For Quick Alerts
ALLOW NOTIFICATIONS  
For Daily Alerts

ಶ್...! ಈ ಬ್ಯೂಟಿ ಸೀಕ್ರೆಟ್ ಪುರುಷರಿಗೆ ಮಾತ್ರ..!

By Hemanth
|

ಹಿಂದಿನ ಕಾಲದಿಂದಲೂ ನೀವು ನೋಡುತ್ತಾ ಬಂದರೆ ಸೌಂದರ್ಯವರ್ಧಕಗಳನ್ನು ಹೆಚ್ಚಾಗಿ ಬಳಸುವುದು ಮಹಿಳೆಯರೇ ಆಗಿರುತ್ತಾರೆ. ಪುರುಷರು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ತಿರುಗಾಡುತ್ತಾ ಇದ್ದರು. ಪುರುಷರು ಹೆಚ್ಚಾಗಿ ಬಾಚಣಿಗೆ ಸಿಕ್ಕಿದರೆ ಮಾತ್ರ ತಲೆ ಬಾಚಿಕೊಳ್ಳುತ್ತಾರೆ.

ಇಲ್ಲವೆಂದಾದರೆ ಅದೂ ಇಲ್ಲವೆನ್ನುವಂತಹ ಪರಿಸ್ಥಿತಿ. ಆದರೆ ಕಾಲ ಬದಲಾಗುತ್ತಿದ್ದಂತೆ ಪುರುಷರಲ್ಲಿ ಕೂಡ ಸೌಂದರ್ಯ ಪ್ರಜ್ಞೆ ಮೂಡಲು ಆರಂಭವಾಗಿದೆ. ಈಗೀಗ ಪುರುಷರು ಕೂಡ ಮುಖಕ್ಕೆ ಫೇಶಿಯಲ್ ಮಾಡಿಕೊಳ್ಳುವುದು, ಕ್ರೀಮ್ ಹಚ್ಚಿಕೊಳ್ಳುವುದು ಹೀಗೆ ಇನ್ನಿತರ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಬಳಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಪುರುಷರೇ, ಈ ರೀತಿ ತ್ವಚೆ ಆರೈಕೆ ಮಾಡುತ್ತಿದ್ದೀರಿ ತಾನೆ?

Makeup Tricks That Men Can Use

ಅದರಲ್ಲೂ ಕೆಲವರು ತಮ್ಮ ಎದೆಯಲ್ಲಿನ ಕೂದಲನ್ನು ವಾಕ್ಸ್ ಮಾಡಿಕೊಳ್ಳುತ್ತಾರೆ. ಪುರುಷರು ಕೂಡ ಮೇಕಪ್ ಮಾಡಿಕೊಳ್ಳಬಹುದು. ಆದರೆ ಮಹಿಳೆಯರು ಬಳಸುವಂತಹ ಯಾವುದೇ ಸಾಧನಗಳಿಂದ ಅಲ್ಲ. ಅವರಿಗಾಗಿಯೇ ಬೇರೆಯೇ ಸೌಂದರ್ಯವರ್ಧಕಗಳಿವೆ. ಈ ಲೇಖನದಲ್ಲಿ ಅದನ್ನು ತಿಳಿಸಲಾಗಿದೆ. ಪುರುಷರಿಗಾಗಿ ಮೇಕಪ್ ಸಲಹೆಗಳು ಇಲ್ಲಿವೆ.

ಕಾನ್ಸೀಲರ್
ಇದು ಪುರುಷರಿಗೆ ಸಾಮಾನ್ಯವಾಗಿ ಇರುವಂತಹ ಮೇಕಪ್ ಆಗಿದೆ. ಚಲನಚಿತ್ರ ನಟರು ತಮ್ಮ ಚರ್ಮದಲ್ಲಿನ ದೋಷಗಳನ್ನು ಮರೆಮಾಚಲು ಇದನ್ನು ಬಳಸುತ್ತಾರೆ. ಗುಳಿಬಿದ್ದಿರುವ ಕೆನ್ನೆ ಮತ್ತು ಕಣ್ಣಿನ ರೆಪ್ಪೆಗಳ ಅಡಿಯಲ್ಲಿ ಬಿದ್ದಿರುವ ಕಪ್ಪು ಕಲೆಗಳನ್ನು ಮಾಯ ಮಾಡಲು ಇದು ಒಳ್ಳೆಯ ಸಾಧನ. ಇದು ಮುಖದಲ್ಲಿನ ಕಲೆಗಳು ಗೋಚರಿಸಿದಂತೆ ಮಾಡುತ್ತದೆ. ಇದು ಇಲ್ಲದೆ ಯಾವ ಸ್ಟಾರ್ ಕೂಡ ಸುಂದರವಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ.

ಫೌಂಡೇಶನ್
ಈ ಕಾಸ್ಮೆಟಿಕ್ ಕಾನ್ಸೀಲರ್‌ನಂತೆ ಪುರುಷರ ಮೇಕಪ್ ನಲ್ಲಿ ಕೆಲಸ ಮಾಡುವುದು. ಇದು ತ್ವಚೆಯ ನ್ಯೂನ್ಯತೆಗಳನ್ನು ಮುಚ್ಚಿಹಾಕುವುದರೊಂದಿಗೆ ಚರ್ಮವು ತುಂಬಾ ಮೃಧು ಮತ್ತು ಹೊಳೆಯುವಂತೆ ಮಾಡುವುದು. ಇದರಿಂದ ಮೇಕಪ್ ಮಾಡಿಕೊಂಡಾಗ ನೀವು ತುಂಬಾ ಫೋಟೋಜಿನಿಕ್ ಆಗಿ ಕಾಣಿಸುತ್ತೀರಿ.

ಗೋಲ್ಡ್ ಡಸ್ಟ್
ಮುಖದಲ್ಲಿ ಕಾಂತಿ ಬರುವುದು ಹಾಗೂ ಹೊಳೆಯುಂತೆ ಮಾಡುವುದು ಪುರುಷರ ಮೇಕಪ್ ನ ಪ್ರಮುಖ ಉದ್ದೇಶವಾಗಿದೆ. ಗೋಲ್ಡ್ ಡಸ್ಟ್ ನ್ನು ತೆಳು ಪದರವಾಗಿ ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದು ತ್ವಚೆಗೆ ಕಾಂತಿ ನೀಡುವುದು. ಇದರಿಂದ ಗ್ಲಾಮರಸ್ ಆಗಿ ಪುರುಷರು ಕಾಣಿಸುತ್ತಾರೆ. ಪುರುಷರು ಹೊಂದಿರಬೇಕಾದ 10 ಕಾಸ್ಮೆಟಿಕ್ಸ್

ದೇಹದ ಮೇಕಪ್ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಿಗೆ ದೇಹದ ಮೇಕಪ್ ಬೇಕಾಗುತ್ತದೆ. ಯಾಕೆಂದರೆ ಮಹಿಳೆಯರಲ್ಲಿ ನೈಸರ್ಗಿಕವಾಗಿ ದೇಹದ ಸೌಂದರ್ಯವನ್ನು ಹೆಚ್ಚಿಸುವಂತಹ ಅಂಶಗಳಿವೆ. ಆದರೆ ಪುರುಷರು ಮೇಕಪ್ ಮೂಲಕ ಇದನ್ನು ಮಾಡಿಕೊಳ್ಳಬೇಕು. ಸಿನಿಮಾಗಳಲ್ಲಿ ಹೀರೋಗಳ ಎದೆಯು ಆ ರೀತಿಯಲ್ಲಿ ಕಾಣಲು ಅದಕ್ಕೆ ಕಂಚಿನ ಮೇಕಪ್ ಮಾಡಲಾಗುತ್ತದೆ.

ಕೆಲವೊಂದು ಗಾಯದ ಗುರುತುಗಳನ್ನು ಮರೆಮಾಚಲು ಫೌಂಡೇಶನ್ ಹಚ್ಚಿಕೊಳ್ಳಬೇಕಾಗುತ್ತದೆ. ಪುರುಷರಿಗಾಗಿ ಇರುವಂತಹ ಮೇಕಪ್ ಸಾಧನಗಳು ತುಂಬಾ ಕಡಿಮೆಯಾದರೂ ಇದರ ಬಗ್ಗೆ ನಾಚಿಕೆ ಮಾಡಿಕೊಳ್ಳದೆ ಅವುಗಳನ್ನು ಬಳಸಿಕೊಂಡರೆ ನಿಮ್ಮ ಸೌಂದರ್ಯವು ಹೊಳಪನ್ನು ಪಡೆಯುವುದು. ಕೆಲವೊಂದು ಕಾಸ್ಮೆಟಿಕ್ ಗಳನ್ನು ಬಳಸಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ.

English summary

Makeup Tricks That Men Can Use

Beauty is not the sole forte of women. Men too have the right to look beautiful and well groomed. There was a time when men would scoff at the thought of doing a girlish thing like makeup. But times have changed and so have men. Now men want to be fair and they are not shy to buy fairness creams. Here are some makeup tricks that men can use.
Story first published: Wednesday, August 3, 2016, 20:05 [IST]
X
Desktop Bottom Promotion