For Quick Alerts
ALLOW NOTIFICATIONS  
For Daily Alerts

  ಪುರುಷರ ಬ್ಯೂಟಿ ಟಿಪ್ಸ್: ಈ ಟ್ರಿಕ್ಸ್ ಅನುಸರಿಸಿ, ಇನ್ನಷ್ಟು ಹ್ಯಾಂಡ್ಸಮ್ ಆಗಿ ಕಾಣುವಿರಿ

  By Manu
  |

  ಸೌಂದರ್ಯವೆಂಬುದು ಹೆಣ್ಣಿಗೆ ಮಾತ್ರವಲ್ಲದೆ ಗಂಡಿಗೂ ಅತ್ಯಂತ ಪ್ರಮುಖ ಅಂಶವಾಗಿದೆ. ಸುಂದರ ಪುರುಷನ ಎದ್ದುಗಾಣುವ ಅಂದ ಆತನಿಗೆ ಪ್ಲಸ್ ಪಾಯಿಂಟ್ ಎಂದೆನಿಸಿದೆ. ನೀಟಾಗಿ ಮಾಡಿದ ಹೇರ್ ಕಟ್, ಶೇವ್, ಸುಂದರವಾದ ಅಂಗಸೌಷ್ಟವ, ನವಿರಾದ ಅಲಂಕಾರ, ಫ್ಯಾಷನ್ ಪ್ರಿಯತೆ, ಟಿಪ್ ಟಾಪ್ ಆಗಿ ದಿರಿಸು ಧರಿಸಿರುವುದು ಹೀಗೆ ಗಂಡು ಕೂಡ ಹೆಣ್ಣಿನಂತೆಯೇ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಿದರೆ ಆತನನ್ನು ದಿಟ್ಟಿಸಿ ನೋಡದ ಹುಡುಗಿಯರೇ ಇರಲಾರರು.

  ಆದರೆ ಹೆಚ್ಚಿನ ಗಂಡಸರು ತಮ್ಮನ್ನು ಯಾರು ನೋಡುತ್ತಾರೆ ಎಂಬ ಅಸಡ್ಡೆಯಿಂದಲೇ ಕೈಬಿಟ್ಟ ಎಷ್ಟೋ ಅವಕಾಶಗಳಿವೆ. ಅವರುಗಳು ಮಾಡುವ ತಪ್ಪು ಇದೇ ಆಗಿದೆ. ಸಾಧಾರಣವಾಗಿ ಇರುವುದಕ್ಕಿಂತ ಕೊಂಚ ಭಿನ್ನವಾಗಿದ್ದರೆ ನೀವೂ ಎಲ್ಲರನ್ನೂ ಆಕರ್ಷಿಸುತ್ತೀರಿ ಮತ್ತು ನಿಮ್ಮ ಸುಂದರತೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಖಂಡಿತ. ನಿಮ್ಮಲ್ಲಿ ಧೈರ್ಯ ತುಂಬಲು ನಿಮ್ಮ ಸುಂದರತೆ ಸಹಕಾರಿಯಾಗಿದೆ. ನೀವು ಆಗ ಕೀಳರಿಮೆಯಿಂದ ತೊಳಲಾಡುವುದಿಲ್ಲ.

  ಪುರುಷರಿಗೂ ಮಹಿಳೆಯರಂತೆ ಅಂದವಾಗಿ ಕಾಣಬೇಕೆಂಬ ಹಂಬಲ ಇರುವುದು ಸಹಜವೇ ಆಗಿದೆ. ಹುಡುಗಿಯೊಬ್ಬಳು ಕುಡಿನೋಟದಲ್ಲಿ ನಿಮ್ಮನ್ನು ನೋಡಿದಾಗ ಯಾವ ಪುರುಷರಿಗೂ ಇದು ಖುಷಿಯನ್ನು ತಂದುಕೊಡದೇ ಇರಲಾರದು. ಹಾಗಿದ್ದರೆ ಈ ಸೌಂದರ್ಯವನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಚಿಂತೆ ಬಿಟ್ಟು ಇಂದಿನ ಲೇಖನದಲ್ಲಿ ನಾವು ತಿಳಿಸಿರುವ ಕೆಲವೊಂದು ಸೌಂದರ್ಯ ರಹಸ್ಯಗಳನ್ನು ಪುರುಷರೇ ನೀವು ಕೂಡ ಪಾಲಿಸಿ... 

  beauty tips for men

  ನೀಟಾಗಿ ಶೇವ್ ಮಾಡಿಕೊಳ್ಳಿ

  ಪುರುಷರು ಆಕರ್ಷಕವಾಗಿ ಕಾಣಬೇಕೆಂದರೆ ನೀಟಾಗಿ ಶೇವ್ ಮಾಡಬೇಕು, ಗಡ್ಡ ಬಿಡುವುದಕ್ಕೆ ಇಷ್ಟ ಪಡುವವರು ಅದನ್ನು ಆಗಾಗ ಟ್ರಿಮ್ ಮಾಡುತ್ತಿರಬೇಕು. ಶೇವ್ ಮಾಡುವರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಎದ್ದ ಕೂಡಲೇ ಶೇವ್ ಮಾಡಬಾರದು. ಶೇವ್ ಜೆಲ್ ಬದಲು ಫೇಶಿಯಲ್ ಕ್ಲೆನ್ಸರ್ ಬಳಸುವುದು ಒಳ್ಳೆಯದು.

  ಕ್ಲೀನ್ ಶೇವ್ ಮಾಡಿಕೊಂಡು ಫೇಶಿಯಲ್ ಮಾಡಿಸಿ

  ಗಡ್ಡ ಬಿಡುವ ಇರಾದೆ ಮಾಡಿಕೊಂಡ ಬಳಿಕ ಮೊತ್ತ ಮೊದಲನೆಯದಾಗಿ ಉತ್ತಮ ಸೌಂದರ್ಯ ಮಳಿಗೆಯೊಂದರಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಮುಖದ ಚರ್ಮದ ಫೇಶಿಯಲ್ ಮಾಡಿಸಿಕೊಳ್ಳಿ. ಇದರಿಂದ ಚರ್ಮದ ಮೇಲಿದ್ದ ಸತ್ತ ಜೀವಕೋಶಗಳು ನಿವಾರಣೆಯಾಗಿ (exfoliate) ಮುಂದೆ ಬೆಳಯುವ ಕೂದಲಿಗೆ ಭದ್ರವಾದ ಅಡಿಪಾಯ ನೀಡುತ್ತದೆ.

  beauty tips for men

  ಕೂದಲಿಗೆ ದಿನಕ್ಕೊಂದು ಬಾರಿ ಕಂಡೀಶನರ್ ಬಳಸಿ

  ಒಂದು ವಾರದ ಬಳಿಕ ಕೂದಲು ಕೊಂಚ ಬಳುಕುವಷ್ಟು ಬೆಳೆಯುತ್ತದೆ. ಈ ಹಂತದಲ್ಲಿ ಕಂಡೀಶನಿಂಗ್ ಉಪಯೋಗಿಸದಿದ್ದರೆ ಗಡ್ಡ ಆಡ್ಡಾದಿಡ್ಡಿ ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ಪ್ರತಿದಿನ (ಒಂದೇ ಪ್ರತಿದಿನದ ಬೆಳಿಗ್ಗೆ ಅಥವಾ ಪ್ರತಿದಿನದ ಸಂಜೆ ನಿಯಮಿತವಾಗಿ ಅನುಸರಿಸಬೇಕು) ಉತ್ತಮ ಗುಣಮಟ್ಟದ ಕಂಡೀಶನರ್ ಉಪಯೋಗಿಸಿ ಗಡ್ಡವನ್ನು ತೊಳೆದುಕೊಳ್ಳಿ. ಇದರಿಂದ ಗಡ್ಡ ಮೃದು ಹಾಗೂ ಹೆಚ್ಚು ಶಕ್ತಿಶಾಲಿಯಾಗುತ್ತದೆ.

  ದಿನಕ್ಕೆ ಮುಖ ನಾಲ್ಕು ಬಾರಿ ತೊಳೆಯಿರಿ

  ತ್ವಚೆಯಲ್ಲಿ ಧೂಳು ಮತ್ತಿತರ ಅನಗತ್ಯ ವಸ್ತುಗಳ ಕಣಗಳ ಸ೦ಚಯನವು, ತ್ವಚೆಯು ಬೇಗನೇ ಮುಪ್ಪಾಗುವ೦ತೆ ಮಾಡುತ್ತದೆ. ಈ ವಿದ್ಯಮಾನವನ್ನು ತಡೆಯಲು ದಿನಕ್ಕೆ ಕನಿಷ್ಟ ನಾಲ್ಕು ಬಾರಿಯಾದರೂ ಮುಖಮಾರ್ಜನವನ್ನು ಮಾಡಿಕೊಳ್ಳುವುದು ಉತ್ತಮ. ಇದಕ್ಕಿ೦ತಲೂ ಹೆಚ್ಚಾಗಿ, ನಿಮ್ಮ ಮುಖವನ್ನು ತೊಳೆದುಕೊಳ್ಳುವುದರಿ೦ದ ಮುಖದ ತೈಲಾ೦ಶವನ್ನು ಹೋಗಲಾಡಿಸಿದ೦ತಾಗುತ್ತದೆ ಹಾಗೂ ತ್ವಚೆಯ ಸುಕ್ಕುಗಳನ್ನು ನಿವಾರಿಸುತ್ತದೆ.

  ಫ್ರೆಶ್ ಆಗಿರಿ

  ನಿಮ್ಮ ಕಚೇರಿ ಕೆಲಸ ಮುಗಿಸಿ ಆಯಾಸಗೊಂಡಿದ್ದಿರಾ ಮತ್ತು ಆ ಬಳಲಿಕೆ ಮುಖದಲ್ಲಿ ಎದ್ದುಗಾಣುತ್ತಿದೆಯೇ? ಹಾಗಿದ್ದರೆ ಮುಖದಲ್ಲಿ ಕೊಂಚ ಯುವತ್ವವನ್ನು ತಂದುಕೊಳ್ಳಿ. ಉತ್ಸಾಹವನ್ನು ನೀಡುವ ಸ್ಕ್ರಬ್‎ನ ಬಳಕೆಯನ್ನು ಮಾಡಿ. ಇದರ ಆಳವಾಗಿ ಸ್ವಚ್ಛಮಾಡುವ ಗುಣ ತ್ವಚೆಯನ್ನು ಉತ್ಸಾಹಿಯಾಗಿ ಇರಿಸುವುದು ಮಾತ್ರವಲ್ಲದೆ ಅದನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿ ಇರಿಸುತ್ತದೆ. ಮುಖದಿಂದ ಕೊಳೆ ಮತ್ತು ಮೃತ ಕೋಶಗಳನ್ನು ಹೊರತಗೆಯಲು ಇದು ಉತ್ತಮ ವಿಧಾನವಾಗಿದೆ. 

  ಮುಖಕ್ಕೆ ಏರ್ ಬ್ರಶ್

  ನಿಮ್ಮ ಒಣಮುಖವನ್ನು ಹೊಳೆಯುವಂತೆ ಮಾಡುವ ಮತ್ತು ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೊರಹಾಕುವ ಮಾಯಿಶ್ಚರೈಸರ್ ಬಗ್ಗೆ ಕೇಳಿದ್ದೀರಾ? ಎಣ್ಣೆ ಹೊರಹಾಕುವ ಕ್ರೀಮ್‎ಗಳು ಮತ್ತು ಏರ್ ಬ್ರಶಿಂಗ್ ಪರಿಕರಗಳಿಗಾಗಿ ನೀವು ಹಣ ವ್ಯಯಿಸಬೇಕಾಗುತ್ತದೆ. ಕೆಲವೊಂದು ಮುಖದ ಕ್ರೀಮ್‎ಗಳು ಬೆಳಕನ್ನು ಪ್ರತಿಫಲಿಸುವ ಅಂಶಗಳನ್ನು ಹೆಚ್ಚು ಹೊಂದಿರುವುದರಿಂದ ಕಲೆಗಳನ್ನು ಮರೆಯಾಗಿಸಲು ಸಹಕಾರಿಯಾಗಿವೆ. ಪುರುಷರಿಗಾಗಿ ನಿರ್ದಿಷ್ಟವಾಗಿರುವ ಕನ್ಸಿಲರ್‎ಗಳು ಕಪ್ಪು ಕಲೆಗಳನ್ನು ನಿವಾರಿಸಿ ನಿಮಗೆ ಸುಂದರ ಮುಖಾರವಿಂದವನ್ನು ದಯಪಾಲಿಸುತ್ತದೆ. 

  beauty tips for men

  ಸೂಕ್ತವಾದ ಸನ್ ಸ್ಕ್ರೀನ್ ಬಳಸಿ

  ಪುರುಷರು ಹೆಚ್ಚು ಹೊರಗೆ ತಿರುಗಾಡಾಬೇಕಾಗಿ ಬರುವುದರಿಂದ ಗಾಳಿಯಲ್ಲಿನ ಹೆಚ್ಚು ವಿಧಧ ಪ್ರದೂಷಣಾಕಾರಕ ಕಣಗಳಿಗೆ ಒಡ್ಡಬೇಕಾಗಿ ಬರುತ್ತದೆ. ಇದನ್ನು ಎದುರಿಸಲು ಕೊಂಚ ಹೆಚ್ಚು ಪ್ರಬಲ ಪ್ರಸಾಧನದ ಅಗತ್ಯವಿದೆ. ಇದನ್ನು ಆಯ್ದುಕೊಳ್ಳಲು ಪ್ರಸಾಧನದ ಪರಿಕರಗಲಲ್ಲಿ ಗ್ಲೈಕೋಲಿಕ್ ಆಸಿಡ್ (glycolic acid) ಇದೆಯೇ ನೋಡಿ. ಹೌದು ಎಂದಾದರೆ ಇದರ ಬಳಕೆಯಿಂದ ಚರ್ಮದ ಆಳದಿಂದ ಸ್ವಚ್ಛಗೊಳಿಸಲು ಸಾಧ್ಯ. ಈ ಸಲಹೆಗಳನ್ನು ಮಾತ್ರ ಪಾಲಿಸಿದರೆ ಸಾಲದು, ಚರ್ಮ ಬಿಸಿಲಿಗೆ ಕಪ್ಪಗಾಗದಂತೆ ಸೂಕ್ತ ಸನ್ ಸ್ಕ್ರೀನ್ ಬಳಸುವುದನ್ನೂ ಮರೆಯಬಾರದು. ಯಾವುದೇ ರಕ್ಷಣೆ ಇಲ್ಲದೇ ಬಿಸಿಲಿಗೆ ಒಡ್ಡುವ ಕಾರಣವೇ ಹೆಚ್ಚಿನ ಪುರುಷರಲ್ಲಿ ಗಾಢವರ್ಣಕ್ಕೆ ಪ್ರಮುಖ ಕಾರಣವಾಗಿದೆ.

  ನೈಸರ್ಗಿಕ ಫೇಸ್ ಕ್ರೀಂ ಬಳಸಿ

  ಪುರುಷರಿಗಾಗಿ ಇರುವಂತಹ ಮೇಕಪ್ ಸಾಧನಗಳು ತುಂಬಾ ಕಡಿಮೆಯಾದರೂ ಇದರ ಬಗ್ಗೆ ನಾಚಿಕೆ ಮಾಡಿಕೊಳ್ಳದೆ ಅವುಗಳನ್ನು ಬಳಸಿಕೊಂಡರೆ ನಿಮ್ಮ ಸೌಂದರ್ಯವು ಹೊಳಪನ್ನು ಪಡೆಯುವುದು. ಕೆಲವೊಂದು ಕಾಸ್ಮೆಟಿಕ್ ಗಳನ್ನು ಬಳಸಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ.

  ಧೂಮಪಾನವನ್ನು ತ್ಯಜಿಸಿ

  ಧೂಮಪಾನವು ಸಹ ಕೊಲ್ಲಾಜೆನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ನಿಮ್ಮ ಮುಖದಲ್ಲಿ ಸುಕ್ಕುಗಳು ಮತ್ತು ಗೆರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ತ್ವಚೆಯು ಸ್ವಾಭಾವಿಕ ಬಣ್ಣವನ್ನು ಕಳೆದುಕೊಂಡು, ಕಳೆಗುಂದುತ್ತದೆ.

  B.B. Cream

  ಬಿಬಿ ಕ್ರೀಮ್ ಹಚ್ಚಿ

  ವಾಸ್ತವವಾಗಿ ಮುಖದ ಮೇಕಪ್ ಚರ್ಮವನ್ನು ಪೂರ್ಣವಾಗಿ ಆವರಿಸುವುದರಿಂದ ಚರ್ಮದ ಸೂಕ್ಷ್ಮರಂಧ್ರಗಳೂ ಮುಚ್ಚಲ್ಪಡುತ್ತವೆ. ಆದರೆ ಬಿಬಿ ಕ್ರೀಮ್ ಗಳು ಈ ರಂಧ್ರಗಳನ್ನು ಮುಚ್ಚದೇ ಪೋಷಣೆಯನ್ನು ನೀಡುವುದರಿಂದ ಚರ್ಮ ಸಹಜವಾದ ಸ್ರವಿಕೆ ಮತ್ತು ಬೆವರುವಿಕೆಯನ್ನು ಪಡೆಯುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಅಲ್ಲದೇ ಇವುಗಳನ್ನು ಹಚ್ಚಲು ಹೆಚ್ಚು ಸಮಯ ಬೇಕಾಗಿಲ್ಲವಾದುದರಿಂದ ಎಲ್ಲಿಯಾದರೂ ಹೊರಡಲು ಶೀಘ್ರವಾಗಿ ತಯಾರಾಗಬಹುದು.

  beauty tips for menb

  ನಿಮ್ಮ ಉಡುಗೆಗಳು ಗಾಢ ವರ್ಣದಲ್ಲಿರಲಿ

  ಸಾಮಾನ್ಯವಾಗಿ ನಮ್ಮ ಹಿಮ್ಮೇಳದಲ್ಲಿನ ವರ್ಣಗಳು ಗಾಢವಾಗಿದ್ದು ಅದರ ಎದುರು ತಿಳಿವರ್ಣದ ಬಣ್ಣಗಳು ಎದ್ದು ಕಾಣುತ್ತವೆ. ಆದ್ದರಿಂದ ನಿಮ್ಮ ಉಡುಪುಗಳು ಗಾಢವರ್ಣದಲ್ಲಿದ್ದಷ್ಟೂ ಹಿಮ್ಮೇಳದಿಂದೊಗೆ ಮೇಳೈಸಿ ನಿಮ್ಮ ಹೊಟ್ಟೆಯನ್ನು ಮರೆಮಾಚುತ್ತವೆ. ಗಾಢ ನೀಲಿ, ಕಂದು, ಕಪ್ಪು ಮೊದಲಾದ ಬಣ್ಣಗಳು ಉತ್ತಮ ಆಯ್ಕೆಯಾಗಿವೆ.

  ಕೂದಲು ಸಿಕ್ಕು ಸಿಕ್ಕಾಗಿದ್ದರೆ

  ಕೂದಲು ಒರಟಾಗಿ, ಸಿಕ್ಕು ಸಿಕ್ಕು ಆಗಿದೆಯೇ? ಹಾಗಾದರೆ ನೀವು ಒಣ ಕೂದಲನ್ನು ಹೊಂದಿರುತ್ತೀರಿ. ಬಾಳೆಹಣ್ಣು ಪುರುಷರ ಕೂದಲಿಗೆ ಉತ್ತಮವಾದ ಪದಾರ್ಥವಾಗಿರುತ್ತದೆ. ಇದಕ್ಕಾಗಿ ಬಾಳೆಹಣ್ಣನ್ನು 1 ಟೀ.ಚಮಚ ಜೇನು ತುಪ್ಪ ಮತ್ತು ನಿಂಬೆರಸದ ಜೊತೆಗೆ ಬೆರೆಸಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ. ನಂತರ ಒಂದು ಮೈಲ್ಡ್ ಶಾಂಪೂವಿನಿಂದ ಇದನ್ನು ತೊಳೆಯಿರಿ.

  Egg hair pack

  ಮೊಟ್ಟೆ ಹೇರ್ ಪ್ಯಾಕ್ ಬಳಸಿ ನೋಡಿ

  ಮೊಟ್ಟೆಯು ಯಾವ ಕೂದಲಿಗಾದರು ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ. ಒಂದು ವೇಳೆ ನಿಮ್ಮದು ಒಣ ಕೂದಲಾಗಿದ್ದಲ್ಲಿ, ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಳ್ಳಿ. ಅದಕ್ಕೆ ತಲಾ ಒಂದು ಟೇಬಲ್ ಚಮಚ ಜೇನು ತುಪ್ಪ, ಲಿಂಬೆರಸ ಮತ್ತು ಆಲೀವ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಇವುಗಳ ಮಿಶ್ರಣವನ್ನು ಚೆನ್ನಾಗಿ ಕಲೆಸಿಕೊಳ್ಳಿ, ನಂತರ ಅದನ್ನು ಕೂದಲಿಗೆ ಲೇಪಿಸಿ. 20 ನಿಮಿಷ ಬಿಟ್ಟು ಇದನ್ನು ತೊಳೆಯಿರಿ. 

  English summary

  Face Care: Simple Beauty tips for Men to look handsome

  Gone are the days when being unkempt was a sign of masculinity. Women desire a well-kept and groomed man, but you don't have to get mani-pedis for this. And you can find a lot of information on beauty tips for women, but beauty tips for men, well, not as much. Women are not the only one who needs a skin care regime, men, you need it too!
  Story first published: Thursday, October 19, 2017, 23:55 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more