For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಲಿಪ್‌ಸ್ಟಿಕ್‌ ಹಚ್ಚುವಾಗ ಈ ಮಿಸ್ಟೇಕ್ಸ್ ಮಾಡದಿರಿ

|

ಆಕರ್ಷಕವಾಗಿ ಕಾಣಬೇಕೆಂದು ಮೇಕಪ್‌ ಮಾಡುವ ಕಲೆಯೇ ಗೊತ್ತಿಲ್ಲದೆ ಮೇಕಪ್ ಮಾಡಲು ಆಕರ್ಷಕವಾಗಿ ಕಾಣುವ ಬದಲು ಮುಖದ ಅಂದ ಕೆಡುವುದು. ಕಣ್ಣಿಗೆ ಕಾಡಿಗೆ ಅಂದ ನೀಡಿದರೆ, ತುಟಿಗೆ ಹಚ್ಚುವ ಮೇಕಪ್ ಆ ಅಂದಕ್ಕೆ ಮತ್ತಷ್ಟು ಮೆರಗು ನೀಡುವುದು. ಬಣ್ಣ ಹಚ್ಚಿದ ತುಟಿಗಳ ಅಂದ ನೋಡುವುದೇ ಚೆಂದ. ಲಿಪ್‌ಸ್ಟಿಕ್‌ ಅನ್ನು ಕೆಲವರು ಗಾಢವಾಗಿ ಹಚ್ಚಿದರೆ, ಮತ್ತೆ ಕೆಲವರು ತೆಳುವಾಗಿ ಹಚ್ಚುತ್ತಾರೆ, ನೀವು ಹೇಗೆ ಹಚ್ಚಿ ಆದರೆ ಕೆಲವೊಂದು ಬ್ಯೂಟಿ ತಪ್ಪುಗಳನ್ನು ಮಾಡದಿರಿ.

Lipstick

ಲಿಪ್‌ಸ್ಟಿಕ್‌ ಹಚ್ಚುವುದು ಸುಲಭ, ಅದಕ್ಕಾಗಿ ಹೆಚ್ಚಿನ ಟಿಪ್ಸ್ ಅಗ್ಯತವಿಲ್ಲ ಎಂದು ಅನಿಸಬಹುದು. ಆದರೆ ಲಿಪ್‌ಸ್ಟಿಕ್‌ ಹಚ್ಚಿ ಆಕರ್ಷಕವಾಗಿ ಕಾಣಬೇಕೆಂದರೆ ಕೆಲವೊಂದು ಅಂಶಗಳನನ್ನು ಗಮನಿಸಲೇಬೇಕು. ಇಲ್ಲದಿದ್ದರೆ ಆಕರ್ಷಕವಾಗಿ ಕಾಣಲು ಹಚ್ಚಿದ ಲಿಪ್‌ಸ್ಟಿಕ್‌ ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡುವುದು. ಇಲ್ಲಿ ಸಾಮಾನ್ಯವಾಗಿ ಲಿಪ್‌ಸ್ಟಿಕ್‌ ಹಚ್ಚುವಾಗ ಮಾಡುವ ಮಿಸ್ಟೇಕ್ಸ್ ಬಗ್ಗೆ ಹೇಳಿದ್ದೇವೆ ನೋಡಿ:

ಒಡೆದ ತುಟಿಗೆ ಲಿಪ್‌ಸ್ಟಿಕ್‌ ಹಚ್ಚುವುದು

ಒಡೆದ ತುಟಿಗೆ ಲಿಪ್‌ಸ್ಟಿಕ್‌ ಹಚ್ಚುವುದು

ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿದಾಗ ನಯವಾಗಿ, ಹೊಳಪಿನಿಂದ ಕಾಣಬೇಕೇ ಹೊರತು, ಹೊಡೆದು-ಹೊಡೆದು ಕಂಡರೆ ಆಕರ್ಷಕವಾಗಿ ಕಾಣುವುದಿಲ್ಲ. ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಕಂಡು ಬರುವುದು ಸಾಮಾನ್ಯ. ತುಟಿ ಒಡೆದಿದ್ದರೆ ಅದನ್ನು ಮರೆಮಾಚಲು ಲಿಪ್‌ಬಾಮ್‌ ಅಥವಾ ಲಿಪ್‌ಗ್ಲೋಸ್‌ ಬಳಸಬೇಕೇ ಹೊರತು ಲಿಪ್‌ಸ್ಟಿಕ್‌ ಹಚ್ಚಲು ಹೋಗಬಾರದು. ತುಟಿ ಒಡೆದಾಗ ತುಟಿ ನಯವಾಗಿ ಕಾಣಲು ಜೇನು ಅಥವಾ ಲಿಪ್‌ಬಾಮ್‌ ಬಳಸಿ.

ತುಟಿಯನ್ನು ಎಕ್ಸ್‌ಫೋಲೆಟ್‌ ಮಾಡದಿದ್ದರೆ

ತುಟಿಯನ್ನು ಎಕ್ಸ್‌ಫೋಲೆಟ್‌ ಮಾಡದಿದ್ದರೆ

ಮುಖದಂತೆ ತುಟಿಗೂ ಎಕ್ಸ್‌ಫೋಲೆಟ್ ಅವಶ್ಯಕ. ತುಟಿಯಲ್ಲಿರುವ ನಿರ್ಜೀವ ತ್ವಚೆ ತೆಗೆಯಲು ವಾರಕ್ಕಮ್ಮೆ ಎಕ್ಸ್‌ಫೋಲೆಟ್ ಮಾಡಿ. ಇದರಿಂದ ತುಟಿ ನಯವಾಗಿ ಆಕರ್ಷಕವಾಗಿ ಕಾಣುವುದು. ತುಟಿಗೆ ಎಕ್ಸ್‌ಫೋಲೆಟ್‌ ಮಾಡುವುದಾದರೆ ಈ ರೀತಿ ಮಾಡಿ. 1 ಚಮಚ ತೆಂಗಿನೆಣ್ಣೆ, 1 ಚಮಚ ಜೇನು, 2 ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಅದರಿಮದ ತುಟಿಯನ್ನು ಸ್ಕ್ರಬ್‌ ಮಾಡಿ 2 ನಿಮಿಷ ಬಿಟ್ಟು ತುಟಿ ತೊಳೆಯಿರಿ, ನಂತರ ಲಿಪ್‌ ಬಾಮ್‌ ಅಥವಾ ಜೇನು ಹಚ್ಚಿದರೆ ತುಟಿ ಆಕರ್ಷಕವಾಗಿ ಕಾಣುವುದು. ತುಟಿ ನಯವಾಗಿದ್ದರೆ ನೀವು ಹಚ್ಚಿದ ಲಿಪ್‌ಸ್ಟಿಕ್‌ ಬಣ್ಣ ಆಕರ್ಷಕವಾಗಿ ಕಾಣುವುದು.

ಲಿಪ್‌ಲೈನರ್ ಬಳಸದೆ ಲಿಪ್‌ಸ್ಟಿಕ್‌ ಹಚ್ಚುವುದು

ಲಿಪ್‌ಲೈನರ್ ಬಳಸದೆ ಲಿಪ್‌ಸ್ಟಿಕ್‌ ಹಚ್ಚುವುದು

ತುಟಿ ಆಕರ್ಷಕವಾಗಿ ಕಾಣಲು ಲಿಪ್‌ಸ್ಟಿಕ್‌ ಹಚ್ಚಿದರೆ ಸಾಕು ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು, ನಿಮ್ಮ ಮುಖದ ಚೆಲುವು ಹೆಚ್ಚಿಸಲು ಬರೀ ಲಿಪ್‌ಸ್ಟಿಕ್‌ ಸಾಕಾಗುವುದಿಲ್ಲ, ಲಿಪ್‌ಲೈನರ್ ಕೂಡ ಬಳಸಿ. ಲಿಪ್‌ಲೈನರ್‌ ಬಣ್ಣ ಆಯ್ಕೆ ಮಾಡುವಾಗ ಕೂಡ ಎಚ್ಚರವಹಿಸಬೇಕು, ಲಿಪ್‌ಸ್ಟಿಕ್‌ ಬಣ್ಣಕ್ಕಿಂತ ಲಿಪ್‌ಲೈನರ್ ಬಣ್ಣ ಗಾಢವಾಗಿರಲಿ. ಲಿಪ್‌ಲೈನರ್‌ ತುಟಿಗೆ ಆಕರ್ಷಕವಾದ ಶೇಪ್‌ ಕೊಟ್ಟು, ಹಚ್ಚಿದ ಲಿಪ್‌ಸ್ಟಿಕ್‌ ಬಣ್ಣ ಎದ್ದು ಕಾಣುವಂತೆ ಮಾಡುತ್ತದೆ.

ನಿಮ್ಮ ತ್ವಚೆ ಬಣ್ಣಕ್ಕೆ ಹೊಂದಿಕೆಯಾಗದ ಲಿಪ್‌ಸ್ಟಿಕ್ ಬಣ್ಣ ಬಳಸುವುದು

ನಿಮ್ಮ ತ್ವಚೆ ಬಣ್ಣಕ್ಕೆ ಹೊಂದಿಕೆಯಾಗದ ಲಿಪ್‌ಸ್ಟಿಕ್ ಬಣ್ಣ ಬಳಸುವುದು

ಯಾವುದೋ ಮಾಡೆಲ್ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿ ಆಕರ್ಷಕವಾದ ಪೋಸ್‌ ನೀಡಿದ್ದನ್ನು ನೋಡಿ, ಆ ಬಣ್ಣ ನೀವೂ ಟ್ರೈ ಮಾಡುವ ಮುನ್ನ, ಆ ಬಣ್ಣದ ಲಿಪ್‌ಸ್ಟಿಕ್‌ ನಿಮ್ಮ ತ್ವಚೆ ವರ್ಣಕ್ಕೆ ಹೊಂದುವುದೇ ಎಂದು ಗಮನಿಸುವುದು ಒಳ್ಳೆಯದು. ಎಲ್ಲರಿಗೆ ಎಲ್ಲಾ ಬಗೆಯ ಬಣ್ಣ ಆಕರ್ಷಕವಾಗಿ ಕಾಣುವುದು. ಶ್ವೇತ ವರ್ಣದವರಿಗೆ ಕಡು ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಆಕರ್ಷಕವಾಗಿ ಕಂಡರೆ ಗೋಧಿ ಬಣ್ಣದವರಿಗೆ ಕಡು ಕೆಂಪು ಬಣ್ಣಕ್ಕಿಂತ ಮೆರೂನ್‌ ಬಣ್ಣದ ಲಿಪ್‌ಸ್ಟಿಕ್ ಆಕರ್ಷಕವಾಗಿ ಕಾಣುವುದು. ಆದ್ದರಿಂದ ಲಿಪ್‌ಸ್ಟಿಕ್‌ ಬಣ್ಣ ಆಯ್ಕೆ ಮಾಡುವಾಗ ನಿಮ್ಮ ಚೆಲುವು ಹೆಚ್ಚಿಸುವಂಥ ಬಣ್ಣ ಆಯ್ಕೆ ಮಾಡಿ ಬಳಸಿ.

ತುಂಬಾ ಲಿಪ್‌ಸ್ಟಿಕ್‌ ಹಚ್ಚುವುದು

ತುಂಬಾ ಲಿಪ್‌ಸ್ಟಿಕ್‌ ಹಚ್ಚುವುದು

ತುಂಬಾ ಗಾಢವಾಗಿ ಲಿಪ್‌ಸ್ಟಿಕ್‌ ಹಚ್ಚಿದರೆ ಮಿತಿಮೀರಿ ಮೇಕಪ್‌ ಮಾಡಿದಂತೆ ಕಾಣುವುದು, ಇನ್ನು ಲಿಪ್‌ಸ್ಟಿಕ್‌ ಹಲ್ಲಿನಲ್ಲಿ ಅಂಟಿಕೊಂಡಿದ್ದರೆ ಆಕರ್ಷಕವಾಗಿ ಕಾಣುವುದಿಲ್ಲ. ಲಿಪ್‌ಸ್ಟಿಕ್‌ ಹಚ್ಚಿದ ಬಳಿಕ ಜಾಸ್ತಿಯಾದರೆ ಟಿಶ್ಯೂ ಪೇಪರ್‌ನಲ್ಲಿ ಸ್ವಲ್ಪ ಮೆಲ್ಲನೆ ಒತ್ತಿ, ಇದು ಅಧಿಕವಾಗಿರುವ ಲಿಪ್‌ಸ್ಟಿಕ್‌ ತೆಗೆಯಲು ಸಹಾಯ ಮಾಡುತ್ತದೆ. ಲಿಪ್‌ಸ್ಟಿಕ್‌ ಟ್ರೆಂಡ್‌ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ, ಕೆಲವೊಮ್ಮೆ ಕಡು ಬಣ್ಣದ ಲಿಪ್‌ಸ್ಟಿಕ್‌ ಟ್ರೆಂಡ್‌ ಬಂದರೆ, ಇನ್ನು ಸ್ವಲ್ಪ ದಿನದಲ್ಲಿ ಗ್ಲೋಸಿ ಟ್ರೆಂಡ್‌ ಬರಬಹುದು. ನೀವು ಫ್ಯಾಷನ್‌ ಪ್ರಿಯರಾಗಿದ್ದರೆ ಟ್ರೆಂಡ್‌ ಕೂಡ ಗಮನಿಸುವುದು ಒಳ್ಳೆಯದು.

ಮೇಕಪ್‌ ತೆಗೆಯದೆ ಮಲಗುವುದು

ಮೇಕಪ್‌ ತೆಗೆಯದೆ ಮಲಗುವುದು

ಲಿಪ್‌ಸ್ಟಿಕ್‌ ನಿಮ್ಮ ತುಟಿಗೆ ಹಚ್ಚಿದಾಗ ಅದರಿಂದ ಏನೂ ಆಗುವುದಿಲ್ಲ ಎಂದು ನೀವು ಬಯಸಿದರೆ ತಪ್ಪು, ಲಿಪ್‌ಸ್ಟಿಕ್ ತೆಗೆಯದಿದ್ದರೆ ತುಟಿ ಒಣಗುವುದು ಹಾಗೂ ಕಪ್ಪಾಗುವುದು. ಆದ್ದರಿಂದ ರಾತ್ರಿ ಲಿಪ್‌ಸ್ಟಿಕ್‌ ತೆಗೆದು, ಲಿಪ್‌ಬಾಮ್‌ ಅಥವಾ ಜೇನು ಹಚ್ಚಿ ಮಲಗಿ. ಇನ್ನು ಲಿಪ್‌ಸ್ಟಿಕ್‌ ಕೊಳ್ಳುವಾಗ ಗುಣಮಟ್ಟದ ಲಿಪ್‌ಸ್ಟಿಕ್‌ ಕೊಂಡು ಬಳಸಿ, ಇಲ್ಲದಿದ್ದರೆ ತುಟಿ ಕಪ್ಪಾಗುವುದು.

English summary

Lipstick mistakes you are probably making in Everyday Life

If you are applying lipstic, some mistakes may ruine your look.Here we have explained the common lipstick mistakes you are probably making in Everyday Life, Avoid these mistakes for better look.
X
Desktop Bottom Promotion