For Quick Alerts
ALLOW NOTIFICATIONS  
For Daily Alerts

ಲಿಪ್‌ಸ್ಟಿಕ್ ಅವಧಿ ಮುಗಿಯುವವರೆಗೆ ಬಳಸಬೇಕೇ ಹೊರತು, ಖಾಲಿಯಾಗುವವರೆಗೆ ಅಲ್ಲ!

|

ನಮ್ಮಲ್ಲಿ ಲಿಪ್‌ಸ್ಟಿಕ್ ಇಷ್ಟಪಡುವವರು ಬಹಳಷ್ಟು ಮಂದಿ ಇದ್ದಾರೆ, ಆದರೆ ಅದರ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವವರು ಕೆಲವೇ ಕೆಲವರು. ಲಿಪ್‌ಸ್ಟಿಕ್ ಮುಗಿಯುವವರೆಗೆ ಅದನ್ನು ಬಳಸುವವರೇ ಹೆಚ್ಚು. ನೀವೇನಾದರೂ ಇಂತಹ ಅಭ್ಯಾಸ ಬೆಳೆಸಿಕೊಂಡಿದ್ದರೆ, ಇಂದಿಗೆ ನಿಲ್ಲಿಸಿ. ಏಕೆಂದರೆ, ಅವಧಿ ಮುಗಿದ ಲಿಪ್‌ಸ್ಟಿಕ್‌ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಇನ್ನುಮುಂದೆ ಅವಧಿ ಮುಗಿದ ಲಿಪ್‌ಸ್ಟಿಕ್ ಬಳಸಬೇಡಿ.

ಹಾಗಾದರೆ, ಅವಧಿ ಮುಗಿದ ಲಿಪ್‌ಸ್ಟಿಕ್ ಬಳಸುವುದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಲಿಪ್‌ಸ್ಟಿಕ್ ಹಳೆಯದು ಎಂದು ಗುರುತಿಸುವುದು ಹೇಗೆ?:

ಲಿಪ್‌ಸ್ಟಿಕ್ ಹಳೆಯದು ಎಂದು ಗುರುತಿಸುವುದು ಹೇಗೆ?:

ಕಳೆದ ವರ್ಷ ನೀವು ಖರೀದಿಸಿದ ಲಿಪ್‌ಸ್ಟಿಕ್ ನೀವು ಇನ್ನೂ ಹಚ್ಚುತ್ತಿದ್ದರೆ ಅದನ್ನು ಬಿಸಾಡಬೇಕು. ಉತ್ತಮ ಬ್ರ್ಯಾಂಡ್ ಲಿಪ್‌ಸ್ಟಿಕ್ 12 ರಿಂದ 18 ತಿಂಗಳುಗಳವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲಿಪ್‌ಸ್ಟಿಕ್ ಹಳೆಯದಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಈ ಸಲಹೆಗಳನ್ನು ಅನುಸರಿಸಿ:

- ಮೊದಲು ಲಿಪ್‌ಸ್ಟಿಕ್‌ನಲ್ಲಿ ಬರೆದಿರುವ ಮುಕ್ತಾಯ ದಿನಾಂಕವನ್ನು ಪರಿಶೀಲಿಸಿ.

- ಲಿಪ್‌ಸ್ಟಿಕ್ ವಾಸನೆ ಬದಲಾಗಿದೆಯೇ? ಹಳೆಯದಾದರೆ ಅದರ ವಾಸನೆಯೂ ಬದಲಾಗುತ್ತದೆ.

- ತೇವಾಂಶವು ಅದರಿಂದ ಹೊರಬರುತ್ತಿದೆಯೇ ಮತ್ತು ಅದು ತುಟಿಗಳ ಮೇಲೆ ಜಾರುತ್ತಿಲ್ಲವೇ ಎಂದು ನೋಡಿ.

 ನೀವು ಮೇಲಿನ ವಿಷಯಗಳಿಗೆ ಗಮನ ಕೊಡದೇ, ಹಳೆಯ ಲಿಪ್‌ಸ್ಟಿಕ್ ಬಳಸುವುದನ್ನು ಮುಂದುವರಿಸಿದರೆ, ಈ ಕೆಳಗಿನ ಹಾನಿ ಸಂಭವಿಸಬಹುದು:

ನೀವು ಮೇಲಿನ ವಿಷಯಗಳಿಗೆ ಗಮನ ಕೊಡದೇ, ಹಳೆಯ ಲಿಪ್‌ಸ್ಟಿಕ್ ಬಳಸುವುದನ್ನು ಮುಂದುವರಿಸಿದರೆ, ಈ ಕೆಳಗಿನ ಹಾನಿ ಸಂಭವಿಸಬಹುದು:

ತುಟಿಗಳ ಮೇಲೆ ಅಥವಾ ಸುತ್ತಲೂ ತುರಿಕೆ:

ಅವಧಿ ಮೀರಿದ ಲಿಪ್‌ಸ್ಟಿಕ್ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಅದು ಬಾಯಿಯ ಸುತ್ತಲೂ ತುರಿಕೆ ಮತ್ತು ಸುಡುವಿಕೆಯನ್ನು ಉಂಟುಮಾಡುತ್ತದೆ. ಲಿಪ್‌ಸ್ಟಿಕ್ ಲ್ಯಾನೋಲಿನ್ ಅನ್ನು ಹೊಂದಿದ್ದು, ಇದು ಸಂಕೀರ್ಣ ರಚನೆಯನ್ನು ಹೊಂದಿದೆ. ಆದ್ದರಿಂದ ಇದು ಶುಷ್ಕತೆ, ತುರಿಕೆ ಮತ್ತು ನೋವಿನಂತಹ ಅಲರ್ಜಿಯ ಪ್ರತಿಕ್ರಿಯೆಗಳನ್ನು ಸುಲಭವಾಗಿ ಉಂಟುಮಾಡಬಹುದು.

ಮೂತ್ರಪಿಂಡ ವೈಫಲ್ಯ, ರಕ್ತಹೀನತೆ ಮತ್ತು ಮೆದುಳಿಗೆ ಹಾನಿ:

ಮೂತ್ರಪಿಂಡ ವೈಫಲ್ಯ, ರಕ್ತಹೀನತೆ ಮತ್ತು ಮೆದುಳಿಗೆ ಹಾನಿ:

ಅವಧಿ ಮುಗಿದ ಲಿಪ್‌ಸ್ಟಿಕ್ ನಲ್ಲಿ ಲ್ಯಾನೋನಿನ್ ಹೀರಿಕೊಳ್ಳುವಿಕೆಯು ಪ್ರಬಲವಾಗಿದ್ದು, ಇದು ಗಾಳಿಯಿಂದ ಧೂಳು, ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಭಾರವಾದ ಲೋಹಗಳನ್ನು ಹೀರಿಕೊಳ್ಳುತ್ತದೆ. ಈ ಮೂಲಕ ಅದು ತುಟಿ ಸೇರುತ್ತದೆ. ನೀವು ಲಿಪ್‌ಸ್ಟಿಕ್‌ ಹಚ್ಚಿ, ಏನನ್ನಾದರೂ ತಿಂದಾಗ ಅಥವಾ ಕುಡಿಯುವಾಗ, ಈ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ನಿಮ್ಮ ದೇಹವನ್ನು ಪ್ರವೇಶಿಸಿ ನಿಮಗೆ ಅನಾರೋಗ್ಯವನ್ನುಂಟುಮಾಡುತ್ತವೆ. ಜೊತೆಗೆ ಲಿಪ್‌ಸ್ಟಿಕ್‌ಗಳಲ್ಲಿ ಸೀಸ ಮತ್ತು ಕ್ಯಾಡ್ಮಿಯಂ ಕೂಡ ಅಧಿಕವಾಗಿರುತ್ತದೆ. ಅವಧಿ ಮೀರಿದ ಲಿಪ್‌ಸ್ಟಿಕ್ ಬಳಕೆ ಸೀಸದ ವಿಷಕ್ಕೆ ಕಾರಣವಾಗಬಹುದು, ಇದು ಮೂತ್ರಪಿಂಡ ವೈಫಲ್ಯ, ರಕ್ತಹೀನತೆ, ಮಿದುಳಿನ ಹಾನಿಗೆ ಕಾರಣವಾಗಬಹುದು.

ಸ್ತನ ಗೆಡ್ಡೆ:

ಸ್ತನ ಗೆಡ್ಡೆ:

ಲಿಪ್‌ಸ್ಟಿಕ್ ಗಳು ಸಂರಕ್ಷಕಗಳನ್ನು ಮತ್ತು ಹಾನಿಕಾರಕ ವಸ್ತುಗಳನ್ನು ಹೊಂದಿರುತ್ತವೆ. ನೀವು ಅವಧಿ ಮೀರಿದ ಲಿಪ್‌ಸ್ಟಿಕ್ ಹಚ್ಚುವುದರಿಂದ, ಅದು ಸ್ತನ ಗೆಡ್ಡೆಗೆ ಕಾರಣವಾಗಬಹುದು. ಲಿಪ್‌ಸ್ಟಿಕ್ ಹಚ್ಚಿದ ನಂತರ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಲು ವಿಳಂಬ ಮಾಡಬೇಡಿ.

Read more about: beauty ಸೌಂದರ್ಯ
English summary

Lipstick Precautions : what happens if you use expired lipstick in Kannada

Here we talking about Lipstick Precautions : what happens if you use expired lipstick in Kannada, read on
Story first published: Friday, November 19, 2021, 14:54 [IST]
X
Desktop Bottom Promotion