For Quick Alerts
ALLOW NOTIFICATIONS  
For Daily Alerts

ಡೊಳ್ಳು ಹೊಟ್ಟೆಯ ಪುರುಷರಿಗೆ ಇದೋ ಕಿವಿಮಾತು

By manu
|

ಒಂದು ಕಾಲದಲ್ಲಿ ಡೊಳ್ಳು ಹೊಟ್ಟೆ ಎಂದರೆ ಐಶ್ವರ್ಯ ಮತ್ತು ಆರೋಗ್ಯದ ಲಕ್ಷಣ ಎಂದು ಭಾವಿಸಲಾಗುತ್ತಿತ್ತು. ಇದಕ್ಕಾಗಿಯೇ ರಾಜ ಮಹಾರಾಜರು, ಜಮೀನುದಾರರು ಹೆಚ್ಚು ಹೆಚ್ಚು ಆಹಾರ ಸೇವಿಸಿ ಡೊಳ್ಳುಹೊಟ್ಟೆಯನ್ನು ಧಾರಾಳವಾಗಿ ಪ್ರದರ್ಶಿಸುತ್ತಿದ್ದರು. ಆದರೆ ಇಂದು ಇದು ಅನಾರೋಗ್ಯದ ಲಕ್ಷಣವಾಗಿದೆ. ಅದರಲ್ಲೂ ಆರು ಮಾಂಸಖಂಡಗಳ (ಸಿಕ್ಸ್ ಪ್ಯಾಕ್) ಮೂಲಕ ಚಪ್ಪಟೆಯಾದ ಹೊಟ್ಟೆಯನ್ನು ಪ್ರದರ್ಶಿಸುವುದು ಆರೋಗ್ಯಕ್ಕಿಂತಲೂ ಸೌಂದರ್ಯದ ಪ್ರತೀಕವಾಗಿದೆ.

ಆದರೆ ವಾಸ್ತವವಾಗಿ ಇಂದು ಹದಿಹರೆಯದಲ್ಲಿಯೇ ಕೊಂಚ ಹೊಟ್ಟೆ ಹೊರಬರಲು ಪ್ರಾರಂಭವಾಗುತ್ತದೆ. ಮೂವತ್ತರಲ್ಲಿ ಕೊಂಚ ಹೆಚ್ಚಾಗಿದ್ದರೆ ನಲವತ್ತರ ಬಳಿಕ ಭಾರೀ ಗಾತ್ರದಲ್ಲಿ ಹೊರಬರುತ್ತದೆ. ಹೆಚ್ಚಿನವರು ಇದು ಜಠರವೇ ದೊಡ್ಡದಾಗುವುದು ಎಂದು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಇದು ಕೊಬ್ಬು ಸಂಗ್ರಹವಾಗಿ ಬೆನ್ನಿಗೆ ಒತ್ತುವ ಮೂಲಕ ಹೊರದೂಡಲ್ಪಟ್ಟಿದ್ದೇ ಹೊರತು ಜಠರದ ಗಾತ್ರ ಬದಲಾಗುವುದಿಲ್ಲ. ಇನ್ನೂ ಹೆಚ್ಚಿನವರು ದೊಡ್ಡ ಹೊಟ್ಟೆಯವರು ಹೆಚ್ಚು ತಿನ್ನಬಲ್ಲರು ಎಂಬ ಅಭಿಪ್ರಾಯ ಹೊಂದಿದ್ದಾರೆ. ಇದೂ ತಪ್ಪು. ಸಣಕಲರೂ ಇತರರಿಗಿಂತ ನಾಲ್ಕು ಪಟ್ಟು ಹೆಚ್ಚು ತಿನ್ನುವ ಸಾಮರ್ಥ್ಯ ಹೊಂದಿರುತ್ತಾರೆ.

ಹೊಟ್ಟೆಯನ್ನು ಕರಗಿಸುವುದು ಎಲ್ಲರ ಕನಸು. ಆದರೆ ಇದು ಸುಲಭಸಾಧ್ಯವಲ್ಲ, ಇದಕ್ಕೆ ಆಹಾರದಲ್ಲಿ ನಿಯಂತ್ರಣ, ಮನಸ್ಸಿನ ಮೇಲೆ ಹತೋಟಿ ಹಾಗೂ ಸತತ ವ್ಯಾಯಾಮ ಮತ್ತು ಪರಿಶ್ರಮದ ಅಗತ್ಯವಿದೆ. ಇಂದು ಈ ಸಂಕಲ್ಪವನ್ನು ತೊಟ್ಟು ಅದರಂತೆ ಪ್ರಾರಂಭಿಸಿದರೂ ಫಲಿತಾಂಶ ಬರಲು ಕನಿಷ್ಟ ಒಂದು ವರ್ಷ ಬೇಕು. ಅಲ್ಲಿಯವರೆಗೆ ಈ ಡೊಳ್ಳು ಹೊಟ್ಟೆಯನ್ನು ಇತರರಿಗೆ ತೋರದಂತೆ ಅಡಗಿಸಿಡುವುದು ಹೇಗೆ?

ಇದಕ್ಕೂ ಕೆಲವು ಉಪಾಯಗಳಿವೆ. ಮುಖ್ಯವಾಗಿ ನೀವು ತೊಡುವ ಉಡುಗೆಗಳು ಹೊಟ್ಟೆಯನ್ನು ಬಳಸಿಕೊಳ್ಳಬೇಕೇ ಹೊರತು ತೋರುವಂತಿರಬಾರದು. ಉತ್ತಮ ಪಾದರಕ್ಷೆ ಮತ್ತು ಸ್ವಚ್ಛವಾಗಿಟ್ಟಿರುವ ವದನ ಎದುರಿನವರ ಗಮನವನ್ನು ನಿಮ್ಮ ಮುಖದೆಡೆಗೆ ಸೆಳೆಯುವ ಮೂಲಕ ಹೊಟ್ಟೆಯ ಮೇಲೆ ಗಮನ ಹರಿಸದಂತೆ ತಡೆಯಬಹುದು. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಮಾರುಕಟ್ಟೆಯಲ್ಲಿಯೂ ಡೊಳ್ಳು ಹೊಟ್ಟೆಯವರಿಗಾಗಿಯೇ ವಿಶೇಷ ಉಡುಪುಗಳು ಈಗ ಲಭ್ಯವಿವೆ, ಇವನ್ನೂ ಪ್ರಯತ್ನಿಸಬಹುದು. ಅತಿ ಸಡಿಲ ಅಥವಾ ಅತಿ ಬಿಗಿಯಾದ ಉಡುಪುಗಳನ್ನು ಆಯ್ಕೆ ಮಾಡದಿರಿ, ಇವೆರಡೂ ಡೊಳ್ಳುಹೊಟ್ಟೆಯನ್ನು ಹೆಚ್ಚಾಗಿ ತೋರಿಸುತ್ತವೆ. ಇನ್ನೊಂದು ಸಲಹೆ ಎಂದರೆ ನಿಮ್ಮ ಉಡುಪು ಸರಳವಾಗಿದ್ದು ಫಳಫಳನೆ ಹೊಳೆಯದಿರುವ ಬಟ್ಟೆಗಳಿಂದ ತಯಾರಿಸಲ್ಪಟ್ಟಿರದಿರಲಿ. ಈ ನಿಟ್ಟಿನಲ್ಲಿ ಕೆಲವು ಉಪಯುಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಉಡುಗೆಗಳು ಗಾಢ ವರ್ಣದಲ್ಲಿರಲಿ

ನಿಮ್ಮ ಉಡುಗೆಗಳು ಗಾಢ ವರ್ಣದಲ್ಲಿರಲಿ

ಸಾಮಾನ್ಯವಾಗಿ ನಮ್ಮ ಹಿಮ್ಮೇಳದಲ್ಲಿನ ವರ್ಣಗಳು ಗಾಢವಾಗಿದ್ದು ಅದರ ಎದುರು ತಿಳಿವರ್ಣದ ಬಣ್ಣಗಳು ಎದ್ದು ಕಾಣುತ್ತವೆ. ಆದ್ದರಿಂದ ನಿಮ್ಮ ಉಡುಪುಗಳು ಗಾಢವರ್ಣದಲ್ಲಿದ್ದಷ್ಟೂ ಹಿಮ್ಮೇಳದಿಂದೊಗೆ ಮೇಳೈಸಿ ನಿಮ್ಮ ಹೊಟ್ಟೆಯನ್ನು ಮರೆಮಾಚುತ್ತವೆ. ಗಾಢ ನೀಲಿ, ಕಂದು, ಕಪ್ಪು ಮೊದಲಾದ ಬಣ್ಣಗಳು ಉತ್ತಮ ಆಯ್ಕೆಯಾಗಿವೆ.

ಬಿಗಿಯಾದ ಉಡುಪುಗಳನ್ನು ತೊಡದಿರಿ

ಬಿಗಿಯಾದ ಉಡುಪುಗಳನ್ನು ತೊಡದಿರಿ

ಕೆಲವರು ಹೊಟ್ಟೆಯ ಮೇಲೆ ಬೆಲ್ಟ್ ಬರುವಂತೆ ಬಿಗಿಯಾಗಿ ಕಟ್ಟಿ ಬಲವಂತವಾಗಿ ಹೊಟ್ಟೆಯನ್ನು ಒಳಗೆಳೆದುಕೊಂಡಿರುತ್ತಾರೆ. ಈ ಪರಿ ಅನಾರೋಗ್ಯಕರವಾಗಿ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಆದ್ದರಿಂದ ನಿಮ್ಮ ಗಾತ್ರಕ್ಕೆ ಸೂಕ್ತವಾದ ಅಂದರೆ ಅತಿ ಬಿಗಿಯಾಗಿಯೂ, ಅತಿ ಸಡಿಲವಾಗಿಯೂ ಇಲ್ಲದ ಉಡುಪುಗಳನ್ನೇ ತೊಡಿರಿ.

ಜ್ಯಾಕೆಟ್ ತೊಡಿರಿ

ಜ್ಯಾಕೆಟ್ ತೊಡಿರಿ

ಗಾಢವರ್ಣದ ಜ್ಯಾಕೆಟ್ ಒಂದನ್ನು ತೊಡುವುದು ಹೊಟ್ಟೆಯನ್ನು ಮರೆಮಾಚಲು ಅತ್ಯುತ್ತಮವಾದ ವಿಧಾನವಾಗಿದೆ. ಕೆಳಭಾಗದ ಬಟನ್ ಗಳನ್ನು ಹಾಕಿ ಅರ್ಧ ತೆರೆದಂತೆ ಇಡುವುದರಿಂದ ಜ್ಯಾಕೆಟ್ ಬೇರೆಯೇ ರೂಪ ಪಡೆದು ಇದರ ಹಿಂದೆ ಡೊಳ್ಳು ಹೊಟ್ಟೆ ಕಾಣೆಯಾಗುತ್ತದೆ. ಜ್ಯಾಕೆಟ್ ಆಕರ್ಷಕವಾಗಿದ್ದಷ್ಟೂ ಹೊಟ್ಟೆಯ ಮೇಲೆ ಇತರರ ದೃಷ್ಟಿ ಹೋಗುವುದು ಕಡಿಮೆಯಾಗುತ್ತದೆ.

ಜೀನ್ಸ್ ಹೊಕ್ಕುಳ ಮಟ್ಟದಲ್ಲಿ ತೊಡಿರಿ

ಜೀನ್ಸ್ ಹೊಕ್ಕುಳ ಮಟ್ಟದಲ್ಲಿ ತೊಡಿರಿ

ಗಾಢ ವರ್ಣದ ಜೀನ್ಸ್ ತೊಡುವಿರಾದರೆ ಇದರ ನಡುಪಟ್ಟಿ ಹೊಕ್ಕುಳ ಬಳಿ ಬರುವಂತೆ ತೊಡಿರಿ. ಅತಿ ಬಿಗಿಯಾಗಿ ಇರುವುದು ಅಗತ್ಯವಿಲ್ಲ. ಇದು ಹೊಟ್ಟೆಯನ್ನು ಅಡಗಿಸಿ ನಿಮಗೆ ಉತ್ತಮ ರೂಪವನ್ನು ನೀಡುತ್ತದೆ.ಅಲ್ಲದೇ ಬೂಟ್ ಕಟ್ ಇರುವ ಜೀನ್ಸ್ ಆಯ್ದುಕೊಂಡರೆ ದೇಹ ಕೊಂಚ ಕರಗಿಸಿಕೊಂಡಂತೆ ಭ್ರಮೆಯನ್ನೂ ಉಂಟುಮಾಡುತ್ತದೆ.

ಇನ್ ಷರ್ಟ್ ಮಾಡಿಕೊಳ್ಳಿ

ಇನ್ ಷರ್ಟ್ ಮಾಡಿಕೊಳ್ಳಿ

ಪ್ಯಾಂಟಿನ ನಡುಪಟ್ಟಿ ಹೊಟ್ಟೆಯ ನಡುಭಾಗದಲ್ಲಿ ಬರುವಂತೆ ಮತ್ತು ಇನ್ ಷರ್ಟ್ ಮಾಡಿ ಕೊಂಚವೇ ಹೊರಗಿಣಿಕುವಂತೆ ಎಳೆದುಕೊಳ್ಳುವ ಮೂಲಕ ಹೊಟ್ಟೆಯನ್ನು ಮರೆಮಾಚಬಹುದು. ನಿಮ್ಮ ಷರ್ಟ್ ಮತ್ತು ಪ್ಯಾಂಟ್ ಎರಡೂ ಅತಿ ಬಿಗಿಯೂ ಅಲ್ಲದೇ ಅತಿ ಸಡಿಲವೂ ಅಲ್ಲದೇ ಇರುವುದೂ ಮುಖ್ಯ ಬೆಲ್ಟ್ ಕೊಂಚ ಅಗಲವೇ ಇರಲಿ, ಕಡಿಮೆ ಅಗಲದ ಬೆಲ್ಟ್ ಹೊಟ್ಟೆಯ ಗಾತ್ರ ಹೆಚ್ಚಿರುವ ಭ್ರಮೆ ಮೂಡಿಸುತ್ತದೆ.

ನಿಮ್ಮ ಬಟ್ಟೆಗಳು ಹೊಳೆಯದಿರಲಿ

ನಿಮ್ಮ ಬಟ್ಟೆಗಳು ಹೊಳೆಯದಿರಲಿ

ನಿಮ್ಮ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಇವು ಬೆಳಕಿಗೆ ಹೊಳೆಯುವ ಫಳಫಳ ಇರದಂತೆ ನೋಡಿಕೊಳ್ಳಿ. ಏಕೆಂದರೆ ಹೊಟ್ಟೆಯ ಭಾಗದಲ್ಲಿ ಕೊಂಚ ಅಗಲವಾಗುವಾಗ ಬಟ್ಟೆ ಅತಿಹೆಚ್ಚಿನ ಆಕರ್ಷಣೆಯನ್ನು ಎದುರಿಸುತ್ತದೆ. ಬದಲಿಗೆ ಹೊಳೆಯದ, ಗಾಢವರ್ಣದ, ಒಂದೇ ಬಣ್ಣದ ಅಥವಾ ಗಾಢವರ್ಣಗಳದ್ದೇ ಸಂಯೋಜನೆ ಇರುವ ಬಟ್ಟೆಗಳನ್ನು ಆಯ್ದುಕೊಳ್ಳಿ.

ನಿಮ್ಮ ನೆಚ್ಚಿನ ದರ್ಜಿಯೇ ಬಟ್ಟೆ ಹೊಲೆಯಲಿ

ನಿಮ್ಮ ನೆಚ್ಚಿನ ದರ್ಜಿಯೇ ಬಟ್ಟೆ ಹೊಲೆಯಲಿ

ಮಾರುಕಟ್ಟೆಯಲ್ಲಿ ಸಿದ್ಧರೂಪದಲ್ಲಿ ಬಟ್ಟೆಗಳು ಸಿಕ್ಕರೂ ಕೆಲವೊಮ್ಮೆ ಅತಿ ಸಮರ್ಪಕವಾಗಿರಲಾರದು. ಈ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಅಥವಾ ಅನುಭವಿ ದರ್ಜಿಗಳ ಬಳಿ ಹೊಲಿಸಿಕೊಳ್ಳುವುದು ಒಳಿತು.ದರ್ಜಿಗಳು ತಮ್ಮ ಅನುಭವದಿಂದ ಈ ಡೊಳ್ಳು ಹೊಟ್ಟೆ ಕಾಣದಿರುವಂತೆ ಬಟ್ಟೆಗಳನ್ನು ಹೊಲಿದು ನೀಡಬಲ್ಲರು. ಇವರ ಅನುಭವದ ಉಪಯೋಗ ಪಡೆಯಿರಿ. ಇವು ನಿಮಗೆ ಪ್ರತ್ಯೇಕವಾದ ರೂಪವನ್ನೇ ನೀಡುತ್ತದೆ.

English summary

Hide That Belly: Men's Fashion Tips

No one likes to flaunt their bulging bellies, least of all men who are still under 40. Blame it on lifestyle or stress, many of us struggle to get rid of that big belly. But there's no need to be disheartened. Boldsky has for your smart clothing ideas that'll help you camouflage that unatrractive bulge.
X
Desktop Bottom Promotion