For Quick Alerts
ALLOW NOTIFICATIONS  
For Daily Alerts

ಪುರುಷರ ಪಾದರಕ್ಷೆಯ ಆಯ್ಕೆಗೆ ಕೆಲವು ಸಲಹೆಗಳು

By Poornima Heggade
|

ಸರಿಯಾದ ಡ್ರೆಸ್ಸಿಂಗ್ ಎಂದರೆ ಎಲ್ಲವೂ ಸೇರಿರುತ್ತದೆ. ಪ್ಯಾಂಟ್, ಶರ್ಟ್, ಅವುಗಳ ಬಣ್ಣಗಳ ಹೊಂದಾಣಿಕೆ, ಬೆಲ್ಟ್, ಕೈಗಡಿಯಾರ ಎಲ್ಲವೂ. ಇದೆಲ್ಲದರ ಜೊತೆಗೆ ಇನ್ನೊಂದು ಅತೀ ಮುಖ್ಯ ವಿಷಯವೆಂದರೆ ಪಾದರಕ್ಷೆಗಳು. ನಾವು ತೊಡುವ ಪಾದರಕ್ಷೆಗಳು ನಮ್ಮ ಬಗ್ಗೆ ಅದೆಷ್ಟೋ ಸತ್ಯಗಳನ್ನು ಬಿಚ್ಚಿಡುತ್ತವೆ.

ಪಾದರಕ್ಷೆಗಳ ಮೂಲಭೂತ ಕೆಲಸ ನಮ್ಮ ಕಾಲುಗಳನ್ನು ಧೂಳು ಮತ್ತು ಇತರ ವಸ್ತುಗಳಿಂದ ರಕ್ಷಿಸುವುದೇ ಆದರೂ ಇದರ ಜೊತೆಗೆ ಅದು ಮತ್ತೂ ಹಲವು ಕೆಲಸಗಳನ್ನು ಮಾಡುತ್ತದೆ. ಹೊಸ ಮಾದರಿಯ, ಹೊಸ ನಮೂನೆಯ ಶೂ ಗಳು ನಮ್ಮ ರಕ್ಷಣೆಯ ಜೊತೆಗೆ ಇತರರು ನೋಡುವಾಗ ನಾವು ಯಾವ ತರಹದ ವ್ಯಕ್ತಿ ಎಂಬುದನ್ನು ತೋರಿಸಿ ಕೊಡುತ್ತದೆ ಕೂಡ.

ಇನ್ನಷ್ಟು ಲೇಖನಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಾನ್ಸೂನ್ ಗೆ ಧರಿಸಲು ಬೆಸ್ಟ್ ಸ್ಟೈಲೀಷ್ ಸ್ಲಿಪ್ಪರ್ಸ್

ಪ್ರತಿಯೊಂದು ವಿಧದ ಶೂ ಎಲ್ಲಾ ಬಟ್ಟೆಗಳ ಜೊತೆಗೆ ಮ್ಯಾಚ್ ಆಗದು. ಕೆಲವೊಂದು ಕೆಲವು ಬಟ್ಟೆಗಳ ಜೊತೆಗೆ ಮಾತ್ರ ಸರಿಹೊಂದುತ್ತದೆ. ಅದನ್ನು ಆರಿಸುವುದರಲ್ಲೇ ಜಾಣತನ ಇರುವುದು. ನೀವು ಉದ್ಯಮ ವಲಯದಲ್ಲಿ ಇದ್ದೀರಿ ಎಂದಾದರೆ ನೀವು ಎಲ್ಲೇ ಇರಿ, ಅದು ನಿಮ್ಮದೇ ಆಫೀಸ್ ಆಗಿರಲಿ, ಮೀಟಿಂಗ್ಸ್ ಆಗಿರಲಿ ಎಲ್ಲೇ ಇರಲಿ ಶೂ ಗಳು ಬಹಳ ಮಹತ್ವ ಪಡೆಯುತ್ತವೆ.

Tips to choose right formal footwear for men

ಸರಿಯಾದ ಶೂ ಧರಿಸುವುದು ನಾನು ಧರಿಸಿರುವ ಶೂ ಇತರರಿಗಿಂತ ಬಹಳ ಚೆನ್ನಾಗಿದೆ ಎಂದು ನಿಮಗೆ ಅನ್ನಿಸುವುದು ಒಂದು ರೀತಿಯಲ್ಲಿ ನಿಮ್ಮ ಧೈರ್ಯವನ್ನೂ ಹೆಚ್ಚಿಸುತ್ತದೆ. ನೀವು ಹೋಗುವ ಸ್ಥಳಗಳು ಮತ್ತು ನಿಮ್ಮ ಬಟ್ಟೆಗೆ ಅನುಗುಣವಾಗಿ ಶೂ ಗಳಲ್ಲು ಆಯ್ಕೆ ಮಾಡಬೇಕಾದ್ದು ಇಂದಿನ ಕಾರ್ಪೋರೇಟ್ ಜಗತ್ತಿನ ಒಂದು ನಿಯಮವೇ ಆಗಿದೆ.

ಸಾಮಾನ್ಯ ಜನರಿಗೆ ಕಪ್ಪು ಲೆಥರ್ ಶೂ ಗಳು ಪ್ರಥಮ ಆಯ್ಕೆಯಾಗಿದ್ದರೆ ಇನ್ನೂ ಕೆಲವರಿಗೆ ಕಂದು ಬಣ್ಣದ ಶೂ ಗಳೇ ಬೇಕಾಗಿರುತ್ತವೆ. ನೀವು ಉದ್ಯಮಿಯಾಗಿದ್ದು ಒಂದು ರಜಾ ದಿನ ನಿಮ್ಮ ಎಲ್ಲಾ ಗೆಳೆಯರು ಹೊರಗೆಲ್ಲೋ ಸೇರುತ್ತೀರಿ ಎಂದಾದರೆ ಅಂದು ನಿಮ್ಮಲ್ಲಿ ಸಂದೇಹಗಳು ಹುಟ್ಟುತ್ತವೆ ಫಾರ್ಮಲ್ ಶೂ ಹಾಕುವುದೋ ಅಥವಾ ಕ್ಯಾಶುವಲ್ ಹಾಕಿ ಹೋಗುವುದೋ ಎಂದು.

ಇದಕ್ಕಾಗಿಯೇ ಶೂ ಗಳ ಆಯ್ಕೆಯನ್ನು ಬಟ್ಟೆ ಆಯ್ಕೆ ಮಾಡಿದ ಕೂಡಲೇ ಮಾಡಿರಬೇಕು. ಇಲ್ಲದಿದ್ದಲ್ಲಿ ಕೊನೆಯ ಘಳಿಗೆಯಲ್ಲಿ ಯಾವ ಶೂ ಹಾಕುವುದು ಎನ್ನುವುದರ ಬಗ್ಗೆ ಬಹಳ ಗೊಂದಲ ಏರ್ಪಡುತ್ತದೆ.
ನೀವು ಹೋಗುವ ಸ್ಥಳಗಳು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಶೂ ಗಳ ಆಯ್ಕೆಯ ಕೆಲವು ಮಾರ್ಗದರ್ಶಿಗಳು ಇಲ್ಲಿವೆ:

1.ವ್ಯಾವಹಾರಿಕ ಸಂದರ್ಭ: ನೀವು ಸೂಟ್ ಹಾಕುತ್ತೀರಿ ಎಂದಾದರೆ ಬಣ್ಣದ ಆಯ್ಕೆಗಿಂತ ಮೊದಲಿನ ಆದ್ಯತೆ ನಿಮ್ಮ ಶೂ ಲೆಥರ್ ನಿಂದ ಮಾಡಿದ್ದಾಗಿರಬೇಕು. ಇದು ಒಂದು ಪಾಲಿಸಲೇಬೇಕಾದ ನಿಯಮ. ನಿಮ್ಮ ಕಾಲು ಇದರಲ್ಲಿ ಸಂಪೂರ್ಣ ಆವರಿಸಿರಬೇಕು. ಇದರಲ್ಲಿ ಯಾವುದೇ ರೀತಿಯ ಹೊಸ ವಿನ್ಯಾಸಗಳನ್ನು ಅಥವಾ ಮೇಲೆ ಸಿಂಗಾರಕ್ಕೆ ಇಟ್ಟ ವಸ್ತುಗಳನ್ನು ಆರಿಸಬೇಡಿ. ಬಹಳ ಫಾರ್ಮಲ್ ಲುಕ್ ಇರುವ ಶೂ ಗಳು ಮೊದಲ ಆದ್ಯತೆಯಾಗಿರಲಿ.

2.ಫಾರ್ಮಲ್ ಲೆಥರ್ ಶೂ: ಗಿಡ್ಡ ಅಂಗಿ ಅಥವಾ ಟುಕ್ಸೆಡೋ ಜೊತೆಗೆ ಶೂ ಆಯ್ಕೆ ಮಾಡುವಾಗ ನಿಮ್ಮಲ್ಲಿ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ಇಂತಹ ಬಟ್ಟೆಗಳ ಜೊತೆಗೆ ಲೆಥರ್ ಶೂ ಗಳೇ ಬೇಕು ಆದರೆ ಅದರಲ್ಲಿ ಹೆಚ್ಚಿನ ಹೊಲಿಗಗಳು ಮತ್ತು ಇನ್ನಿತರ ಯಾವುದೇ ಆಕಾರ ಇರಬಾರದು ಲೇಸ್ ಗಳನ್ನು ಬಿಟ್ಟರೆ ಮತ್ಯಾವ ವಿನ್ಯಾಸವೂ ಅದರಲ್ಲಿರಬಾರದು. ಹೆಚ್ಚಿನ ಹೊಳಪು ಬೇಕೆಂದಿದ್ದಲ್ಲಿ ಕಪ್ಪು ಬಣ್ಣದ ಶೂ ಗಳನ್ನೇ ಆಯ್ಕೆ ಮಾಡಿ.

3.ವ್ಯಾವಹಾರಿಕ ಕ್ಯಾಶುವಲ್ ಶೂ: ವ್ಯಾವಹಾರಿಕ ಆದರೆ ಕ್ಯಾಶುವಲ್ ಶೂ ಗಳು ಸ್ವಲ್ಪ ಆಯ್ಕೆಯಲ್ಲಿ ಕಷ್ಟದ ವಿಷಯವಾಗಿದೆ. ನಿಮ್ಮ ಗೆಳೆಯರ ಬಳಗದ ಪಿಕ್ ನಿಕ್, ಆಫೀಸಿನಿಂದ ಒಂದು ಪ್ರವಾಸ, ಅಥವಾ ಒಂದು ರಜಾದಿನದ ಭೇಟಿ ಗಳಂತಹ ಸನ್ನಿವೇಶಗಳು ಜೀವನದಲ್ಲಿ ಬಂದೇ ಬರುತ್ತವೆ. ಇದು ಸ್ವಲ್ಪ ಕಷ್ಟದ ಆಯ್ಕೆ. ಜೀನ್ಸ್ ಅಥವಾ ಸೆಮಿ ಫಾರ್ಮಲ್ ಬಟ್ಟೆ ಹಾಕಿದರೆ ಶೂ ಗಳ ಆಯ್ಕೆಯೂ ಅದಕ್ಕೆ ಸರಿ ಹೊಂದುವಂತಿರಬೇಕು. ಈಗಿನ ಹೊಸ ಮಾದರಿಗಳಾದ ಬೋಟ್ ಶೂ ಗಳಂತಹ ಶೂ ಗಳು ಬಹಳ ಉತ್ತಮ ಆಯ್ಕೆಯಾಗಿದೆ.

4.ಲೋಫರ್ಸ್ ಪ್ರಯಾಣದ ಶೂ ಗಳು: ಲೋಫರ್ಸ್ ಮಾದರಿಯ ಶೂ ಗಳು ನೀವು ಬಿಸಿನೆಸ್ ಪ್ರಯಾಣದಲ್ಲಿದ್ದರೆ ಬಹಳ ಸರಿಯಾದ ಆಯ್ಕೆ. ಅವು ಬೇಗನೆ ತೆಗೆದು ಹಾಕಬಹುದಾದ ಶೂಗಳೂ ಆಗಿವೆ. ಇದರ ಸರಳ ಮತ್ತು ಸುಂದರ ವಿನ್ಯಾಸಗಳು ಒಂದು ಬಗೆಯ ಫಾರ್ಮಲ್ ಲುಕ್ ಅನ್ನೂ ಕೊಡುತ್ತದೆ. ಹೆಚ್ಚು ಗಾಢವಾದ ಬಣ್ಣಗಳು ಹೆಚ್ಚು ಫಾರ್ಮಲ್ ಆಗಿ ಕಾಣಿಸುತ್ತವೆ. ಇವುಗಳು ಜೀನ್ಸ್ ಅಥವಾ ಸೆಮಿ ಪಾರ್ಮಲ್, ಕ್ಯಾಶುವಲ್ಸ್ ಎಲ್ಲದರ ಜೊತೆಗೂ ಹೊಂದಿಕೊಳ್ಳುತ್ತವೆ.

English summary

Tips to choose right formal footwear for men

Shoes are an important part of your dressing and hence they are chosen to complement and complete the overall style statement.
X
Desktop Bottom Promotion