Latest Updates
-
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ?
ಪುರುಷರು ಆಕರ್ಷಕವಾಗಿ ಕಾಣಲು ಕೆಲ ಸಲಹೆಗಳು

1. ಪುರುಷರು ಆಕರ್ಷಕವಾಗಿ ಕಾಣಬೇಕೆಂದರೆ ನೀಟಾಗಿ ಶೇವ್ ಮಾಡಬೇಕು, ಗಡ್ಡ ಬಿಡುವುದಕ್ಕೆ ಇಷ್ಟ ಪಡುವವರು ಅದನ್ನು ಆಗಾಗ ಟ್ರಿಮ್ ಮಾಡುತ್ತಿರಬೇಕು. ಶೇವ್ ಮಾಡುವರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಎದ್ದ ಕೂಡಲೇ ಶೇವ್ ಮಾಡಬಾರದು. ಶೇವ್ ಜೆಲ್ ಬದಲು ಫೇಶಿಯಲ್ ಕ್ಲೆನ್ಸರ್ ಬಳಸುವುದು ಒಳ್ಳೆಯದು.
2. ಪುರುಷರು ಹೆಚ್ಚಾಗಿ ಮೈ ತಿಕ್ಕುವ ಸೋಪನ್ನೇ ಮುಖಕ್ಕೆ ಬಳಸುತ್ತಾರೆ. ತುಂಬಾ ಎಣ್ಣೆ ಮುಖವಿರುವವರು ಸೋಪು ಬಳಸದೆ ಫೇಸ್ ವಾಶ್ ಬಳಸುವುದು ಒಳ್ಳೆಯದು. ಮುಖವನ್ನು ದಿನಾ ಕ್ಲೆನ್ಸ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
3. ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ , ವೈಟ್ ಹೆಡ್ಸ್ ಮತ್ತು ನಿರ್ಜೀವ ತ್ವಚೆ ಹೋಗಲಾಡಿಸಲು ವಾರದಲ್ಲಿ ಎರಡು ಬಾರಿ ಫೇಸ್ ಸ್ಕ್ರಬ್ ಮಾಡಬೇಕು.
4. ನೆರೆ ಕೂದಲನ್ನು ಮರೆ ಮಾಚಲು ಮೆನ್ ಹೇರ್ ಕಲರ್ ಕ್ರೀಮ್ ಗಳನ್ನು ಬಳಸಬಹುದು.
5. ಲಿಪ್ ಬಾಮ್ ತುಟಿಯ ರಕ್ಷಣೆಗೆ ಇರುವುದರಿಂದ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಹಚ್ಚಬಹುದಾಗಿದೆ.
6. ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕಾರ. ಅದರಲ್ಲೂ ಮಿತಿ ಮೀರಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೆ ಮುಖ ಸುಕ್ಕಾಗಿ ಬೇಗನೆ ವಯಸ್ಸಾದಂತೆ ಕಾಣುವುದು.
7. ಮುಖಕ್ಕೆ ಲೋಳೆಸರ ಹಚ್ಚಿದರೆ ಮುಖದಲ್ಲಿರುವ ಮೊಡವೆ, ಕಲೆಗಳಿದ್ದರೆ ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುವುದು.
8. ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗುವುದನ್ನು ತಡೆಯಲು ಮಿತಿ ಮೀರಿ ಟೀ ಕುಡಿಯಬಾರದು.
9. ಹಲ್ಲುಗಳನ್ನು ಬ್ರೆಷ್ ನಿಂದ ಬಲವಾಗಿ ತಿಕ್ಕಬೇಡಿ, ಪೇಸ್ಟ್ ನಿಂದ ಹಲ್ಲು ಉಜ್ಜಿದ ನಂತರ ಸ್ವಲ್ಪ ಉಪ್ಪು ಹಾಕಿ ಹಲ್ಲುಜ್ಜಿದರೆ ಹಲ್ಲುಗಳು ಬೆಳ್ಳಗ್ಗೆ ಕಾಣಿಸುತ್ತದೆ.
10. ಚೆನ್ನಾಗಿ ಬೆವರು ಬರುವಂತಹ ವ್ಯಾಯಾಮ ಮಾಡಬೇಕು. ಮೈಯಿಂದ ಬೆವರು ಬಂದರೆ ಬೆವರಿನ ರೂಪದಲ್ಲಿ ಕಶ್ಮಲಗಳು ಹೊರಗೆ ಹೋಗುವುದರಿಂದ ತ್ವಚೆ ಕಾಂತಿಯನ್ನು ಪಡೆಯುತ್ತದೆ.



Click it and Unblock the Notifications