For Quick Alerts
ALLOW NOTIFICATIONS  
For Daily Alerts

ಕಣ್ಣಿನ ಅಂದ ಹೆಚ್ಚಿಸುವ ಬ್ರಷ್‌ಗಳ ಬಗ್ಗೆ ಗೊತ್ತಿದೆಯೇ?

|

ಆಕರ್ಷಕವಾಗಿ ಕಾಣಲು ಮೇಕಪ್ ಕಡೆ ತುಂಬಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಕಣ್ಣಿನ ಮೇಕಪ್ ಕಡೆ ಸ್ವಲ್ಪ ಗಮನ ಕೊಟ್ಟರಷ್ಟೇ ಸಾಕು, ನಿಮ್ಮ ಸೌಂದರ್ಯ ಇಮ್ಮಡಿಯಾಗುವುದು. ಮುಖದಲ್ಲಿ ಕಣ್ಣುಗಳು ಆಕರ್ಷಕ ಕೇಂದ್ರ ಬಿಂದುಗಳಾಗಿವೆ. ನೋಡುಗರನ್ನು ಥಟ್ ಅಂತ ಸೆಳೆಯುವುದೇ ನಮ್ಮ ಕಣ್ಣುಗಳು, ಆದ್ದರಿಂದ ಮುಖಕ್ಕೆ ಎಷ್ಟೇ ಮೇಕಪ್ ಮಾಡಿ, ಕಣ್ಣಿಗೆ ಮಾಡದಿದ್ದರೆ ಮೇಕಪ್‌ನ ಹೊಳಪು ಪಡೆಯಲು ಸಾಧ್ಯವಿಲ್ಲ. ಮುಖಕ್ಕೆ ಹೆಚ್ಚೇನು ಮೇಕಪ್ ಮಾಡದೆ ಕಣ್ಣಿಗೆ ಕಾಡಿಗೆ ಅಷ್ಟೆ ಹಾಕಿದರೆ ಸಾಕು ಮುಖದ ಲಕ್ಷಣ ಹೆಚ್ಚಾಗುವುದು.

eye makeup brush

ಕಣ್ಣಿನ ಮೇಕಪ್‌ಗೆ ಹಲವಾರು ಮೇಕಪ್‌ ಸಾಧನಗಳು ದೊರೆಯುತ್ತವೆ, ಹಲವಾರು ಮೇಕಪ್ ಬ್ರೆಷ್‌ಗಳು ದೊರೆಯುತ್ತವೆ. ಕಣ್ಣಿನ ಮೇಕಪ್ ಹಾಳಾಗಬಾರದು, ಕಣ್ಣಿಗೆ ಮಾಡಿದ ಮೇಕಪ್ ತುಂಬಾ ಆಕರ್ಷಕವಾಗಿ ಕಾಣಬೇಕೆಂದು ನೀವು ಬಯಸುವುದಾದರೆ ಮೇಕಪ್ ಬ್ರಷ್‌ಗಳನ್ನು ಬಳಸುವುದು ಸೂಕ್ತ ಕಣ್ಣಿನ ಮೇಕಪ್ ಬ್ರಷ್‌ಗಳಲ್ಲಿ ಹಲವಾರು ರೀತಿಯ ಬ್ರೆಷ್‌ಗಳಿವೆ. ಅವುಗಳನ್ನು ಬಳಸುವುದು ಹೇಗೆ, ಯಾವ ರೀತಿಯ ಮೇಕಪ್‌ಗೆ ಯಾವ ಬ್ರಷ್‌ ಸೂಕ್ತ ಎಂಬ ಮಾಹಿತಿ ನೋಡಿ ಇಲ್ಲಿದೆ.

1. ಕ್ರೀಸ್‌ ಬ್ರಷ್

1. ಕ್ರೀಸ್‌ ಬ್ರಷ್

ಕಣ್ಣಿನ ಕೆಳಗಡೆ ಕಾಡಿಗೆ ಸ್ವಲ್ಪ ಗಾಢವಾಗಿ ಕಾಣುವಂತೆ ಬಯಸುವುದಾದರೆ ಈ ಬ್ರಷ್ ಬಳಸುವುದು ಸೂಕ್ತ. ಈ ಬ್ರೆಷ್ ನಿಮ್ಮ ಕಣ್ಣಿಗೆ ನಿವು ಇಚ್ಛೆಪಟ್ಟ ರೀತಿ ಮೇಕಪ್ ಮಾಡುವಲ್ಲಿ ಸಹಕಾರಿ. ಇದನ್ನು ಕಾಡಿಗೆ ಮೇಲೆ ಮೆಲ್ಲನೆ ತಿಕ್ಕಿ, ಇದರಿಂದ ಕಾಡಿಗೆ ಗಾಢವಾಗಿ ಆಕರ್ಷಕವಾಗಿ ಕಾಣುವುದು.

ಸ್ವಲ್ಪ ಚಿಕ್ಕ ಕಣ್ಣು ಇರುವವರು ತಮ್ಮ ಕಣ್ಣುಗಳು ಹೈಲೈಟ್ಸ್ ಮಾಡಲು ಈ ಬ್ರಷ್‌ ಸಹಾಯ ಮಾಡುತ್ತದೆ. ಪಾರ್ಟಿ-ಫಂಕ್ಷನ್‌ಗಳಿಗೆ ಹೋಗುವಾಗ ನಿಮ್ಮ ಚೆಲುವು ಅಧಿಕ ಮಾಡುವಲ್ಲಿ ಈ ಬ್ರಷ್‌ ಸಹಕಾರಿಯಾಗಿದೆ.

2. ಫ್ಲಫಿ ಬ್ರಷ್

2. ಫ್ಲಫಿ ಬ್ರಷ್

ಐ ಶ್ಯಾಡೊ ಬ್ರಷ್ ಆಗಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಈ ಬ್ರಷ್‌ ಬಳಸಿ ಕಣ್ರೆಪ್ಪೆ ಮೇಲೆ ಬಣ್ಣ ಹಾಕಬಹುದು. ಈ ಬ್ರೆಷ್‌ ಬಳಸಿ ಒಮ್ಮೆ ಬಣ್ಣ ಹಚ್ಚಿದರೆ ಕಣ್ಣು ಮೇಲೆ ಚೆನ್ನಾಗಿ ಹರಡಿಕೊಂಡು ಆಕರ್ಷಕವಾಗಿ ಕಾಣುವುದು. ನೀವು ಹಚ್ಚಿದ ಐ ಶ್ಯಾಡೋ ಗಾಢವಾಗಿ ಹೈಲೈಟ್ಸ್ ಆಗಲು ಈ ಬ್ರಷ್ ಬಳಸಬಹುದು.

 3. ಬ್ಲೆಂಡಿಂಗ್ ಬ್ರಷ್

3. ಬ್ಲೆಂಡಿಂಗ್ ಬ್ರಷ್

ಕಾಡಿಗೆ ಹಚ್ಚಿದಾಗ ಸ್ವಲ್ಪ ಹರಡುತ್ತದೆ, ಇಲ್ಲ ಸ್ವಲ್ಪ ಜಾಸ್ತಿ ಹಾಕಿ ಬಿಡುತ್ತೀರಾ, ಈ ರೀತಿಯ ಸಮಸ್ಯೆ ಆದಾಗ ಅದನ್ನು ಸರಿಪಡಿಸಲು ಈ ಬ್ರಷ್ ಸಹಾಯ ಮಾಡುತ್ತದೆ. ಇನ್ನು ಇದನ್ನು ಐ ಶ್ಯಾಡೋ ಹಚ್ಚಲು ಕೂಡ ಬಳಸಬಹುದು. ನೀವು ಹಚ್ಚಿದ ಕಾಡಿಗೆ ಹರಡದೆ ಅಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಈ ಬ್ರಷ್ ಸಹಾಯ ಮಾಡುತ್ತದೆ.

4. ಪೆನ್ಸಿಲ್ ಬ್ರಷ್

4. ಪೆನ್ಸಿಲ್ ಬ್ರಷ್

ಕಣ್ಣಿನ ಮೇಕಪ್ ಮಾಡುವಾಗ ಕಣ್ಣಿನ ಭಾಗದಲ್ಲಿ ಕೆಲವೊಂದು ಕಡೆ ಮೇಕಪ್ ಹೈಲೈಟ್ಸ್ ಮಾಡಲು ಬಯಸುವುದಾರೆ ಈ ಬ್ರಷ್‌ ಬಳಸಬಹುದು. ಈ ನಿಮ್ಮ ಕಣ್ಣಿನ ಮೇಕಪ್‌ಗೆ ಸ್ಟೈಲಿಷ್‌ ಲುಕ್‌ ನೀಡುವಲ್ಲಿ ಸಹಕಾರಿ.

5. ಸ್ಲ್ಯಾಂಟೆಡ್ ಐಬ್ರೋ ಬ್ರಷ್

5. ಸ್ಲ್ಯಾಂಟೆಡ್ ಐಬ್ರೋ ಬ್ರಷ್

ಈ ಬ್ರಷ್ ನಿಮ್ಮ ಐ ಬ್ರೋಗೆ (ಹುಬ್ಬ) ಆಕರ್ಷಕ ಲುಕ್‌ ನೀಡುವಂತೆ ಮಾಡುವಲ್ಲಿ ಸಹಕಾರಿ. ನಿಮ್ಮ ಐಬ್ರೋಗೆ ಆಕರ್ಷಕ ಶೇಪ್ ನೀಡಿ ಕಣ್ಣಿನ ಮೇಕಪ್ ಜತೆ ಐಬ್ರೋ ಕೂಡ ಆಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಈ ಬ್ರಷ್ ಸಹಕಾರಿ. ಈ ಬ್ರಷ್ ಬಳಸಿ ನಿಮ್ಮ ಐಬ್ರೋ ಸೆಟ್‌ ಮಾಡಿ ನೋಡಿ ಈ ಬ್ರಷ್‌ನ ಪ್ರಯೋಜನ ಗೊತ್ತಾಗುವುದು.

6. ಸ್ಪೂಲಿ ಬ್ರಷ್

6. ಸ್ಪೂಲಿ ಬ್ರಷ್

ನಿಮ್ಮ ಮೇಕಪ್ ಮುಗಿದ ಬಳಿಕ ಹುಬ್ಬು ಮೇಲೆ ಈ ಬ್ರಷ್ ಆಡಿಸಿ. ಈ ರೀತಿ ಬ್ರೆಷ್‌ ಆಡಿಸುವುದರಿಂದ ನಿಮ್ಮ ಹುಬ್ಬು ನೈಸರ್ಗಿಕವಾಗಿ ಕಾಣುವುದರ ಜತೆಗೆ ಆಕರ್ಷಕವಾಗಿ ಕಾಣುವುದು.

7. ಬಾಚಣಿಕೆ ಬ್ರಷ್‌

7. ಬಾಚಣಿಕೆ ಬ್ರಷ್‌

ಈ ಬ್ರಷ್‌ನ ವಿಶೇಷತೆಯೆಂದರೆ ಇದನ್ನು ಎರಡು ಉದ್ದೇಶಕ್ಕೆ ಬಳಸಬಹುದು. ಮೊದಲು ನೀವು ಈ ಬ್ರಷ್ ಬಳಸಿ ನಿಮ್ಮ ಹುಬ್ಬನ್ನು ಬಾಚಬೇಕು, ನಂತರ ಈ ಬ್ರಷ್‌ ಬಳಸಿ ಕಣ್ರೆಪ್ಪೆ ಕೂಡ ಅಲಂಕಾರ ಮಾಡಬಹುದು. ಕಣ್ಣಿಗೆ ಮಸ್ಕರಾ ಹಚ್ಚಿದ ಬಳಿಕ ಈ ಬ್ರಷ್ ಬಳಸಿದರೆ ಕಣ್ರೆಪ್ಪೆಗಳು ತುಂಬಾ ಆಕರ್ಷಕವಾಗಿ ಕಾಣುವುದು.

English summary

All You Want To Know About Eye Makeup Brushes

With all brushes in different shapes and sizes, one wonders what the function of each make-up brush is. Today we bring you the most effective guide on eye make-up brushes.
X
Desktop Bottom Promotion