Just In
- 23 min ago
Health tips: ತಜ್ಞರ ಪ್ರಕಾರ ತಿಂದ ನಂತರ ಎಷ್ಟು ಹೊತ್ತು ವಾಕ್ ಮಾಡಬೇಕು?
- 2 hrs ago
ವಾಸ್ತು ಸಲಹೆ: ವಾಸ್ತುಶಾಸ್ತ್ರದ ಪ್ರಕಾರ ಜೀರಿಗೆಯನ್ನು ಹೀಗೆ ಬಳಸಿದರೆ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ
- 4 hrs ago
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- 6 hrs ago
Amazon Sale:ಬ್ಲಡ್ ಪ್ರೆಷರ್ ಮಾನಿಟರ್, ಪಲ್ಸ್ ಆಕ್ಸಿಮೀಟರ್ ಮುಂತಾದ ಹತ್ತು ಹಲವು ಪ್ರಾಡೆಕ್ಟ್ಗಳು ರಿಯಾಯಿತಿಯಲ್ಲಿ ಲಭ್ಯ
Don't Miss
- Movies
ದುಬಾರಿ ಕಾರು ಖರೀದಿಸಿದ ನಿರೂಪಕಿ ಅನುಪಮಾ ಗೌಡ!
- News
just in: 20 ವರ್ಷದಿಂದ ಪರಾರಿಯಾದ್ದ ಆರೋಪಿ ಮಾಜಿ ಶಾಸಕನ ಬಂಧನ
- Travel
ತಾಜ್ ಮಹಲ್ ಹೋಲುವ ಈ ಪ್ರತಿಕೃತಿಗಳನ್ನು ನೀವೂ ನೋಡಿದ್ದೀರಾ?
- Finance
ಎಫ್ಡಿ ಬಡ್ಡಿದರ ಪರಿಷ್ಕರಿಸಿದ ಪ್ರಮುಖ ಬ್ಯಾಂಕ್ಗಳು: ನೂತನ ದರ ತಿಳಿಯಿರಿ
- Technology
ಹಾನರ್ 70 5G ಸ್ಮಾರ್ಟ್ಫೋನ್ ಬಿಡುಗಡೆ! ಪ್ರೊಸೆಸರ್ ಯಾವುದು!
- Sports
ಭಾರತ vs ಜಿಂಬಾಬ್ವೆ: 2ನೇ ಏಕದಿನ ಪಂದ್ಯ ಗೆಲ್ಲೋದು ಯಾರು? ಸಂಭಾವ್ಯ ಆಡುವ ಬಳಗ
- Automobiles
ಅಧಿಕ ಮೈಲೇಜ್, ಕಡಿಮೆ ಬೆಲೆಯ ಹೊಸ ಕಾರಿನ ಹುಡುಕಾಟದಲ್ಲಿದ್ದೀರಾ?: ಈ ಹ್ಯಾಚ್ಬ್ಯಾಕ್ಗಳನ್ನು ಒಮ್ಮೆ ನೋಡಿ
- Education
Essay On Teachers' Day 2022 : ಶಿಕ್ಷಕರ ದಿನದ ಪ್ರಯುಕ್ತ ಪ್ರಬಂಧ ಬರೆಯಲು ವಿದ್ಯಾರ್ಥಿ ಮತ್ತು ಮಕ್ಕಳಿಗೆ ಮಾಹಿತಿ ಇಲ್ಲಿದೆ
ಆಕರ್ಷಕ ನೈಲ್ ಆರ್ಟ್‌ಗಾಗಿ ಬಳಸಿ ಡಿಫರೆಂಟ್ ನೈಲ್ ಆರ್ಟ್ ಬ್ರಷ್‌ಗಳು!
ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಎನ್ನುವುದು ಒಂದು ರೀತಿಯ ಸ್ಟೈಲಿಂಗ್ ಟ್ರೆಂಡ್ ಆಗಿದೆ... ಪಾರ್ಲರ್‌ಗಳಿಗೆ ಅಥವಾ ನೈಲ್ ಆರ್ಟ್ ಮಾಡುವಂತಹ ಶಾಪ್‌ಗಳಿಗೆ ಭೇಟಿ ಕೊಟ್ಟು ತಮ್ಮ ಉಗುರಿಗೆ ಬೇಕಾದಂತಹ ಆರ್ಟ್ ಬಿಡಿಸಿಕೊಳ್ಳುವ ಅನೇಕ ಯುವತಿಯರಿದ್ದಾರೆ. ಮೊದಮೊದಲು ಕೇವಲ ಸೆಲೆಬ್ರೆಟಿಗಳಿಗೆ ಮೀಸಲಾಗಿದ್ದ ಈ ನೇಲ್ ಆರ್ಟ್ ಈಗ ಪ್ರತಿಯೊಬ್ಬರ ಸ್ವತ್ತು..
ತಮಗೆ ತಾವೇ ನೈಲ್ ಆರ್ಟ್ ಮಾಡಿಕೊಳ್ಳುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಇಂತಹವರು ನೈಲ್ ಆರ್ಟ್ ಮಾಡಿಕೊಳ್ಳುವಾಗ ಬಳಕೆ ಮಾಡುವ ಬ್ರಷ್‌ಗಳು ಯಾವುವು? ಇದನ್ನ ಹೇಗೆ ಹಾಗೂ ಯಾವ ವಿಚಾರಕ್ಕೆ ಬಳಸಲಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ನೈಲ್ ಬ್ರಷ್‌ನ ವಿಧಗಳು ಹಾಗೂ ಪ್ರಯೋಜನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ರೌಂಡ್ ಬ್ರಷ್
ಇದು ಅತ್ಯಂತ ಸಾಮಾನ್ಯವಾಗಿ ಬಳಸುವ ನೈಲ್ ಆರ್ಟ್ ಬ್ರಷ್ ಆಗಿದ್ದು, ಸ್ಟ್ರೋಕ್ ಅಥವಾ ಡಿಸೈನ್ಸ್ ರಚಿಸಲು ಇದನ್ನು ಬಳಸಲಾಗುತ್ತದೆ. ಜೊತೆಗೆ ಈ ಬ್ರಷ್‌ಗಳನ್ನ ಅಕ್ರಿಲಿಕ್ ಪೌಡರ್ ಮತ್ತು ಮೊನೊಮರ್ ಬಳಸಿ 3ಡಿ ನೇಲ್ ಆರ್ಟ್ ಮಾಡಲು ಸಹ ಬಳಸಬಹುದು. ನೈಲ್ ಆರ್ಟ್ ಈಗಷ್ಟೇ ಆರಂಭಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

2. ಸ್ಟ್ರೈಪರ್/ಲೈನರ್ ಬ್ರಷ್
ಹೆಸರೇ ಹೇಳುವಂತೆ ಈ ನೈಲ್ ಬ್ರಷ್‌ಗಳನ್ನು ಪಟ್ಟೆ ಅಥವಾ ಗೆರೆಗಳು ಹಾಗೂ ಸ್ಟ್ರೈಪಿಂಗ್ ಸ್ಟ್ರೋಕ್ ಪ್ಯಾಟರ್ನ್ ರಚಿಸಲು ಬಳಕೆ ಮಾಡಲಾಗುವುದು. ಜೀಬ್ರಾ ಅಥವಾ ಟೈಗರ್ ಪ್ರಿಂಟ್‌ಗಳಂತಹ ಪಟ್ಟಿ ಡಿಸೈನ್ ಮಾಡಲು ಇವುಗಳನ್ನು ಬಳಸಬಹುದು. ಜೊತೆಗೆ ಸ್ಟ್ರೈಟ್ ಲೈನ್ ರಚಿಸಲು ಈ ಬ್ರಷ್ ಸಹಕಾರಿ. ಈ ಸೆಟ್ ಸಾಮಾನ್ಯವಾಗಿ 3 ಬ್ರಷ್‌ಗಳನ್ನು ಹೊಂದಿದ್ದು, ನಿಮ್ಮ ಅಗತ್ಯಕ್ಕೆ ಹಾಗೂ ಡಿಸೈನ್‌ಗೆ ತಕ್ಕಂತೆ ಅದನ್ನ ಆಯ್ಕೆ ಮಾಡಿ ಬಳಸಬಹುದು.

3. ಫ್ಲಾಟ್ ಬ್ರಷ್
ಈ ಬ್ರಷನ್ನು ನ್ನು ಶೇಡರ್ ಬ್ರಷ್ ಎಂದೂ ಕರೆಯುತ್ತಾರೆ. ಇದ್ರಿಂದ ನಿಮ್ಮ ಉಗುರಿನ ಮೇಲೆ ವಿವಿಧ ನೇಲ್ ಕಲರ್ ಬ್ಲೆಂಡ್ ಅಂದ್ರೆ ಮಿಶ್ರಣ ಮಾಡಬಹುದು. ಒಂದಕ್ಕಿಂತ ಹೆಚ್ಚಿನ ನೇಲ್ ಪಾಲಿಶ್ ಲೇಯರ್ ಹಚ್ಚಿಕೊಂಡು, ಅದರಿಂದ ವಿಭಿನ್ನ ಡಿಸೈನ್ ಮಾಡಿಕೊಳ್ಳಲು ಈ ಬ್ರಷ್‌ಗಳು ಸಹಾಯಕ್ಕೆ ಬರುತ್ತವೆ. ಈ ಸೆಟ್ ಕೂಡ 2-3 ಸೈಜ್‌ನ ಬ್ರಷ್‌ಗಳನ್ನು ಹೊಂದಿರುತ್ತವೆ.

4.ಆಂಗಲ್ಡ್ (Angled) ಬ್ರಷ್
ಈ ಬ್ರಷ್ ಮುಖ್ಯವಾಗಿ ನಿಮ್ಮ ಉಗುರಿನ ಮೇಲೆ ಹೂವಿನ ನೇಲ್ ಆರ್ಟ್ ಬಿಡಿಸಲು ಸಹಾಯ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಫ್ಲವರ್ ನೈಲ್ ಆರ್ಟ್ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಈ ಬ್ರಷ್‌ನ ಕೂದಲುಗಳು ತ್ರಿಕೋನ ರೀತಿಯಲ್ಲಿರುವುದರಿಂದ, ಎರಡು ಬಣ್ಣಗಳನ್ನು ಬಳಕೆ ಮಾಡುವುದು ತುಂಬಾ ಸುಲಭ.

5. ಫ್ಯಾನ್ ಬ್ರಷ್
ಫ್ಯಾನ್ ಬ್ರಷ್ ಒಂದು ರೀತಿ ಬಹುವಾಗಿ ಬಳಸಬಹುದಾದಂತಹ ಬ್ರಷ್ ಆಗಿದೆ. ಇದನ್ನ ನೀವು ಶೇಡಿಂಗ್‌ಗೆ ಬಳಸಬಹುದು, ಸ್ಟ್ರೋಕ್ ಬಿಡಿಸಲು ಬಳಸಬಹುದು, ಮುಖ್ಯವಾಗಿ ಗ್ಲಿಟರ್ ಅಂದ್ರೆ ಕೆಲವೊಂದು ಶೈನಿಂಗ್ ಪೌಡರ್ ಉಗುರಿನ ಮೇಲೆ ಹಚ್ಚಿಕೊಳ್ಳಲು ಬಳಕೆಯಾಗುವುದು. ಅಷ್ಟೇ ಅಲ್ಲ, ಗ್ಲಿಟರ್ ಏನಾದ್ರೂ ಹೆಚ್ಚಾಗಿದ್ರೆ ಅದನ್ನು ತೆಗೆಯಲು ಸಹ ಈ ಬ್ರಷ್ ಸಹಾಯಕ್ಕೆ ಬರುತ್ತದೆ.

6. ಡೀಟೈಲ್ಡ್ ಬ್ರಷ್
ಇದು ಕೂಡ ಹೆಸರೇ ಸೂಚಿಸುವಂತೆ ನಿಮ್ಮ ನೈಲ್ ಡಿಸೈನ್‌ಗೆ ಡೀಟೈಲ್ಡ್ ವಿಷಯಗಳನ್ನು ಸೇರಿಸಲು ಬಳಸಲಾಗುತ್ತದೆ. ಇದ್ರಿಂದ ಒಂದು ನೈಲ್ ಆರ್ಟ್‌ಗೆ ಪರಿಪೂರ್ಣವಾದ ಲುಕ್ ಜೊತೆಗೆ ಫಿನಿಶಿಂಗ್ ನೀಡಬಹುದು. ಈ ಬ್ರಷ್‌ನಿಂದ ಅನೇಕ ಮಾಸ್ಟರ್ ಪೀಸ್ ಡಿಸೈನ್ ರಚಿಸಬಹುದು. ಇದು ನಿಮ್ಮ ನೇಲ್ ಆರ್ಟ್ ಟೂಲ್ಸ್ ನಲ್ಲಿ ಇರಲೇಬೇಕಾದ ಬ್ರಷ್ ಆಗಿದೆ.

7. ಡಾಟರ್
ಸಾಮಾನ್ಯವಾಗಿ ನೈಲ್ ಆರ್ಟ್ ಬ್ರಷ್ ಸೆಟ್ ಒಂದು ಡಾಟರ್ ಟೂಲ್ ಅನ್ನು ಸಹ ಒಳಗೊಂಡಿರುತ್ತದೆ. ಈ ಬ್ರಷ್‌ನ್ನು ಉಗುರುಗಳ ಮೇಲೆ ಸಣ್ಣ ಚುಕ್ಕೆಗಳನ್ನು ಸೃಷ್ಟಿಸಲು ಬಳಸಬಹುದು. ದೊಡ್ಡ ಚುಕ್ಕೆಗಳಿಗಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಡಾಟಿಂಗ್ ಪರಿಕರಗಳನ್ನು ಬಳಸಬಹುದು.