For Quick Alerts
ALLOW NOTIFICATIONS  
For Daily Alerts

ಪುರುಷರು ಸ್ಮಾರ್ಟ್ ಆಗಿ ಕಾಣಲು ಸಿಂಪಲ್ ಆಗಿರುವ ಸ್ಟೈಲ್ ಟಿಪ್ಸ್!

|

ಮಹಿಳೆಯರು ಮಾತ್ರ ತಮ್ಮ ಬಟ್ಟೆಬರೆ ಬಗ್ಗೆ ಎಚ್ಚರಿಕೆ ವಹಿಸುವರು ಮತ್ತು ಪ್ರತಿನಿತ್ಯವು ಹೊಸ ಹೊಸ ಫ್ಯಾಶನ್ ನ ಬಟ್ಟೆ ಧರಿಸುವರು ಎಂದು ನಾವೆಲ್ಲರೂ ನಂಬಿದ್ದೇವೆ. ಆದರೆ ಇದು ನಿಜವಲ್ಲ, ಯಾಕೆಂದರೆ ಪುರುಷರು ಕೂಡ ಕೆಲವೊಂದು ಸಲ ಫ್ಯಾಶನ್ ಮಾಡುವರು. ಫ್ಯಾಷನ್ ಬಗ್ಗೆ ಪುರುಷರಿಗೆ ನಿರಾಸಕ್ತಿ ಇದೆಯಾದರೂ ಕೆಲವರು ಇದರ ಬಗ್ಗೆ ಪಕ್ಕಾ ಆಗಿರುವರು.

ಅವರು ತಮಗೆ ಒಗ್ಗದೆ ಇರುವಂತಹ ಬಟ್ಟೆಬರೆಯನ್ನು ಖಂಡಿತವಾಗಿಯೂ ಧರಿಸುವುದಿಲ್ಲ. ಹುಡುಗರು ಕೂಡ ತಾವು ಹುಡುಗಿಯರ ಮುಂದೆ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕು. ಅಂದವಾಗಿ ಇರಬೇಕು ಎಂದು ಬಯಸುವರು. ಪುರುಷರು ಮಾಡಬಹುದಾದ ಕೆಲವೊಂದು ಫ್ಯಾಶನ್ ಗಳ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ಸುಂದರವಾಗಿ ಕಾಣಬಹುದು.

ಎತ್ತರಕ್ಕೆ ತಕ್ಕಂತೆ ಬಟ್ಟೆ ಧರಿಸಿ

ಎತ್ತರಕ್ಕೆ ತಕ್ಕಂತೆ ಬಟ್ಟೆ ಧರಿಸಿ

ಹೆಚ್ಚಿನ ಸಂದರ್ಭಗಳಲ್ಲಿ ಪುರುಷರು ತಮ್ಮಎತ್ತರಕ್ಕೆ ತಕ್ಕಂತೆ ಬಟ್ಟೆ ಖರೀದಿಸುವುದು ಇಲ್ಲ ಮತ್ತು ಧರಿಸುವುದು ಇಲ್ಲ. ನಿಮ್ಮ ಸೂಟ್ ನಲ್ಲಿ ಇರುವಂತಹ ಬಟನ್ ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರಬೇಕು ಎಂದು ನಿಯಮವು ಹೇಳುತ್ತದೆ. ನಿಮ್ಮ ಕುಳ್ಳಗಿದ್ದರೆ ಆಗ ಒಂದು ಬಟನ್ ಸೂಟ್ ಮತ್ತು ಎತ್ತರವಾಗಿದ್ದರೆ ಆಗ ಮೂರು ಬಟನ್ ಸೂಟ್. ಯಾವಾಗಲೂ ನಿಮಗೆ ಹೊಂದಾಣಕೆ ಆಗುವ ಆಯ್ಕೆ ಮಾಡಿಕೊಳ್ಳಿ.

ಪ್ರತೀ ಬಟ್ಟೆಯ ಲೇಬಲ್ ಮತ್ತು ಟ್ಯಾಗ್ ಓದಿಕೊಳ್ಳಿ

ಪ್ರತೀ ಬಟ್ಟೆಯ ಲೇಬಲ್ ಮತ್ತು ಟ್ಯಾಗ್ ಓದಿಕೊಳ್ಳಿ

ನೀವು ಹೊರಗಡೆ ಶಾಪಿಂಗ್ ಗೆ ಹೋಗುವ ವೇಳೆ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ನೀವು ಬಟ್ಟೆ ಖರೀದಿಸುವ ಮೊದಲು ಅದರಲ್ಲಿರುವ ಟ್ಯಾಗ್ ನ್ನು ಓದಿಕೊಳ್ಳಬೇಕು ಮತ್ತು ಬಟ್ಟೆ ಬಗ್ಗೆ ಮಾಹಿತಿ ಪಡೆಯಬೇಕು. ಇದು ಸ್ವಲ್ಪ ವಿಚಿತ್ರವೆಂದು ಅನಿಸಬಹುದು. ಆದರೆ ಇದು ತುಂಬಾ ಅನಿವಾರ್ಯ. ಯಾಕೆಂದರೆ ಬಟ್ಟೆಯ ವಿಧದ ಬಗ್ಗೆ ತಿಳಿಯಬೇಕು. ಒಂದೇ ದರದ ಎರಡು ಬಟ್ಟೆಗಳು ಸಾಮಾನ್ಯವೆಂದು ಕಾಣಿಸಿದರೂ ಅದು ಭಿನ್ನವಾಗಿ ಇರುವುದು. ಯಾವುದು ಅದರಲ್ಲಿ ಭಿನ್ನತೆ ಉಂಟು ಮಾಡುವುದು. ಅದು ಬಟ್ಟೆಯ ಗುಣಮಟ್ಟ ಎನ್ನುವುದನ್ನು ಗಮನಿಸಬೇಕು. ನೀವು ಮಾಹಿತಿ ಓದಿಕೊಂಡ ಬಳಿಕ ನಿಮಗೆ ಯಾವುದು ಒಳ್ಳೆಯದು ಎಂದು ಆಯ್ಕೆ ಮಾಡಿ ಅದನ್ನು ಖರೀದಿ ಮಾಡಿ.

Most Read: ಶರ್ಟ್ ಬಟನ್‌‌ಗಳ ಹಿಂದಿನ ಕೊಂಚ ಇಂಟರೆಸ್ಟಿಂಗ್ ಸಂಗತಿಗಳು

ಸರಿಯಾದ ಕಾಲರ್ ಆಯ್ಕೆ ಮಾಡುವುದು

ಸರಿಯಾದ ಕಾಲರ್ ಆಯ್ಕೆ ಮಾಡುವುದು

ಹೆಚ್ಚಿನ ಪುರುಷರ ಶರ್ಟ್ ಗಳು ಕಾಲರ್ ನೊಂದಿಗೆ ಬರುವುದು. ಇದು ಫಾರ್ಮಲ್ ಅಥವಾ ಕ್ಯಾಶ್ಯುವಲ್ ಶರ್ಟ್ ಆಗಿರಬಹುದು. ಆದರೆ ನಿಮಗೆ ಬೇಕಾಗಿರುವ ಸರಿಯಾದ ಕಾಲರ್ ಇರುವಂತಹ ಶರ್ಟ್ ಆಯ್ಕೆ ಮಾಡಬೇಕು. ನಿಮ್ಮ ಮುಖವು ಸಣ್ಣದಾಗಿದ್ದರೆ ಆಗ ಅಗಲ ಕಾಲರ್ ನನ್ನು ಶರ್ಟ್ ಧರಿಸಿ. ಅದೇ ರೀತಿ ಮುಖ ದೊಡ್ಡದಾಗಿದ್ದರೆ ಆಗ ನೀವು ಸಣ್ಣ ಕಾಲರ್ ಇರುವ ಬಟ್ಟೆ ಧರಿಸಬೇಕು.

ಎಕ್ಸಸರಿಗಳನ್ನು ಧರಿಸಿ

ಎಕ್ಸಸರಿಗಳನ್ನು ಧರಿಸಿ

ಎಕ್ಸಸರಿಗಳು ನಿಮ್ಮನ್ನು ತುಂಬಾ ಫ್ಯಾಶನ್ ಆಗುವಂತೆ ಮಾಡುವುದು. ಕೇವಲ ಬಟ್ಟೆ ಧರಿಸಿದರೆ ಸಾಲದು. ಅದಕ್ಕೆ ಹೊಂದಿಕೆ ಆಗುವಂತಹ ಎಕ್ಸಸರಿ ಧರಿಸಲು ಹೆಚ್ಚಿನ ಪುರುಷರು ಮರೆಯುವರು. ಇದು ಸರಳವೆಂದು ನಮಗೆ ಅನಿಸಿದರೂ ಎಕ್ಸಸರಿಯು ತುಂಬಾ ವಿಭಿನ್ನವಾಗಿ ಇರುವುದು. ಇದು ನಿಮ್ಮ ಸೌಂದರ್ಯ ವೃದ್ಧಿಸುವುದು. ವಾಚ್ ಗಳು ಒಳ್ಳೆಯ ಆಯ್ಕೆಯಾಗಿರುವುದು ಮತ್ತು ನಿಮಗೆ ಹೊಂದಿಕೊಳ್ಳುವುದನ್ನು ಧರಿಸಿಕೊಳ್ಳಿ.

Most Read: ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸುವ ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್

ಮಾಲ್ ಗೆ ಹೋಗುವ ವೇಳೆ ನಿಮಗೆ ಫಿಟ್ ಆಗುವ ಬಟ್ಟೆ ಧರಿಸಿಕೊಂಡು ಹೋಗಿ

ಮಾಲ್ ಗೆ ಹೋಗುವ ವೇಳೆ ನಿಮಗೆ ಫಿಟ್ ಆಗುವ ಬಟ್ಟೆ ಧರಿಸಿಕೊಂಡು ಹೋಗಿ

ನೀವು ಶಾಪಿಂಗ್ ಮಾಡಲು ಹೋಗುವ ವೇಳೆ ನಿಮಗೆ ಸರಿಯಾಗಿ ಫಿಟ್ ಆಗುವ ಬಟ್ಟೆಗಳನ್ನು ಹಾಕಿಕೊಂಡು ಹೋಗಿ. ಯಾಕೆಂದರೆ ಅಲ್ಲಿ ನಿಮಗೆ ಸರಿಯಾಗಿ ಅಳತೆ ಮಾಡಲು ಸಾದ್ಯವಾಗುವುದು. ಇದರಿಂದ ಬಟ್ಟೆ ಬದಲಾಯಿಸಿಕೊಂಡು ನೋಡುವುದು ತಪ್ಪುವುದು. ನಿಮಗೆ ಫಿಟ್ ಆಗುವಂತಹ ಬಟ್ಟೆ ಧರಿಸುವ ಮತ್ತೊಂದು ಲಾಭವೆಂದರೆ ನೀವು ಟಿಶರ್ಟ್ ಹಾಕಿಕೊಂಡಿರುವುದರ ಮೇಲೆ ಹೊಸ ಟಿಶರ್ಟ್ ನ್ನು ಹಿಡಿದು ನೋಡಿ. ಆಗ ನಿಮಗೆ ವ್ಯತ್ಯಾಸ ಕಂಡುಬರುವುದು.

English summary

Style Tips for Men to look smart

Wearing expensive branded clothes does not make you look fashionable. There is always a guy in every event, who looks dashing and automatically becomes the centre of attraction. Then all you can think about is what makes him so stylish? Answer is very simple, all you need to know are some styling tips.
X
Desktop Bottom Promotion