For Quick Alerts
ALLOW NOTIFICATIONS  
For Daily Alerts

ವೀಡಿಯೋ: ವಾಟರ್‌ ಸ್ಮಡ್ಜ್‌ ಕಾಡಿಗೆ ಮನೆಯಲ್ಲಿಯೇ ಮಾಡಿ

|

ಹೆಣ್ಣಿಗೆ ಯಾವ ಆಭರಣಗಳಿಗಿಂತಲೂ ಆಕೆಯ ಸೌಂದರ್ಯಕ್ಕೆ ಮೆರಗು ನೀಡುವುದು ಕಾಡಿಗೆ ಎಂಬುವುದರಲ್ಲಿ ಎರಡು ಮಾತೇ ಇಲ್ಲ. ಕಾಡಿಗೆ ಹಚ್ಚಿದ ಕಂಗಳ ಸೌಂದರ್ಯ ನೋಡುವುದೇ ಚೆಂದ. ಏನೂ ಮೇಕಪ್ ಮಾಡದೆ ಕಣ್ಣಿಗೆ ಸ್ವಲ್ಪ ಕಾಡಿಗೆ ಹಚ್ಚಿದರೆ ಸಾಕು ಮುಖದಲ್ಲಿ ಅದೇನೋ ಕಳೆ.

ಅದೇ ಎಷ್ಟೇ ಮೇಕಪ್ ಮಾಡಿದರೂ ಕಾಡಿಗೆ ಹಚ್ಚದಿದ್ದರೆ ಮೇಕಪ್ ಏನೋ ಅಪೂರ್ಣವಾದಂತೆ. ಕೆಲವರಿಗೆ ಗಾಢವಾಗಿ ಹಚ್ಚುವುದು ಎಂದರೆ ಇಷ್ಟ, ಇನ್ನು ಕೆಲವರಿಗೆ ತೆಳ್ಳಗೆ ಹಚ್ಚಲು ಇಷ್ಟ, ಹೀಗೆ ಅವರ ಮುಖದ ಆಕಾರಕ್ಕೆ ಹೊಂದುವಂತೆ ಕಾಡಿ ಹಚ್ಚಿಕೊಳ್ಳುತ್ತಾರೆ. ನಿಮಗೆ ಮಾರುಕಟ್ಟೆಯಲ್ಲಿ 10ರೂ ಕಾಡಿಗೆಯಿಂದ ಹಿಡಿದು ಸಾವಿರಾರು ರುಪಾಯಿ ಬೆಲೆ ಬಾಳುವ ಕಾಡಿಗೆಗಳು ಅಥವಾ ಕಾಜಲ್ ಸಿಗುತ್ತದೆ. ಆದರೆ ಈ ಕಾಡಿಗೆ ಶುದ್ಧ ಕಾಡಿಗೆಯೇ ಎಂದು ನೋಡುವುದಾದರೆ ಎಷ್ಟೋ ಕಾಡಿಗೆಗಳಿಗೆ ರಾಸಾಯನಿಕ ಮಿಶ್ರ ಮಾಡಿರುತ್ತಾರೆ.

ಆದ್ದರಿಂದ ನೀವು ಗಮನಿಸಿರಬಹುದು ಕೆಲವೊಂದು ಕಾಡಿಗೆಗಳನ್ನು ಕಣ್ಣಿಗೆ ಹಚ್ಚಿದಾಗ ಉರಿಯಾಗುತ್ತದೆ, ತುರಿಕೆ ಉಂಟಾಗುತ್ತದೆ, ಇನ್ನು ರಾಸಾಯನಿಕ ಇರುವ ಕಾಜಲ್ ಬಳಸುತ್ತಿದ್ದರೆ ಕಣ್ಣಿಗೆ ಆರೋಗ್ಯಕರವಲ್ಲ. ಹಿಂದೆಯೆಲ್ಲಾ ಕಾಡಿಗೆಯನ್ನು ಮನೆಯಲ್ಲಿ ತಯಾರಿಸುತ್ತಿದ್ದರು. ಹರಳೆಣ್ಣೆ ಅಥವಾ ತುಪ್ಪದಿಂದ ಕಾಜಲ್ ತಯಾರಿಸುತ್ತಿದ್ದರು. ನಾವಿಲ್ಲಿ ನಿಮಗೆ ಮನೆಯಲ್ಲಿಯೇ ಕಾಜಲ್ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ, ಅಂಜಲಿ ರಾವ್‌ ತಾವು ಮನೆಯಲ್ಲಿಯೇ ವಾಟರ್ ಸ್ಮಡ್ಜ್‌ ಕಾಜಲ್ ತಯಾರಿಸಿ ಆ ವೀಡಿಯೋ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ:

ಕಾಜಲ್ ಮಾಡಲು ಬೇಕಾಗುವ ಸಾಮಗ್ರಿ

ಕಾಜಲ್ ಮಾಡಲು ಬೇಕಾಗುವ ಸಾಮಗ್ರಿ

ಹತ್ತಿಯ ಬತ್ತಿ

4-5 ಬಾದಾಮಿ

1 ಚಮಚ ಅಜ್ವೈನ್

ತುಪ್ಪ/ಹರಳೆಣ್ಣೆ

 ಮಾಡುವುದು ಹೇಗೆ?

ಮಾಡುವುದು ಹೇಗೆ?

  • ಅಜ್ವೈನ್ ಮತ್ತು ಬಾದಾಮಿ
  • ಅಜ್ವೈನ್ ಹಾಗೂ ಬಾದಾಮಿಯನ್ನು ಕುಟ್ಟಿ ಪುಡಿ ಮಾಡಿ.

    ಅಜ್ವೈನ್ ಕಣ್ಣಿನ ಸೋಂಕು ತಡೆಯುವಲ್ಲಿ ಸಹಕಾರಿ, ಬಾದಾಮಿ ಕಣ್ರೆಪ್ಪೆ ಮಂದವಾಗಿ ಇರುವಂತೆ ನೋಡಿಕೊಳ್ಳುವುದು ಅಲ್ಲದೆ ಕಣ್ಣಿನ ದೃಷ್ಟಿಗೂ ಒಳ್ಳೆಯದು.

    ಶುದ್ಧವಾದ ಹತ್ತಿಯ ಬತ್ತಿ

    ಶುದ್ಧವಾದ ಹತ್ತಿಯ ಬತ್ತಿ

    ಶುದ್ಧವಾದ ಹತ್ತಿಯನ್ನು ಹರಡಿ, ಅದರ ಮೇಲೆ ಬಾದಾಮಿ ಹಾಗೂ ಅಜ್ವೈನ್‌ ಪುಡಿ ಉದುರಿಸಿ ಅದನ್ನು ಸುತ್ತಿ (ರೋಲ್‌ ಮಾಡಿ) ದಪ್ಪವಾದ ಬತ್ತಿ ತಯಾರಿಸಿ.

    ಮಣ್ಣಿನ ಹಣತೆ ಮತ್ತು ತುಪ್ಪ

    ಈಗ ಸ್ವಲ್ಪ ದೊಡ್ಡ ಮಣ್ಣಿನ ಹಣತೆಗೆ ಶುದ್ಧವಾದ ಹಸುವಿನ ತುಪ್ಪ ಹಾಕಿ ಅದರಲ್ಲಿ ಬತ್ತಿ ಹಾಕಿ.

    ತಟ್ಟೆಯಲ್ಲಿ ಕಪ್ಪು ಸಂಗ್ರಹಣೆ

    ತಟ್ಟೆಯಲ್ಲಿ ಕಪ್ಪು ಸಂಗ್ರಹಣೆ

    ಈಗ ದೀಪದ ಎರಡೂ ಬದಿಗೆ ಸ್ವಲ್ಪ ಎತ್ತರದ ಲೋಟ ಇಡಿ (ಲೋಟಗಳು ಎರಡೂ ಎತ್ತರದಲ್ಲಿ ಒಂದೇ ರೀತಿಯಲ್ಲಿ ಇರಬೇಕು) ಈಗ ಅದರ ಮೇಲೆ ತಟ್ಟೆಯನ್ನು ಮಗುಚಿ ಇಡಿ. ಈಗ ದೀಪ ಹಚ್ಚಿ. ದೀಪದ ಹೊಗೆ ತಟ್ಟೆಯಲ್ಲಿ ಕೂರುತ್ತದೆ.

    ದೀಪ ಹೆಚ್ಚು ಉರಿದಷ್ಟು ನಿಮಗೆ ಹೆಚ್ಚು ಕಾಡಿಗೆ ಸಂಗ್ರಹವಾಗುತ್ತದೆ.

    ಡಬ್ಬದಲ್ಲಿ ಶೇಖರಿಸಿ

    ಡಬ್ಬದಲ್ಲಿ ಶೇಖರಿಸಿ

    ದೀಪ ಆರಿದ ಬಳಿಕ ತಟ್ಟೆಯನ್ನು ತಣಿಯಲು ಬಿಡಿ, ನಂತರ ಶುದ್ಧವಾದ ಚಮಚದಿಂದ ಅದರ ಮಸಿ ಅಥವಾ ಕಪ್ಪು ಕೆರೆದು ತೆಗೆದು ಶುದ್ಧವಾದ ಚಿಕ್ಕ ಗಾಜಿನ ಡಬ್ಬದಲ್ಲಿ ಸಂಗ್ರಹಿಸಿ ಇಡಿ. ನಂತರ ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಇಷ್ಟು ಮಾಡಿದರೆ ವಾಟರ್‌ ಸ್ಮಡ್ಜ್ ಕಾಜಲ್ ರೆಡಿ.

     ತುಪ್ಪದ ಬದಲಿಗೆ ಹರಳೆಣ್ಣೆ ಬಳಸಬಹುದು

    ತುಪ್ಪದ ಬದಲಿಗೆ ಹರಳೆಣ್ಣೆ ಬಳಸಬಹುದು

    ಮಕ್ಕಳಿಗೆ ಕಪ್ಪು ಹುಬ್ಬಗೆ ಹಚ್ಚುವುದಾದರೆ ಈ ರೀತಿ ಮನೆಯಲ್ಲಿಯೇ ಮಾಡಿ ತಯಾರಿಸಿ. ಹರಳೆಣ್ನೆ ಹುಬ್ಬು ಕಪ್ಪು ಇರುವಂತೆ ಮಾಡುತ್ತದೆ. ಅಲ್ಲದೆ ಮಕ್ಕಳಿಗೆ ಕಣ್ಣಿಗೆ ಹಾಗೂ ಹುಬ್ಬಿಗೆ ಹಚ್ಚಲು ಮನೆಯಲ್ಲಿಯೇ ಮಾಡಿದ ಕಾಜಲ್ ಬಳಸುವುದು ಒಳ್ಳೆಯದು. ಈ ಕಾಜಲ್ ಅನ್ನು ತಯಾರಿಸಲು ಒಂದು ಗಂಟೆ ಸಮಯ ಬೇಕು, ಹೆಚ್ಚು ಬೇಕೆಂದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

English summary

Traditional Art of Making Kajal at Home in Kannada

Here are traditional art of making at home in kannada, read on.....
X
Desktop Bottom Promotion