For Quick Alerts
ALLOW NOTIFICATIONS  
For Daily Alerts

ಹುಬ್ಬನ್ನು ಮಂದವಾಗಿಸುವ ಮೈಕ್ರೋಬ್ಲೇಡಿಂಗ್‌ ವಿಧಾನ ಬಗ್ಗೆ ಗೊತ್ತೇ? ಇದರಿಂದ ಅಡ್ಡಪರಿಣಾಮಗಳಾಗುವುದೇ?

|

ಹೆಣ್ಮಕ್ಕಳಿಗೆ ಹುಬ್ಬುಗಳು ಮಂದವಾಗಿ ಶೇಪ್‌ನಲ್ಲಿದ್ದರೆ ಅವರ ಮುಖದ ಆಕರ್ಷಣೆ ಮತ್ತಷ್ಟು ಹೆಚ್ಚುವುದು. ಆದರೆ ಕೆಲವರಿಗೆ ಹುಬ್ಬು ತುಂಬಾನೇ ತೆಳುವಾಗಿರುತ್ತೆ, ಹಾಗಾಗಿ ಮುಖ ಬೋಳು-ಬೋಳಾಗಿರುತ್ತೆ. ಅಂಥವರು ಆಕರ್ಷಕ ಹುಬ್ಬುಗಳು ಬೇಕೆಂದು ಬಯಸುವುದಾದರೆ ಮೈಕ್ರೋಬ್ಲೇಡಿಂಗ್‌ ಮಾಡಿಸಬಹುದು.

ಇತ್ತೀಚಿನ ವರ್ಷಗಳಲ್ಲಿ ಇದು ತುಂಬಾನೇ ಟ್ರೆಂಡಿಂಗ್ ಆಗುತ್ತಿದೆ. ತಮ್ಮ ಹುಬ್ಬಿನ ಸೌಂದರ್ಯ ಹೆಚ್ಚಿಸಲು ಮಾಡಿಸಲುವ ಈ ಮೈಕ್ರೋಬ್ಲೇಡಿಂಗ್‌ ಪರ್ಮನೆಂಟಾ?

ಇದಕ್ಕೆ ತಗುಲುವ ವೆಚ್ಚ ಎಷ್ಟು, ಮಾಡಿಸುವಾಗ ನೋವಾಗುತ್ತದೆಯೇ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಮೊದಲಿಗೆ ಮೈಕ್ರೋಬ್ಲೇಡಿಂಗ್ ಕುರಿತ ಕೆಲ ಸಂಗತಿಗಳನ್ನು ತಿಳಿಯೋಣ:

ಮೊದಲಿಗೆ ಮೈಕ್ರೋಬ್ಲೇಡಿಂಗ್ ಕುರಿತ ಕೆಲ ಸಂಗತಿಗಳನ್ನು ತಿಳಿಯೋಣ:

* ಇದನ್ನು ಮೈಕ್ರೋಬ್ಲೇಟ್‌ ಟೂಲ್ ಹಾಗೂ ಸೂಜಿ ಬಳಸಿ ಕೈಯಲ್ಲಿ ಮಾಡಲಾಗುವುದು.

* ಮೈಕ್ರೋಬ್ಲೇಡಿಂಗ್‌ನಲ್ಲಿ ತ್ವಚೆಗೆ ಗಾಯವಾಗಿ ಸೋಂಕಾಗುವ ಸಾಧ್ಯತೆ ಇದೆ. ಇದನ್ನು ಪರಿಣಿತರು ಮಾಡಬೇಕು ಅಲ್ಲದೆ ಶುಚಿತ್ವ ಕಡೆ ತುಂಬಾ ಗಮನ ನೀಡಬೇಕು.

* ಮೈಕ್ರೋಬ್ಲೇಡಿಂಗ್‌ ಸಕ್ಸಸ್‌ ರೇಟ್ ಅದನ್ನು ಮಾಡುವ ವ್ಯಕ್ತಿಯನ್ನು ಅವಲಂಬಿಸಿದೆ.

ಮೈಕ್ರೋಬ್ಲೇಡಿಂಗ್ ಎಂದರೇನು?

ಮೈಕ್ರೋಬ್ಲೇಡಿಂಗ್ ಎಂದರೇನು?

ಮೈಕ್ರೋಬ್ಲೇಡಿಂಗ್‌ನಲ್ಲಿ ಮೈಕ್ರೋಬ್ಲೇಡ್‌ ಟೂಲ್‌ ಬಳಸಿ ಹುಬ್ಬಿನ ಬಳಿ ಪಿಗ್ಮೆಂಟ್‌ ಮಾಡಿ ನೈಸರ್ಗಿಕವಾದ ಹುಬ್ಬಿನಂತೆ ಮಾಡುವ ಟ್ಯಾಟೂ ವಿಧಾನವಾಗಿದೆ. ಮೊದಲಿಗೆ ಮಾಡಿಸುವಾಗ ಈ ಕಾರ್ಯಕ್ಕೆ ತುಂಬಾನೇ ಸಮಯ ಹಿಡಿಯುತ್ತೆ, ಆದರೆ ಮೊದಲ ಸಲ ಮಾಡಿಸಿದಾಗಲೇ ಹುಬ್ಬು ಮಂದವಾಗಿ, ಆಕರ್ಷಕವಾಗಿ ಕಾಣುವುದು.

ಮೈಕ್ರೋಬ್ಲೇಡಿಂಗ್‌ ಮಾಡಿಸಿದರೆ ಗುಣವಾಗಲು ಎಷ್ಟು ಸಮಯಬೇಕು?

ಮೈಕ್ರೋಬ್ಲೇಡಿಂಗ್‌ ಮಾಡಿಸಿದರೆ ಗುಣವಾಗಲು ಎಷ್ಟು ಸಮಯಬೇಕು?

ಮೈಕರೋಬ್ಲೇಡಿಂಗ್‌ ಮಾಡಿಸಿದ ಮೇಲೆ ಸಂಪೂರ್ಣ ಗುಣವಾಗಲು 14 ದಿನಗಳು ಬೇಕಾಗುವುದು. ಈ ಅವಧಿಯಲ್ಲಿ ಹುಬ್ಬಿನ ಭಾಗದಲ್ಲಿ ನೀರು, ಬೆವರು, ಎಣ್ಣೆ-ಜಿಡ್ಡಿನಂಶ ನಿಲ್ಲದಂತೆ ನೋಡಿಕೊಳ್ಳಬೇಕು.

ಅಲ್ಲದೆ ಮೈಕ್ರೋಬ್ಲೇಡಿಂಗ್ ಮಾಡಿಸಿ ಮೂರು ದಿನದಲ್ಲಿ ಹುಬ್ಬಿನ ಭಾಗದಲ್ಲಿ ತ್ವಚೆ ಒಣಗಿ ತುರಿಕೆ ಬರಬಹುದು, ಆದರೆ ತುರಿಸಬಾರದು, ಅದನ್ನು ತಡೆಗಟ್ಟವ ಕ್ರೀಮ್ ಹಚ್ಚಬೇಕು.

ಅಲ್ಲದೆ ಮೈಕ್ರೋಬ್ಲೇಡಿಂಗ್ ಮಾಡಿಸಿದವರು ಸೂರ್ಯನ ಬಿಸಿಲಿನಲ್ಲಿ ತುಂಬಾ ಹೊತ್ತು ಓಡಾಡಬಾರದು, ಮುಖಕ್ಕೆ ನೇರವಾಗಿ ಬಿಸಿಲು ಬಿದ್ದರೆ ಹುಬ್ಬಿನ ಬಣ್ಣ ಬದಲಾಗುವ ಸಾಧ್ಯತೆ ಇದೆ. ನಿಮ್ಮ ಹುಬ್ಬು ಸಂಪೂರ್ಣ ಒಣಗಿದ ಮೇಲೂ ಕೂಡ ಬಿಸಿಲಿನಲ್ಲಿ ಓಡಾಡುವಾಗ ದೊಡ್ಡ ಸನ್‌ಗ್ಲಾಸ್‌ ಧರಿಸಬೇಕು.

ಮೈಕ್ರೋಬ್ಲೇಡಿಂಗ್ ಮಾಡಿಸಿದರೆ ಎಷ್ಟು ಸಮಯ ಇರುತ್ತದೆ?

ಮೈಕ್ರೋಬ್ಲೇಡಿಂಗ್ ಮಾಡಿಸಿದರೆ ಎಷ್ಟು ಸಮಯ ಇರುತ್ತದೆ?

ಮೈಕ್ರೋಬ್ಲೇಡಿಂಗ್‌ ಮಾಡಿಸಿದರೆ ಉತರ ಟ್ಯಾಟೂವಿನಂತೆ ಶಾಶ್ವತವಲ್ಲ. ಮೂರು ವರ್ಷಗಳಲ್ಲಿ ಮೈಕ್ರೋಬ್ಲೇಡಿಂಗ್‌ ಹುಬ್ಬಿನ ಬಣ್ಣ ಮಾಸುತ್ತಾ ಬರುತ್ತದೆ. ಇನ್ನು ಇದನ್ನು ಮಾಡಿಸುವಾಗ ಕೂಡ ತುಂಬಾನೇ ಎಚ್ಚರಿಕೆವಹಿಸಬೇಕು.

ಏಕೆಂದರೆ ಒಂದಿಷ್ಟು ಮಿಸ್ಟೇಕ್‌ ಆದರೆ ಮತ್ತೆ ಸರಿಪಡಿಸಲು ಸಾಧ್ಯವಿಲ್ಲ, ಒಂದು ದಿನದಲ್ಲಿ ಸರಿಪಡಿಸಲು ಸಾಧ್ಯವಿಲ್ಲ, ಆ ತಪ್ಪು ಹೋಗಲು ಸುಮಾರು ಮೂರು ವರ್ಷಗಳು ಬೇಕಾಗುತ್ತದೆ ಅಥವಾ ಮತ್ತೆ ಲೇಸರ್‌ ಟ್ರೀಟ್ಮೆಂಟ್‌ ಮಾಡಬೇಕಾಗುತ್ತದೆ. ಆದ್ದರಿಂದ ಇದನ್ನು ಮಾಡಿಸುವಾಗ ತುಂಬಾ ಹುಷಾರಾಗಿರಬೇಕು.

ಮೈಕ್ರೋಬ್ಲೇಡಿಂಗ್‌ ಮಾಡಿಸಲು ಎಷ್ಟು ಹಣ ಬೇಕಾಗುವುದು?

ಭಾರತದಲ್ಲಿ ಮೈಕ್ರೋಬ್ಲೇಡಿಂಗ್‌ ಮಾಡಿಸಲು 25, 000-45,000ದವರೆಗೆ ಆಗಬಹುದು. ಇದರ ಬೆಲೆ ಮೈಕ್ರೋಬ್ಲೇಡಿಂಗ್ ಸೆಂಟರ್‌-ಸೆಂಟರ್‌ಗೆ ಭಿನ್ನವಾಗಬಹುದು.

ಅಡ್ಡಪರಿಣಾಮವಿದೆಯೇ?

ಅಡ್ಡಪರಿಣಾಮವಿದೆಯೇ?

ಅಲರ್ಜಿ ಉಂಟಾಗಬಹುದು: ನೀವು ಮೈಕ್ರೋಬ್ಲೇಡಿಂಗ್‌ ಮಾಡಿಸುವ ಮುನ್ನ ಯಾವ ಪಿಗ್ಮೆಂಟ್‌ ಬಳಸುತ್ತಿದ್ದಾರೆ ಎಂದು ಕೇಳಿ, ಇಲ್ಲದಿದ್ದರೆ ಅಲರ್ಜಿ ಉಂಟಾಗಬಹುದು.

ಸೋಂಕು

ಮೈಕ್ರೋಬ್ಲೇಡಿಂಗ್‌ನಲ್ಲಿ ಹುಬ್ಬಿನ ಭಾಗದ ತ್ವಚೆಗೆ ಬಳಸುವ ಟೂಲ್‌ನಿಂದ ಸೋಂಕು ಹರಡುವ ಸಾಧ್ಯತೆ ಇದೆ ಆದ್ದರಿಂದ ಅವರು ಸ್ಟ್ರೆರ್‌ಲೈಸ್ ಆದ ಉಪಕರಣಗಳನ್ನೇ ಬಳಸಬೇಕು.

ಮೈಕ್ರೋಬ್ಲೇಡಿಂಗ್‌ನಲ್ಲಿ ತಪ್ಪಾದರೆ ಸರಿಪಡಿಸುವುದು ಕಷ್ಟ

ಮೈಕ್ರೋಬ್ಲೇಡಿಂಗ್‌ ಮಾಡುವಾಗ ಮಾಡಿಸುವವರು ಏನಾದರೂ ತಪ್ಪು ಮಾಡಿದರೆ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಒಳ್ಳೆಯ ಸೆಂಟರ್‌ನಲ್ಲಿ ಮಾತ್ರ ಮಾಡಿಸಬೇಕು.

ಮೈಕ್ರೋಬ್ಲೇಡಿಂಗ್ ಮಾಡಿಸುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಮೈಕ್ರೋಬ್ಲೇಡಿಂಗ್ ಮಾಡಿಸುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

* ಮಾಡಿಸುವ ದಿನ ಕೆಫೀನ್‌ ಇರುವ ಆಹಾರ, ಕಾಫಿ ತೆಗೆದುಕೊಳ್ಳಬಾರದು

* ಐಬ್ರೋ ಮಾಡಿಸಬಾರದು

* ಮಾಡಿಸುವ ಮೂರು ದಿನ ಮೊದಲೇ ಬಿಸಿಲಿನಲ್ಲಿ ಓಡಾಡಬಾರದು, ಸನ್‌ಬಾತ್‌ ಮಾಡಬಾರದು.

* ಮಾಡಿಸುವ 2-3 ವಾರಗಳ ಮುಂಚೆ ಯಾವುದೇ ಫೇಷಿಯಲ್‌ ಮಾಡಿಸಿರಬಾರದು.

* ಮಾಡಿಸುವ ಮುನ್ನವೇ ಹೆಡ್‌ ಬಾತ್‌ ಮಾಡಿ, ಏಕೆಂದರೆ ಮೈಕ್ರೋಬ್ಲೇಡಿಂಗ್‌ ಮಾಡಿದ ಮೇಲೆ 7 ದಿನಗಳವರೆಗೆ ಹುಬ್ಬಿಗೆ ನೀರು ತಾಗಬಾರದು.

* ಇದು ಮಾಡಿಸುವ ಒಂದು ತಿಂಗಳ ಮೊದಲೇ ವಿಟಮನ್ ಎ ಸಪ್ಲಿಮೆಂಟ್‌ ತೆಗೆದುಕೊಳ್ಳುವುದು, ಬೋಟೆಕ್ಸ್ ಟ್ರೀಟ್ಮೆಂಟ್‌ ಮಾಡಿಸುತ್ತಿದ್ದರೆ ಅದನ್ನು ನಿಲ್ಲಿಸಬೇಕು.

* ಅಲ್ಲದೆಫಿಶ್ ಆಯಿಲ್ , ವಿಟಮಿನ್ ಇ ಹಾಗೂ ನೈಸರ್ಗಿಕವಾದ ಬ್ಲಡ್‌ ಥಿನ್ನರ್‌ಗಳನ್ನು ಒಂದು ವಾರದ ಮುಂಚೆಯೇ ನಿಲ್ಲಿಸಬೇಕು.

ಅಪಾಯಿಂಟ್‌ಮೆಂಟ್‌ ಇರುವ ದಿನ ವರ್ಕೌಟ್‌ ಮಾಡಬಾರದು

* ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು.

ಮೈಕ್ರೋಬ್ಲೇಡಿಂಗ್ ಮಾಡಿಸಿದ ಮೇಲೆ

ಮೈಕ್ರೋಬ್ಲೇಡಿಂಗ್ ಮಾಡಿಸಿದ ಮೇಲೆ

* ಏಳು ದಿನಗಳವರೆಗೆ ಹುಬ್ಬಿಗೆ ನೀರು ತಾಗಬಾರದು

* ತಲೆ ಸ್ನಾನ ಅಥವಾ ಸ್ವಿಮ್ಮಿಂಗ್ ಮಾಡಬಾರದು.

* ಮುಖಕ್ಕೆ ಮೇಕಪ್ ಹಾಕಬೇಡಿ, ಹಾಕುವುದಾದರೂ ಹುಬ್ಬಿನ ಭಾಗಕ್ಕೆ ತಾಗಬಾರದು.

* ಹುಬ್ಬನ್ನು ಕೈಯಿಂದ ಮುಟ್ಟಬಾರದು

* ಸ್ವಲ್ಪವೇ-ಸ್ವಲ್ಪ ಮಾಯಿಶ್ಚರೈಸರ್ ಕ್ರೀಮ್ ಬಳಸಬೇಕು.

* ಬಿಸಿಲಿಗೆ ಹೋಗಬಾರದು

* ಯಾವುದೇ ಫೇಶಿಯಲ್ ಸ್ಕ್ರಬ್ ಬಳಸಬಾರದ

* ಮೈಕ್ರೋಬ್ಲೇಡಿಂಗ್‌ ಮಾಡಿಸಿದ ಬಳಿಕ ನಾಲ್ಕು ವಾರದವರೆಗೆ ಮುಖಕ್ಕೆ ಫೇಶಿಯಲ್‌ ಮಾಸ್ಕ್ ಬಳಸಬಾರದು

* 10 ದಿನದವರೆಗೆ ಮುಖದ ಮೇಲೆ ಮಲಗಬಾರದ.

ಅಡ್ಡಪರಿಣಾಮಗಳೇನು?

*ಚಿಕ್ಕದಾಗಿ ರಕ್ತ ಬರುವುದು

* ಚಿಕ್ಕ ಗಾಯ

*ಊತ

* ತುರಿಕೆ

* ನೋವು

* ಕೆಂಪಾಗುವುದು

* ಗಾಯ ದೊಡ್ಡದಾಗುವುದು

* ನೀರು ಬರುವುದು

ಈ ರೀತಿಯ ಸಮಸ್ಯೆಗಳು ಕಂಡು ಬಂದರೆ ಕೂಡಲೇ ನಿಮ್ಮ ತಜ್ಞರನ್ನು ಭೇಟಿಯಾಗಿ.

English summary

Microblading: Facts, Cost, Healing Time, Risk and Effects in Kannada

Microblading: what is microblading, wht is the effects, how much time take to heal, things to do before and after microblading read on.. .
Story first published: Tuesday, October 18, 2022, 12:15 [IST]
X
Desktop Bottom Promotion