For Quick Alerts
ALLOW NOTIFICATIONS  
For Daily Alerts

ಪುರುಷರೇ! ಇಂದಿನ ದಿನಗಳಲ್ಲಿ ಶರ್ಟ್‌ಗಳದ್ದೇ ದರ್ಬಾರು!

By Super Admin
|

ಪುರುಷರು ಸಾಮಾನ್ಯವಾಗಿ ಅತಿಹೆಚ್ಚಿನ ವಸ್ತ್ರಗಳ ಸಂಗ್ರಹವನ್ನು ಹೊಂದಿರುವುದಿಲ್ಲ. ನಿತ್ಯ ತೊಡಲು ನಾಲ್ಕರು ಮತ್ತು ವಿಶೇಷ ಸಂದರ್ಭಗಳಿಗಾಗಿ ಒಂದೆರಡು ವಸ್ತ್ರಗಳನ್ನು ಹೊಂದಿರುವವರೇ ಹೆಚ್ಚು. ಅದರಲ್ಲೂ ಜೀನ್ಸ್ ತೊಡುವ ಪುರುಷರಿಗೆ ವಾರವಿಡೀ ಒಂದೇ ಜೀನ್ಸ್ ತೊಟ್ಟು ಎರಡು ದಿನಕ್ಕೊಮ್ಮೆ ಅಂಗಿ ಮಾತ್ರ ಬದಲಿಸುವ ಫ್ಯಾಷನ್ ಸಹಾ ಕೆಲವು ವರ್ಷಗಳ ಹಿಂದೆ ರೂಢಿಯಲ್ಲಿತ್ತು.

ಆದರೆ ಈ ವಸ್ತ್ರಗಳನ್ನು ಇಂದಿನ ಯುವತಿಯರು ಸುತಾರಾಂ ಒಪ್ಪದೇ ನಾಯಿ ಓಡಿಸಿಬಂದು ಕಚ್ಚಿದಂತೆ ಹಲವೆಡೆ ಕತ್ತರಿಸಲ್ಪಟ್ಟ ಜೀನ್ಸ್ ಮತ್ತು ಬೆಳ್ಳಂಬೆಳ್ಳಗಿನ ಬಿಳಿಯ ಅಂಗಿ ತೊಟ್ಟ ಯುವಕರತ್ತ ನೋಟ ಬೀರುವುದು ಇಂದಿನ ವಾಸ್ತವವಾಗಿದೆ. ಶ್...! ಈ ಬ್ಯೂಟಿ ಸೀಕ್ರೆಟ್ ಪುರುಷರಿಗೆ ಮಾತ್ರ..!

ಅದರಲ್ಲೂ ಸಂಜೆಯ ಕತ್ತಲಾವರಿಸುತ್ತಿದ್ದಂತೆಯೇ ವಿದ್ಯುದ್ದೀಪಗಳ ಪ್ರಖರ ಬೆಳಕಿನಲ್ಲಿ ಬಿಳಿ ಅಂಗಿಯೇ ಪ್ರಮುಖವಾಗಿ ಗಮನ ಸೆಳೆಯಲ್ಪಡುವ ಕಾರಣ ಹೆಚ್ಚಿನ ಪುರುಷರು ಇಂದು ಕಛೇರಿಗೂ, ಇತರ ಸ್ಥಳಗಳಿಗೂ ಬಿಳಿ ಅಂಗಿಗಳನ್ನು ಧರಿಸಿಯೇ ಅಡ್ಡಾಡುತ್ತಿದ್ದಾರೆ. ಬನ್ನಿ, ಬಿಳಿ ಬಣ್ಣ ಅದೇನು ಮಟ್ಟಿಗೆ ನಮ್ಮ ಯುವಕರಿಗೆ (ಮತ್ತು ಇದನ್ನು ತೊಟ್ಟವರನ್ನು ಗಮನಿಸುವ ಯುವತಿಯರಿಗೆ) ಹುಚ್ಚು ಹಿಡಿಸಿದೆ, ಇದನ್ನು ಧರಿಸುವ ಬಗೆ ಹೇಗೆ ಎಂಬುದನ್ನು ನೋಡೋಣ:

Must Have Men's White Shirt Collection

ಸಾದಾ ಬಿಳಿ ಅಂಗಿ
ಸಾಮಾನ್ಯವಾದ, ಯಾವುದೇ ವಿಶೇಷ ಅಲಂಕಾರ ಅಥವಾ ದರ್ಜಿಯ ಕಲಾತ್ಮಕತೆ ಇಲ್ಲದ ಸಾದಾ ಅಂಗಿ ಇಂದು ಔಪಚಾರಿಕ ರೂಪದಲ್ಲಿಯೂ, ಸಾಂದರ್ಭಿಕವಾಗಿಯೂ ತೊಡಲ್ಪಡುತ್ತಿದೆ. ಇದನ್ನು ಮನಗಂಡ ಹಲವು ಖ್ಯಾತ ವಸ್ತ್ರವಿನ್ಯಾಸಗಾರರು ಅಪ್ಪಟ ಬಿಳಿಯ, ಆದರೆ ಕೊಂಚ ದೊಗಲೆ ಅಥವಾ ಕೊಂಚ ಬಿಗಿಯಾಗಿ ಇರಿಸುವಂತಹ ಸಾದಾ ಅಂಗಿಗಳನ್ನು ಸಿದ್ಧರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಆದರೆ ಒಂದು ವ್ಯತ್ಯಾಸವಿದೆ.
ಸಾದಾ ಪ್ಯಾಂಟ್ ತೊಟ್ಟಾಗ ಇಡಿಯ ತೋಳಿನ ಶರ್ಟ್ ಧರಿಸುವುದೂ ಜೀನ್ಸ್ ಧರಿಸಿದ್ದರೆ ಅರ್ಧ ತೋಳಿನ ಶರ್ಟ್ ಧರಿಸುವುದೂ ಇಂದಿನ ಫ್ಯಾಷನ್‌ನ ಒಂದು ನಿಯಮ. ಇದಕ್ಕೆ ವಿರುದ್ಧವಾಗಿ ತೊಟ್ಟುಕೊಂಡು ಹೋದಿರೋ, ಜೋಕೆ.

ಸ್ಟ್ರಿಂಗ್ ಟಾಪ್
ಎಲ್ಲರೂ ಸಾದಾ ಅಂಗಿಯನ್ನೇ ತೊಟ್ಟುಕೊಂಡು ಹೋದರೆ ನಮ್ಮನ್ನು ಗಮನಿಸುವವರು ಯಾರು ಎಂದು ಕೊಂಕು ತೆಗೆಯುವವರಿಗೂ ವಸ್ತ್ರ ವಿನ್ಯಾಸಕಾರರು ಒಂದು ಉಪಾಯ ಹೂಡಿದ್ದಾರೆ.
ವಿಶೇಷವಾಗಿ ಕೊಂಕು ತೆಗೆಯುವ ಕಾಲೇಜು ಪಡ್ಡೆ ಹುಡುಗರಿಗಾಗಿಯೇ ಎದೆಯ ಬಳಿ ಕೊಂಚ ಬಿಗಿಯಾಗಿರಿಸಿ ತೊಡೆಯನ್ನು ದಾಟುವಷ್ಟು ನೀಳವಾಗಿ, ಆದರೆ ಕೆಳಗೆ ಕೊಂಚವೇ ದೊಗಲೆಯಾಗಿರುವಂತಹ, ಜೇಬಿಲ್ಲದ ಬಿಳಿ ಅಂಗಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಅಂಗಿ ಪಾರ್ಟಿಗಳಲ್ಲಿ ಹೆಚ್ಚಿನ ಕಳೆ ನೀಡುತ್ತದೆ. ಆದರೆ ಪ್ಯಾಂಟ್ ಮತ್ತು ಇತರ ಗಮನ ಸೆಳೆಯುವ ಸೌಂದರ್ಯ ಪ್ರಸಾಧನಗಳನ್ನು ಮಾತ್ರ ಮರೆಯದೇ ತೊಡಬೇಕು. ಪುರುಷರು ಆಕರ್ಷಕವಾಗಿ ಕಾಣಲು ಕೆಲ ಸಲಹೆಗಳು

ರಫೆಲ್ ಶರ್ಟ್
ಒಂದು ಕಾಲದಲ್ಲಿ ಇಟಲಿಯಲ್ಲಿ ಬಹಳ ಖ್ಯಾತಿ ಪಡೆದಿದ್ದ ಈ ನೆರಿಗೆ ನೆರಿಗೆಯಾದ ಬಿಳಿ ಅಂಗಿ ಈಗ ಅಲ್ಲಿ ಹಳತಾಗಿ ಭಾರತಕ್ಕೆ ತಡವಾಗಿ ಬಂದಿದೆ. ಅಂದರೆ ಈ ಅಂಗಿನ ಮುಂದಿನ ಅಥವಾ ಕಾಲರ್ ಬಳಿ ಅಥವಾ ಎದೆಭಾಗದಲ್ಲಿ ನಟ್ಟ ನಡುವೆ ಕೊಂಚ ದೊಡ್ಡದಾದ ನೆರಿಗೆಗಳಿರುವ ಬಟ್ಟೆಯನ್ನು ಕಲಾತ್ಮಕವಾಗಿ ಹೊಲಿದಿರುತ್ತಾರೆ.
ಆದರೆ ಇದನ್ನು ತೊಟ್ಟು ದಿನದ ಕಛೇರಿಗೆ ಅಥವಾ ಇತರ ಕಡೆ ಹೋಗಬೇಡಿ, ಜನರು ಕನಿಕರ ತೋರಿಸಿಯಾರು! ಬದಲಿಗೆ ರಾತ್ರಿಯ ಜಗಮಗ ಮತ್ತು ಸಮಾರಾಧನೆಯ ಪಾರ್ಟಿ, ರಾತ್ರಿಯ ಶುಭಸಮಾರಂಭ ಮೊದಲಾದವುಗಳಲ್ಲಿ ಮಾತ್ರ ತೊಟ್ಟುಕೊಂಡು ಮಿಂಚಿ. ಡೊಳ್ಳು ಹೊಟ್ಟೆಯ ಪುರುಷರಿಗೆ ಇದೋ ಕಿವಿಮಾತು

ಪ್ಲೋರಲ್ ಶರ್ಟ್
ಒಂದು ಕಾಲದಲ್ಲಿ ಚೌಕಾಕಾರದ ಉದ್ದ ಮತ್ತು ಅಡ್ಡಪಟ್ಟಿಗಳ ಅಂಗಿ ತೊಟ್ಟರೆ ಬೆಡ್ ಶೀಟ್ ಏಕೆ ತೊಟ್ಟೆ ಎಂದು ಕೇಳುತ್ತಿದ್ದರು. ಆದರೆ ಇಂದು ಆ ವಿನ್ಯಾಸ ವಿಶೇಷವಾಗಿ ಕಛೇರಿಗಳಲ್ಲಿ ತೊಡಲಾಗುತ್ತದೆ. ಅಂತೆಯೇ ಹೂವುಗಳ ಚಿತ್ರವಿರುವ ಅಂಗಿ ಚಡ್ಡಿಗಳನ್ನು ಹಿಂದೆ ಸರ್ಕಸ್ಸಿನ ವಿದೂಷಕರು ಮಾತ್ರ ತೊಡುತ್ತಿದ್ದರು. ಈ ವಸ್ತ್ರಗಳನ್ನು ತೊಟ್ಟು ಬಂದರೇ ಸಾಕು ವಿದೂಷಕರಿಗೆ ಸಭಿಕರನ್ನು ನಗಿಸಲು ಹೆಚ್ಚಿನ ಶ್ರಮದ ಅಗತ್ಯವೇ ಇರಲಿಲ್ಲ.

ಆದರೆ ಸರ್ಕಸ್ಸಿನೊಂದಿಗೆ ವಿದೂಷಕರೂ ಕಾಣೆಯಾದರೂ ಕೆಲವು ವಿನ್ಯಾಸಕರು ಈ ಹೂವುಗಳನ್ನು ಬಿಳಿ ಬಟ್ಟೆಗಳ ಮೇಲೆ ಕಲಾತ್ಮಕವಾಗಿ ಮುದ್ರಿಸಿ ಪುರುಷರ ಅಂಗಿಯಾಗಿ ಹೊಲಿಸಿ ಮಿಂಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಅಂಗಿಗಳು ಸ್ಯಾಂಡಲ್ ತೊಟ್ಟು ಶಾರ್ಟ್ಸ್ ಅಥವಾ ಚಡ್ಡಿಯೊಂದಿಗೆ ಸಮುದ್ರ ತೀರದಲ್ಲಿ ತಿರುಗಾಡಲು ಅತ್ಯಂತ ಸಮರ್ಪಕವಾಗಿದೆ. ಅಲ್ಲದೇ ರಜಾದಿನ ಕಳೆಯಲು ನಿಮ್ಮ ಮನಸ್ಸಿನ ಮುದವನ್ನು ಹೆಚ್ಚಿಸಲೂ, ವಯಸ್ಸನ್ನು ಮರೆಯಲೂ ಗುಂಪಿನಲ್ಲಿರುವ ಎಲ್ಲರೂ ಈ ವಿನ್ಯಾಸದ ಅಂಗಿಗಳನ್ನು ತೊಟ್ಟರೆ ಹೆಚ್ಚಿನ ಸಂಭ್ರಮ ಮೂಡುವುದು ಖಂಡಿತಾ.

English summary

Must Have Men's White Shirt Collection

Men wearing white shirts and blue denim is a hot fashion trend. No matter what new colours have entered the new market, white has always remained a favourite among everyone.Check out the many ways to flaunt the white shirt, which is a hot trend in all seasons.
Story first published: Wednesday, August 31, 2016, 10:04 [IST]
X
Desktop Bottom Promotion