ ಇರುವುದು.

Groom their Privates

ಬೇಡದ ಸೋಂಕನ್ನು ದೂರವಿಡಿ
ಕೂದಲು ಬೆಳೆದು ದಟ್ಟವಾಗಿದ್ದರೆ ಆಗ ಅಲ್ಲಿ ಬೇಡದ ಸೋಂಕು ಕಾಣಿಸಿಕೊಳ್ಳುವುದು. ಇದನ್ನು ನಿಧಾನವಾಗಿ ಕೂದಲು ತೆಗೆಯುವ ಮೂಲಕ ತಗ್ಗಿಸಬಹುದು. ಇದರಿಂದ ಜನನೇಂದ್ರೀಯವು ತುಂಬಾ ಆರೋಗ್ಯವಾಗಿರುವುದು, ಯಾವುದೇ ನರಹುಲಿ ಮತ್ತು ದದ್ದು ನಿರ್ಮಾಣವಾಗದು.

ಸೂಕ್ಷ್ಮತೆ ಹೆಚ್ಚಾಗುವುದು
ಜನನೇಂದ್ರೀಯ ಭಾಗದ ಕೂದಲು ಕೆಲವರಲ್ಲಿ ತುಂಬಿರಬಹುದು. ತುಂಬಾ ಗ್ರೂಮ್ ಮಾಡಲ್ಪಟ್ಟಿರುವಂತಹ ಕೂದಲು ನಿಮ್ಮ ಸಂಗಾತಿಯನ್ನು ಆಹ್ವಾನಿಸಲು ಪ್ರೇರಣೆ ನೀಡುವುದು. ಇದು ಸೂಕ್ಷ್ಮತೆಯನ್ನು ಕೂಡ ಹೆಚ್ಚು ಮಾಡುವುದು.

ಅನುಬಂಧವನ್ನು ಇದು ಸುಧಾರಿಸುವುದು
ಜನನೇಂದ್ರಿಯ ಭಾಗದ ಕೂದಲನ್ನು ಬೆಳೆಸುವುದು ಹೆಚ್ಚಿನ ಜನರಿಗೆ ತುಂಬಾ ಇಷ್ಟವಾಗಿ ಇರುವುದು. ಆದರೆ ಇದು ಕೂದಲನ್ನು ಟ್ರಿಮ್ ಮಾಡುವುದರಲ್ಲೂ ನೆರವಾಗುವುದು. ಕೂದಲಿನ ಪೊದೆಯನ್ನು ಇದು ನೆರವಾಗುವುದು.

ಇದು ನೀವು ಆಲೋಚಿಸಿರುವುದಕ್ಕಿಂತಲೂ ತುಂಬಾ ಕಡಿಮೆ ಅಪಾಯ
ನೀವು ನೈಸರ್ಗಿಕವಾಗಿ ಇರಬೇಕು ಎಂದು ಬಯಸುತ್ತಿದ್ದರೆ ಆಗ ನೀವು ನಿಮ್ಮಆಲೋಚನೆಗಳನ್ನು ಅಲ್ಲಿಯೇ ಬಿಟ್ಹಾಕಿ. ಯಾಕೆಂದರೆ ಕೂದಲು ತೆಗೆಯುವುದು ತುಂಬಾ ಸಹಕಾರಿ ಆಗಿ ಇರಲಿದೆ. ಅದಾಗ್ಯೂ, ನೀವು ಸರಿಯಾದ ವಿಧಾನ ಅನುಸರಿಸಬೇಕು. ಇಲ್ಲವಾದಲ್ಲಿ, ತುರಿಕೆ, ಕಲೆಗಳು ಮತ್ತು ಸೋಂಕು ಕಾಣಿಸುವುದು. ಇದರಿಂದ ಎಚ್ಚರಿಕೆ ವಹಿಸಬೇಕು.

ಈ ಮೇಲಿನ ಕಾರಣಗಳನ್ನು ಓದಿಕೊಂಡ ಬಳಿಕ ನೀವು ಸಮಯ ಸಮಯಕ್ಕೆ ಕೂದಲನ್ನು ತೆಗೆಯುವ ಬಗ್ಗೆ ಆಲೋಚನೆ ಮಾಡಬಹುದು. ಕೂದಲನ್ನು ತೆಗೆಯುವುದು ಸರಿಯಾದ ಕ್ರಮ ಆಗಿದೆ. ಇದಕ್ಕಾಗಿ ನಿಮಗೆ ಹಲವಾರು ವಿಧಾನಗಳು ಲಭ್ಯವಿದೆ. ನೀವು ಯಾವುದೇ ವಿಧಾನವನ್ನು ಬಳಕೆ ಮಾಡುತ್ತಲಿದ್ದರೂ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಬಳಿಕ ಅದರ ಸಾಧಕಬಾಧಕ ತಿಳಿಯಿರಿ. ಇದರಿಂದ ನಿಮಗೆ ಯಾವುದೇ ಅಲರ್ಜಿ ಆಗದು.

English summary

Why Men Should Groom their Privates

Some men are not too bothered about their hair down there and think of it as a sign of virility while it is utter nuisance for others. Trimming your pubes is not just a matter of cleanliness but a highly beneficial move. Here’s why men should consider pubic hair removal.
Story first published: Saturday, May 18, 2019, 17:06 [IST]
X
Desktop Bottom Promotion