For Quick Alerts
ALLOW NOTIFICATIONS  
For Daily Alerts

ಲಿಪ್‌ಸ್ಟಿಕ್ ಕೇವಲ ತುಟಿಗಷ್ಟೇ ಅಲ್ಲ, ಅದ್ರಿಂದ ಈ ಉಪಯೋಗಗಳೂ ಇವೆ..

|

ಲಿಪ್‌ಸ್ಟಿಕ್ ಮಹಿಳೆಯರ ಫೇವರೆಟ್ ಮೇಕಪ್ ಉತ್ಪನ್ನ. ಎಲ್ಲಿ ಹೋದರೂ ಜೊತೆಗೆ ಕೊಂಡ್ಯೊಯ್ಯವ ಲಿಪ್‌ಸ್ಟಿಕ್‌ನ್ನು ಸಾಮಾನ್ಯವಾಗಿ ತುಟಿಗೆ ಬಳಸುತ್ತೇವೆ. ಆದರೆ, ಇದೇ ಲಿಪ್‌ಸ್ಟಿಕ್‌ನಿಂದ ನಾನಾ ಪ್ರಯೋಜನಗಳಿವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾದರೆ, ನಿಮ್ಮ ದೈನಂದಿನ ಮೇಕಪ್ ದಿನಚರಿಯಲ್ಲಿ ಲಿಪ್ಸ್ಟಿಕ್ ಅನ್ನು ಬಳಸಬಹುದಾದ 5 ವಿವಿಧೋದ್ದೇಶ ವಿಧಾನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

ಲಿಪ್‌ಸ್ಟಿಕ್‌ನ ವಿವಿಧ ಬಳಕೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಬ್ಲಷರ್:

ಬ್ಲಷರ್:

ಬ್ಲಶರ್ ಎಂಬುದು ಕೆನ್ನೆಯನ್ನು ಆಕರ್ಷಕವಾಗಿಸಲು ಅದಕ್ಕೆ ಕೆಂಪು ಬಣ್ಣವನ್ನು ಸೇರಿಸಲು ಬಳಸುವ ತಂತ್ರವಾಗಿದೆ. ಲಿಪ್ಸ್ಟಿಕ್ನ ಗುಲಾಬಿ ಅಥವಾ ಕೆಂಪು ಶೇಡ್ ತೆಗೆದುಕೊಂಡು, ನಿಮ್ಮ ಕೆನ್ನೆಗಳಿಗೆ ಅದೇ ಪರಿಣಾಮವನ್ನು ನೀಡಬಹುದು. ನಿಮ್ಮ ಬೆರಳುಗಳನ್ನು ಬಳಸಿ ಲಿಪ್‌ಸ್ಟಿಕ್‌ನ ಸಣ್ಣ ಭಾಗವನ್ನು ತೆಗೆದುಕೊಂಡು ಕೆನ್ನೆಗಳ ಮೇಲೆ ಹಚ್ಚಿ. ಬ್ಲಶ್ ಎಫೆಕ್ಟ್‌ಗಾಗಿ ಅದನ್ನು ನಿಧಾನವಾಗಿ ಹರಡಿಸಿ. ಇದಕ್ಕಾಗಿ ಕೆನ್ನೇರಳೆ ಲಿಪ್ಸ್ಟಿಕ್ ಬಳಸಬಹುದು, ಏಕೆಂದರೆ ಇದು ಕೆಲವು ತ್ವಚೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.

ಬ್ರೋಂಜರ್:

ಬ್ರೋಂಜರ್:

ನಿಮ್ಮ ಮುಖಕ್ಕೆ ಒಂದು ಉತ್ತಮವಾದ ಶೇಪ್ ನೀಡಲು ಬ್ರೋಂಜರ್‌ನ್ನು ಬಳಸಲಾಗುತ್ತದೆ. ಇದು ಕಿರಿದಾದ ಮುಖ ಮತ್ತು ಕಾಲ್ಪನಿಕ ಮೂಳೆಯ ರಚನೆಯನ್ನು ಸೃಷ್ಟಿಸುತ್ತದೆ. ನಿಮ್ಮ ಲಿಪ್‌ಸ್ಟಿಕ್ ಸಂಗ್ರಹಣೆಯಲ್ಲಿ ಕ್ರೀಮ್ ಬಣ್ಣದ ಲಿಪ್‌ಸ್ಟಿಕ್ ಶೇಡ್ ಹೊಂದಿದ್ದರೆ, ಮುಖಕ್ಕೆ ಕಂಚಿನ ಬಣ್ಣ ತರಲು ಅವುಗಳನ್ನು ಬಳಸಬಹುದು. ಬ್ಲಶ್ ಮಾಡಿದಂತೆಯೇ, ನಿಮ್ಮ ಬೆರಳುಗಳನ್ನು ಬಳಸಿ, ಕೆನ್ನೆಯ ಬಳಿಯಿರುವ ರೇಖೆಗಳ ಮೇಲೆ ಹಚ್ಚಿ, ಬ್ರಷ್ ಬಳಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖ್ಯವಾಗಿ ಕೆಳ ಕೆನ್ನೆಯ ಮೂಳೆಗಳು, ದವಡೆ, ಹಣೆ ಮತ್ತು ಮೂಗಿನ ಮೇಲೆ ಹಚ್ಚಲಾಗುತ್ತದೆ. ಮೇಕಪ್‌ಗೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲದ ಕಾರಣ ಅಗತ್ಯವೆಂದು ಭಾವಿಸುವ ಪ್ರದೇಶಗಳಿಗೆ ಸೇರಿಸಬಹುದು.

ಐಶ್ಯಾಡೋ:

ಐಶ್ಯಾಡೋ:

ಲಿಪ್ಸ್ಟಿಕ್ ಅನ್ನು ಐಶ್ಯಾಡೋ ಆಗಿ ಬಳಸುವುದು ನಮ್ಮಲ್ಲಿ ಅನೇಕರಿಗೆ ತಿಳಿದಿರುವ ಸಾಮಾನ್ಯ ಹ್ಯಾಕ್ ಆಗಿದೆ. ಲಿಪ್ಸ್ಟಿಕ್ ಅನ್ನು ಕಣ್ಣುರೆಪ್ಪೆಯ ಮೇಲೆ ಹಚ್ಚಿ, ಬೆರಳುಗಳ ಸಹಾಯದಿಂದ ಅದನ್ನು ಅಡ್ಡಲಾಗಿ ಸವರಿ. ಕ್ರೀಮ್ ಬೇಸ್ ಅನ್ನು ಹೊಂದಿಸಲು, ಅರೆಪಾರದರ್ಶಕ ಪುಡಿಯನ್ನು ಬಳಸಬಹುದು

ಕರೆಕ್ಟರ್:

ಕರೆಕ್ಟರ್:

ಕಣ್ಣಿನಡಿ ಬರುವ ಡಾರ್ಕ್ ಸರ್ಕಲ್ ಮರೆಮಾಚಲು ವಿಭಿನ್ನ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ, ನಿಮ್ಮಲ್ಲಿರುವ ಲಿಪ್‌ಸ್ಟಿಕ್‌ನ್ನೇ ಕಲರ್ ಕರೆಕ್ಟರ್ ಆಗಿಯೂ ಬಳಸಬಹುದು. ಹೌದು, ಲೈಟ್ ಬಣ್ಣದ ಲಿಪ್‌ಸ್ಟಿಕ್‌ಗಳನ್ನು ತೆಗದುಕೊಂಡು, ಅದನ್ನು ತೆಳುವಾದ ಬ್ರಷ್ ಸಹಾಯದಿಂದ ಕಣ್ಣಿನಡಿ ಹಚ್ಚಿ, ಸಮನಾಗಿ ಹರಡಿ. ಇದರಿಂದ ನಿಮ್ಮ ಕಣ್ಣು ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಆದರೆ, ಕಣ್ಣಿನ ಗೆರೆಗೆ ಹತ್ತಿರವಿರಬಾರದು ಎಂಬುದನ್ನು ಮರೆಯಬೇಡಿ.

ಐಲೈನರ್:

ಐಲೈನರ್:

ಗ್ರಾಫಿಕ್ ಐಲೈನರ್ ಒಂದು ಟ್ರೆಂಡಿ ಮೇಕ್ಅಪ್ ಪರಿಕಲ್ಪನೆಯಾಗಿದ್ದು, ಅದನ್ನು ಹೇಗೆ ಪಡೆಯುವುದು ಎಂದು ನಾವೆಲ್ಲರೂ ಯೋಚಿಸುತ್ತಿದ್ದೇವೆ. ಐಶ್ಯಾಡೋಗಳು, ಪೌಡರ್ ಫಾರ್ಮುಲೇಶನ್‌ನ ಮೇಲೆ ಇರುವುದರಿಂದ, ಐಲೈನರ್ ಆಗಿ ಹಾಕಿದಾಗ ಆ ಲುಕ್ ಇರುವುದಿಲ್ಲ, ಆದ್ದರಿಂದ ನಾವು ಲಿಪ್‌ಸ್ಟಿಕ್‌ಗಳನ್ನು ಬಳಸಬಹುದು. ಇದಕ್ಕಾಗಿ ಸ್ವಚ್ಛವಾಗಿರುವ ಲೈನರ್ ಬ್ರಷ್‌ನಿಂದ ಲಿಪ್‌ಸ್ಟಿಕ್‌ ನ ತೆಗೆದುಕೊಳ್ಳಿ, ಅದನ್ನು ಸಾಮಾನ್ಯ ಲೈನರ್ ಅಥವಾ ಆಕಾರವಾಗಿ ಹಚ್ಚಿ.

English summary

Ways To Use A Lipstick in your daily makeup routine in Kannada

Here we talking about Ways To Use A Lipstick in your daily makeup routine in Kannada, read on
Story first published: Monday, November 8, 2021, 17:40 [IST]
X
Desktop Bottom Promotion